ಮೆಟ್ರೋ ರೈಲ್ವೇಯಿಂದ ಹೊಸ ಅಧಿಸೂಚನೆ ಬಿಡುಗಡೆ ಆಗಿದೆ. ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಇಬ್ಬರು ಅರ್ಜಿಗಳನ್ನು ಸಲ್ಲಿಕೆ ಮಾಡಬಹುದು. ಈ ಹುದ್ದೆಗಳು ಖಾಯಂ ಹುದ್ದೆಗಳಾಗಿ ಇವೆ. ಈ ಹುದ್ದೆಗಳಿಗೆ ಅಗತ್ಯ ಇರುವ ವಯಸ್ಸು, ಅರ್ಜಿ ಸಲ್ಲಿಕೆ ಮಾಡುವ ವಿಧಾನ, ವಿಧ್ಯಾಭ್ಯಾಸ, ಅಗತ್ಯ ಇರುವ ದಾಖಲೆಗಳು ಎಲ್ಲವನ್ನು ನೋಡೋಣ ಬನ್ನಿ :- ಶೈಕ್ಷಣಿಕ ಅರ್ಹತೆ :-ಈ ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡಲು ಆಸಕ್ತಿ ಇರುವ ಜನರು 10 ನೇ ತರಗತಿ, ಪಿಯುಸಿ ಮತ್ತು ಐಟಿಐ ವ್ಯಾಸಂಗ ಮಾಡಿರಬೇಕು.

ವಯಸ್ಸಿನ ಮಿತಿ :-ಮುಂಬೈ ರೈಲ್ವೇ ವಿಕಾಸ್ ಕಾರ್ಪೋರೇಷನ್ ನೇಮಕಾತಿ ( MRVC ) ಅಧಿಸೂಚನೆಯ ಅನುಸಾರ ಅರ್ಜಿ ಸಲ್ಲಿಕೆ ಮಾಡುವ ವ್ಯಕ್ತಿಯ ವಯಸ್ಸು ಗರಿಷ್ಠ 55 ವರ್ಷ ಆಗಿರಬೇಕು. ಎಸ್. ಸಿ. / ಎಸ್. ಟಿ.  ( SC/ST ) ಅಭ್ಯರ್ಥಿಗಳಿಗೆ 5 ವರ್ಷಗಳ ವಯೋ ಮಿತಿ ಸಡಿಲಿಕೆ ಮತ್ತು ಒಬಿಸಿ ( OBC ) ಅಭ್ಯರ್ಥಿಗಳಿಗೆ 3 ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

ಅರ್ಜಿ ಶುಲ್ಕ :-ಅರ್ಜಿ ಸಲ್ಲಿಕೆ ಮಾಡಲು ಯಾವುದೇ ಶುಲ್ಕ ಇರುವುದಿಲ್ಲ.
ಆಯ್ಕೆ ಮಾಡುವ ವಿಧಾನ :-ಈ ಹುದ್ದೆಗಳಿಗೆ ಯಾವುದೇ ರೀತಿಯ ಲಿಖಿತ ಪರೀಕ್ಷೆ ಇರುವುದಿಲ್ಲ. ಕೇವಲ ಸಂದರ್ಶನ ಮಾಡಿ ಆಯ್ಕೆ ಮಾಡಲಾಗುವುದು.

ನೇಮಕಾತಿ ಮಾಡುವ ಸ್ಥಳ :-ಸೆಂಟ್ರಲ್ ಗವರ್ನಮೆಂಟ್ ( Central government ) ಹುದ್ದೆಗಳಾಗಿ ಇರುವ ಕಾರಣ ಮುಂಬೈ ಮತ್ತು ಕರ್ನಾಟಕ ಎರಡು ಸ್ಥಳದಲ್ಲಿ ನೇಮಕಾತಿ ನಡೆಯುತ್ತದೆ. ಮೆಟ್ರೋ ರೈಲ್ವೇ ನಲ್ಲಿ ಮ್ಯಾನೇಜರ್ ಮತ್ತು ಸಹಾಯಕ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. ಇಲ್ಲಿ ನೀಡಿರುವ [email protected] ಇ-ಮೇಲ್ ಐಡಿ’ಗೆ ( E- mail ) ರೆಸೂಮ್ ( resume ) ಕಳುಹಿಸಬೇಕು.

ಅರ್ಜಿ ಸಲ್ಲಿಕೆ ಮಾಡಲು ಪ್ರಮುಖ ದಿನಾಂಕಗಳು :-
ಆಫ್’ಲೈನ್ ಮೂಲಕ ಅರ್ಜಿ ಸಲ್ಲಿಸಲು ಆರಂಭದ ದಿನಾಂಕ :- 21/05/2024.
ಆಫ್’ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :- 19/06/2024.

ಉದ್ಯೋಗ ಮಾಡುವ ಸ್ಥಳ :-ಕರ್ನಾಟಕ ಮತ್ತು ಮುಂಬೈ
ಅರ್ಜಿಗಳನ್ನು ಆಫ್’ಲೈನ್ ಮೂಲಕ ಸಲ್ಲಿಕೆ ಮಾಡಬೇಕು. ಅಧಿಕೃತ ವೆಬ್’ಸೈಟ್ mrvc.indianrailways.gov.in
ಆಸಕ್ತಿ ಇರುವ ಅಭ್ಯರ್ಥಿಗಳು ಮೇಲೆ ನೀಡಿರುವ ವೆಬ್’ಸೈಟ್ ಮುಖಾಂತರ ಅರ್ಜಿಗಳನ್ನು ಸಲ್ಲಿಕೆ ಮಾಡಬಹುದು.

ಸಂಸ್ಥೆಯ ಹೆಸರು :- ಮುಂಬೈ ರೈಲ್ವೇ ವಿಕಾಸ್ ಕಾರ್ಪೋರೇಷನ್ ( MRVC ).
ಪೋಸ್ಟ್ ವಿವರಗಳು :- GM/AGM. ಮೆಟ್ರೋ ರೈಲ್ವೇನಲ್ಲಿ ಕೆಲಸ ಮಾಡಲು ಇಷ್ಟಪಡುವ ವ್ಯಕ್ತಿಗಳು ಮತ್ತು ಮೇಲೆ ತಿಳಿಸಿರುವ ಎಲ್ಲಾ ಅರ್ಹತೆ ಇರುವ ವ್ಯಕ್ತಿಗಳು ಅರ್ಜಿಗಳನ್ನು ಆಫ್’ಲೈನ್ ಮೂಲಕ ಸಲ್ಲಿಕೆ ಮಾಡಬಹುದು.

By

Leave a Reply

Your email address will not be published. Required fields are marked *