ಮಿಥುನ ರಾಶಿ ಈ ರಾಶಿಯು ಕೂಡ ನಮ್ಮ ಹನ್ನೆರಡು ರಾಶಿಯಲ್ಲಿ ಒಂದು ಎನ್ನುವುದು ಎಲ್ಲರಿಗೂ ತಿಳಿದ ವಿಚಾರ ಹಾಗೂ ಈ ರಾಶಿಯ ವ್ಯಕ್ತಿಗಳು ತ್ವರಿತ ಬುದ್ದಿವಂತಿಕೆ ಹಾಗೂ ಉತ್ಸಹಭರಿತ ಸ್ವಭಾವವನ್ನು ಹೊಂದಿರುವರು ಅವಳಿ ಸಂಕೇತ ಈ ರಾಶಿ ಆಗಿದ್ದು ವಾಕ್ಚಾತುರ್ಯವನ್ನು ಹೊಂದಿರುವರು ಇವರು ಹೆಚ್ಚು ದೈರ್ಯಶಾಲಿ ಆಗಿರುವುದಿಲ್ಲ ಹಾಗೂ ಅಂಜುಬುರುಕ ಸ್ವಭಾವ ಇವರದ್ದು ಎಲ್ಲಾ ರಾಶಿಯ ಪ್ರತಿ ದಿನ ವಾರ ಹಾಗೂ ಮಾಸ ಭವಿಷ್ಯವನ್ನು ಗೋಚರ ಫಲದ ಮೂಲಕ ತಿಳಿದುಕೊಳ್ಳಬಹುದು
ಹಾಗೆಯೇ ಜೂನ್ ತಿಂಗಳ ಮಿಥುನ ರಾಶಿ ಅವರ ಭವಿಷ್ಯದ ಬಗ್ಗೆ ನೋಡುವುದಾದರೆ ಈ ತಿಂಗಳು ಮಿಥುನ ರಾಶಿ ಅವರಿಗೆ ಅದೃಷ್ಟ ಮಾಸ ಎಂದರೆ ತಪ್ಪಾಗುವುದಿಲ್ಲ ಈ ತಿಂಗಳಲ್ಲಿ ಅವರು ಅಂದುಕೊಂಡ ಕೆಲಸ ಕಾರ್ಯ ಎಲ್ಲವೂ ಯಾವುದೇ ಅಡೆತಡೆ ಇಲ್ಲದೆ ಸಾಗುವುದು ಹಾಗೂ ಆರೋಗ್ಯ ವೃತ್ತಿ ಜೀವನ ಸಾಂಸಾರಿಕ ಜೀವನದಲ್ಲಿ ಕೂಡ ಶಾಂತಿ ನೆಮ್ಮದಿ ನಿಮ್ಮದಾಗುವುದು
ಜೂನ್ ತಿಂಗಳನ್ನು ಜೇಷ್ಠ ಮಾಸ ಎಂದು ಕೂಡ ಕರೆಯುತ್ತಾರೆ ನಿಮ್ಮ ದೊಡ್ಡ ಮಗನಿಗೆ ಇಲ್ಲ ಮಗಳಿಗೆ ಮದುವೆ ಸಂಬಂಧ ನಿರ್ಣಯ ಆಗಿದ್ದು ಇಬ್ಬರು ಕೂಡ ಜೇಷ್ಠ ಆಗಿದ್ದಲ್ಲಿ ಈ ತಿಂಗಳು ಯಾವುದೇ ಕಾರಣಕ್ಕೂ ಮದುವೆ ಮಾಡಬೇಡಿ ಒಂದು ವೇಳೆ ಮಾಡಿದಲ್ಲಿ ಅವರ ಸಂಸಾರದಲ್ಲಿ ಅನ್ಯೋನ್ಯತೆ ಇಲ್ಲದೆ ಬರೀ ನೋವು ಸಿಗುವ ಸಾಧ್ಯತೆ ಇರುತ್ತದೆ ಸೂರ್ಯ ಈ ರಾಶಿಗೆ ಪ್ರವೇಶ ಜೂನ್ 15 ಶುಕ್ರ ಕೂಡ ಸ್ವಂತ ಮನೆಗೆ ಜೂನ್ 18 ಆಗಮನ ಹಾಗೂ ಕುಜನು ಕೂಡ 26 ಸ್ವಂತ ಮನೆಗೆ ಪ್ರವೇಶ ಮಾಡುತ್ತಾನೆ ಹಾಗಾಗಿ ಮೂರು ಗ್ರಹಗಳ ಸ್ಥಾನ ಬದಲಾವಣೆ ಅಷ್ಟೆ ಇನ್ನುಳಿದ ಗ್ರಹಗಳು ಅಲ್ಲಿ ಇದ್ದು ತನ್ನ ಇರುವಿಕೆಯನ್ನು ಸೂಚಿಸುವುದು
