ರೈತರು ಆದಾಯದ ಮೂಲವಾಗಿ ಪಶುಸಂಗೋಪನೆಯಿಂದ ತರಕಾರಿ ಬೆಳೆಯುವುದರಿಂದ ಬೇರೆ ಬೇರೆ ರೀತಿಯ ಉಪಕಸುಬುಗಳಿಂದ ಅವರು ಜೀವನದಲ್ಲಿ ಇನ್ನೊಂದು ಹಂತವನ್ನು ತಲುಪುವುದಕ್ಕೆ ಆಲೋಚಿಸುತ್ತಾರೆ. ಭೂಮಿ ಮೇಲೆ ಶೇಕಡಾ ಎಪ್ಪತ್ತಕ್ಕಿಂತ ಹೆಚ್ಚು ಭಾಗ ನೀರಿನಿಂದ ಆವೃತವಾಗಿದೆ ಹಾಗಾಗಿ ನೀರಿನಿಂದ ಉತ್ಪಾದಿಸಲು ಸಾಧ್ಯವಾಗುವಂತಹ ಮೀನು ಸಿಗಡಿ ಎಡಿ ಇವುಗಳಿಂದಲೂ ಸಹ ನಮಗೆ ಉತ್ತಮವಾದಂತಹ ಆದಾಯವನ್ನು ಗಳಿಸುವುದಕ್ಕೆ ಸಾಧ್ಯ.

ಮೀನು ಅಂತ ಬಂದರೆ ಎಷ್ಟು ಆಯ್ಕೆಗಳಿವೆ ಎನ್ನುವುದನ್ನು ಗಮನಿಸಬಹುದು ಹೇಗೆ ನಾವು ಚಿಕನ್ ಮಟನ್ ಅಥವಾ ಮೊಲದ ಸಾಕಾಣಿಕೆಯಿಂದ ಮಾಂಸಕ್ಕೆ ಇರುವ ಬೇಡಿಕೆಯನ್ನು ಹೇಗೆ ಪೂರೈಸುವುದಕ್ಕೆ ಪ್ರಯತ್ನಪಡುತ್ತೇವೆಯೋ ಅದೇ ರೀತಿ ಮೀನು ಸಾಕಾಣಿಕೆಯಿಂದಲೂ ಉತ್ತಮ ಆದಾಯವನ್ನು ಗಳಿಸುವುದಕ್ಕೆ ಸಾಧ್ಯ.

ಹಾಗಾದರೆ ಮೀನನ್ನು ಯಾಕಾಗಿ ಸಾಕಣೆ ಮಾಡಬೇಕು ಮೀನು ಸಾಕಾಣಿಕೆ ಮಾಡುವುದರಿಂದ ಎಷ್ಟು ಆದಾಯ ಗಳಿಸಬಹುದು ಎಂಬುದನ್ನ ನಾವಿವತ್ತು ತಿಳಿದುಕೊಳ್ಳೋಣ. ಯಾವುದೇ ನೀರಿನ ಹಿಂದಿನ ಪ್ರದೇಶವಿರಬಹುದು ಜಲವಿನ್ಯಾಸಗಳು ಇರಬಹುದು ಕೃಷಿಹೊಂಡಗಳಿರಬಹುದು ಇವುಗಳಲ್ಲಿ ಮೀನು ಕೃಷಿಯನ್ನು ಮಾಡುವುದರಿಂದ ಉತ್ಪಾದನೆಯನ್ನು ಶೇಕಡ ಅರವತ್ತು ಭಾಗದಷ್ಟು ಹೆಚ್ಚಿಸಿಕೊಳ್ಳಬಹುದು.

ಹಾಗಾಗಿ ಯಾವುದೇ ರೀತಿಯ ಭಯವಿಲ್ಲದೆ ನಿರ್ಭಯವಾಗಿ ಮೀನು ಕೃಷಿಯನ್ನು ಮಲೆನಾಡಿನ ಭಾಗದ ರೈತರು ಕರ್ನಾಟಕ ರಾಜ್ಯದ ರೈತರು ಎಲ್ಲರೂ ಕೂಡ ಮೀನು ಕೃಷಿಯನ್ನು ಮಾಡಬಹುದು. ಇತ್ತೀಚಿನ ದಿನದಲ್ಲಿ ಯಾವ ಮೀನಿಗೆ ಹೆಚ್ಚಿನ ಪ್ರಾಶಸ್ತ್ಯವನ್ನು ಕೊಡಲಾಗುತ್ತಿದೆ ಮಾರುಕಟ್ಟೆಯಲ್ಲಿ ಯಾವ ಮೀನಿಗೆ ಹೆಚ್ಚಿನ ಬೇಡಿಕೆಯಿದೆ ಎಂಬ ಈ ಎರಡು ವಿಚಾರಗಳನ್ನು ಗಮನಿಸಿದ ಮೇಲೆ ಆ ಮೀನುಗಳನ್ನು ತಂದು ಸಾಕಾಣಿಕೆ ಮಾಡಬೇಕು ಉತ್ಪಾದನೆಯನ್ನು ಹೆಚ್ಚಿಸುವುದಕ್ಕೆ ಯಾವ ರೀತಿಯ ಕ್ರಮಗಳನ್ನು ಅನುಸರಿಸಬೇಕು ಎಂಬುದನ್ನು ತಿಳಿದುಕೊಳ್ಳಬೇಕು. ನಂತರ ಅವುಗಳ ಬೆಳವಣಿಗೆ ಯಾವ ರೀತಿ ಆಗುತ್ತದೆ ಎಂಬುದನ್ನು ತಿಳಿದುಕೊಂಡು ಅದನ್ನು ಉದ್ಯಮವಾಗಿ ಸ್ವೀಕರಿಸಬಹುದು.

