ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ಹಾಗೆ ನುಗ್ಗೆ ಸೊಪ್ಪನ್ನು ನಾವು ಗ್ರಾಮೀಣ ಭಾಗಗಳಲ್ಲಿ ಅತೀ ಹೆಚ್ಚು ಕಾಣಬಹುದಾಗಿದೆ, ನುಗ್ಗೆಕಾಯಿ ಮತ್ತು ನುಗ್ಗೆಸೊಪ್ಪು ಹಾಗೆ ನೋಡುವುದಾದರೆ ಈ ನುಗ್ಗೆ ಮರಕ್ಕೇ ತನ್ನದೇ ಆದ ವೈಶಿಷ್ಟ್ಯವಿದೆ. ಇನ್ನು ನುಗ್ಗೆಕಾಯಿ ಮತ್ತು ನುಗ್ಗೆಸೊಪ್ಪನ್ನು ಬಳಸಿ ಮಾಡಿದ ಅಡುಗೆಯ ರುಚಿಯೇ ಬೇರೆ ಹಾಗಾಗಿ ನುಗ್ಗೆ ಸೊಪ್ಪು ಹೆಚ್ಚು ಜನಮನ್ನಣೆ ಗಳಿಸಿರುವ ಒಂದು ಸೊಪ್ಪುಗಳ ಸಾಲಿನಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ.
ನುಗ್ಗೆಸೊಪ್ಪು ಎನ್ನುವುದು ಬರಿಯ ಬಾಯಿ ರುಚಿಗೆ ಮಾತ್ರ ಜನರನ್ನ ತಣಿಸುವುದಲ್ಲದೆ ನುಗ್ಗೆ ಸೊಪ್ಪಿನಲ್ಲಿ ಅವಶ್ಯಕ ಪೋಷಕಾಂಶಗಳಾದ ತೇವಾಂಶ ಸಾರಜನಕ ಮೇದಸ್ಸು ಖನಿಜಾಂಶ ನಾರಿನಾಂಶ ಕಾರ್ಬೊಹೈಡ್ರೇಟ್ಸ್ ಕ್ಯಾಲ್ಸಿಯಮ್ ಫಾಸ್ಪರಸ್ ಕಬ್ಬಿಣದ ಅಂಶ ಥಿಯಾಮಿನ್ ರೈಬೊ ಫ್ಲಾವಿನ್ ನಿಯಾಸಿನ್ ಮೇಗ್ನಿಶಿಯಮ್ ಆಕ್ಸಾಲಿಕ್ ಆಮ್ಲ ನಿಕೋಟಿಕ್ ಆಮ್ಲ ಕ್ಯಾಲೋರಿ ವಿಟಮಿನ್ ಎ ಹಾಗೂ ವಿಟಮಿನ್ ಸಿ ಇನ್ನು ಹತ್ತು ಹಲವಾರು ಪೋಷಕಾಂಶಗಳನ್ನು ಒಳಗೊಂಡಿರುವುದರಿಂದ ಆರೋಗ್ಯದ ದೃಷ್ಟಿಯಿಂದ ನೋಡುವುದಾದರೆ ಈ ನುಗ್ಗೆ ಸೊಪ್ಪು ಮನುಷ್ಯನ ಆರೋಗ್ಯದ ಮೇಲೆ ಅಸಾಮಾನ್ಯ ಪರಿಣಾಮಕಾರಿಯಾಗಿ ದೇಹರೋಗ್ಯವನ್ನು ಕಾಯುವಲ್ಲಿ ಬಹು ಮುಖ್ಯ ಪಾತ್ರವಹಿಸುವಲ್ಲಿ ಸಂಶವಿಲ್ಲ ಹೀಗೆ ತನಲ್ಲಿ ಹಲವಾರು ಅವಶ್ಯಕ ಪೋಷಕಾಂಶಗಳನ್ನು ಒಳಗೊಂಡಂತಹ ಈ ನುಗ್ಗೆ ಸೊಪ್ಪು ಆರೋಗ್ಯದ ದೃಷ್ಟಿಯಿಂದ ಯಾವ ರೀತಿಯಲ್ಲಿ ಪ್ರಯೋಜನಕಾರಿ ಎಂಬುದರ ಬಗ್ಗೆ ತಿಳಿಯೋಣ.
