ದ್ವಾದಶ ರಾಶಿಚಕ್ರಗಳಲ್ಲಿ ಮೊದಲ ರಾಶಿಯೇ ಮೇಷ ರಾಶಿ. ಉತ್ಸಾಹ, ಭಾವೋದ್ರೇಕ ಮತ್ತು ಹುಮ್ಮಸ್ಸು ಈ ರಾಶಿಯನ್ನು ಪ್ರತಿನಿಧಿಸುತ್ತದೆ. ಬೆಂಕಿಯ ಚಿಹ್ನೆಯನ್ನು ಹೊಂದಿರುವ ಈ ರಾಶಿಯನ್ನು ಮಂಗಳನು ಆಳುವನು. ಈ ರಾಶಿಯಡಿಯಲ್ಲಿ ಜನಿಸಿದವರು ಜೀವನದ ಎಲ್ಲಾ ಆಯಾಮದಲ್ಲೂ ತಾವೇ ಮೊದಲ ಸ್ಥಾನದಲ್ಲಿ ಇರುತ್ತೇವೆ ಎಂದು ಭಾವಿಸುತ್ತಾರೆ. ಎಂತಹ ಸಂಗತಿಗಳಲ್ಲಾದರೂ ತಮ್ಮದೊಂದು ಸ್ಥಾನವನ್ನು ಮಾಡಿಕೊಳ್ಳಲು ಸಾಕಷ್ಟು ಉತ್ಸಾಹವನ್ನು ತೋರುವರು.

ಮೇಷ ರಾಶಿಯ ಅಧಿಪತಿ ಮಂಗಳ ಗ್ರಹ. ಈ ರಾಶಿಯವರು ನೋಡಲು ಆಕರ್ಷಕವಾಗಿರುವುದಲ್ಲದೆ, ಬಲಶಾಲಿಗಳಾಗಿರುತ್ತಾರೆ. ನೇತೃತ್ವದ ಗುಣವನ್ನು ಈ ರಾಶಿಯವರು ಹೊಂದಿರುತ್ತಾರೆ. ಯಾವುದೇ ವಿಷಯವನ್ನು ಸರಿಯಾಗಿ ಯೋಚಿಸಿ ದೃಢ ನಿಶ್ಚಯದಿಂದ ನಿರ್ಣಯ ತೆಗೆದುಕೊಳ್ಳುವ ಸ್ವಭಾವ ಇವರದ್ದಾಗಿರುತ್ತದೆ. ಹಾಗಾಗಿ ಈ ರಾಶಿಯವರ ವ್ಯಕ್ತಿತ್ವಕ್ಕೆ ಹಲವರು ಆಕರ್ಷಿತರಾಗುತ್ತಾರೆ. ಸ್ವತಂತ್ರ ಸ್ವಭಾವದ ಈ ರಾಶಿಯವರು ಸಂಗಾತಿಯನ್ನು ತಾವೇ ಆಯ್ಕೆಮಾಡಿಕೊಳ್ಳಲು ಇಷ್ಟಪಡುತ್ತಾರೆ. ಇದಕ್ಕೆ ಇವರ ಅದೃಷ್ಟವೂ ಸಾಥ್ ನೀಡುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗುತ್ತದೆ. ಈ ರಾಶಿಯವರ ಸ್ವಭಾವದಿಂದ ವಿವಾಹವಾದ ಮೊದಲು ಹೊಂದಾಣಿಕೆಯ ವಿಚಾರದಲ್ಲಿ ಕಷ್ಟವಾದರೂ ನಂತರ ಎಲ್ಲವೂ ಸರಿಯಾಗುತ್ತದೆ.

