ಮೀನ ರಾಶಿಯವರ ದಾಂಪತ್ಯ ಜೀವನ ಹೇಗಿರತ್ತೆ ಮುಖ್ಯವಾಗಿ ತಿಳಿಯಬೇಕಾದ ವಿಚಾರ ಇಲ್ಲಿದೆ

0 29

ಪ್ರತಿಯೊಬ್ಬರು ವಯಸ್ಸಿಗೆ ಬಂದ ನಂತರ ಮದುವೆಯಾಗುತ್ತಾರೆ. ಮದುವೆಯ ನಂತರದ ದಾಂಪತ್ಯ ಜೀವನ ಚೆನ್ನಾಗಿದ್ದರೆ ಮಾತ್ರ ನೆಮ್ಮದಿಯ ಜೀವನ ನಡೆಸಬಹುದು. ದಾಂಪತ್ಯ ಜೀವನವು ಆಯಾ ರಾಶಿಗಳ ಮೇಲೆ ಅವಲಂಬಿತವಾಗಿದೆ. ಮೀನ ರಾಶಿಯವರ ದಾಂಪತ್ಯ ಜೀವನ ಹೇಗಿರುತ್ತದೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಮೀನ ರಾಶಿಯ ದಾಂಪತ್ಯ ಜೀವನದ ಬಗ್ಗೆ ತಿಳಿದುಕೊಳ್ಳಬೇಕಾದರೆ ಮೀನ ರಾಶಿಯವರಿಗೆ ಇರುವ ಗುರುಬಲ ಹಾಗೂ ಮೀನ ರಾಶಿಯವರ ಗುಣ ಲಕ್ಷಣಗಳನ್ನು ತಿಳಿದುಕೊಳ್ಳಬೇಕಾಗುತ್ತದೆ. ಮೀನ ರಾಶಿಯ ರಾಶ್ಯಾಧಿಪತಿ ಗುರು ಗ್ರಹಕ್ಕೆ ತನ್ನದೆ ಆದ ಲಕ್ಷಣಗಳು ಇರುತ್ತದೆ. ಗುರು ಗ್ರಹ ನವಗ್ರಹಗಳಲ್ಲಿ ಅತ್ಯಂತ ಶುಭವಾದ ಗ್ರಹವಾಗಿದೆ. ನಮ್ಮ ಜೀವನದಲ್ಲಿ ಗುರುಬಲವೊಂದಿದ್ದರೆ ಎಲ್ಲಾ ಕೆಲಸಗಳು ಸಲೀಸಾಗಿ ನೆರವೇರುತ್ತದೆ. ಮೀನ ರಾಶಿಯ ರಾಶ್ಯಾಧಿಪತಿ ಗುರು ಗ್ರಹವಾಗಿರುವುದರಿಂದ ಸಾಕಷ್ಟು ಅನುಕೂಲಗಳನ್ನು ಪಡೆಯುವ ಸಾಧ್ಯತೆಗಳಿವೆ.

ಶಿಕ್ಷಣ, ಹಣ, ದಾಂಪತ್ಯ ಜೀವನದಲ್ಲಿ ನೆಮ್ಮದಿ ಮುಂತಾದ ಎಲ್ಲ ವಿಷಯಗಳಿಗೆ ಗುರುಬಲ ಪ್ರಮುಖವಾಗಿದೆ. ಮೀನರಾಶಿಯವರಿಗೆ ಮದುವೆಯ ನಂತರ ಕೆಲವು ಭಾಗ್ಯಗಳು ದೊರೆಯಲಿದೆ ಅಲ್ಲದೆ ಮೀನರಾಶಿಯವರ ಪ್ರವೇಶದಿಂದ ಒಳ್ಳೆಯದಾಗುವ ಸಾಧ್ಯತೆ ಇದೆ. ಹಣಕಾಸಿನ ನೆರವು ಸಿಗಲಿದೆ. ಮೀನ ರಾಶಿಯವರ ದಾಂಪತ್ಯದಲ್ಲಿ ಅನ್ಯೋನ್ಯತೆ ಇರುತ್ತದೆ. ದಂಪತಿಗಳಲ್ಲಿ ಒಬ್ಬರು ಚೆನ್ನಾಗಿ ಓದಿದವರು ಇದ್ದರೆ ಅವರಿಗೆ ಅಹಂಕಾರ ಬರುವ ಸಾಧ್ಯತೆ ಇರುತ್ತದೆ ಇದರಿಂದ ದಂಪತಿಗಳಲ್ಲಿ ಬಿರುಕು ಮೂಡುವ ಸಾಧ್ಯತೆಗಳಿವೆ. ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಎದುರಾಗುತ್ತವೆ ಇದರಿಂದ ಮೀನ ರಾಶಿಯವರ ದಾಂಪತ್ಯ ಜೀವನದಲ್ಲಿ ನೆಮ್ಮದಿ ಕಡಿಮೆ ಆಗುತ್ತದೆ.

