ಜ್ಯೋತಿಷ್ಯ ಶಾಸ್ತ್ರದಲ್ಲಿ ಮೊದಲನೆಯ ರಾಶಿ ಮೇಷರಾಶಿ ಸಾಮಾನ್ಯವಾಗಿ ಎಲ್ಲ ರಾಶಿಗೂ ತಮ್ಮದೇ ಆದ ಗುಣ ಸ್ವಭಾವಗಳು ಹೊಂದಿರುತ್ತಾರೆ. ಪುರುಷರು ಹಾಗೂ ಸ್ತ್ರೀಯರು ತಮ್ಮದೇ ಆದ ವಿಭಿನ್ನ ಗುಣ ಲಕ್ಷಣ ಸ್ವಭಾವ ಹೊಂದಿರುತ್ತಾರೆ ಬನ್ನಿ ಈ ಲೇಖನದಲ್ಲಿ ಮೇಷ ರಾಶಿಯ ಸ್ತ್ರೀ ಗುಣ ಬಗ್ಗೆ ತಿಳಿಯೋಣ ಬನ್ನಿ. ಮೇಷ ರಾಶಿಯ ಸ್ವಲ್ಪ ಅಹಂಕಾರಿ ತರಹ ಕಾಣಿಸುತ್ತಾರೆ ಆದರೆ ಅವರು ದುರುಳರು ಆಗದೆ ಪ್ರಭಾವಿಗಳು ಸಾಹಸಿಗಳು ಮತ್ತು ದೃಢಚಿತ್ತರಾಗಿರುತ್ತಾರೆ ತಮಗೆ ಯಾವುದೇ ಸಮಸ್ಯೆಗಳು ಎದುರಾದರೂ ಒಬ್ಬಂಟಿಯಾಗಿ ಹೋರಾಡಿ ಜಯಶಾಲಿಯಾಗಿರುತ್ತಾರೆ ಯಾವ ಕೆಲಸವನ್ನು ಬೇಕಾದ್ರೂ ಸರಾಗವಾಗಿ ಮಾಡಿ ಮುಗಿಸುತ್ತಾರೆ ಇನ್ನೂ ಇವರುಗಳು ತಮ್ಮ ಕೋಪ ಸಿಟ್ಟು ತಾಪಗಳನ್ನು ಆದಷ್ಟು ನಿಯಂತ್ರಣದಲ್ಲಿ ಇಟ್ಟುಕೊಂಡಿರುತ್ತಾರೆ ಹಾಗಾಗಿ ಎಲ್ಲ ಕ್ಷೇತ್ರದಲ್ಲೂ ರಾಜಕೀಯದಲ್ಲೂ ಒಳ್ಳೆಯ ಹೆಸರು ಮಾಡುತ್ತಾರೆ
ಈ ರಾಶಿಯವರು ಅಲಂಕಾರ ಪ್ರಿಯರು ತಮ್ಮ ಉಡುಗೆ ತೊಡುಗೆ ಬಗ್ಗೆ ತುಂಬಾ ಕಾಳಜಿ ಇಟ್ಟಿರುತ್ತಾರೆ ಇನ್ನೂ ಇವರು ಪುರುಷರಿಗೆ ಸರಿಸಮನಾಗಿ ಸಮಾಜದಲ್ಲಿ ಒಳ್ಳೆಯ ಹೆಸರುವಾಸಿ ಯಾರೇ ಕಷ್ಟದಲ್ಲಿ ಇದ್ದರು ಕೂಡ ಸಹಾಯ ಮಾಡುವ ಸಹೃದಯಿ ಮನಸ್ಸಿನವರು ಆಗಿರುತ್ತಾರೆ ಸ್ತ್ರೀಯರು ಮದುವೆ ವಿಳಂಬ ಪ್ರೀತಿ ಪ್ರೇಮದಲ್ಲಿ ಮೋಸ ಹೋಗುವ ಸಾಧ್ಯತೆ ಇದೆ ಒಮ್ಮೆ ತಮ್ಮ ಜಾತಕವನ್ನು ಪರಿಶೀಲಿಸಬೇಕು
ಈ ರಾಶಿಯವರು ಆತ್ಮವಿಶ್ವಾಸ ವಿರುದ್ಧ ಹೋಗದೆ ತಮ್ಮನ್ನು ಸಂರಕ್ಷಣೆ ಮಾಡುವ ತಾಕತ್ತು ಹೊಂದಿರುತ್ತಾರೆ .