ಮೆಂತ್ಯೆ ಅಡುಗೆಗೆ ಅಷ್ಟೇ ಅಲ್ಲದೆ ಹತ್ತಾರು ಪ್ರಯೋಜನಕಾರಿ ಅಂಶಗಳನ್ನು ಹೊಂದಿದೆ. ಮೆಂತ್ಯೆ ಸಾಮಾನ್ಯವಾಗಿ ಎಲ್ಲರು ಮನೆಯಲ್ಲಿ ಅಡುಗೆಗೆ ಬಳಸುವಂತ ಪದಾರ್ಥವಾಗಿದ್ದು ಇದರಲ್ಲಿರುವಂತ ಹತ್ತಾರು ಪ್ರಯೋಜನಕಾರಿ ಅಂಶಗಳನ್ನು ನೀವು ತಿಳಿಯದೆ ಇರಬಹುದು, ಇದನ್ನು ನೀವು ತಿಳಿದು ನಿಮ್ಮ ಆತ್ಮೀಯರಿಗೂ ಹಂಚಿಕೊಳ್ಳಿ.
ಉಬ್ಬಸ ಸಮಸ್ಯೆಗೆ ಮೆಂತ್ಯೆ: ಮೆಂತ್ಯೆ ಮತ್ತು ಓಮ ಸಮಪ್ರಮಾಣದಲ್ಲಿ ತೆಗೆದುಕೊಂಡು ಕಷಾಯ ಮಾಡಿ ಒಂದು ಟೀ ಚಮಚ ಜೇನುತುಪ್ಪ ಸೇರಿಸಿ ಒಂದು ಊಟದ ಚಮಚದಷ್ಟು ಕಷಾಯವನ್ನು ದಿನಕ್ಕೆ ಮೂರುಬಾರಿ ಸೇವಿಸಿದರೆ ಉಬ್ಬಸ ಶಮನವಾಗುವುದು.
ಕಫ ನಿವಾರಣೆಗೆ ಮೆಂತ್ಯೆ: ಒಂದು ಕಪ್ಪು ಮೆಂತ್ಯೆ ಸೊಪ್ಪಿನ ಕಷಾಯಕ್ಕೆ ಒಂದು ಟೀ ಚಮಚ ಹಸಿ ಶುಂಠಿ ಕಷಾಯ ಬೆರಸಿ ಜೇನುತುಪ್ಪದೊಂದಿಗೆ ಸೇವಿಸಿದರೆ ಕಫ ಶೀಘ್ರವೇ ಗುಣವಾಗುವುದು. ಇನ್ನು ರಕ್ತ ಬೇಧಿ ಉಂಟಾದರೆ ಒಂದು ಟೀ ಚಮಚ ಮೆಂತ್ಯೆವನ್ನು ಗಟ್ಟಿ ಮೊಸರಿನಲ್ಲಿ ಬೆರಸಿ ಬಾಯಿಗೆ ಹಾಕಿಕೊಂಡು ನುಂಗುವುದರಿಂದ ರಕ್ತ ಬೇಧಿ ಕಡಿಮೆಯಾಗುವುದು.
ತಲೆಕೂದಲು ಉದುರುವ ಸಮಸ್ಯೆಗೆ ಮೆಂತ್ಯೆ ಸಹಕಾರಿ: ಮೆಂತ್ಯವನ್ನು ನೀರಿನಲ್ಲಿ ನೆನಸಿ ನಂತರ ಚನ್ನಾಗಿ ಅರೆದು ತಲೆ ಕೂದಲಿಗೆ ಹಚ್ಚಿ ಒಂದು ಗಂಟೆಯ ನಂತರ ಸ್ನಾನ ಮಾಡುವುದರಿಂದ ತಲೆ ಕೂದಲು ಚನ್ನಾಗಿ ಬೆಳೆಯುತ್ತದೆ ಅಲ್ಲದೆ ತಲೆ ಉದುರುವಿಕೆ ನಿಲ್ಲುತ್ತದೆ.
ಸಕ್ಕರೆಕಾಯಿಗೆ ಮೆಂತ್ಯೆ; ಸಕ್ಕರೆ ರೋಗ ನಿಯಂತ್ರಣದಲ್ಲಿ ಮೆಂತ್ಯೆ ಸೊಪ್ಪು ಸಹಕಾರಿ ಸಕ್ಕರೆ ಕಾಯಿಲೆ ಕಾಣಿಸಿಕೊಂಡಾಗ ಆರಂಭದಲ್ಲಿಯೇ ಪ್ರತಿದಿನ ಬೆಳಗ್ಗೆ ಮೆಂತ್ಯೆ ಸೊಪ್ಪಿನ ರಸ ಕುಡಿಯುತ್ತಾ ಬಂದರೆ ಪರಿಣಾಮ ಬಿರುವುದು. ಹೀಗೆ ಜಟ್ಟರು ಪ್ರಯೋಜನಗಳನ್ನು ಮೆಂತ್ಯೆ ಸೊಪ್ಪಿನಿಂದ ಪಡೆಯಬಹುದಾಗಿದೆ.