ನಾಗರೀಕತೆ ಪ್ರಾರಂಭವಾದಾಗಿನಿಂದಲೂ ಭವಿಷ್ಯವನ್ನು ಇಣುಕಿನೋಡುವ ಕುತೂಹಲ ಮಾನವನಿಗೆ ಸಹಜವಾಗಿ ಬಂದಿದೆ. ನಾಳೆ ಎನ್ನುವುದು ಸದಾ ರಹಸ್ಯದ ಆಗರ. ಇಂದಿದ್ದವನು ನಾಳೆ ಇಲ್ಲ. ಬಡವ ಬಲ್ಲಿದನಾಗುವನು ಬಲ್ಲಿದ ದರಿದ್ರನಾಗುವನು. ಈ ವಿಚಿತ್ರವನ್ನು ತಿಳಿಯಲು ಮಾನವನ ಪ್ರಯತ್ನ ಅಗಾಧ. ಭೂತ ಪ್ರೇತ ಆರಾಧನೆ, ಯೋಗ, ಸಿದ್ಧಿ, ಹೀಗೆ ಹಲವು. ಕೊನೆಗೆ ಹೋರಾಶಾಸ್ತ್ರ ಬಂದಿತು.

ವ್ಯಕ್ತಿ ಹುಟ್ಟಿದಾಗ ಆಕಾಶದಲ್ಲಿ ಗ್ರಹ ನಕ್ಷತ್ರಗಳು ಎಲ್ಲೆಲ್ಲಿ ಇದ್ದವೆಂದು ಪರಿಶೀಲಿಸಿ ಅವುಗಳ ಗುಣಾವಗುಣಗಳನ್ನು ಲೆಖ್ಖಹಾಕಿ, ಮನುಷ್ಯನ ಭೂತ, ಭವಿಷ್ಯತ್, ವರ್ತಮಾನಗಳನ್ನು ತಿಳಿಯುವ ಪ್ರಯತ್ನವೇ ಹೋರಾಶಾಸ್ತ್ರ. ಅಥವಾ ಫಲಜೋತಿಷ. ಗ್ರಹ ನಕ್ಷತ್ರಗಳ ಸ್ಥಾನ ಚಲನೆಗಳನ್ನು ತಿಳಿಸುವುದಷ್ಟೇ ಜ್ಯೋತಿಷ ಶಾಸ್ತ್ರದ ಕೆಲಸ. ಈ ರೀತಿಯ ಭವಿಷ್ಯ ನೋಡುವ ಶಾಸ್ತ್ರದಲ್ಲಿ ರಾಶಿ ಭವಿಷ್ಯ ನೋಡುವುದು ರೂಢಿ, ಇಲ್ಲಿ ಮೇಷ ರಾಶಿ ಭವಿಷ್ಯ ಫಲವನ್ನು ತಿಳಿಯೋಣ.

ಮೇಷ ರಾಶಿಯನ್ನು ಆಳುವಂತಹ ಗ್ರಹ ಮಂಗಳ ಹಾಗೂ ಅಧ್ಯುತ್ ಪರ ರಾಶಿಯಾಗಿದೆ. ಈ ರಾಶಿ ಹೊಂದಿರುವವರು ಸ್ವಯಂ ಆಕರ್ಷಕರಾಗಿರುತ್ತಾರೆ ಆದರೆ ಇವರು ಯೋಚನಾ ಲಹರಿ ಹಾಗಿರುವುದಿಲ್ಲ , ಇವರು ಮಾತುಗಳನ್ನು ಕೇಳುಗರಿಗೆ ಆ ರೀತಿ ಭಾಸವಾಗುತ್ತದೆ ಏಕೆಂದರೆ ಇವರು ಉಪಯೋಗಿಸುವ ವಾಕ್ಯಗಳು ನಾನೂ ನಾನು ಎನ್ನುವ ಕಾರಣ ಆ ಅರ್ಥವಾಗುತ್ತದೆ.

ಈ ರಾಶಿಯುಳ್ಳವರು ಉತ್ಸಾಹದಾಯಿ ಆಗಿರುತ್ತಾರೆ. ಯಾವುದೇ ರೀತಿಯ ಕೆಲಸವಾದರೂ ಸರಿಯೇ ಮುನ್ನುಡಿ ಎದುರಿಸುತ್ತಾರೆ, ಕೋಪ ಇವರ ಬಲಹೀನತೆ ಏಕೆಂದರೆ ಸಣ್ಣ ಪುಟ್ಟ ವಿಷಯಗಳಿಗು ಕೋಪ ಮೊದಲು ಬರುತ್ತದೆ, ತಾಳ್ಮೆ ಪ್ರಮಾಣ ಕಡಿಮೆ. ಈ ರಾಶಿಯವರ ಗುಣ ನೇರಾನೇರ ಮಾತು ಇದು ಇವರು ಹುಟ್ಟು ಗುಣವಾಗಿರುತ್ತದೆ, ಏನೇ ವಿಷಯವಿದ್ದರೂ ಮನಸ್ಸಿನಲ್ಲಿ ಬಚ್ಚಿಡದೇ ಹೇಳುವ ಗುಣ ಹೊಂದಿರುತ್ತಾರೆ.

ಸಹಾಯ ಗುಣ ತುಂಬಾ ಚೆನ್ನಾಗಿದೆ ಹಾಗೂ ಸಮಯ ಪ್ರಜ್ಞೆಯಲ್ಲಿ ನಿಪುಣರು.
ಯಾವುದೇ ಕಾರಣಕ್ಕೂ ಇನ್ನೊಬ್ಬರ ಮೇಲೆ ಅವಲಂಬಿತರಾಗಿರುವುದಿಲ್ಲ ಹಾಗೂ ಸುಳ್ಳಿನ ವಿರೋಧಿಗಳಾಗಿರುತ್ತಾರೆ. ಹಣ ವ್ಯಯಿಸುವಲ್ಲಿಯು ಸಹ ನಿಪುಣರು ಹಿಂದೆ ಮುಂದೆ ಯೋಚಿಸದೆ ಖರ್ಚು ಮಾಡುವುದು ಹೆಚ್ಚು, ಹಣದಲ್ಲಿ ಹಿಡಿತವಿರಬೇಕು.

ಈ ರಾಶಿಯವರಿಗೆ ಹೊಂದಾಣಿಕೆ ಸ್ವಭಾವ ಕಡಿಮೆ, ಹಾಗೂ ಯೋಚನಾ ಸಾಮರ್ಥ್ಯವು ತುಂಬಾ ದೊಡ್ಡದಾಗಿರುತ್ತದೆ. ಸಂಬಂಧಗಳಲ್ಲಿ ಕಲಹ ಹೆಚ್ಚು ಏಕೆಂದರೆ ಇವರ ಕೋಪವೇ ಮೂಲ ಕಾರಣ. ತಾನು ಹಾಗೂ ತನ್ನದು ಎನ್ನುವುದಕ್ಕೆ ತುಂಬಾ ಸುರಕ್ಷಿತವಾಗಿರುತ್ತಾರೆ. ಯೋಚನಾ ಶಕ್ತಿಯನ್ನು ವೃದ್ಧಿಸಿಕೊಳ್ಳುವುದು ತುಂಬಾ ಉಪಕಾರಿ ಯಾಗುತ್ತದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!