ಈಗಿನ ಫೋನ್ ಗಳಲ್ಲಿ ರಿಮೂವೇಬಲ್ ಬ್ಯಾಟರಿ ಇರುವುದಿಲ್ಲ ಇದಕ್ಕೆ ಕಾರಣವೇನು, ಈರುಳ್ಳಿ ಕತ್ತರಿಸುವಾಗ ಕಣ್ಣೀರು ಏಕೆ ಬರುತ್ತದೆ, ಒಂದು ವೇಳೆ ದೇಹದಲ್ಲಿ ಮೂಳೆಗಳು ಇಲ್ಲದಿದ್ದರೆ ಏನಾಗಬಹುದು ಇಂತಹ ಹಲವು ಪ್ರಶ್ನೆಗಳು ನಮ್ಮ ನಿಮ್ಮಲ್ಲಿ ಹುಟ್ಟಿಕೊಳ್ಳುತ್ತದೆ. ಈ ಲೇಖನದ ಮೂಲಕ ಇಂತಹ ಪ್ರಶ್ನೆಗಳಿಗೆ ಉತ್ತರವನ್ನು ತಿಳಿದುಕೊಳ್ಳೋಣ.
ನಮ್ಮ ಕಾಲಿನ ಹೆಬ್ಬೆರಳು ನಮ್ಮ ದೇಹದ ಶೇಕಡ 40ರಷ್ಟು ತೂಕವನ್ನು ಹೊತ್ತುಕೊಂಡಿರುತ್ತದೆ. ಪ್ರತಿವರ್ಷ ಯುದ್ಧದಲ್ಲಿ ಸಾಯುವ ಸೈನಿಕರಿಗಿಂತ ಹೆಚ್ಚು ಜನ ಸೊಳ್ಳೆ ಕಚ್ಚಿ ಸಾಯುತ್ತಾರೆ. ಮಳೆಗಾಲದಲ್ಲಿ ಸೊಳ್ಳೆ ಕಚ್ಚುವ ಬಗ್ಗೆ ಬಹಳ ಎಚ್ಚರಿಕೆಯಿಂದ ಇರಬೇಕು. ನಡೆದುಕೊಂಡು ಹೋಗುವುದು ಬೆಸ್ಟ್ ಎಕ್ಸಸೈಜ್ ಎಂದು ಹೇಳುತ್ತಾರೆ. ಎಷ್ಟು ನೀವು ನಡೆಯುತ್ತಿರೊ ಅಷ್ಟು ಆರೋಗ್ಯವಾಗಿ ಇರುತ್ತೀರಾ. ಒಂದು ಹೆಜ್ಜೆ ಮುಂದೆ ಇಡುವಾಗ ನಮ್ಮ ದೇಹದಲ್ಲಿನ 200 ಮಸಲ್ಸ್ ಗಳು ವರ್ಕ್ ಆಗುತ್ತದೆ. ಟೈಟಾನಿಕ್ ಸಿನಿಮಾದಲ್ಲಿ ಕೊನೆಯಲ್ಲಿ ಒಂದು ಗಡಿಯಾರ ತೋರಿಸುತ್ತಾರೆ ಅದರಲ್ಲಿ ಎರಡು ಗಂಟೆ 20 ನಿಮಿಷ ಸಮಯ ತೋರಿಸುತ್ತದೆ, ಇದು ಟೈಟಾನಿಕ್ ಹಡಗು ಮುಳುಗಿದ ಸಮಯ.
ಆಸ್ಟ್ರೇಲಿಯಾದಲ್ಲಿ ಅತಿ ಹೆಚ್ಚು ಬೀಚ್ ಗಳಿವೆ, ಹತ್ತು ಸಾವಿರಕ್ಕೂ ಹೆಚ್ಚು ಬೀಚ್ ಗಳಿವೆ. ಆಸ್ಟ್ರೇಲಿಯಾದಲ್ಲಿರುವ ಎಲ್ಲಾ ಬೀಚ್ ಗಳನ್ನು ಸುತ್ತಾಡಿ ಬರಬೇಕೆಂದರೆ ಬರೋಬ್ಬರಿ 29 ವರ್ಷಗಳು ಬೇಕಾಗುತ್ತದೆ. ಕೋರಿಯನ್ ಹೆಣ್ಣುಮಕ್ಕಳ ಸ್ಕಿನ್ ಅನ್ನು ಜಗತ್ತಿನ ಬೆಸ್ಟ್ ಸ್ಕಿನ್ ಎಂದು ಕರೆಯುತ್ತಾರೆ. ಅಲ್ಲಿನ ಯುವತಿಯರು ತಮ್ಮ ಸ್ಕಿನ್ ಕಾಪಾಡಿಕೊಳ್ಳಲು ಕೆಲವು ವಿಧಾನಗಳನ್ನು ಅನುಸರಿಸುತ್ತಾರೆ ಅದರಲ್ಲಿ ಸ್ಲಾಪಿಂಗ್ ಕೂಡ ಒಂದು. ಅಲ್ಲಿಯ ಯುವತಿಯರು ದಿನಕ್ಕೆ ಮೂರು ಬಾರಿ ತಮ್ಮ ಕೆನ್ನೆಗೆ ತಾವೇ ಹೊಡೆದುಕೊಳ್ಳುತ್ತಾರೆ. ಹೀಗೆ ಮಾಡಿದರೆ ಸ್ಕಿನ್ ಚೆನ್ನಾಗಿ ಕಾಣಿಸುತ್ತದೆ ಕೆನ್ನೆಗೆ ಹೊಡೆಯುವುದರಿಂದ ರಕ್ತ ಸಂಚಾರ ಸರಿಯಾಗಿ ಆಗುತ್ತದೆ ಇದರಿಂದ ಟಾಕ್ಸಿನ್ ಹೊರಹೋಗಿ ಚರ್ಮದ ಕಾಂತಿ ಹೆಚ್ಚುತ್ತದೆ.
