ನಮ್ಮ ಸುತ್ತಮುತ್ತಲೂ ನಡೆಯುವ ಕೆಲವು ಆಸಕ್ತಿಕರ ಸಂಗತಿಗಳನ್ನು ವಿವರವಾಗಿ ಈ ಲೇಖನದ ಮೂಲಕ ತಿಳಿಯೋಣ.
ಯುಟ್ಯೂಬ್ ನಲ್ಲಿ ಯಾವ ವಿಡಿಯೋ ಕಡಿಮೆ ಸಮಯದಲ್ಲಿ ಹೆಚ್ಚು ಕಾಮೆಂಟ್ಸ್, ಶೇರ್ಸ, ಲೈಕ್ಸ್, ಡಿಸಲೈಕ್ಸ ಬಂದಿದೆ ಎನ್ನುವುದರ ಮೇಲೆ ಟ್ರೆಂಡಿಂಗ್ ಗೆ ಹೋಗುತ್ತದೆ. ನಾವು ಬದುಕಿದ್ದಾಗ ದೇಹದ ಸಾಂದ್ರತೆ ಮತ್ತು ನೀರಿನ ಸಾಂದ್ರತೆ ಒಂದೇ ಆಗಿರುತ್ತದೆ ಆದ್ದರಿಂದ ನೀರಿನಲ್ಲಿ ಮೆಲ್ಲಗೆ ಮುಳುಗುತ್ತೇವೆ ಉಸಿರಾಡಲು ಗಾಳಿಯನ್ನು ತೆಗೆದುಕೊಂಡಾಗ ತೇಲುತ್ತೇವೆ ಗಾಳಿ ಹೊರ ಹೋಗುವಾಗ ಸ್ವಲ್ಪ ಮುಳುಗುತ್ತೇವೆ. ನಾವು ಸತ್ತುಹೋದ ಮೇಲೆ ಕೆಲವು ಗ್ಯಾಸ್ ಅಂದರೆ ಮಿಥೇನ್, ಕಾರ್ಬನ್ ಡೈ ಆಕ್ಸೈಡ್ ರಿಲೀಸ್ ಆಗುತ್ತದೆ ಇದರಿಂದ ದೇಹ ಉಬ್ಬುತ್ತದೆ ದೇಹದ ಸಾಂದ್ರತೆ ನೀರಿನ ಸಾಂದ್ರತೆಗಿಂತ ಕಡಿಮೆಯಾಗಿ ದೇಹ ತೇಲುತ್ತದೆ. ಮೆದುಳು ಇರುವ ಪ್ರತಿಯೊಬ್ಬರಿಗೂ ಕನಸು ಬೀಳುತ್ತದೆ. ಹುಟ್ಟಿನಿಂದ ಕುರುಡಾದವರಿಗೆ ಕನಸು ಬೀಳುತ್ತದೆ ಆದರೆ ಅವರಿಗೆ ಕಾಣಿಸುವುದಿಲ್ಲ ಅವರಿಗೆ ಬೀಳುವ ಕನಸುಗಳು ಶಬ್ಧ ಹಾಗೂ ಭಾವನೆಗಳಿಂದ ಕೂಡಿರುತ್ತದೆ. ಜೀವನದ ಮಧ್ಯದಲ್ಲಿ ಕುರುಡಾದವರಿಗೆ ನಾರ್ಮಲ್ ಕನಸು ಬೀಳುತ್ತದೆ.
ಮಿಂಚು ಹುಳುಗಳ ದೇಹದಲ್ಲಿ ಕೆಮಿಕಲ್ ರಿಯಾಕ್ಷನ್ ನಡೆಯುವುದರಿಂದ ಹೊಳೆಯುತ್ತದೆ ಈ ರಿಯಾಕ್ಷನ್ ಅವುಗಳ ಕಂಟ್ರೋಲ್ ನಲ್ಲಿ ಇರುತ್ತದೆ ಆದ್ದರಿಂದ ಅವುಗಳು ತಮಗೆ ಬೇಕಾದಾಗ ಬೆಳಕು ಆನ್ ಮತ್ತು ಆಫ್ ಮಾಡಿಕೊಳ್ಳುತ್ತವೆ. ಅವು ಈ ರೀತಿ ಹೆಣ್ಣು ಹುಳುಗಳನ್ನು ಆಕರ್ಷಿಸಲು ಮಾಡುತ್ತವೆ. ಹೆಣ್ಣು ಮಿಂಚು ಹುಳುಗಳು ಹಾರುವುದಿಲ್ಲ. ಮೋಡಗಳು ಚಿಕ್ಕ ಚಿಕ್ಕ ಐಯ್ಸ್ ಮತ್ತು ವಾಟರ್ ಡ್ರಾಪ್ಲೇಟ್ ಗಳಿಂದ ಕೂಡಿರುತ್ತದೆ. ಅದರ ಮೇಲೆ ಕುಳಿತುಕೊಳ್ಳಲು, ನಿಲ್ಲಲು ಆಗುವುದಿಲ್ಲ. ಯಾವುದೇ ವಾಸನೆ ತುಂಬಾ ಹೊತ್ತು ಬರುತ್ತಿದ್ದರೆ ಕೆಲವು ಸಮಯದ ನಂತರ ನಮ್ಮ ಮೆದುಳು ಬ್ಲಾಕ್ ಮಾಡುತ್ತದೆ ಇದರಿಂದ ನಮಗೆ ವಾಸನೆ ಬರುವುದಿಲ್ಲ.
ಜಿರಳೆಗಳಲ್ಲಿ 3,000 ಕ್ಕಿಂತ ಹೆಚ್ಚು ವಿಧಗಳಿವೆ ಅವು ನಡೆಯಬಲ್ಲವು, ಈಜಬಲ್ಲವು, ಕೆಲವು ಜಿರಳೆಗಳು ಹಾರಬಲ್ಲವು ಅಲ್ಲದೇ ಅವು ಉಸಿರಾಡದೆ 40 ನಿಮಿಷ ಬದುಕಬಲ್ಲವು. ಜಿರಳೆಗಳ ತಲೆ ಕಟ್ ಮಾಡಿದರೆ ತಲೆ ಇಲ್ಲದೆ ವಾರಗಳ ಕಾಲ ಬದುಕಬಲ್ಲವು. ಇವು ತೀವ್ರವಾದ ರೇಡಿಯೇಷನ್ ನಲ್ಲಿಯೂ ಬದುಕಬಲ್ಲವು, ಎಲ್ಲ ರೀತಿಯ ವಾತಾವರಣದಲ್ಲಿ ಬದುಕಬಲ್ಲವು ಆದ್ದರಿಂದ ಡೈನೋಸಾರ್ ಗಳು ಅಳಿದರು ಜಿರಳೆಗಳು ಇವೆ. ಬಿಳಿ ಕೂದಲನ್ನು ಕಿತ್ತರೆ ಅದೇ ಜಾಗದಲ್ಲಿ ಇನ್ನೊಂದು ಬಿಳಿ ಕೂದಲು ಬರುತ್ತದೆ ಯಾವ ಕೂದಲಿನ ಫಾಲಿಕಲ್ ಮೆಲೆನಿನ್ ಪಿಗ್ಮಂಟ್ ಇರುವುದಿಲ್ಲವೋ ಅದು ಬಿಳಿಯಾಗುತ್ತದೆ ಮೆಲೆನಿನ್ ಪಿಗ್ಮಂಟ್ ಕೂದಲಿಗೆ ಬಣ್ಣ ಕೊಡುತ್ತದೆ.