ದುಡುಕಿನ ಸ್ವಭಾವ ಹಾಗೂ ಆತುರ ಬುದ್ದಿಯಿಂದ ಹಲವಾರು ಸಮಸ್ಯೆ ಎದುರುಗೊಂಡು ಅದರಿಂದ ಮಾನಸಿಕ ದುರ್ಬಲ ಚಿಂತೆ ಹಾಗೂ ಗೊಂದಲದ ಜೀವನ ದಾರಿಯಾಗುತ್ತದೆ ಇನ್ನೂ ಇವರು ಮನಸ್ಸಿನಲ್ಲಿ ಯಾವುದೇ ಕಲ್ಮಶ ಇಲ್ಲ ಹಾಗಾಗಿ ಸರಳ ಹಾಗೂ ನೇರ ನುಡಿ ಇವರದ್ದು. ಎಲ್ಲಿ ಕೂಡ ತಮ್ಮ ಕುಟುಂಬ ಬಿಟ್ಟುಕೊಡದೆ ಕುಟುಂಬ ಬಗ್ಗೆ ಅಪಾರ ಪ್ರೀತಿ ಹಾಗೂ ಹೆಗ್ಗಳಿಕೆಗೆ ಮಹತ್ವ ನೀಡುತ್ತಾರೆ . ಈ ಸ್ತ್ರೀ ತಮ್ಮ ಪತಿಯನ್ನು ತುಂಬಾ ಪ್ರೀತಿಸುತ್ತಾರೆ ಇನ್ನೂ ಅವರ ಕಡೆಯಿಂದ ಕೂಡ ಅದಕ್ಕೆ ತಕ್ಕನಾದ ಪ್ರೀತಿ ಬಯಸುತ್ತಾರೆ
ಇನ್ನೂ ಪತಿಯ ವಿಚಾರಕ್ಕೆ ಹೋದರೆ ಇವರು ತುಂಬಾ ಸ್ವಾರ್ಥಿಗಳು ಎಂದರೆ ತಪ್ಪಲ್ಲ ಪತಿ ಇನ್ನೊಂದು ಸ್ತ್ರೀ ಹೊಗಳಬಾರದು ಆದರೆ ತಮ್ಮ ಪತಿಯ ಎಲ್ಲ ಕಷ್ಟ ಸುಖ ದುಃಖ ಜೊತೆಗೆ ಇದ್ದು ಆದರ್ಶ ಸ್ತ್ರೀ ಆಗಿರುತ್ತಾರೆ ಎಂದರೆ ತಪ್ಪಲ್ಲ ಸರಳ ಸ್ವಭಾವ ಸ್ತ್ರೀ ದೊರೆತರೆ ಜೀವನವು ಶಾಂತಿ ನೆಮ್ಮದಿಯಿಂದ ಕೂಡಿರುತ್ತದೆ ಇನ್ನೂ ಮೇಷ ರಾಶಿ ಸ್ತ್ರೀಯು ಮೇಷ ರಾಶಿಯ ಪುರುಷರನ್ನು ಮದ್ವೆ ಆದರೆ ಅವರ ಜೀವನ ಸುಖಮಯ ಹಾಗೂ ಸಂತೋಷದಿಂದ ಯಾವಾಗ್ಲೂ ಕೂಡಿರುತ್ತದೆ ಕಾರಣ ಇಬ್ಬರ ಮನೋಭಾವ ಒಂದೇ ಆಗಿದ್ದು ಯಾವುದೇ ಮನಸ್ತಾಪಕ್ಕೆ ಜಾಗ ಇಲ್ಲ ಇನ್ನೂ ಈ ರಾಶಿಯವರು ಸಿಂಹ ಧನಸ್ಸು ಹಾಗೂ ತುಲಾ ರಾಶಿ ಜೊತೆ ಒಳ್ಳೆಯ ಬಾಂಧವ್ಯ ಹೊಂದಿರುತ್ತಾರೆ
ಇನ್ನೂ ಆರೋಗ್ಯ ಸಂಬಂಧಪಟ್ಟಂತೆ ತಲೆನೋವು ಉರಿ ರಕ್ತದೊತ್ತಡ ಹಾಗೂ ಮಲೇರಿಯಾ ಹೀಗೆ ಮುಂತಾದ ಖಾಯಿಲೆ ಬರಬಹುದು ಇನ್ನೂ ವಯೋಸಹಜ ಖಾಯಿಲೆ ಸಹಜ ಹಾಗಾಗಿ ಆರೋಗ್ಯಕರ ಜೀವನಕ್ಕಾಗಿ ಅಧಿಕ ಸೊಪ್ಪು ತರಕಾರಿ ಮತ್ತು ಬೇಳೆಕಾಳುಗಳ ಸೇವನೆ ಉತ್ತಮ ಇನ್ನೂ ಮದ್ಯಪಾನ ಮಾಂಸಾಹಾರ ಸೇವನೆ ಕಡಿಮೆ ಅತ್ಯಗತ್ಯ ಹಾಗೂ ಯೋಗ ವ್ಯಾಯಾಮ ಕೂಡ ಒಳ್ಳೆಯ ಆರೋಗ್ಯ ಪಡೆಯಬಹುದು