ಆರೋಗ್ಯವೇ ಭಾಗ್ಯ ಆರೋಗ್ಯ ಇದ್ದರೆ ನಾವು ಯಾವ ಕೆಲಸವನ್ನಾದರೂ ಮಾಡಬಹುದು. ಆರೋಗ್ಯ ಇಲ್ಲ ಎಂದಾದರೆ ನಮ್ಮಿಂದ ಯಾವ ಸಾಧನೆ ಅಸಾಧ್ಯ. ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದರೆ ಮನೆಯಲ್ಲಿ ಸಿಗುವ ನೈಸರ್ಗಿಕ ಆಹಾರದ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ಆರೋಗ್ಯವಾಗಿರಬೇಕಾದರೆ ಕೆಲವು ಮನೆ ಔಷಧಿಯನ್ನು ಅನುಸರಿಸಬೇಕು. ಖರ್ಜೂರ ನಮ್ಮ ಆರೋಗ್ಯವನ್ನು ಕಾಪಾಡುವುದರಲ್ಲಿ ಯಾವ ಸಂದೇಹವೂ ಇಲ್ಲ. ನೈಸರ್ಗಿಕವಾಗಿ ಸಿಹಿಯನ್ನು ಹೊಂದಿರುವ ಖರ್ಜೂರ ಆರೋಗ್ಯಕ್ಕೆ ಬಹಳ ಒಳ್ಳೆಯದು. ಮಲಬದ್ಧತೆ ಸಮಸ್ಯೆಗೆ ಇದು ಉತ್ತಮ ಮದ್ದು. ಖರ್ಜೂರವನ್ನು ತಿಂದರೆ ಸಾಕು ಈ ಸಮಸ್ಯೆ ಪರಿಹಾರವಾಗುತ್ತದೆ. ರಕ್ತ ಕಡಿಮೆಯಾಗಿ ರಕ್ತಹೀನತೆ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಪ್ರತಿದಿನ ಖರ್ಜೂರ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು.
ಕಣ್ಣಿನ ಆರೋಗ್ಯಕ್ಕೆ ಖರ್ಜೂರ ಉತ್ತಮವಾದದ್ದು. ಖರ್ಜೂರ ವಿಟಮಿನ್ಸ್, ಪ್ರೋಟೀನ್ ಹೊಂದಿರುವುದರಿಂದ ಕಣ್ಣಿನ ರೆಟಿನಾಕ್ಕೆ ಒಳ್ಳೆಯದು. ಪ್ರತಿದಿನ 2-3 ಖರ್ಜೂರವನ್ನು ತಿನ್ನುವುದರಿಂದ ಕರುಳಿನ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು. ರಾತ್ರಿ ಮಲಗುವಾಗ 2-3 ಖರ್ಜೂರವನ್ನು ನೀರಿನಲ್ಲಿ ನೆನೆಸಿ ಬೆಳಗ್ಗೆ ಅದರ ನೀರನ್ನು ಕುಡಿಯುವುದರಿಂದ ಕರುಳಿಗೆ ಬಹಳ ಉತ್ತಮ ಅಲ್ಲದೇ ಹೃದಯ ಸಂಬಂಧಿ ಸಮಸ್ಯೆ ಇದ್ದವರಿಗೆ ಒಳ್ಳೆಯದು.
ಬಹಳಷ್ಟು ಮಹಿಳೆಯರು ಹೆರಿಗೆ ನೋವಿಗೆ ಭಯ ಪಟ್ಟುಕೊಂಡಿರುತ್ತಾರೆ ಗರ್ಭಿಣಿ ಮಹಿಳೆಯರು ಪ್ರತಿದಿನ ಖರ್ಜೂರವನ್ನು ತಿನ್ನುವುದರಿಂದ ಹೆರಿಗೆ ನೋವು ಕಡಿಮೆ ಇರುತ್ತದೆ ಹಾಗೂ ರಕ್ತಸ್ರಾವ ಆಗದಂತೆ ತಡೆಯುತ್ತದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಖರ್ಜೂರ ತಿನ್ನುವುದರಿಂದ ದೇಹದಲ್ಲಿ ಸಕ್ಕರೆ ಅಂಶವನ್ನು ಹತೋಟಿಯಲ್ಲಿ ಇಡುತ್ತದೆ. ಖರ್ಜೂರದ ಗ್ಲೂಕೋಸ್ ನಂತಹ ನೈಸರ್ಗಿಕ ಸಕ್ಕರೆ ಅಂಶವನ್ನು ಹೊಂದಿರುವುದರಿಂದ ಖರ್ಜೂರವನ್ನು ಹಾಲಿನಲ್ಲಿ ಬೆರೆಸಿ ಕುಡಿಯುವುದರಿಂದ ನಮ್ಮ ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ.
ರಾತ್ರಿ ಹಾಲಿನಲ್ಲಿ 3-4 ಖರ್ಜೂರವನ್ನು ನೆನೆಸಿ ಬೆಳಗ್ಗೆ ಏಲಕ್ಕಿ ಸೇರಿಸಿ ಕುಡಿಯುವುದರಿಂದ ಲೈಂ,ಗಿಕ ಸಮಸ್ಯೆ ಇದ್ದರೆ ಪರಿಹಾರ ಸಿಗುತ್ತದೆ. ಖರ್ಜೂರ ಕೂದಲು ಉದುರುವ ಸಮಸ್ಯೆಯನ್ನು ನಿವಾರಿಸುತ್ತದೆ, ಖರ್ಜೂರ ಕೂದಲಿನ ಬುಡವನ್ನು ಗಟ್ಟಿ ಮಾಡುತ್ತದೆ ಹಾಗಾಗಿ ಪ್ರತಿದಿನ 3-4 ಖರ್ಜೂರ ಸೇವನೆಯು ಒಳ್ಳೆಯ ಅಭ್ಯಾಸ, ಹೀಗೆ ಮನೆಯಲ್ಲೇ ಸುಲಭವಾಗಿ ಖರ್ಜೂರ ತಿನ್ನುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಆಸ್ಪತ್ರೆಗೆ ದುಡ್ಡು ಸುರಿಯುವ ಬದಲು ಖರ್ಜೂರ ಖರೀದಿಸಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು. ಈ ಮಾಹಿತಿಯನ್ನು ತಪ್ಪದೇ ಎಲ್ಲರಿಗೂ ತಿಳಿಸಿ ಆರೋಗ್ಯವನ್ನು ಕಾಪಾಡಿಕೊಳ್ಳಿ.