ಪ್ರತಿಯೊಬ್ಬರಿಗೂ ಸ್ವಂತ ಮನೆ ನಿರ್ಮಾಣ ಮಾಡಬೇಕು, ಆಸ್ತಿ ಹೊಂದಬೇಕು ಎಂಬ ಆಸೆ ಆಕಾಂಕ್ಷೆಗಳು ಇರುತ್ತದೆ. ನಾವಂದುಕೊಂಡಂತೆ ಎಲ್ಲಾ ಕೆಲಸ ಕಾರ್ಯಗಳು ನಡೆಯುವುದಿಲ್ಲ ಒಮ್ಮೊಮ್ಮೆ ನಮ್ಮ ಜೀವನದಲ್ಲಿ ಗ್ರಹಗತಿಗಳ ಬದಲಾವಣೆ, ಬಲದಿಂದ ಯಾವ ಕೆಲಸ ಕಾರ್ಯಗಳು ಈಡೇರುವುದಿಲ್ಲ ಅಥವಾ ಗ್ರಹಗಳ ಬಲವಿದ್ದಾಗ ಎಲ್ಲಾ ಕೆಲಸ ಕಾರ್ಯಗಳು ಯಾವುದೆ ವಿಘ್ನವಿಲ್ಲದೆ ನಡೆಯುತ್ತದೆ. ಹಾಗಾದರೆ ಮೀನ ರಾಶಿಯವರ ಮನೆ ನಿರ್ಮಾಣ, ಆಸ್ತಿಗೆ ಸಂಬಂಧಿಸಿದಂತೆ ಯಾವ ರೀತಿಯ ಅನುಕೂಲವಿದೆ ಹಾಗೂ ಯಾವೆಲ್ಲಾ ಪರಿಹಾರ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಸಂಪೂರ್ಣವಾಗಿ ಈ ಲೇಖನದಲ್ಲಿ ನೋಡೋಣ.
ಮೀನ ರಾಶಿಯೆ ಇರಲಿ ಯಾವುದೆ ರಾಶಿಯೆ ಇರಲಿ ಭೂಮಿ, ಆಸ್ತಿ ಅಥವಾ ಮನೆ ಕಟ್ಟುವ ವಿಷಯಕ್ಕೆ ಸಂಬಂಧಿಸಿ ಅನುಕೂಲವಾಗಬೇಕು ಅಂದರೆ ಮೂರು ಗ್ರಹಗಳ ಬಲ ಚೆನ್ನಾಗಿರಬೇಕು. ಕುಜ, ಶನಿ ಹಾಗೂ ಶುಕ್ರ ಗ್ರಹಗಳು ಬಲವಾಗಿರಬೇಕು. ಮೀನ ರಾಶಿಯ ಅಧಿಪತಿ ಗುರು ಗ್ರಹ ಹಣದ ವಿಷಯದಲ್ಲಿ ಸಹಾಯ ಮಾಡುತ್ತಾನೆ ಗುರು ಆದರೆ ಶುಕ್ರ ಗ್ರಹ ಗುರು ಗ್ರಹಕ್ಕೆ ಶತ್ರು ಆಗುತ್ತಾನೆ ಇದರಿಂದ ಮೀನ ರಾಶಿಯವರಿಗೆ ಮನೆ ಕಟ್ಟುವ ವಿಷಯದಲ್ಲಿ ಏರಿಳಿತ, ಕಿರಿ ಕಿರಿ, ಸಮಸ್ಯೆ ಕಂಡುಬರುತ್ತದೆ. ಮನೆ, ಆಸ್ತಿಗೆ ಸಂಬಂಧಿಸಿದಂತೆ ವ್ಯಾಜ್ಯಗಳಾಗಿ ಕೋರ್ಟು ಕಛೇರಿಗಳಲ್ಲಿ ಹಣ ಕಳೆದುಕೊಳ್ಳುವ ಸಂಭವವಿದೆ. ಮೀನ ರಾಶಿಗೆ ಶನಿ ಗ್ರಹ ಮಾರಕಾಧಿಪತಿ ಆಗಿರುತ್ತಾನೆ. ಆಸ್ತಿ, ಮನೆಗೆ ಸಂಬಂಧಿಸಿ ಸಮಸ್ಯೆ ಬರುತ್ತದೆ, ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ.
ಮೀನ ರಾಶಿಯವರಿಗೆ ಆಸ್ತಿ ಖರೀದಿಸಲು ಹಣ ಸಂಗ್ರಹಿಸಲು ಆಗದೆ ಒತ್ತಡದಿಂದ ಆರೋಗ್ಯದಲ್ಲಿ ಏರುಪೇರು ಕಂಡುಬರುತ್ತದೆ. ಮೀನ ರಾಶಿಯವರಿಗೆ ಮನೆ ಕಟ್ಟಲು ಸಮಸ್ಯೆ ಕಂಡುಬರುತ್ತದೆ ಆದರೆ ಮನೆ ಕಟ್ಟುತ್ತಾರೆ ಈ ರಾಶಿಗೆ ಗುರು ಗ್ರಹದ ಅನುಗ್ರಹವಿದೆ, ಗುರು ಗ್ರಹದ ಆಶೀರ್ವಾದದಿಂದ ಹಣದ ಅನುಕೂಲತೆ ಉಂಟಾಗುತ್ತದೆ ಇದರಿಂದ ಯಾವುದೆ ಸಮಸ್ಯೆಯನ್ನು ನಿವಾರಿಸಿಕೊಳ್ಳುತ್ತಾರೆ ಇದರಿಂದ ಮೀನ ರಾಶಿಯವರ ಆಸೆ ಈಡೇರುತ್ತದೆ.