ಸಿಗರೇಟ್ ಹಾನಿಕಾರಕ ಎಂಬುದು ಎಲ್ಲರಿಗೂ ಗೊತ್ತಿದ್ದು ಕೂಡ ಸಿಗರೇಟ್ ಬಳಕೆ ಹೆಚ್ಚಾಗುತ್ತಿದೆ. 1950ರ ಹೊತ್ತಿಗೆ ಸಿಗರೇಟ್ ಆರೋಗ್ಯಕ್ಕೆ ಒಳ್ಳೆಯದು ಎಂದು ಮಾರ್ಕೆಟಿಂಗ್ ಮಾಡಲಾಗಿತ್ತು. ಸಿಗರೇಟ್ ಸೇದುವುದರಿಂದ ಕೆಲವು ರೋಗ ವಾಸಿಯಾಗುತ್ತದೆ ಎಂದು ಹೇಳಲಾಗುತ್ತಿತ್ತು ಅಲ್ಲದೆ ಆಸ್ಪತ್ರೆಗಳಲ್ಲಿ ಸಿಗರೇಟ್ ಅನ್ನು ಮೆಡಿಸಿನ್ ನಂತೆ ಕೊಡುತ್ತಿದ್ದರು. ಪೆರು ಮತ್ತು ಚಿಲಿ ದೇಶದಲ್ಲಿ ಜೀವ ಇರುವ ಕಲ್ಲುಗಳು ಸಿಗುತ್ತವೆ ಇವುಗಳನ್ನು ಲಿವಿಂಗ್ ರಾಕ್ ಎಂದು ಕರೆಯುತ್ತಾರೆ. ಈ ಕಲ್ಲುಗಳಲ್ಲಿ ರಕ್ತ ಸೇರಿದಂತೆ ಹಲವು ಅಂಗಗಳು ಇರುತ್ತವೆ. ಈ ಕಲ್ಲುಗಳನ್ನು ತಿನ್ನಲೂಬಹುದು. ಪ್ರತಿಯೊಂದು ದೇಶ ತನ್ನದೇ ಆದ ಆರ್ಮಿ ಹೊಂದಿರುತ್ತದೆ. ಸೀನಿಯರ್ಸ್ ಆದೇಶವನ್ನು ತಪ್ಪದೆ ಪಾಲಿಸಬೇಕಾಗುತ್ತದೆ ಆದರೆ ಜರ್ಮನಿ ದೇಶದ ಸೇನೆಯಲ್ಲಿ ಸೈನಿಕರು ತಮ್ಮ ಸೀನಿಯರ್ಸ್ ಆದೇಶವನ್ನು ಪಾಲಿಸದೆ ಇರಲು ಅವಕಾಶವಿದೆ ಆದರೆ ಕೆಲವು ಷರತ್ತುಗಳಿವೆ.
