ಏಲಕ್ಕಿಯೂ ಒಂದು ಸ್ವಾದಿಷ್ಟವಾದ ಪರಿಮಳಯುಕ್ತ ಮಸಾಲೆ ಪದಾರ್ಥವಾಗಿದೆ, ಏಲಕ್ಕಿಯ ಮೂಲ ಸ್ಥಾನ ಭಾರತವೇ ಆದರೂ ಇತ್ತೀಚಿನ ದಿನಗಳಲ್ಲಿ ಪ್ರಪಂಚದ ಮೂಲೆ ಮೂಲೆಗಳಲ್ಲಿ ಇದನ್ನು ಕಾಣಬಹುದಾಗಿದೆ. ಅಲ್ಲದೇ ಏಲಕ್ಕಿಯು ಮನುಷ್ಯನ ಆರೋಗ್ಯದ ದೃಷ್ಟಿಯಿಂದಲೂ ಕೂಡಾ ಬಹಳ ಉಪಯುಕ್ತವಾದದ್ದು ಹಾಗಾದ್ರೆ ಏಲಕ್ಕಿಯ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ
ಎಲಕ್ಕಿಯನ್ನು ಸೇವಿಸುವುದರಿಂದ ಇಯರಲ್ಲಿರುವ ಆಂಟಿ ಆಕ್ಸಿಡೆಂಟ್ ಮನುಷ್ಯನ ದೇಹದಲ್ಲಿನ ರಕ್ತದ ಒತ್ತಡವನ್ನು ನಿವಾರಣೆ ಮಾಡಲು ಬಹಳ ಸಹಕಾರಿಯಾಗಿರುತ್ತದೆ, ಬಾಯಿಯಿಂದ ಧುರ್ವಾಸನೆ ಬರುವವರು ಎಲಕ್ಕಿಯನ್ನು ಸೇವನೆ ಮಾಡುವುದರಿಂದ ಬಾಯಿಯ ಧುರ್ವಾಸನೆ ನಿವಾರಣೆಯಾಗುತ್ತದೆ. ಹಾಗಾದ್ರೆ ಹಾಲಿನಲ್ಲಿ ಏಲಕ್ಕಿಯನ್ನು ಬೆರೆಸಿ ಕುಡಿಯುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
ಹಾಲಿನಲ್ಲಿ ಸ್ವಲ್ಪ ಏಲಕ್ಕಿಯನ್ನು ಹಾಕಿ ಅದಕ್ಕೆ ಒಂದು ಚಮಚ ಜೇನುತುಪ್ಪವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಆ ಮಿಶ್ರಣವನ್ನು ಪ್ರತಿದಿನ ಮಲಗುವ ಸಮಯದಲ್ಲಿ ನಿಯಮಿತವಾಗಿ ಸೇವನೆ ಮಾಡುವುದರಿಂದ ತಮ್ಮ ಪುರುಷರಲ್ಲಿ ಪಲವತ್ತತೆ ಹೆಚ್ಚುತ್ತದೆ ಆ ವಿಚಾರದಲ್ಲಿ ಆಸಕ್ತಿಯು ವೃದ್ಧಿಯಾಗುತ್ತದೆ, ಅಲ್ಲದೇ ಏಲಕ್ಕಿಯಲ್ಲಿ ಕ್ಯಾನ್ಸರ್ ನಿವಾರಕ ಶಕ್ತಿ ಇರುವುದರಿಂದ ಪ್ರತಿನಿತ್ಯ ಊಟ ಮಾಡಿದ ಬಳಿಕ ಎಲಕ್ಕಿಯನ್ನು ತಿನ್ನುವುದರಿಂದ ಹೊಟ್ಟೆಯಲ್ಲಿ ಆಹಾರ ಬಹುಬೇಗ ಜೀರ್ಣವಾಗಲು ಸಹಾಯ ಮಾಡುತ್ತದೆ.
ಏಲಕ್ಕಿಯನ್ನು ತಿನ್ನುವುದರಿಂದ ಗಂಟಲಿನ ಸಮಸ್ಯೆಗಳು ಏನೇ ಇದ್ದರೂ ಆದಷ್ಟು ಬೇಗ ನಿವಾರಣೆಯಾಗುವುದರಲ್ಲಿ ಎರಡು ಮಾತಿಲ್ಲ, ಅಲ್ಲದೇ ಏಲಕ್ಕಿಯಲ್ಲಿರುವ ರಾಸಾಯನಿಕ ಗುಣಗಳಿಂದ ಶರೀರದಲ್ಲಿರುವ ಹಲವಾರು ವಿಷಯುಕ್ತ ಅಂಶಗಳನ್ನು ದೂರ ಮಾಡಲು ಏಲಕ್ಕಿಯು ಸಹಾಯ ಮಾಡುತ್ತದೆ ಇದರಿಂದ ದೇಹದಲ್ಲಿರುವ ರಕ್ತವು ಶುದ್ಧೀಕರಣವಾಗುತ್ತದೆ. ಏಲಕ್ಕಿಯನ್ನು ನಿಯಮಿತವಾಗಿ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಅಂಶವನ್ನು ಕಡಿಮೆ ಮಾಡುವುದರಲ್ಲಿ ಸಹಾಯ ಮಾಡುತ್ತದೆ ಸಕ್ಕರೆ ಕಾಯಿಲೆ ಇರುವವರಿಗೆ ಇದುವೇ ಬಹಳ ಉಪಯುಕ್ತವಾಗಿದೆ, ಈ ಎಲ್ಲಾ ಕಾರಣಗಳಿಗಾಗಿ ಪ್ರತಿದಿನ ಹಾಲಿನಲ್ಲಿ ಸ್ವಲ್ಪವೇ ಏಲಕ್ಕಿ ಪುಡಿಯನ್ನು ಸೇರಿಸಿ ಕುಡಿಯುವುದು ಒಳಿತು.