ಕುಜ ಗ್ರಹ ಗುರು ಗ್ರಹದ ಮಿತ್ರ ಗ್ರಹ ಆದ್ದರಿಂದ ಸೈಟ್ ಗೆ ಸಂಬಂಧಿಸಿದಂತೆ ಲಾಭ ಆಗುತ್ತದೆ, ರಿಯಲ್ ಎಸ್ಟೇಟ್ ಬಿಸಿನೆಸ್ ಮಾಡುವವರಿಗೆ ಹಣಕಾಸಿನ ಲಾಭ ಆಗುತ್ತದೆ. ಮೀನ ರಾಶಿಯವರಿಗೆ ಗುರು ದೆಸೆ, ಗುರು ಭುಕ್ತಿ ಇದ್ದಾಗ ಅನುಕೂಲ ಕಂಡುಬರುತ್ತದೆ. ಗಜಕೇಸರಿ ಯೋಗ ಇರುವವರಿಗೆ ಯಾವ ಕೆಲಸ ಮಾಡಿದರು ಯಶಸ್ಸು ಸಿಗುತ್ತದೆ.
ಶುಕ್ರ ಗ್ರಹದ ಬಲ ಇದ್ದಾಗ ಕಿರಿ ಕಿರಿ ಇರುತ್ತದೆ ಆದರೆ ಮನೆ ಕಟ್ಟಬಹುದು. ಮೀನ ರಾಶಿಯವರಿಗೆ ಮನೆ ಕಟ್ಟಲು, ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಸಮಸ್ಯೆ ಕಂಡುಬಂದಾಗ ಬುಧವಾರ ವಿಷ್ಣುವಿನ ಆರಾಧನೆ ಮಾಡಬೇಕು. ಬುಧ ಗ್ರಹ ಗುರುವಿಗೆ ಪುರಾಣದಲ್ಲಿ ಮಗನಾಗುತ್ತಾನೆ ಆದರೆ ಮಗನಿಗೆ ತಂದೆಯನ್ನು ಕಂಡರೆ ಆಗುವುದಿಲ್ಲ ಇಬ್ಬರ ನಡುವೆ ಶತ್ರುತ್ವ ಇದೆ. ಬುಧ ಮೀನ ರಾಶಿಗೆ ಮಾರಕಾಧಿಪತಿ ಆಗಿದ್ದಾನೆ ಆದ್ದರಿಂದ ಬುಧ ಗ್ರಹದ ಅಧಿದೇವತೆ ವಿಷ್ಣುವಿನ ಆರಾಧನೆ ಮಾಡಬೇಕು. ಮೀನ ರಾಶಿಯವರು ಹೆಸರುಕಾಳನ್ನು 6 ಶುಕ್ರವಾರ ಬಡವರಿಗೆ ಅಥವಾ ದೇವಸ್ಥಾನಗಳಿಗೆ ಕೊಡಬೇಕಾಗುತ್ತದೆ ಹಾಗೂ ವಿಷ್ಣು ಶ್ಲೋಕವನ್ನು ಪಠಿಸಬೇಕು ಇದರಿಂದ ಮೀನ ರಾಶಿಯವರಿಗೆ ಅನುಕೂಲ ಉಂಟಾಗುತ್ತದೆ. ಪ್ರತಿ ಶನಿವಾರ ಈ ರಾಶಿಯವರು ಆಂಜನೇಯನ ದೇವಾಲಯದ ದರ್ಶನ ಮಾಡಬೇಕು.
ಮೀನ ರಾಶಿಯವರು ಮೃತುಂಜ್ಯಯ ಹೋಮವನ್ನು ಮಾಡಬೇಕು. ಮೀನ ರಾಶಿಯವರಿಗೆ ಮನೆ ಕಟ್ಟಲು, ಆಸ್ತಿಗೆ ಸಂಬಂಧಿಸಿದಂತೆ ಸಮಸ್ಯೆ ಹೆಚ್ಚಾಗಿ ಕಂಡುಬಂದರೆ ಜಾತಕವನ್ನು ಪರಿಶೀಲನೆ ಮಾಡಬೇಕಾಗುತ್ತದೆ. ಜಾತಕವನ್ನು ಪರಿಶೀಲಿಸಿ ಲಗ್ನಾಧಿಪತಿ, ಗೋಚರ ಫಲ ಮೊದಲಾದ ವಿಷಯಗಳನ್ನು ನೋಡಬೇಕು. ಈ ಮಾಹಿತಿಯನ್ನು ತಪ್ಪದೆ ಎಲ್ಲಾ ಮೀನ ರಾಶಿಯವರಿಗೆ ತಿಳಿಸಿ.