ಜಗ್ಗೇಶ್ ಅವರ ಜೊತೆ ಸಿನಿಮಾದಲ್ಲಿ ನಟಿಸಿದ ನಟಿ ಮೋನಿಕಾ ಬೇಡಿ ಅಬು ಸಲೀಂ ಅವರನ್ನು ಪ್ರೀತಿಸಿ ಕಷ್ಟದ ಜೀವನವನ್ನು ಎದುರಿಸಬೇಕಾಯಿತು ಅದರ ಬಗ್ಗೆ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ನನ್ನಾಸೆಯ ಹೂವೆ ಚಿತ್ರದಲ್ಲಿ ಜಗ್ಗೇಶ್ ಅವರ ಜೊತೆಯಲ್ಲಿ ನಟಿಸಿ ಎಲ್ಲರ ಮನಸನ್ನು ಗೆದ್ದಿದ್ದಾರೆ ನಟಿ ಮೋನಿಕಾ ಬೇಡಿ. ಈ ಚಿತ್ರದ ಹಾಡುಗಳು ಈಗಲೂ ಪ್ರಸಿದ್ದಿಯನ್ನು ಪಡೆದಿದೆ. 1988ರಲ್ಲಿ ಭೂಗತ ಪಾತಕಿ ಅಬು ಸಲೀಂ ಬೇರೆ ಹೆಸರಿನಿಂದ ತಾನೊಬ್ಬ ಬಿಸಿನೆಸ್ ಮ್ಯಾನ್ ಎಂದು ಹೇಳುವ ಮೂಲಕ ಒಂದು ಇವೆಂಟ್ ನಲ್ಲಿ ಮೋನಿಕಾ ಬೇಡಿ ಅವರನ್ನು ಪರಿಚಯ ಮಾಡಿಕೊಂಡ. ನಂತರ ಪ್ರತಿದಿನ ಅಬು ಸಲೀಂ ಮೋನಿಕಾ ಅವರಿಗೆ ಫೋನ್ ಮಾಡುತ್ತಿದ್ದನು ಆತನ ಮಾತುಗಳನ್ನು ನಂಬಿದ ಮೋನಿಕಾ ಅವನನ್ನು ತುಂಬಾ ಹಚ್ಚಿಕೊಂಡರು. ಒಂದು ವರ್ಷದ ನಂತರ ಮೋನಿಕಾ ಅವರನ್ನು ದುಬೈಗೆ ಕರೆಸಿಕೊಂಡ ಅಬು ಸಲೀಂ ಮೋನಿಕಾ ಅವರನ್ನು ತನ್ನ ಬಲೆಗೆ ಹಾಕಿಕೊಂಡ. ಅಮಾಯಕರಾದ ಮೋನಿಕಾ ಅವರು ಆತನನ್ನು ನಂಬಿ ಪ್ರೀತಿಸಲು ಶುರು ಮಾಡಿದರು.

1993ರಲ್ಲಿ ಮುಂಬೈ ಬಾಂಬ್ ಬ್ಲಾಸ್ಟ್ ನಡೆದ ನಂತರ ಅಬು ಸಲೀಂ ಯಾರು ಎಂದು ಪ್ರಪಂಚಕ್ಕೆ ಗೊತ್ತಾಯಿತು ಆಗ ಅಬು ಸಲೀಂ ಗುಟ್ಟಾಗಿ ಅಮೆರಿಕಕ್ಕೆ ಸೇರಿಕೊಂಡ ಅಲ್ಲಿಗೆ ಬರುವಂತೆ ಮೋನಿಕಾಗೆ ಹೇಳಿದ ಯೋಚನೆ ಮಾಡದೆ ಮೋನಿಕಾ ಅಮೆರಿಕಾಕ್ಕೆ ಹೋದರು ಅಲ್ಲಿ ಅವನ ಜೊತೆ ಇದ್ದಾಗ ಅವನ ನಿಜವಾದ ಬಣ್ಣ ಏನೆಂದು ಮೋನಿಕಾ ಅವರಿಗೆ ತಿಳಿಯಿತು ಆದರೆ ಸಮಯ ಮೀರಿಹೋಗಿತ್ತು. ಅಬು ಸಲೀಂ ಮೋನಿಕಾ ಅವರ ಪಾಸ್ ಪೋರ್ಟ್ ತೆಗೆದುಕೊಂಡು ಅವರನ್ನು ಆಚೆ ಬಿಡದೆ ಬಂಧಿ ಮಾಡಿದ್ದ. ಆಕೆ ವಿಧಿಯಿಲ್ಲದೆ ಅಡುಗೆ ಮಾಡುವುದು, ಬಾತ್ ರೂಮ್ ಕ್ಲೀನ್ ಮಾಡುವ ಕೆಲಸ ಮಾಡುತ್ತಿದ್ದರು. ಭಯದಿಂದ ಅಬು ಸಲೀಂ ಬಂಧನದ ಸ್ಥಳವನ್ನು ಆಗಾಗ ಬದಲಿಸುತ್ತಿದ್ದನು. 2002ರಲ್ಲಿ ನ ಕಲಿ ಪಾಸ್ ಪೋರ್ಟ್ ಕೇಸ್ ನಲ್ಲಿ ಅಬು ಜೊತೆಗೆ ಮೋನಿಕಾ ಅವರನ್ನು ಪೊಲೀಸರು ಆರೆಸ್ಟ್ ಮಾಡಿದರು. ಆಗ ಮೋನಿಕಾ ನನಗೆ ಮುಕ್ತಿ ಸಿಕ್ಕಿತು ಎಂದು ಖುಷಿಪಟ್ಟರು ಮೋನಿಕಾ ಮುಂದೆಂದೂ ಅಬು ಸಲೀಂ ಜೊತೆ ಮಾತನಾಡಲಿಲ್ಲ. ಮೋನಿಕಾ ಅವರು ಪ್ರೀತಿಸಿದ ತಪ್ಪಿಗೆ ಒಬ್ಬಂಟಿಯಾಗಿ 8 ವರ್ಷ ಜೈಲಿನಲ್ಲಿ ಓಪನ್ ಟಾಯ್ಲೆಟ್ ಪಕ್ಕದಲ್ಲಿ ವಾಸ ಮಾಡಿ ಶಿಕ್ಷೆ ಅನುಭವಿಸಿದರು. ಅಬು ಸಲೀಂನ ಪ್ರೀತಿಯಲ್ಲಿ ಬೀಳುವ ಮುನ್ನ ಅವನ ಬಗ್ಗೆ ತಿಳಿದುಕೊಂಡಿದ್ದರೆ ಮೋನಿಕಾ ಅವರ ಜೀವನ ಹೀಗಾಗುತ್ತಿರಲಿಲ್ಲ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!