ಹೀಲ್ಸ್ ಹಾಕಿಕೊಳ್ಳುವುದು ಈಗಿನ ಟ್ರೆಂಡ್ ಆಗಿದೆ. 50 ಕೆಜಿಯ ಒಬ್ಬ ಯುವತಿ ಹೀಲ್ಸ್ ಹಾಕಿಕೊಂಡು ಭೂಮಿಗೆ ಹಾಕುವ ಪ್ರೆಷರ್ 2,000 ಕೆಜಿ ತೂಕದ ಆನೆ ಭೂಮಿಗೆ ಹಾಕುವ ಪ್ರೆಷರ್ ಗೆ ಸಮವಾಗಿರುತ್ತದೆ. ಜೇನುನೊಣಗಳು ಸಾಮಾನ್ಯವಾಗಿ 300ರಿಂದ 400 ಮೀಟರ್ ಎತ್ತರ ಹಾರಬಹುದು ಆದರೆ ಅವು ಮೌಂಟ್ ಎವರೆಸ್ಟ್ ಗಿಂತ ಎತ್ತರ ಹಾರುವ ಸಾಮರ್ಥ್ಯವನ್ನು ಹೊಂದಿವೆ. ಇರುವೆಯನ್ನು ಎಷ್ಟು ಎತ್ತರದಿಂದ ಕೆಳಗೆ ಹಾಕಿದರೂ ಅದಕ್ಕೆ ಏನೂ ಆಗುವುದಿಲ್ಲ. ಕಾರಣ ಅದು ಕಡಿಮೆ ತೂಕ ಹೊಂದಿದೆ. ನಮ್ಮ ಸೌರಮಂಡಲದಲ್ಲಿರುವ ಪ್ರತಿಯೊಂದು ಗ್ರಹಕ್ಕೂ ದೇವರ ಹೆಸರನ್ನು ಇಡಲಾಗಿದೆ ಆದರೆ ದೇವರ ಹೆಸರು ಇಲ್ಲದಿರುವ ಏಕೈಕ ಗ್ರಹವೆಂದರೆ ಅದು ಭೂಮಿ. ಪೆಂಗ್ವಿನ್ ಮೊಟ್ಟೆಯನ್ನು ಬೇಯಿಸಿದಾಗ ಅದು ಟ್ರಾನ್ಸಪರೆಂಟ್ ಆಗಿ ಬದಲಾಗುತ್ತದೆ. ಒಳಗಿರುವ ಹಳದಿಬಣ್ಣ ಸರಿಯಾಗಿ ಕಾಣಿಸುತ್ತದೆ. ಒಂದು ವೇಳೆ ಮೂಳೆಗಳೆ ಇಲ್ಲದೆ ಇದ್ದರೆ ಯಾವುದೇ ಕೆಲಸ ಮಾಡಲು ಸಾಧ್ಯ ಆಗುತ್ತಿರಲಿಲ್ಲ ಮತ್ತು ಮನುಷ್ಯನ ಆಕಾರವೇ ಇರುತ್ತಿರಲಿಲ್ಲ.
ಈರುಳ್ಳಿಯಲ್ಲಿ ಒಂದುರೀತಿಯ ಎನ್ಜೈನ್ ಇರುತ್ತದೆ ಈರುಳ್ಳಿ ಕತ್ತರಿಸಿದಾಗ ಎನ್ಜೈನ್ ಗಾಳಿಯಲ್ಲಿ ಸೇರಿಕೊಳ್ಳುತ್ತದೆ ಅದು ಕಣ್ಣಿಗೂ ಬಡಿಯುತ್ತದೆ ಆಗ ಕಣ್ಣಿನಲ್ಲಿ ನೀರು ಬರುತ್ತದೆ. ಈರುಳ್ಳಿ ಕತ್ತರಿಸುವಾಗ ಕಣ್ಣಿನಲ್ಲಿ ನೀರು ಬರಬಾರದು ಎಂದರೆ ಕೆಲವು ವಿಧಾನಗಳಿವೆ. ಈರುಳ್ಳಿಯನ್ನು ಕತ್ತರಿಸಿ ನೀರಿನಲ್ಲಿ ಹಾಕಿ ಇಡಬೇಕು, ನೀರಿಗೆ ನಿಂಬೆರಸ ಹಾಕಿ ಈರುಳ್ಳಿಯನ್ನು ಮುಳುಗಿಸಿಡಬೇಕು ಆಗ ಕಣ್ಣಿನಲ್ಲಿ ನೀರು ಬರುವುದಿಲ್ಲ. ಮೊಬೈಲ್ ಗಳಲ್ಲಿ ರಿಮೂವೇಬಲ್ ಮೊಬೈಲ್ ಬ್ಯಾಟರಿ ಇದ್ದರೆ ಅದು ವಾಟರ್ ಪ್ರೂಫ್ ಆಗಿರುವುದಿಲ್ಲ. ನೀರಿನಲ್ಲಿ ಸ್ವಲ್ಪ ಬಿದ್ದರೂ ಅದರ ಬ್ಯಾಟರಿ ಹೋಗುತ್ತದೆ ಆದ್ದರಿಂದ ಬ್ಯಾಟರಿ ಸೇಫ್ಟಿ ದೃಷ್ಟಿಯಿಂದ ರಿಮೂವೇಬಲ್ ಬ್ಯಾಟರಿ ಸಿಸ್ಟಮ್ ತೆಗೆಯಲಾಗಿದೆ.
ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್
ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466