ಮಿಥುನ ರಾಶಿಯ ಅಧಿಪತಿ ಬುಧ ತನ್ನದೇ ಮನೆಯಲ್ಲಿ ಇರುವುದರಿಂದ ನಿಮ್ಗೆ ಆರೋಗ್ಯ ಭಾಗ್ಯ ಆಲಸ್ಯದಿಂದ ಸ್ವಲ್ಪ ಮುಕ್ತಿ ಹಾಗೂ ಸುಖ ನೆಮ್ಮದಿ ಸಿಗುವುದು ಇನ್ನು ಹನ್ನೆರಡರ ಮನೆಯಲ್ಲಿ ಬುಧ ವಾಸ ಇರುವುದರಿಂದ ವಿದೇಶದಲ್ಲಿ ವಿದ್ಯಾಬ್ಯಾಸ ಮಾಡುವರು ಅನುಕೂಲ ವಿದೇಶ ಪ್ರವಾಸ ವಿದೇಶ ವ್ಯಾಪಾರ ವಹಿವಾಟು ಮೂಲಕ ಉತ್ತಮ ಲಾಭ ಸೂರ್ಯ ಮೂರನೇ ಮನೆಯಲ್ಲಿ ಇದ್ದು ನಿಮ್ಮ ದೈರ್ಯ ಹಾಗೂ ಸ್ಥೈರ್ಯ ಕಾರಣ ಆದ ಜೂನ್ 15 ತನಕ ಅಷ್ಟೊಂದು ಚೆನ್ನಾಗಿ ಇಲ್ಲ ಆದರಿಂದ ಮಂಕು ನಿದ್ದೆ ಹಾಗೂ ಅಲಸ್ಯತನಕ್ಕೆ ಹಾಗೂ ಗೆಲುವು ಸಾಧಿಸಲು ಹಿನ್ನಡೆ
ಆದರೆ ಜೂನ್ 15 ಬಳಿಕ ಬುಧ ಹಾಗೂ ಸೂರ್ಯ ಒಂದೇ ಮನೆಯ ಪರಿಣಾಮ ಬುಧದಿತ್ಯ ಯೋಗ ಪ್ರಾಪ್ತಿ ಶುಕ್ರನು ಕೂಡ ಒಳ್ಳೆಯ ಫಲ ನೀಡುತ್ತಾನೆ ಹಾಗಾಗಿ ನಿಮ್ಮ ಪಾರ್ಟ್ನರ್ ಶಿಪ್ ಸ್ವಂತ ಉದ್ಯಮ ವಿವಾಹ ಮತ್ತು ಸಂತಾನ ಬಗ್ಗೆ ಯೋಚನೆ ಕೂಡ ಉತ್ತಮ ಭಾಗ್ಯ ಹಾಗೂ ಯಶಸ್ಸು ಇಷ್ಟು ದಿನ ಪಂಚಮ ಶನಿ ಪ್ರಭಾವ ಇದ್ದು ಸಾಕಷ್ಟು ನೋವು ಇತ್ತು ಆದರೆ ಶನಿಯು ಕೂಡ ನಿಮಗೆ ಒಳ್ಳೆಯದನ್ನೇ ಮಾಡುತ್ತಾನೆ
ಮಿಥುನ ರಾಶಿಯಲ್ಲಿ ಕೇತುವು ಐದನೇ ಮನೆಯಲ್ಲಿ ಇರುವುದರಿಂದ ಸಂತಾನದಲ್ಲಿ ಸ್ವಲ್ಪ ಅಡೆತಡೆ ಮನೆಯಲ್ಲಿ ವ್ಯಾಜ್ಯ ಇನ್ನು ಕೆಲವೊಂದು ಪಿತೂರಿ ನಿಮ್ಮ ಮೇಲೆ ನಡೆವ ಸಾಧ್ಯತೆ ಇದೆ ಹಾಗಾಗಿ ಎಚ್ಚರಿಕೆ ಅಗತ್ಯ ಯಾರನ್ನು ಅತಿಯಾಗಿ ನಂಬಬೇಡಿ ಆಮೇಲೆ ನೀವೇ ನೋವು ತಿನ್ನುವ ಪರಿಸ್ಥಿತಿ ಇನ್ನೂ ಗ್ರಂಥದ ಮೂಲಕ ನೋಡುವುದಾದರೆ ದಶಮ ಸ್ಥಾನದಲ್ಲಿ ಕುಜ ಇರುವುದರಿಂದ ಸಕಲ ಸನ್ಮಾನಗಳು ಉಂಟುಮಾಡುತ್ತಾನೆ