ಮೀನ ರಾಶಿಯವರು ಲವ್ ಮಾಡಿ ಮದುವೆ ಆಗುವುದಾದರೆ ಮನೆಯಿಂದ ಬೆಂಬಲ ಸಿಗುವುದು ಕಡಿಮೆ. ಮೀನ ರಾಶಿಯವರ ವ್ಯಯಕ್ತಿಕ ಜಾತಕದಲ್ಲಿ ಚಂದ್ರಗ್ರಹ ಬಲಿಷ್ಟವಾಗಿದ್ದರೆ ಅಥವಾ ಗಜಕೇಸರಿ ಯೋಗ ಇದ್ದರೆ ಲವ್ ಮ್ಯಾರೇಜ್ ಆಗುತ್ತದೆ ಅಲ್ಲದೆ ಮದುವೆಯ ನಂತರ ದೊಡ್ಡ ಮಟ್ಟದ ಏಳ್ಗೆ ಕಂಡುಬರುತ್ತದೆ, ಆರ್ಥಿಕ ಪರಿಸ್ಥಿತಿ ಉತ್ತಮವಾಗುತ್ತದೆ. ಮೀನ ರಾಶಿಯವರು ತಮ್ಮ ದಾಂಪತ್ಯ ಜೀವನದಲ್ಲಿ ಅಹಂಕಾರವನ್ನು ಕಡಿಮೆ ಮಾಡಿಕೊಂಡರೆ ಸುಖ-ಸಮೃದ್ಧಿಯನ್ನು ನೋಡಬಹುದು, ಉಳಿದಂತೆ ಮೀನರಾಶಿಯವರ ದಾಂಪತ್ಯ ಜೀವನದಲ್ಲಿ ಸುಖ ಹೆಚ್ಚಾಗಿ ಇರುತ್ತದೆ.

ಮೀನರಾಶಿಯವರು ತಮ್ಮ ದಾಂಪತ್ಯ ಜೀವನದ ಸಮಸ್ಯೆಗಳಿಗೆ ಪರಿಹಾರವಾಗಿ ವಿಷ್ಣು ಹಾಗೂ ಶನಿದೇವನನ್ನು ಆರಾಧಿಸಬೇಕು. 500 ಗ್ರಾಂ ಅಥವಾ ಐದು ಕೆಜಿ ಹೆಸರು ಕಾಳುಗಳನ್ನು ಅನ್ನಸಂತರ್ಪಣೆ ನಡೆಯುವ ದೇವಸ್ಥಾನಕ್ಕೆ ಕೊಡುವುದರಿಂದ ಅಥವಾ ಬಡವರಿಗೆ ದಾನ ಮಾಡುವುದರಿಂದ ಒಳ್ಳೆಯದಾಗುತ್ತದೆ. ಮೀನ ರಾಶಿಯವರು ವಿಷ್ಣುಸಹಸ್ರನಾಮವನ್ನು, ಶನಿವಾರದಂದು ಹನುಮಾನ್ ಚಾಲೀಸಾ ಪಠಿಸಬೇಕು.

ದಾಂಪತ್ಯ ಜೀವನ ಎನ್ನುವುದು ಬಹಳ ಮುಖ್ಯವಾಗಿದ್ದು ದಂಪತಿಗಳಲ್ಲಿ ಹೆಚ್ಚು ಸಮಸ್ಯೆ ಕಂಡುಬಂದರೆ ಗಂಡ ಮತ್ತು ಹೆಂಡತಿ ಇಬ್ಬರ ಜಾತಕವನ್ನು ಪರಿಶೀಲಿಸಬೇಕಾಗುತ್ತದೆ. ದಶಾಭುಕ್ತಿ, ನಕ್ಷತ್ರದೋಷ, ರಾಹುಕೇತು, ಸರ್ಪದೋಷ ಮುಂತಾದವುಗಳನ್ನು ಪರಿಶೀಲಿಸಲಾಗುತ್ತದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ, ನಮ್ಮ ಜೀವನದ ಎಲ್ಲ ಘಟ್ಟಗಳಲ್ಲಿ ಗ್ರಹಗಳ ಪ್ರಭಾವ ಇರುತ್ತದೆ.

Leave A Reply

Your email address will not be published.