ಹನ್ನೆರಡು ರಾಶಿಯಲ್ಲಿ ಹತ್ತನೆಯ ರಾಶಿ ಮಕರ ರಾಶಿ ಈ ರಾಶಿಯವರು ಹಣಕಾಸಿನ ವಿಚಾರ ಹಾಗೂ ಶಿಸ್ತುಬದ್ಧ ಜೀವನ ನಡೆಸುವ ಅತ್ಯುತ್ತಮ ರಾಶಿ ಇನ್ನೂ ಈ ರಾಶಿ ಅಧಿಪತಿ ಶನಿ ಇನ್ನೂ ಮಿತ್ರರಾಶಿ ಕುಂಭ ರಾಶಿ ಶತ್ರುರಾಶಿ ಸಿಂಹರಾಶಿ ಇನ್ನೂ ಈ ರಾಶಿ ಜನ್ಮ ನಕ್ಷತ್ರ ಉತ್ತರ ಷ ಡ ನಕ್ಷತ್ರ 2 3 ಹಾಗೂ 4 ಚರಣ್ ಹಾಗೂ ಶ್ರಾವಣ 4ಚರಣ ಹಾಗೂ ಧನಿಷ್ಟ ನಕ್ಷತ್ರದ 2ನೇ ಪಾದ ಆಗಿದ್ದೂ ಅದೃಷ್ಟ ಬಣ್ಣ ನೀಲಿ ಹಾಗೂ ಕಪ್ಪು. ಈ ವರ್ಷ ಎಪ್ರಿಲ್ ತಿಂಗಳಲ್ಲಿ ಮಕರ ರಾಶಿಯವರ ಮಾಸ ಭವಿಷ್ಯವನ್ನು ಲೇಖನದಲ್ಲಿ ನೋಡೋಣ

ಮೇಲೆ ಹೇಳಿದಂತೆ ಈ ರಾಶಿ ಶನಿ ಅಧಿಪತಿಯು ಇನ್ನೂ ಶುಭ ದಿನ 2 8 9 11 15 19 26 27 ಹಾಗೂ 29 ಆಗಿರುತ್ತದೆ. ಸಾಮಾನ್ಯವಾಗಿ ಈ ರಾಶಿಯಲ್ಲಿ ಇರುವ ವ್ಯಕ್ತಿ ಮುಂಗೋಪ ಜಾಸ್ತಿ ಆದಷ್ಟು ಕೋಪ ಕಂಟ್ರೋಲ್ ಮಾಡಿಕೊಂಡಲ್ಲಿ ತಮ್ಮ ಕಾರ್ಯ ಸಾಧನೆ ಒಳ್ಳೆಯ ಅವಕಾಶ ಈ ತಿಂಗಳ ಮೊದಲ ಅರ್ಧ ಸಭೆ ಸಮಾರಂಭ ಹಣ ವ್ಯಯ ಇನ್ನೂ ಪತಿ ಇಲ್ಲ ಪತ್ನಿ ಮನೆಗೆ ಹೊಸ ವಸ್ತುಗಳ ಖರೀದಿ ಸಾಧ್ಯತೆ ಇನ್ನೂ ತಂದೆ ತಾಯಿಯ ಆರೋಗ್ಯದಲ್ಲಿ ಸುಧಾರಣೆ ಮನಸ್ಸಿಗೆ ನೆಮ್ಮದಿ ಇನ್ನೂ ಒಳ್ಳೆಯ ಕಾರ್ಯದಿಂದ ಮೇಲು ಅಧಿಕಾರಿಗಳಿಂದ ಪ್ರಶಂಶೆಗೆ ಪಾತ್ರರಾಗುತ್ತಾರೆ

ದೇವತಾ ದರ್ಶನ ಮಾಡುವ ಭಾಗ್ಯ ಲಭ್ಯ. ಏಪ್ರಿಲ್ ತಿಂಗಳ ದ್ವಿತೀಯಾರ್ಧ ಭಾಗ ತಮ್ಮ ಮುಂಗೋಪ ಪರಿಣಾಮ ಮನೆಯ ಹಿರಿಯರೊಂದಿಗೆ ಜಗಳ ಮನಸ್ತಾಪ ಉಂಟಾಗಿ ತಮ್ಮ ಗೌರವಕ್ಕೆ ಚುತಿ ಉಂಟಾಗುವುದು ಇನ್ನು ಪತಿ ಪತ್ನಿಯರಲ್ಲಿ ಸಣ್ಣ ಪುಟ್ಟ ವಾದ ವಿವಾದಕ್ಕೆ ಈ ಕೋಪ ದಾರಿ ಮಾಡಿಕೊಡುವ ಸಾಧ್ಯತೆ ಇದ್ದೂ ಆದಷ್ಟು ತಾಳ್ಮೆ ವಹಿಸಬೇಕು. ಪ್ರೇಮಿಗಳಿಗೆ ಈ ತಿಂಗಳು ಶುಭಕರ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಪಡೆದು ವಿದೇಶದಲ್ಲಿ ವ್ಯಾಸಂಗ ಮಾಡಲು ಇಚ್ಚಿಸುವರಿಗೆ ಒಳ್ಳೆಯ ಸುವರ್ಣಾವಕಾಶ.