ಬಹು ಮುಖ್ಯವಾಗಿ ಮೂಲವ್ಯಾದಿ ರೋಗದ ಸಮಸ್ಯೆ ಇರುವವರು ನುಗ್ಗೆ ಸೊಪ್ಪಿನ ಪಲ್ಯವನ್ನು ಪ್ರತಿದಿನವೂ ನಿಯಮಿತವಾಗಿ ಸೇವಿಸುತ್ತಾ ಬಂದರೆ ಮೂಲವ್ಯಾದಿ ರೋಗವು ಉಲ್ಬಣಿಸುವುದಿಲ್ಲ, ಒಂದು ಚಮಚ ನುಗ್ಗೆ ಸೊಪ್ಪಿನ ರಸವನ್ನು ದಿನಕ್ಕೆ ಎರಡುಬಾರಿಯಂತೆ ಮಕ್ಕಳಿಗೆ ಸೇವಿಸಲು ಕೊಡುವುದರಿಂದ ಅವರಲ್ಲಿ ಸಾಮಾನ್ಯವಾಗಿ ಕಾಡುವಂತಹ ಇರುಳುಗಣ್ಣು ರೋಗ ಸಂಪೂರ್ಣ ನಿವಾರಣೆಯಾಗುತ್ತದೆ ಮತ್ತು ಮಕ್ಕಳ ದೇಹದಲ್ಲಿನ ರೋಗ ನಿರೋಧಕ ಶಕ್ತಿಯೂ ಹೆಚ್ಚಾಗುತ್ತದೆ.
ನುಗ್ಗೆ ಸೊಪ್ಪನ್ನು ನೀರಿನಲ್ಲಿ ಕುದಿಸಿ ಅದರ ರಸವನ್ನು ತೆಗೆದು ಅದಕ್ಕೆ ಒಂದು ಚಿಟಿಕೆ ಉಪ್ಪು ಕಾಳು ಮೆಣಸಿನ ಪುಡಿ ಮತ್ತು ಏಳೆಂಟು ಹನಿ ನಿಂಬೆಯ ರಸವನ್ನು ಬೆರೆಸಿ ಪ್ರತಿ ದಿನ ಬೆಳಿಗ್ಗೆ ಸಮಯದಲ್ಲಿ ನಿಯಮಿತವಾಗಿ ಸೇವಿಸುತ್ತಾ ಬಂದರೆ ಮನುಷ್ಯನ ಶರೀರ ಸದೃಡವಾಗಿರುವುದಲ್ಲದೆ ಶ್ವಾಸಕೋಶ ಹಾಗೂ ನರದೌರ್ಬಲ್ಯಕ್ಕೆ ಸಂಬಂದಪಟ್ಟಂತಹ ಸಮಸ್ಯೆಗಳು ಶೀಘ್ರದಲ್ಲಿ ಗುಣಮುಖವಾಗುತ್ತವೆ, ಒಂದು ಚಮಚ ನುಗ್ಗೆ ಸೊಪ್ಪಿನ ರಸಕ್ಕೆ ಜೇನು ತುಪ್ಪ ಮತ್ತು ಎಳನೀರನ್ನು ಬೆರೆಸಿ ನಿಯಮಿತವಾಗಿ ಸೇವಿಸುವುದರಿಂದ ಭೇದಿ ಮತ್ತು ಆಮಶಂಕೆ ನಿವಾರಣೆಯಾಗುತ್ತದೆ.
ನುಗ್ಗೆ ಸೊಪ್ಪನ್ನು ಬೇಯಿಸಿ ಅದರ ರಸವನ್ನು ತೆಗೆದು ಗರ್ಭಿಣಿ ಸ್ತ್ರೀಯರಿಗೆ ಕೊಡುವುದರಿಂದ ಹೆರಿಗೆಯ ನಂತರದಲ್ಲಿ ಅವರ ಮೊಲೆ ಹಾಲು ಸಮೃದ್ಧವಾಗಿ ಉತ್ಪತ್ತಿಯಾಗುತ್ತದೆ, ಒಂದು ಲೋಟ ಬೂದುಗುಂಬಳಕಾಯಿಯ ರಸಕ್ಕೆ ಒಂದು ಚಮಚ ತಾಜಾ ನುಗ್ಗೆ ಸೊಪ್ಪಿನ ರಸವನ್ನು ಸೇರಿಸಿ ಕುಡಿಯುವುದರಿಂದ ಮೂತ್ರ ಪ್ರವೃತ್ತಿ ಹೆಚ್ಚುತ್ತದೆ. ನುಗ್ಗೆ ಸೊಪ್ಪಿನ ರಸಕ್ಕೆ ನಿಂಬೆ ಹಣ್ಣಿನ ರಸವನ್ನು ಬೆರೆಸಿ ಮುಖಕ್ಕೆ ಲೇಪಿಸಿಕೊಂಡು 20 ನಿಮಿಷಗಳ ನಂತರ ಅದನ್ನು ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಬೇಕು ವಾರದಲ್ಲಿ ಮೂರು ಬಾರಿಯಾದರೂ ಹೀಗೆ ಮಾಡುವುದರಿಂದ ಮುಖದ ಕಾಂತಿ ಹೆಚ್ಚಾಗುತ್ತದೆ ಮತ್ತು ನುಗ್ಗೆ ಸೊಪ್ಪಿನ ರಸಕ್ಕೆ ಸ್ವಲ್ಪ ಜೇನುತುಪ್ಪವನ್ನು ಬೆರೆಸಿ ಸೇವಿಸುವುದರಿಂದ ಕೆಮ್ಮು ಶೀಘ್ರದಲ್ಲೇ ಗುಣಮುಖವಾಗುತ್ತದೆ.