ಒಂದೊಂದು ರಾಶಿಯಲ್ಲಿ ಜನಿಸಿದವರು ಆಯಾ ರಾಶಿಗೆ ಅನುಗುಣವಾಗಿ ತಮ್ಮದೇ ಗುಣ ಸ್ವಭಾವವನ್ನು ಹೊಂದಿರುತ್ತಾರೆ. ಮಿಥುನ ರಾಶಿಯ ಪುರುಷರ ಗುಣ ಸ್ವಭಾವ ಹೇಗಿರುತ್ತದೆ, ಅವರ ಆರೋಗ್ಯ, ಹಣಕಾಸು,ಕಾರ್ಯಕ್ಷೇತ್ರ ಹಾಗೂ ಅವರ ಸ್ಟ್ರೆಂತ್, ವೀಕ್ನೆಸ್ ಬಗ್ಗೆ ಈ ಲೇಖನದಲ್ಲಿ ನೋಡೋಣ.

ಮಿಥುನ ರಾಶಿ ವಾಯುತತ್ವ ರಾಶಿಯಾಗಿದ್ದು ಇವರು ಆಕಾಶೀಯ ಚಿಂತನೆಯಲ್ಲಿ ಅಭಿರುಚಿ ಹೊಂದಿರುತ್ತಾರೆ, ಇವರು ಸೇವಾಭಾವಿಗಳು. ಇವರು ತಮ್ಮ ಬುದ್ಧಿ ಹಾಗೂ ಕರ್ತಗಳಿಂದ ತನ್ನ ಸ್ಥಿತಿ ಹಾಗೂ ಪದವಿಗಳನ್ನು ಹೊಂದುತ್ತಾರೆ. ಇವರು ಬಹಳ ಶ್ರಮಜೀವಿಗಳಾಗಿರುತ್ತಾರೆ. ಜೀವನದಲ್ಲಿ ಮುಂದೆ ಬರಲು ಬಹಳ ಕಷ್ಟಪಡುತ್ತಾರೆ, ತಮ್ಮ ಬುದ್ಧಿಯನ್ನು ಉಪಯೋಗಿಸಿ ಕಷ್ಟಪಡುತ್ತಾರೆ. ಇವರಲ್ಲಿ ಅಗಾಧವಾದ ಯೋಚನೆ ಕಂಡುಬರುತ್ತದೆ.

ಸರಕು ಸಾಗಣೆ, ಅಂಚೆ ತಂತಿ, ರೇಲ್ವೆ, ದೂರವಾಣಿ, ಗಣಕಯಂತ್ರ, ಲಲಿತಕಲೆ, ಗಾಯನ, ಚಿತ್ರಕಲೆ, ಶಿಕ್ಷಣ, ಗುಮಾಸ್ತ, ಅಧಿಕಾರಿ ಮೊದಲಾದ ಕ್ಷೇತ್ರಗಳಲ್ಲಿ ಇವರು ಕೆಲಸ ಮಾಡುವ ಸನ್ನಿವೇಶ ಕಂಡುಬರುತ್ತದೆ. ಕೆಲಸ ಮಾಡಲು ಯಾವುದೆ ಕ್ಷೇತ್ರವಾದರು ಇವರು ಒಗ್ಗಿಕೊಳ್ಳುತ್ತಾರೆ. ಇವರಿಗೆ ನಿರ್ದಿಷ್ಟವಾದ ಕ್ಷೇತ್ರ ಎಂಬುದಿಲ್ಲ. ವ್ಯಾಪಾರ ವೃದ್ದಿಯಲ್ಲಿ ನೌಕರರಾಗಿ ಕೆಲಸ ಮಾಡುವ ಅವಕಾಶಗಳು ಬರುತ್ತದೆ. ಇವರು ಸರ್ಕಾರಿ ಅಥವಾ ಅರೆಸರ್ಕಾರಿ ಕ್ಷೇತ್ರದಲ್ಲಿ ಕೆಲಸ ಮಾಡುವ ಸಾಧ್ಯತೆಗಳಿವೆ. ಇವರು ಮಾಡುವ ಕೆಲಸ ಸಾಹಸಮಯ ಕೆಲಸವಾಗಿರುತ್ತದೆ. ಇವರು ಶ್ರಮವಹಿಸಿ ಕೆಲಸ ಮಾಡುತ್ತಾರೆ.

ಮಿಥುನ ರಾಶಿಯ ಪುರುಷರಲ್ಲಿ ದ್ವಂದ್ವ ನಿಲುವು ಇರುತ್ತದೆ, ನಿರ್ದಿಷ್ಟವಾದ ನಿರ್ಣಯಗಳಿರುವುದಿಲ್ಲ ನಿರ್ಣಯಗಳು ಗೊಂದಲಮಯ ವಾತಾವರಣವನ್ನು ಸೃಷ್ಟಿಸುತ್ತದೆ , ಒಂದು ಕೆಲಸವನ್ನು ಸ್ವಲ್ಪ ದಿನಗಳು ಮಾಡುವುದು ನಂತರ ಅದರ ಮೇಲೆ ಇಂಟ್ರೆಸ್ಟ್ ಕಳೆದುಕೊಂಡು ಬೇರೆ ಕೆಲಸವನ್ನು ಹುಡುಕುವುದು ಈ ರೀತಿಯ ದ್ವಂದ್ವ ನಿಲುವು ಇರುತ್ತದೆ. ಇದರಿಂದ ಅನೇಕ ಸಮಸ್ಯೆಗಳು ಬರುತ್ತವೆ.