ಮೊದಲ ರಾಶಿಚಕ್ರ ಚಿಹ್ನೆಯಾಗಿರುವುದರಿಂದ, ಮೇಷ ರಾಶಿಯು ಅತ್ಯಂತ ಸ್ವತಂತ್ರ ರಾಶಿಚಕ್ರಗಳಲ್ಲಿ ಒಂದಾಗಿದೆ. ಒಂದೆಡೆ, ಅವರು ತಮ್ಮ ಸ್ವಾತಂತ್ರ್ಯವನ್ನು ಇಷ್ಟಪಡುತ್ತಾರೆ. ಆದರೆ ಮತ್ತೊಂದೆಡೆ, ಅವರು ನಿಯಂತ್ರಣದಲ್ಲಿರಲು ಇಷ್ಟಪಡುತ್ತಾರೆ. ಸಂಬಂಧದಲ್ಲಿ ಮೇಷ ರಾಶಿಯು ಸಾಕಷ್ಟು ರೋಮ್ಯಾಂಟಿಕ್ ಆಗಿರಬಹುದು. ಅವರು ತಮ್ಮ ಸಂಗಾತಿಯನ್ನು ನಿರಾಸೆಗೊಳಿಸಲು ಮತ್ತು ಅವರ ಆತ್ಮೀಯ ಕ್ಷಣಗಳನ್ನು ಹಂಚಿಕೊಳ್ಳಲು ಬಲವಾದ ಬಂಧ ಮತ್ತು ವಿಶ್ವಾಸಾರ್ಹ ಸಂಬಂಧವನ್ನು ನಿರ್ಮಿಸುವ ಅಗತ್ಯವಿದೆ. ಮೇಷ ರಾಶಿಯು ಸ್ವಯಂ ಚಿಹ್ನೆಯನ್ನು ಪ್ರತಿನಿಧಿಸುತ್ತದೆ ಮತ್ತು ಅವರು ತಮ್ಮ ಸಂಬಂಧಗಳಲ್ಲಿಯೂ ಈ ಲಕ್ಷಣವನ್ನು ಹೊಂದಿದ್ದಾರೆ. ಅವರು ತಮ್ಮ ಸಂಗಾತಿಗೆ ಪೂರಕವಾಗಿರಲು ಬಯಸುತ್ತಾರೆ ಹಾಗೆಯೇ ತಮ್ಮ ಪ್ರತ್ಯೇಕತೆಯನ್ನು ಕಾಪಾಡಿಕೊಳ್ಳುತ್ತಾರೆ.

ಮೇಷ ರಾಶಿ ಮತ್ತು ಕಟಕ ರಾಶಿ ಮೇಷ ರಾಶಿಯವರು ಅತ್ಯಂತ ಶಕ್ತಿ ಉಳ್ಳವರು ಮತ್ತು ಧೈರ್ಯವಂತರು ಈ ಗುಣವೂ ಕಟಕ ರಾಶಿಯ ಸಂಗಾತಿಯನ್ನು ಬಹಳವಾಗಿ ನೆಚ್ಚಿಸುತ್ತದೆ ಅವರ ನಡುವಿನ ಬಾಂಧ್ಯವನ್ನು ಹೆಚ್ಚಿಸುತ್ತದೆ. ಕಟಕ ರಾಶಿಯವರು ಅತ್ಯಂತ ಯಶಸ್ಸು ಪಡೆಯಲು ಹವಣಿಸುವವರು ಆಗಿರುತ್ತಾರೆ. ಅವರ ಪ್ರಯತ್ನಗಳು ಮೇಷ ರಾಶಿಯ ಸಂಗಾತಿಯನ್ನು ಗೌರವಿಸುವ ಹಾಗೆ ಮಾಡುತ್ತದೆ. ಮೇಷ ರಾಶಿ ಮತ್ತು ಕುಂಭ ರಾಶಿ ಜಾತಕದ ಪ್ರಕಾರ ಇದೊಂದು ಅದ್ಬುತವಾದ ಜೋಡಿ ಇವರ ಜೀವನದಲ್ಲಿ ಬರೀ ಹಾಲು ಜೇನು ಇರುತ್ತದೆ ಎಂದು ಹೇಳಲಾಗುತ್ತದೆ. ಇಬ್ಬರು ಸಾಹಸ ಪ್ರಿಯರು ಒಟ್ಟೊಟ್ಟಿಗೆ ಎಲ್ಲಾ ಕೆಲಸಕ್ಕೆ ಕೈ ಹಾಕುತ್ತಾರೆ. ಇಬ್ಬರು ಕಲಾತ್ಮಕವಾಗಿ ಆಲೋಚನೆಗಳನ್ನು ಹೊಂದಿರುತ್ತಾರೆ. ಪ್ರೀತಿ ಗೌರವಗಳಿಂದ ಕಾಣುತ್ತಾರೆ ಮತ್ತು ಒಬ್ಬರಿಗೊಬ್ಬರು ತಮ್ಮ ವ್ಯಕ್ತಿಗತ ಸ್ವಾಗತವನ್ನು ನೀಡುತ್ತಾರೆ.

ಮೇಷ ರಾಶಿ ಮತ್ತು ಮೀನಾ ರಾಶಿ ಈ ಎರಡು ರಾಶಿಗಳು ಬಹಳ ಅನ್ಯೋನ್ಯವಾಗಿ ಜೀವನ ನಡೆಸಿಕೊಂಡು ಹೋಗುತ್ತಾರೆ. ಒಬ್ಬರನೊಬ್ಬರು ಅನುಸರಿಸಿಕೊಂಡು ನಡೆಯುತ್ತಾರೆ. ಮೀನಾ ರಾಶಿಯ ಸಂಗಾತಿ ಮೇಷ ರಾಶಿಯ ಸಂಗಾತಿಯ ವಿಚಾರಣೆಯನ್ನು ಅನುಕರಣೆ ಮಾಡುತ್ತಾರೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!