ಸ್ವಂತ ಪ್ರಯತ್ನದಿಂದ ಕಾರ್ಯದಲ್ಲಿ ಯಶಸ್ಸು ಲಭಿಸಿ ಸಿಂಹದಂತೆ ನಡತೆ ಶತ್ರು ವಿನಾಶ ಹಾಗೂ ಬಂದು ಮಿತ್ರರಿಂದ ಗೌರವ ಇನ್ನೂ ಜೂನ್ 26 ಹನ್ನೊಂದನೇ ಮನೆಗೆ ಕುಜನ ಪ್ರವೇಶದಿಂದ ತನ್ನ ಮಗನಿಗೆ ಒಳ್ಳೆಯದು ಹಾಗೂ ಶತ್ರುವಿನ ದೂರ ವೃಷಭ ಆನೆ ಹಸುವನ್ನು ದಿನ ನೋಡಿಕೊಂಡು ತನ್ನ ಕೆಲಸ ಕಾರ್ಯಕ್ಕೆ ಹೋದರೆ ಯಶಸ್ಸು ಲಾಭ ಸಿಗುವುದು ಹೊಸ ವಾಹನ ಖರೀದಿ ಉತ್ತಮ ಕಾಲ ಸಂತೋಷಕ್ಕೆ ಧನ ವ್ಯಯ ಸಾಧ್ಯತೆ ಹೀಗೆ ಒಟ್ಟಾರೆ ರಾಜ ಯೋಗ ಪ್ರಾಪ್ತಿ
ಸಾಮಾನ್ಯವಾಗಿ ಈ ತಿಂಗಳಲ್ಲಿ ರೈತರಿಗೆ ಶುಭಫಲ ಮಕ್ಕಳಿಂದ ಪೋಷಕರಿಗೆ ನವೋಲ್ಲಾಸ ಜೀವನ ಸಾಲದಿಂದ ಮುಕ್ತಿ ಬಂಧುಮಿತ್ರರ ಆಗಮನ ಮನೆಯಲ್ಲಿ ಹರುಷ ವಾಹನ ಖರೀದಿ ವಿದ್ಯಾರ್ಥಿಗಳಿಗೆ ಅತ್ಯಂತ ಶುಭ ಸಮಯ ಬಂಡವಾಳ ಹೂಡಿಕೆಗೆ ಒಳ್ಳೆಯ ಸಮಯ ಹಾಗೂ ನೆಮ್ಮದಿ ಜೀವನ ಆದರೆ ಸ್ವಲ್ಪ ಸೋಂಬೇರಿತನ ಆಲಸ್ಯ ವ್ಯಾಪಾರ ವ್ಯವಹಾರಗಳಲ್ಲಿ ಸಾದಾರಣ ಪ್ರಗತಿ ಲಾಭ ಅನಿರೀಕ್ಷಿತ ಪ್ರಯಾಣ ದ್ರವ ಪದಾರ್ಥ ವ್ಯವಹಾರ ಅಂದರೆ ನೀರಿನ ಸರಬರಾಜು ಪೆಟ್ರೋಲ್ ಡೀಸೆಲ್ ಕಬ್ಬಿಣ ಆಸಿಡ್ ಜೆಲ್ಲಿ ಮುಂತಾದ ಚಟುವಟಿಕೆಯಲ್ಲಿ ಸ್ವಲ್ಪ ಪ್ರಗತಿ ಕಡಿಮೆ
ಇನ್ನು ರಾಜಕೀಯ ಹಾಗೂ ದೊಡ್ಡ ವ್ಯವಹಾರ ಅಲ್ಲಿ ಇರುವರು ಸ್ವಲ್ಪ ಅಸುರಕ್ಷಿತ ಭಾವನೆ ಮೂಡುವುದು ಹಾಗೂ ಭಯದ ವಾತಾವರಣ ನಿರ್ಮಾಣ ಇದೇಕೆಲ್ಲ ಪರಿಹಾರ ಮಿಥುನ ರಾಶಿ ಅವರು ವಿಷ್ಣು ದೇವಸ್ಥಾನ ಹೋಗಿ ಭಕ್ತಿಯಿಂದ ಪೂಜೆ ಸಲ್ಲಿಸಿ ಇನ್ನು ಶ್ರಾವಣ ನಕ್ಷತ್ರದ ದಿನ ವಿಷ್ಣುವಿಗೆ ಅಭಿಷೇಕ ನೀಡಿ ಪೂಜಿಸುವುದರ ಮೂಲಕ ದೇವರ ಕೃಪೆಗೆ ಪಾತ್ರರಾಗಿ ಈ ಮೇಲೆ ತಿಳಿಸಿದ ವಿಷಯ ಗೋಚರ ಫಲ ಹಾಗಾಗಿ ಒಮ್ಮೆ ಜಾತಕ ನೋಡಿ ಆಮೇಲೆ ನಿರ್ಧಾರ ಕೈಗೊಳ್ಳುವ ಪ್ರಯತ್ನ ಮಾಡಿ ಎಲ್ಲರಿಗೂ ಶುಭವಾಗಲಿ.