ರಾಯನ್ ಜನಿಸಿದ ನಂತರ ಸಿನಿಮಾಕ್ಕೆ ಮತ್ತೆ ಎಂಟ್ರಿ ಕೊಡ್ತಾರಾ? ಮೇಘನಾ ರಾಜ್ ಏನ್ ಅಂದ್ರು ನೋಡಿ

0 2

ಸ್ಯಾಂಡಲ್‍ವುಡ್ ನಟಿ ಮೇಘನಾ ರಾಜ್ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ. ಪತಿ ಚಿರಂಜೀವಿ ಸರ್ಜಾ ಹುಟ್ಟುಹಬ್ಬದ ದಿನದಂದೇ ಈ ವಿಚಾರವನ್ನು ಬಹಿರಂಗ ಪಡಿಸುವ ಮೂಲಕ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಯನ್ ಜನಿಸಿದ ನಂತರ ನಾನು ಅಭಿನಯಿಸುತ್ತಿರುವ ಮೊದಲನೇ ಸಿನಿಮಾ ಇದಾಗಿದ್ದು, ಸಿನಿಮಾ ಮಾಡುವುದು ನನಗೆ ಖುಷಿ ನೀಡುತ್ತದೆ. ಇದು ಎಲ್ಲೋ ಒಂದು ಕಡೆ ನನ್ನ ತನವನ್ನು ನಾನು ಎಂಜಾಯ್ ಮಾಡುವಂತಹ ಕ್ಷೇತ್ರವಾಗಿದೆ.

ಕ್ಯಾಮೆರಾ ಮುಂದೆ ನಿಂತುಕೊಳ್ಳುವುದು ನನಗೆ ಹೊಸದೇನಲ್ಲ. ಬಾಲ್ಯದಿಂದಲೂ ನನಗೆ ಸಿನಿಮಾ ಎಂದರೆ ಖುಷಿ ಇದೆ. ಆದರೀಗ ಮತ್ತೆ ಸಿನಿಮಾ ಮಡುವುದು ಒಂದು ದೊಡ್ಡ ಸವಾಲಾಗಿದೆ ಎಂದು ಹೇಳಿದ್ದಾರೆ. ಹಾಗೂ ಇದೇ ಸಂದರ್ಭದಲ್ಲಿ ತನ್ನ ಪತಿ ಚಿರಂಜೀವಿ ಸರ್ಜಾ ಹುಟ್ಟುಹಬ್ಬದ ಬಗ್ಗೆ ಕೂಡಾ ಮಾತನಾಡಿದ್ದು ಅವರೇನು ಹೇಳಿದ್ದಾರೆ? ಎನ್ನುವುದನ್ನು ನೋಡೋಣ.

ಸ್ಯಾಂಡಲ್‍ವುಡ್ ನಟ ಚಿರಂಜೀವಿ ಸರ್ಜಾ ಅವರು ನಮ್ಮೊಂದಿಗೆ ಇದ್ದರೆ ಇಂದಿಗೆ 37ನೇ ವರ್ಷಕ್ಕೆ ಕಾಲಿಡುತ್ತಿದ್ದರು. ಹುಟ್ಟುಹಬ್ಬವನ್ನು ಅವರ ಮುದ್ದಾದ ಕುಟುಂಬದೊಂದಿಗೆ ಆಚರಣೆ ಮಾಡುತ್ತಿದ್ದರು. ಆದರೆ ಅಕಾಲದಲ್ಲಿ ಎಲ್ಲರನ್ನೂ ಅಗಲಿದ ನಟ ಚಿರಂಜೀವಿ ಸರ್ಜಾ ಹುಟ್ಟುಹುಬ್ಬವನ್ನು ಕುಟುಂಬಸ್ಥರು ವಿಭಿನ್ನವಾಗಿ ಆಚರಣೆ ಮಾಡಿದ್ದಾರೆ. ಅಕ್ಟೋಬರ್ 17 ರಂದು ದಿವಂಗತ ನಟ ಚಿರಂಜೀವಿ ಸರ್ಜಾ ಅವರ ಜನ್ಮದಿನದ ಸವಿನೆನಪು. ಚಿರಂಜೀವಿ ಸರ್ಜಾ ನಮ್ಮೊಂದಿಗೆ ಇದ್ದಿದ್ದರೆ, ಅವರ 37ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದರು. ಆದರೆ, ದುರಾದೃಷ್ಟವಶಾತ್ ಚಿರಂಜೀವಿ ಸರ್ಜಾ ನಮ್ಮೊಂದಿಗಿಲ್ಲ. ಚಿರಂಜೀವಿ ಸರ್ಜಾ ದೈಹಿಕವಾಗಿ ಜೊತೆಯಲ್ಲಿಲ್ಲದಿದ್ದರೂ, ಸಿನಿಮಾಗಳ ಮೂಲಕ ಕುಟುಂಬಸ್ಥರು ಹಾಗೂ ಅಭಿಮಾನಿಗಳ ಹೃದಯದಲ್ಲಿ ಜೀವಂತವಾಗಿದ್ದಾರೆ.

