ಭಾರತದಲ್ಲಿ ಒಂದು ಎಕರೆಗೆ 12-15 ಕ್ವಿಂಟಲ್ ಮೆಕ್ಕೆ ಜೋಳವನ್ನು ಬೆಳೆಯುತ್ತಾರೆ ಆದರೆ ಅಮೇರಿಕ ದೇಶಗಳಲ್ಲಿ ಮೆಕ್ಕೆಜೋಳ ಬೆಳೆದು ಹೆಚ್ಚು ಇಳುವರಿ ಪಡೆಯುತ್ತಾರೆ. ತಾಂತ್ರಿಕ ಬೇಸಾಯ ವಿಧಾನಗಳನ್ನು ಅನುಸರಿಸಿ ಮೆಕ್ಕೆಜೋಳ ಬೆಳೆಯನ್ನು ಬೆಳೆಯುವ ಮೂಲಕ ಅಧಿಕ ಇಳುವರಿ ಪಡೆಯಬಹುದು. ಹಾಗಾದರೆ ತಾಂತ್ರಿಕ ಬೇಸಾಯ ವಿಧಾನಗಳು ಯಾವುವು ಹಾಗೂ ಮೆಕ್ಕೆಜೋಳ ಬೆಳೆಯನ್ನು ಬೆಳೆಯುವಾಗ ಅನುಸರಿಸಬೇಕಾದ ಕ್ರಮಗಳನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಭಾರತದಲ್ಲಿಯೂ ಸರಿಯಾದ ಬೇಸಾಯ ಕ್ರಮವನ್ನು ಅನುಸರಿಸುವ ಮೂಲಕ ಮೆಕ್ಕೆಜೋಳ ಬೆಳೆದು ಅಧಿಕ ಇಳುವರಿ ಪಡೆಯಬಹುದು. ಮೆಕ್ಕೆಜೋಳ ಬೀಜವನ್ನು ಬಿತ್ತುವ ಮೊದಲು ಭೂಮಿಯನ್ನು ಸಿದ್ಧತೆ ಮಾಡಿಕೊಳ್ಳಬೇಕು. ಭೂಮಿಗೆ ಬೇಕಾದಂತಹ ಪೋಷಕಾಂಶಗಳನ್ನು ಒದಗಿಸಬೇಕಾಗುತ್ತದೆ. ಕೊಟ್ಟಿಗೆ ಗೊಬ್ಬರ ಅಥವಾ ರಾಸಾಯನಿಕ ಗೊಬ್ಬರಗಳನ್ನು ಸರಿಯಾದ ಪ್ರಮಾಣದಲ್ಲಿ ಹಾಕಬೇಕಾಗುತ್ತದೆ. ಒಳ್ಳೆಯ ಹೈಬ್ರಿಡ್ ತಳಿಯ ಬೀಜಗಳನ್ನು ಆಯ್ಕೆ ಮಾಡಬೇಕಾಗುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಾಗಿರುವ ಬೀಜಗಳನ್ನು ಆಯ್ಕೆ ಮಾಡಬೇಕಾಗುತ್ತದೆ. ರೋಗ ನಿರೋಧಕ ಶಕ್ತಿ ಹೊಂದಿರುವ ಬೀಜಗಳನ್ನು ಆಯ್ಕೆ ಮಾಡಿಕೊಂಡಾಗ ಕೆಲವು ರೋಗಗಳು ಬರದಂತೆ ತಡೆಯಬಹುದು ಅಲ್ಲದೆ ಮೆಕ್ಕೆ ಜೋಳ ರೋಗಕ್ಕೆ ತುತ್ತಾಗುವ ಸಂಭವ ಕಡಿಮೆ ಇರುತ್ತದೆ ಮತ್ತು ಇಳುವರಿ ಹೆಚ್ಚು ಬರುತ್ತದೆ.