ಸಾಮಾನ್ಯವಾಗಿ ಕಡಲಿಗೆ ಹತ್ತಿರವಾಗಿರುವವರು ಮೀನನ್ನು ಹಿಡಿಯುತ್ತಾರೆ ಮಾರಾಟ ಮಾಡುತ್ತಾರೆ ದೂರ ದೂರ ಪ್ರದೇಶಗಳಿಗೆ ಕಳಿಸುತ್ತಾರೆ. ತಾಜಾ ಮೀನುಗಳಿಗೆ ಕಡಲು ದೂರ ಇರುವಂತಹ ಪ್ರದೇಶದಲ್ಲಿ ಅದಕ್ಕೆ ಒಳ್ಳೆಯ ಬೇಡಿಕೆ ಇರುತ್ತದೆ. ನಿಮಗೆಲ್ಲ ತಿಳಿದಿರುವ ಹಾಗೆ ಅತಿಯಾದ ಮಳೆ ಇರುವಂತಹ ಸಂದರ್ಭದಲ್ಲಿ ಅಥವಾ ಕಡಲು ಪ್ರಕ್ಷುಬ್ಧಗೊಳ್ಳುವಂತಹ ಸಂದರ್ಭದಲ್ಲಿ ಹತ್ತಿರ ಹತ್ತಿರ ಮೂರರಿಂದ ನಾಲ್ಕು ತಿಂಗಳು ಮೀನುಗಾರಿಕೆಗೆ ಅವಕಾಶ ಮಾಡಿಕೊಡುವುದಿಲ್ಲ.

ಅಂತಹ ಸಮಯದಲ್ಲಿ ಕಡಲ ಮಕ್ಕಳು ಏನು ಮಾಡಬೇಕು ಮಾರುಕಟ್ಟೆಯಲ್ಲಿ ಅನೇಕ ಜನರು ಮೀನಿನ ಮೇಲೆ ಅವಲಂಬಿತರಾಗಿರುತ್ತಾರೆ ಹಾಗಾಗಿ ಏನು ಮಾಡಬೇಕು ಎಂದರೆ ಒಳನಾಡು ಮೀನು ಸಾಕಾಣಿಕೆಯನ್ನು ಮಾಡಿ ಸಹ ಬೇಡಿಕೆಯನ್ನು ಪೂರೈಸಬಹುದು. ನಮ್ಮ ದೇಶದಲ್ಲಿ ಮೀನಿಗೆ ತುಂಬಾ ಬೇಡಿಕೆ ಇರುವುದರಿಂದ ಜೊತೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಕೂಡ ಮೀನಿಗೆ ಬೇಡಿಕೆ ಇರುವುದರಿಂದ ಮೀನುಸಾಕಣೆ ಮಾಡುವುದರಿಂದ ಯಾವುದೇ ರೀತಿಯಾದ ನಷ್ಟ ಉಂಟಾಗುವುದಿಲ್ಲ. ಮೀನು ಸಾಕಾಣಿಕೆಯನ್ನು ಮಾಡುವುದಕ್ಕೆ ಸರ್ಕಾರವು ನಿಮಗೆ ಸಬ್ಸಿಡಿಯನ್ನು ಕೊಡುತ್ತದೆ ನೀವು ಎಷ್ಟು ಪ್ರಮಾಣದ ಮೀನನ್ನು ಸಾಕಾಣಿಕೆ ಮಾಡುತ್ತೀರಿ ಅದರ ಆಧಾರದ ಮೇಲೆ ನಿಮಗೆ ಸಬ್ಸಿಡಿಯನ್ನು ನೀಡಲಾಗುತ್ತದೆ.