ಪತಿ ಚಿರಂಜೀವಿ ಜೊತೆಗಿನ ಫೋಟೋವೊಂದನ್ನು ಮೇಘನಾ ರಾಜ್ ಹಂಚಿಕೊಂಡು, “ದುಃಖದ ಕೊನೆಯಲ್ಲಿ ವಿಜಯ ಇರುತ್ತದೆ. ಕೆಲವೊಂದು ವಿಷಯ ಸಾಧಿಸಲು ನಾವು ಹೋಗುವ ಮಾರ್ಗವೆಲ್ಲ ಸುಲಭವಾಗಿರೋದಿಲ್ಲ. ಎಲ್ಲ ಭರವಸೆಗಳು ಮಸುಕಾದಾಗ, ಜೀವನ ಇನ್ನೂ ಇದ್ದಾಗ ಸುರಂಗದ ಕೊನೆಯಲ್ಲಿ ಯಾವಾಗಲೂ ಬೆಳಕು ಇರುತ್ತದೆ. ನನಗೆ ಆ ಬೆಳಕು ಚಿರು. ನನ್ನ ಪಯಣ ಆ ಬೆಳಕಿನೆಡೆಗೆ ಹೋಗಿ ಉಜ್ವಲವಾಗಲು ನೋಡುತ್ತದೆ. ಹ್ಯಾಪಿ ಬರ್ತಡೇ ಮೈ ಹಸ್ಬೆಂಡ್, ಮೈ ಲೈಫ್, ಮೈ ಲೈಟ್” ಎಂದು ಜನ್ಮದಿನದ ಶುಭಾಶಯ ತಿಳಿಸಿದ್ದಾರೆ.

ಇನ್ನು ಇದೇ ಸಂದರ್ಭದಲ್ಲಿ ಸ್ಯಾಂಡಲ್‍ವುಡ್ ನಟಿ ಮೇಘನಾ ರಾಜ್ ಅವರು ಚಿರು ಹುಟ್ಟುಹಬ್ಬದ ದಿನದಂದು ಸುದ್ದಿಗೋಷ್ಠಿಯಲ್ಲಿ, ತಮ್ಮ ಹೊಸ ಸಿನಿಮಾ ಕುರಿತಾಗಿ ಕೆಲವು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಈ ಸಿನಿಮಾವನ್ನು ಪನ್ನಗಾಭರಣ ಪ್ರೊಡ್ಯೂಸ್ ಮಾಡುತ್ತಿದ್ದಾರೆ. ಮೇಘನಾ ರಾಜ್ ಯಾವಾಗ ಸಿನಿಮಾ ಮಾಡುತ್ತಾರೆ? ಎಂದು ಕೇಳುತ್ತಿದ್ದ ಅಭಿಮಾನಿಗಳ ಪ್ರಶ್ನೆಗೆ ಮೇಘನಾ ರಾಜ್ ