ಇಂದಿನ ಒತ್ತಡ, ಸ್ಪರ್ಧಾತ್ಮಕ ಬದುಕಿನಲ್ಲಿ ಮಕ್ಕಳು ಸೇವಿಸುವ ಆಹಾರ ಪದ್ಧತಿಯಲ್ಲಿ ಬದಲಾವಣೆ ಉಂಟಾಗಿ ಅವರ ಮೆದುಳಿನ ಬೆಳವಣಿಗೆಗೆ ಮಾರಕವಾಗುತ್ತಿದೆ. ಮಕ್ಕಳ ಮೆದುಳಿನ ಆರೋಗ್ಯವನ್ನು ಹೆಚ್ಚಿಸಿ ಅವರ ನೆನಪಿನ ಶಕ್ತಿಯನ್ನು ಅಭಿವೃದ್ಧಿಗೊಳಿಸುವುದು ಹೇಗೆ ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ಆಧುನಿಕ ಜೀವನ ಶೈಲಿ, ಒತ್ತಡ, ಆಹಾರ ಪದ್ಧತಿ ಮುಂತಾದ ಕಾರಣಗಳಿಂದ ಚಿಕ್ಕ ಮಕ್ಕಳ ಮೆದುಳಿಗೆ ಆಯಾಸ ಆಗುತ್ತಿದೆ. ಇದರಿಂದ ಮೆದುಳು ಉತ್ತಮವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗುವುದಿಲ್ಲ. ಮೆದುಳಿಗೆ ವಿಶ್ರಾಂತಿಯ ಅಗತ್ಯವಿರುತ್ತದೆ. ಅಲ್ಲದೇ ಹೆಚ್ಚುತ್ತಿರುವ ಮೊಬೈಲ್ ಬಳಕೆ, ಸರಿಯಾಗಿ ನಿದ್ರೆ ಮಾಡದೆ ಇರುವುದು ಮೆದುಳಿಗೆ ಅಪಾಯಕಾರಿ ಇದರಿಂದ ಮಕ್ಕಳ ನೆನಪಿನ ಶಕ್ತಿ ಕಡಿಮೆಯಾಗಬಹುದು ಆದರೆ ಇದಕ್ಕೆ ಮನೆಯಲ್ಲೇ ಸುಲಭ ಉಪಾಯವಿದೆ. ಡ್ರೈ ಫ್ರೂಟ್ಸ್ ಗಳಾದ ಒಣ ದ್ರಾಕ್ಷಿ, ಬಾದಾಮಿ, ಗೋಡಂಬಿ, ವಾಲ್ ನಟ್ ಇವುಗಳನ್ನು ಸೇವಿಸುವುದರಿಂದ ಮಕ್ಕಳ ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ ಅವುಗಳಲ್ಲಿ ಒಮೆಗಾ ತ್ರಿ, ಕೊಬ್ಬಿನ ಆಮ್ಲವಿದ್ದು ಮೆದುಳು ಚುರುಕಾಗಿ ಕೆಲಸ ಮಾಡಲು ಸಹಾಯಕಾರಿಯಾಗಿದೆ. ಸೊಪ್ಪುಗಳ ಸೇವನೆಯಿಂದ ಮಕ್ಕಳ ಆರೋಗ್ಯ ಉತ್ತಮವಾಗುತ್ತದೆ.
ಪುದೀನಾ ಸೊಪ್ಪಿನ ಪರಿಮಳ ಮಕ್ಕಳ ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ ಅಲ್ಲದೆ ಮೆದುಳು ಚುರುಕಾಗಿ ಕೆಲಸ ಮಾಡುವಂತೆ ಮಾಡುತ್ತದೆ. ಪುದೀನಾ ಟೀ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು. ಪುದೀನಾ ಟಿ ಮಾಡುವುದು ಹೇಗೆಂದರೆ ಎರಡು ಲೋಟ ನೀರನ್ನು ಕುದಿಸಬೇಕು ಕುದಿಯುತ್ತಿರುವಾಗ ಎರಡು ಒಣ ಪುದೀನಾ ಎಲೆಗಳನ್ನು ಹಾಕಿ ಮತ್ತೆ 20 ನಿಮಿಷ ಕುದಿಸಬೇಕು ನಂತರ ಇದಕ್ಕೆ ನಿಂಬೆ ರಸ, ಸ್ವಲ್ಪ ಸಕ್ಕರೆ ಸೇರಿಸಿ ಮಕ್ಕಳಿಗೆ ಕುಡಿಸುವುದರಿಂದ ಅವರ ಮೆದುಳಿಗೆ ಒಳ್ಳೆಯದು. ಅಡುಗೆಗೆ ಶುದ್ಧವಾದ, ನೈಸರ್ಗಿಕ ಕೊಬ್ಬರಿ ಎಣ್ಣೆಯನ್ನು ಬಳಸುವುದರಿಂದ ಮಕ್ಕಳ ಆರೋಗ್ಯಕ್ಕೆ ಒಳ್ಳೆಯದು. ಬಸಳೆ ಸೊಪ್ಪು, ಪಾಲಕ್ ಸೊಪ್ಪನ್ನು ಸೇವಿಸುವುದರಿಂದ ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಕುಂಬಳಕಾಯಿ ಬೀಜದಲ್ಲಿ ಅಮೈನೋ ಆಮ್ಲ ಹೇರಳವಾಗಿದ್ದು ಮಕ್ಕಳ ಮೆದುಳನ್ನು ಚುರುಕುಗೊಳಿಸುತ್ತದೆ. ಒಟ್ಟಿನಲ್ಲಿ ಈ ಎಲ್ಲ ರೀತಿಯ ಆಹಾರವನ್ನು ಮಕ್ಕಳಿಗೆ ಕೊಡುವುದರಿಂದ ಆತಂಕ ಕಡಿಮೆಯಾಗಿ ಅವರ ಮೆದುಳು ಚುರುಕಾಗಿ ತನ್ನ ಕಾರ್ಯವನ್ನು ನಿರ್ವಹಿಸುತ್ತದೆ ಇದರಿಂದ ಏಕಾಗ್ರತೆ, ನೆನಪಿನ ಶಕ್ತಿ ಹೆಚ್ಚುತ್ತದೆ. ಈ ಮಾಹಿತಿಯನ್ನು ಎಲ್ಲರಿಗೂ ತಿಳಿಸಿ.