ಹಣಕಾಸು ವ್ಯವಹಾರ ಮಾಡುವವರಿಗೆ ಯಾವುದೇ ಕೊರತೆ ಇಲ್ಲ ರಾಜಕೀಯ ಸಂಘ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುವರು ಹಾಗೂವ್ಯಾಪಾರ ಕ್ಷೇತ್ರದಲ್ಲಿ ದುಡಿಯುವವರಿಗೆ ಒಳ್ಳೆಯ ಯಶಸ್ಸು ಸಿಗುತ್ತದೆ ಇನ್ನೂ ಸೋದರ ಮಾವ ಅಥವಾ ಅತ್ತೆ ಕಡೆಯಿಂದ ಧನ ಲಾಭ ಹಾಗೂ ಆಪ್ತರಿಂದ ಹಣ ಸಹಾಯ ಕೊಟ್ಟ ಹಣ ವಾಪಸ್ಸು ಬರುವುದು ಆದರೆ ಎಲ್ಲದಕ್ಕೂ ತಮ್ಮ ಕೋಪ ನಿಗ್ರಹ ಅಗತ್ಯ

ಈ ರಾಶಿಯವರು ಅಂದುಕೊಂಡಿರುವ ಕಾರ್ಯ ಯೋಜನೆ ಎಲ್ಲವೂ ನಿಧಾನ ಆದರೂ ಎಲ್ಲವೂ ಸಂಪೂರ್ಣಗೊಳ್ಳುತ್ತದೆ ಹಣಕಾಸಿನ ಕೊರತೆ ಇಲ್ಲ ಇನ್ನು ಹೊಸ ಉದ್ಯೋಗ ನೀರಿಕ್ಷೆ ಇರುವರಿಗೆ ಅವರ ಕನಸ್ಸು ನನಸಾಗುವ ಸಮಯ . ಭೂಮಿ ವ್ಯವಹಾರ ಬೇಕರಿ ಉದ್ಯೋಗ ಆಹಾರ ಸಂಸ್ಕರಣೆ ಗೃಹ ಕೈಗಾರಿಕೆ ಅಲ್ಲಿ ಇರುವಂತವರಿಗೆ ಹೇರಳ ಲಾಭದಾಯಕ ತಿಂಗಳು ಇನ್ನು ಹೈನುಗಾರಿಕೆ ಮುಂತಾದ ದ್ರವ ರೂಪ ವ್ಯವಹಾರದವರು ಸ್ವಲ್ಪ ಎಚ್ಚರಿಕೆ ಅತ್ಯಗತ್ಯ. ಇನ್ನು ರಾಜಕೀಯ ವ್ಯಕ್ತಿಗಳು ಈ ಪರ್ವಕಾಲ ಎಂದರೆ ತಪ್ಪಾಗಲಾರದು ಸಾರ್ವಜನಿಕ ಸೇವೆಯಲ್ಲಿ ತೊಡಗಿರುವರಿಗೆ ಉತ್ತಮ ಜನಮನ್ನಣೆ ಪ್ರಾಪ್ತಿ ಇನ್ನು ಮನೆಕಟ್ಟುವ ಯೋಚನೆ ಇದ್ದವರು ಈ ತಿಂಗಳು ಒಳ್ಳೆಯ ಕಾಲ ತಮ್ಮ ಕನಸ್ಸನ್ನು ಕಾರ್ಯರೂಪಕ್ಕೆ ತರಲು ಒಳ್ಳೆಯ ಅವಕಾಶ.

ಇನ್ನೂ ಸಿನಿಮಾ ರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡ ಸ್ತ್ರೀಯರು ಆದಷ್ಟು ತಮ್ಮಷ್ಟಕ್ಕೆ ತಾವು ಇದ್ದರೆ ಒಳಿತು ಇಲ್ಲ ಅಂದರೆ ಅವಮಾನ ಅಪವಾದ ಗುರಿಯಾಗಬೇಕಾಗುತ್ತದೆ .ಆದರೆ ಸಾಧ್ಯವಾದಷ್ಟು ತಮ್ಮ ಕೋಪ ನಿಯಂತ್ರಣ ಅತ್ಯಗತ್ಯ ಇಲ್ಲ ಅಂದ್ರೆ ತುಂಬಾ ತೊಂದರೆ ಎದುರಿಸುವ ಸಾಧ್ಯತೆ ಇದೆ
ಇದಕ್ಕೆ ಪರಿಹಾರ ನವನಾಗ ಸ್ತೋತ್ರ ಹಾಗೂ ಅನುಕೂಲವಿದಲ್ಲಿ ಆಶ್ಲೇಷ ಬಲಿ ಪೂಜೆ ಮಾಡಿಸಿ ಇನ್ನು ಉದ್ದಿನ ಬೇಳೆ ನೀಲಿ ಬಣ್ಣದ ಬಟ್ಟೆಯನ್ನು ದಾನ ಮಾಡಿ ಹಾಗೂ ಕಪ್ಪು ಬಣ್ಣದ ಶ್ವಾನಕ್ಕೆ ಆಹಾರ ನೀಡಿ ವಾಸ್ತು ಪ್ರಕಾರವಾಗಿ ಆದಷ್ಟು ಸಂಪೂರ್ಣ ಕೆಂಪು ಹಾಗೂ ಕಪ್ಪು ಬಣ್ಣದ ಬಟ್ಟೆ ವಸ್ತು ನಿಷೇಧ ಒಟ್ಟಾರೆ ಹೇಳುದಾದರೆ ಏಪ್ರಿಲ್ ತಿಂಗಳು ಮಕರ ರಾಶಿಯವರಿಗೆ ಅತ್ಯಂತ ಲಾಭಕರ.

Leave a Reply

Your email address will not be published. Required fields are marked *