ಒಳನಾಡು ಮೀನು ಸಾಕಾಣಿಕೆಗಾಗಿಯೇ ಎರಡು ಕೋಟಿ ಸಬ್ಸಿಡಿ ಹಣವನ್ನು ಎತ್ತಿಡಲಾಗಿದೆ. ನಿಮಗೆ ಬಿತ್ತನೆಗೆ ಬೇಕಾಗುವಂತಹ ಮರಿಗಳು ಖಾಸಗಿ ಮೀನು ಸಾಕಾಣಿಕೆಯಲ್ಲಿಯೂ ಸಿಗುತ್ತವೆ ಸರ್ಕಾರದ ಮೀನುಗಾರಿಕೆ ಇಲಾಖೆಗಳಿಂದಲೂ ಆಯಾ ಸಮಯಕ್ಕೆ ರಿಯಾಯಿತಿ ದರದಲ್ಲಿ ರೈತರಿಗೆ ಮೀನು ಸಾಕಾಣಿಕೆಮಾಡುವವರಿಗೆ ಸಿಗುತ್ತದೆ.

ಮೀನು ಸಾಕಾಣಿಕೆಯನ್ನ ಮಾಡುವುದರಿಂದ ನೀವು ತಿಂಗಳಲ್ಲಿ ಐವತ್ತರಿಂದ ಅರವತ್ತು ಸಾವಿರ ಆದಾಯವನ್ನು ಗಳಿಸುವುದಕ್ಕೆ ಸಾಧ್ಯವಾಗುತ್ತದೆ. ತಿನ್ನಲು ಯೋಗ್ಯವಾಗಿರುವಂತಹ ಮೀನುಗಳನ್ನು ಸಾಕಾಣಿಕೆ ಮಾಡಿ ಅವುಗಳನ್ನು ಜನರಿಗೆ ಹೋಟೆಲ್ ಗಳಿಗೆ ಮಾರುಕಟ್ಟೆಗೆ ಮಾರಾಟ ಮಾಡಿ ಉತ್ತಮ ಲಾಭವನ್ನು ಗಳಿಸಬಹುದು. ಜೊತೆಗೆ ಮೀನಿನ ಮರಿಗಳನ್ನು ಕೂಡ ಸಾಕಾಣಿಕೆ ಮಾಡುವವರಿಗೆ ಮರಿಗಳನ್ನು ಮಾರಾಟ ಮಾಡಬಹುದು.

ನೀವು ಮೀನು ಸಾಕಾಣಿಕೆಯನ್ನು ಮಾಡುವಾಗ ನೀವು ಮೀನನ್ನು ಸಾಕುವುದಕ್ಕಾಗಿ ಖರೀದಿಸುವ ಮರಿಗಳ ಟೆಂಪರೇಚರ್ ಸರಿಯಾಗಿ ಇರುವಂತೆ ನೋಡಿಕೊಳ್ಳಬೇಕು ನೀವು ಮೀನು ಸಾಕಾಣಿಕೆ ಮಾಡುವಾಗ ಬಳಸುವಂತಹ ನೀರು ಸ್ವಚ್ಛವಾಗಿರಬೇಕು ಅವುಗಳಿಗೆ ನೀಡುವಂತಹ ಆಹಾರದ ಪ್ರಮಾಣವು ಕೂಡ ಉತ್ತಮವಾಗಿರಬೇಕು ಅವುಗಳು ವಿಸರ್ಜನೆ ಮಾಡುವಂತಹ ತ್ಯಾಜ್ಯಗಳಿಂದ ಅಮೋನಿಯಾ ಅಂಶ ಹೆಚ್ಚಾಗದಂತೆ ನೋಡಿಕೊಳ್ಳಬೇಕು ಅವುಗಳಿಗೆ ಆಮ್ಲಜನಕ ಕೊರತೆಯಾಗದಂತೆ ನೋಡಿಕೊಳ್ಳಬೇಕು.

ಯಾವ ಸಮಯದಲ್ಲಿ ಮೀನಿಗೆ ಅತಿಯಾದ ಬೇಡಿಕೆ ಇರುತ್ತದೆ ಅಂತಹ ಸಮಯ ನೋಡಿಕೊಂಡು ಉತ್ಪಾದನೆಯನ್ನು ಮಾಡಬೇಕಾಗುತ್ತದೆ. ಈ ರೀತಿಯಾಗಿ ಪ್ರತಿದಿನ ಬೇಡಿಕೆ ಇರುವಂತಹ ಮೀನಿನ ಸಾಕಣೆಯನ್ನು ಮಾಡುವುದರಿಂದ ಉತ್ತಮ ಆದಾಯವನ್ನು ಗಳಿಸಬಹುದು ನೀವು ಕೂಡ ಮೀನು ಕೃಷಿಯನ್ನು ಮಾಡುವ ಮೂಲಕ ನಿಮ್ಮ ಜೀವನವನ್ನು ಉತ್ತಮವಾಗಿ ರೂಪಿಸಿಕೊಳ್ಳಬಹುದು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!