ಬೀಜಗಳನ್ನು ಭೂಮಿಗೆ ಬಿತ್ತುವ ಮೊದಲು ಬೀಜೋಪಚಾರ ಮಾಡಬೇಕು ಮಾರುಕಟ್ಟೆಯಲ್ಲಿ ಸಿಗುವ ಕಾರ್ಬನ್ ಡೈಜಿಮ್ ಪೌಡರ್ ಅನ್ನು ಖರೀದಿಸಿ ಒಂದು ಕೆಜಿ ಬೀಜಕ್ಕೆ 2 ಗ್ರಾಂ ಕಾರ್ಬನ್ ಡೈಜಿಮ್ ಪೌಡರನ್ನು ಸೇರಿಸಿ ಸ್ವಲ್ಪ ನೀರನ್ನು ಹಾಕಿ ಮಿಕ್ಸ್ ಮಾಡಬೇಕು ನಂತರ ಬೀಜಗಳನ್ನು ಬಿತ್ತನೆ ಮಾಡಬೇಕು. ಮೆಕ್ಕೆಜೋಳ ಬೀಜಗಳನ್ನು ಬಿತ್ತುವಾಗ ಒಂದು ಸಾಲಿನಿಂದ ಇನ್ನೊಂದು ಸಾಲಿಗೆ ಎರಡು ಅಡಿ ಅಂತರ ಇರಬೇಕು, ಒಂದು ಗಿಡದಿಂದ ಇನ್ನೊಂದು ಗಿಡಕ್ಕೆ ಒಂದು ಅಡಿ ಅಂತರ ಇರಬೇಕು. ಬೀಜಗಳನ್ನು ಹೆಚ್ಚು ಆಳದಲ್ಲಿ ಬಿತ್ತಬಾರದು ಒಂದರಿಂದ ಎರಡು ಇಂಚು ಆಳದಲ್ಲಿ ಬಿತ್ತಬೇಕು. ಹೆಚ್ಚು ಆಳದಲ್ಲಿ ಬಿತ್ತಿದರೆ ಅದು ಮೊಳಕೆಯೊಡೆಯದೆ ಕೊಳೆತುಹೋಗುತ್ತದೆ. ಮೆಕ್ಕೆಜೋಳದ ಬೀಜಗಳನ್ನು ಬಿತ್ತಿದ ಮೂರು ದಿನಗಳ ಒಳಗೆ ಕಳೆನಾಶಕವನ್ನು ಸಿಂಪಡಿಸಬೇಕು, ಕಳೆಗಳು ಹೆಚ್ಚಿದ್ದರೆ ಮೆಕ್ಕೆಜೋಳದ ಇಳುವರಿ ಕಡಿಮೆಯಾಗುತ್ತದೆ. ಮೆಕ್ಕೆಜೋಳ ಬೀಜಗಳನ್ನು ಬಿತ್ತುವಾಗ 25 ಕೆಜಿ ಯೂರಿಯಾ, 78 ಕೆಜಿ ಡಿಎಪಿ, 50 ಕೆಜಿ ಪೊಟ್ಯಾಷ್, 5 ಕೆಜಿ ಜಿಂಕ್ ಈ ಎಲ್ಲಾ ರಸಗೊಬ್ಬರಗಳನ್ನು ಸೇರಿಸಿ ಹಾಕಬೇಕಾಗುತ್ತದೆ ಇದರಿಂದ ಗಿಡಗಳು ಫಲವತ್ತಾಗಿ ಬೆಳೆಯುತ್ತದೆ.

ಬೀಜ ಬಿತ್ತಿದ ನಾಲ್ಕು ವಾರಗಳ ನಂತರ ಮತ್ತೆ ಒಂದು ಎಕರೆಗೆ 50ಕೆಜಿ ಯೂರಿಯಾ ರಸಗೊಬ್ಬರವನ್ನು ಹಾಕಬೇಕಾಗುತ್ತದೆ. ಬೀಜ ಬಿತ್ತಿದ ಆರರಿಂದ ಏಳು ವಾರಗಳ ನಂತರ ಅಂದರೆ ಹೂವು ಬಿಡುವ ಸಮಯದಲ್ಲಿ ಪ್ರತಿ ಎಕರೆಗೆ 50ಕೆಜಿ ಯೂರಿಯಾ, 20 ಕೆಜಿ ಪೊಟ್ಯಾಷ್ ರಸಗೊಬ್ಬರಗಳನ್ನು ಹಾಕಬೇಕಾಗುತ್ತದೆ ಇದರಿಂದ ಅಧಿಕ ಇಳುವರಿ ಪಡೆಯಬಹುದು. ಮೆಕ್ಕೆಜೋಳಕ್ಕೆ ಅಂಗಮಾರಿ ರೋಗ, ಕಾಂಡಕೊರೆಯುವ ರೋಗ, ಸೈನಿಕ ಹುಳಗಳ ಬಾಧೆ ಕಂಡುಬರುತ್ತದೆ ಇದರಿಂದ ಮೆಕ್ಕೆಜೋಳ ಇಳುವರಿ ಕಡಿಮೆಯಾಗುತ್ತದೆ. ಈ ರೋಗಗಳನ್ನು ತಡೆಗಟ್ಟಲು ಆಳವಾಗಿ ಉಳುಮೆ ಮಾಡಬೇಕಾಗುತ್ತದೆ ಇದರಿಂದ ಸೈನಿಕ ಹುಳುಗಳ ಮೊಟ್ಟೆ ಬಿಸಿಲಿಗೆ ಬಿದ್ದು ಹಾಳಾಗುತ್ತದೆ ಮತ್ತು ಹಕ್ಕಿಗಳು ಹುಳಗಳನ್ನು ತಿನ್ನುತ್ತವೆ. ಕೀಟನಾಶಕವನ್ನು ಸರಿಯಾಗಿ ಸಿಂಪಡಣೆ ಮಾಡಬೇಕು, ಮೆಕ್ಕೆಜೋಳದ ಸುಳಿಯನ್ನು ಸರಿಯಾಗಿ ಕೀಟನಾಶಕದಿಂದ ನೆನೆಸಬೇಕು ಇದರಿಂದ ಸೈನಿಕ ಹುಳಗಳ ಬಾಧೆ ಕಡಿಮೆಯಾಗುತ್ತದೆ ಮತ್ತು ಮೆಕ್ಕೆಜೋಳ ಗಿಡಗಳು ದಷ್ಟಪುಷ್ಟವಾಗಿ ಬೆಳೆದು ಅಧಿಕ ಇಳುವರಿ ಕೊಡುತ್ತದೆ. ತಾಂತ್ರಿಕ ಬೇಸಾಯ ಪದ್ಧತಿಯ ಬಗ್ಗೆ ರೈತರಿಗೆ ತಿಳಿಸುವುದರಿಂದ ಮೆಕ್ಕೆಜೋಳ ಬೆಳೆದು ಅಧಿಕ ಇಳುವರಿ ಪಡೆಯಬಹುದಾಗಿದೆ.

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್
ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!