ಮೊಳಕೆ ಭರಿಸಿದ ಕಾಳುಗಳು ಅತ್ಯಂತ ಆರೋಗ್ಯಕರ ಆಹಾರ ಪದಾರ್ಥಗಳಲ್ಲಿ ಒಂದು. ಮೊಳಕೆ ಭರಿಸಿದ ಕಾಳುಗಳು ಸಂಪೂರ್ಣ ಪೋಷಕಾಂಶಳಿಂದ ಕೂಡಿದ್ದು, ಆರೋಗ್ಯಕ್ಕೆ ಅಗತ್ಯವಾದ ಶಕ್ತಿ ಹಾಗೂ ಪೋಷಣೆಯನ್ನು ನೀಡುವುದು. ಕಾಳುಗಳಲ್ಲಿ ವಿಭಿನ್ನತೆಯನ್ನು ಕಾಣಬಹುದು. ಪ್ರತಿಯೊಂದು ಕಾಳುಗಳು ಭಿನ್ನವಾಗಿದ್ದು, ತನ್ನದೇ ಆದ ವಿಶೇಷ ಪೋಷಣೆಯನ್ನು ನೀಡುತ್ತವೆ. ಇದರ ಉಪಯೋಗವನ್ನು ಪ್ರಾಚೀನ ಕಾಲದಿಂದಲೂ ಮಾಡಲಾಗುತ್ತಿದೆ. ಆದರೇ ಈ ಮೊಳಕೆ ಬರಿಸಿದ ಕಾಳುಗಳನ್ನು ತಿನ್ನುವಾಗ ಕೆಲವು ವಿಷಯಗಳನ್ನು ಸಹ ನಾವು ಮರೆಯುವ ಹಾಗಿಲ್ಲ. ಹಾಗಾದರೆ ಮೊಳಕೆ ಬರಿಸಿದ ಕಾಳುಗಳನ್ನು ಹಾಗೆಯೇ ತಿನ್ನುವುದರಿಂದ ಏನಾಗತ್ತೆ? ಅನ್ನೋದನ್ನ ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಚೀನೀ ಪಾಕವಿಧಾನದಲ್ಲಿ ಮೊಳಕೆ ಬರಿಸಿದ ಕಾಳುಗಳನ್ನು ಪ್ರಧಾನ ಆಹಾರ ಎಂದು ಪರಿಗಣಿಸಲಾಗಿದೆ. ನಿಯಮಿತವಾದ ಸೇವನೆಯಿಂದ ಆರೋಗ್ಯದ ಸುಧಾರಣೆ ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ಗರ್ಭಿಣಿಯರಿಗೆ, ಬೆಳೆಯುವ ಮಕ್ಕಳಿಗೆ ವೃದ್ಧರಿಗೆ ಸೇರಿದಂತೆ ಎಲ್ಲಾ ವಯೋಮಾನದವರು ಸೇವಿಸಬಹುದು.

ಮಧುಮೇಹ ಹೊಂದಿದವರಿಗೆ ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡಲು ಮೊಳಕೆ ಬರಿಸಿದ ಕಾಳುಗಳನ್ನು ಸೇವಿಸಲು ಸಲಹೆ ನೀಡಲಾಗುವುದು. ಮೊಳಕೆ ಭರಿಸಿದ ಕಾಳುಗಳು ರಕ್ತದಲ್ಲಿ ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡುವುದು. ಅವುಗಳಲ್ಲಿ ಕಾರ್ಬೋಹೈಡ್ರೇಟ್ಸ್ ಕಡಿಮೆ ಪ್ರಮಾಣದಲ್ಲಿ ಇರುತ್ತವೆ. ಜೊತೆಗೆ ದೇಹದಲ್ಲಿ ಇನ್ಸುಲಿನ್ ಮಟ್ಟವನ್ನು ನಿಯಂತ್ರಣದಲ್ಲಿ ಇಡಲು ಸಹಾಯ ಮಾಡುತ್ತದೆ ಎಂದು ಕೆಲವು ಅಧ್ಯಯನಗಳು ಸಹ ಸಾಭೀತು ಪಡಿಸಿವೆ.