ಅವರು ಯಾವುದೆ ಒಂದು ಕೆಲಸಕ್ಕೆ ಅಥವಾ ನಿರ್ಧಾರಗಳಿಗೆ ಗಟ್ಟಿಯಾಗಿ ಅಂಟಿಕೊಳ್ಳುವುದಿಲ್ಲ. ಇದರಿಂದ ತೊಂದರೆಯನ್ನು ಅನುಭವಿಸುತ್ತಾರೆ ಹಣಕಾಸಿನಲ್ಲಿ ಸಮಸ್ಯೆ, ಕೆಲಸದಲ್ಲಿ ತೊಂದರೆ, ಜನರಿಂದ ತೊಂದರೆಯನ್ನು ಅನುಭವಿಸುತ್ತಾರೆ. ಮಿಥುನ ರಾಶಿಯವರು ತಮ್ಮ ನಿರ್ಧಾರದ ಬಗ್ಗೆ ಹಾಗೂ ಕೆಲಸದ ಬಗ್ಗೆ ಪೂರ್ಣವಾಗುವವರೆಗೆ ಗಟ್ಟಿಯಾಗಿ ಅಂಟಿಕೊಳ್ಳಬೇಕು.

ಮಿಥುನ ರಾಶಿಯ ಪುರುಷರ ಅಭಿರುಚಿಯಲ್ಲಿ ಬದಲಾವಣೆ ಕಂಡುಬರುತ್ತದೆ. ಕೆಲಸವನ್ನು ಆಗಾಗ ಬದಲಾಯಿಸುತ್ತಾರೆ. ಇವರು ತಮ್ಮ ಜೀವನದಲ್ಲಿ ಹೆಚ್ಚಿನ ಸಂಖ್ಯೆಯ ಮಿತ್ರರನ್ನು ಪಡೆಯುತ್ತಾರೆ, ಇವರು ಮಿತ್ರರಿಗೆ ಬೆಲೆ ಕೊಡುತ್ತಾರೆ. ಒಬ್ಬರು ಇವರನ್ನು ಬಹಳ ಹಚ್ಚಿಕೊಳ್ಳುತ್ತಾರೆ ಅವರು ಗುರು, ಬಂಧು, ಸ್ನೇಹಿತ ಆಗಿರಬಹುದು ಆದರೆ ನಂತರ ಅವರು ಶತ್ರುಗಳಾಗಬಹುದು ಇವರು ಮಾಡುವ ಕೆಲಸಕ್ಕೆ ಜನ ಬೆಂಬಲ ಇರುವುದಿಲ್ಲ ಇದರಿಂದ ಮಾನಸಿಕವಾಗಿ, ಭಾವನಾತ್ಮಕವಾಗಿ ನೊಂದಿರುತ್ತಾರೆ ಇದರಿಂದ ಶತ್ರುಗಳು ಮಿತ್ರರಾಗಬಹುದು, ಮಿತ್ರರು ಶತ್ರುಗಳಾಗಬಹುದು ಇದರಿಂದ ಸಂಬಂಧಗಳು ಹಾಳಾಗಬಹುದು.

ಮಿಥುನ ರಾಶಿಯ ಪುರುಷರು ಮಾತುಗಾರಿಕೆಯಲ್ಲಿ ನಿಪುಣರು ಇದು ಇವರ ಸ್ಟ್ರೆಂತ್ ಆಗಿದೆ. ಯಾವ ಸಂದರ್ಭದಲ್ಲಿ ಏನು ಮಾತನಾಡಬೇಕು ಎಂದು ತಿಳಿದಿರುತ್ತಾರೆ. ತರ್ಕಶೀಲರಾಗಿರುತ್ತಾರೆ, ಕಲೆಯ ತಿಳುವಳಿಕೆ ಇರುವುದರಿಂದ ಉತ್ತಮ ಭಾಷಣಕಾರರು, ಪತ್ರಕರ್ತರು, ಸಂಪಾದಕರು, ಸಂದರ್ಶಕರು, ಬಿಸಿನೆಸ್ ಹೀಗೆ ಎಲ್ಲ ಕ್ಷೇತ್ರದಲ್ಲಿ ಇವರು ಕೆಲಸ ಮಾಡಬಹುದು ಆದರೆ ಇವರ ಮನಸ್ಸು ಚಂಚಲವಾಗಿರುತ್ತದೆ.

ಇವರನ್ನು ನಂಬಿದವರಿಗೆ ಇವರಿಂದ ಮೋಸ ಆಗುವುದಿಲ್ಲ. ದ್ವಂದ್ವ ನಿಲುವು ಇರುವುದರಿಂದ ಇವರು ಕೆಲವು ಸಂಕಷ್ಟಗಳನ್ನು ಎದುರಿಸುತ್ತಾರೆ ಆದರೆ ಇವರನ್ನು ಎಲ್ಲಿಯೆ ಬಿಟ್ಟರು ಕೆಲಸ ಮಾಡುತ್ತಾರೆ. ಇವರು ನಂಬಿಕೆಗೆ ಅರ್ಹರು ಈ ಕಾರಣದಿಂದ ಜನಮನ್ನಣೆ ಗಳಿಸುತ್ತಾರೆ. ಕೆಲವು ಸಲ ಇವರಿಗೆ ಸಿಗಬೇಕಾದ ಸನ್ಮಾನ ಬೇರೆಯವರಿಗೆ ಸಿಗಬಹುದು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ ಅದರಲ್ಲೂ ಮಿಥುನ ರಾಶಿಯವರಿಗೆ ತಪ್ಪದೆ ತಿಳಿಸಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!