ತಜ್ಞರು ಮೊಳಕೆ ಬರಿಸಿದ ಕಾಳುಗಳು ನಮ್ಮ ಆರೋಗ್ಯಕ್ಕೆ ಉತ್ತಮ ಎನ್ನುತ್ತಾರೆ. ಈ ಮೊಳಕೆ ಕಾಳುಗಳಲ್ಲಿ ಪೋಷಕಾಂಶಗಳು ಹೇರಳವಾಗಿದ್ದು, ದೇಹದ ಆರೋಗ್ಯಕ್ಕೆ ಸಹಕಾರಿಯಾಗಿವೆ. ಆದರೆ ಈ ಮೊಳಕೆ ಕಾಳುಗಳನ್ನು ತಿನ್ನುವಾಗ ಕೆಲವೊಂದು ವಿಷಯಗಳನ್ನು ಗಮನದಲ್ಲಿರಿಸಿಕೊಳ್ಳಬೇಕು.

ಅವುಗಳು ಇಲ್ಲಿವೆ. ಮೊಳಕೆ ಬರಿಸಿದ ಕಾಳುಗಳನ್ನು ಬೇಯಿಸದೆ ಪ್ರತಿದಿನ ತಿನ್ನುವುದರಿಂದ ಮೂಲವ್ಯಾಧಿ ಅಥವಾ ಮಲಬದ್ಧತೆಗೆ ಇದು ಕಾರಣವಾಗಬಹುದು. ಮೊಳಕೆ ಬರಿಸಿದ ಕಾಳುಗಳು ಸರಿಯಾಗಿ ಜೀರ್ಣವಾಗದೆ ಇದ್ದರೆ ಹೊಟ್ಟೆ ಉಬ್ಬರ, ಮಲಬದ್ಧತೆ ಹಾಗೂ ಹೊಟ್ಟೆನೋವಿಗೆ ಕಾರಣವಾಗಬಹುದು. ಮೊಳಕೆಯೊಡೆದ ಕಾಳುಗಳ ಅತಿಯಾದ ಸೇವನೆಯಿಂದ ಅನೇಕ ಆರೋಗ್ಯ ಸಮಸ್ಯೆಗಳ ಜೊತೆಗೆ ಪೈಲ್ಸ್​ಗೂ ಕಾರಣವಾಗಬಹುದು.

ಯಾವಾಗಲೂ ಬೇಯಿಸಿದ ಮೊಳಕೆ ಕಾಳುಗಳನ್ನು ತಿನ್ನುವುದು ಒಳ್ಳೆಯದು ಎಂದು ತಜ್ಞರು ಸಲಹೆ ನೀಡುತ್ತಾರೆ. ಯಾಕೆಂದರೆ ಕಾಳುಗಳು/ಧಾನ್ಯಗಳು ಮೊಳಕೆಯೊಡೆಯಲು ಉಷ್ಣತೆ ಮತ್ತು ತೇವಾಂಶದ ಅಗತ್ಯ ಇದೆ. ಕಾಳುಗಳು ಮೊಳಕೆ ಬರುವಾಗ ಎಕೋಲಿಯಂತಹ ಅನೇಕ ಬ್ಯಾಕ್ಟೀರಿಯಾಗಳ ಬೆಳವಣಿಗೆಯಾಗುತ್ತವೆ. ಇವು ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.

ಪ್ರತಿನಿತ್ಯ ಮೊಳಕೆ ಕಾಳುಗಳನ್ನು ಸೇವಿಸುವುದು ಆರೋಗ್ಯಕ್ಕೆ ಅಷ್ಟು ಒಳ್ಳೆಯದಲ್ಲ ಎಂದು ಆಯುರ್ವೇದ ಹೇಳುತ್ತದೆ. ಯಾಕೆಂದ್ರೆ ಅಜೀರ್ಣ ಮತ್ತು ಮಲಬದ್ಧತೆ ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ವೃದ್ಧರು, ಅನಾರೋಗ್ಯ ಇರುವವರು ಹಾಗೂ ದುರ್ಬಲ ಜೀರ್ಣಕ್ರಿಯೆ ಹೊಂದಿರುವವರು ಇವುಗಳ ಸೇವನೆ ತಪ್ಪಿಸುವುದು ಒಳ್ಳೆಯದು. ಹೀಗಾಗಿ ಮೊಳಕೆಯೊಡೆದ ಕಾಳುಗಳನ್ನು ಹಾಗೆಯೇ ಸೇವಿಸುವುದಕ್ಕಿಂತ ಬೇಯಿಸಿ ತಿನ್ನುವುದು ಉತ್ತಮ ಎಂಬುದು ತಜ್ಞರ ಸಲಹೆಯಾಗಿದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!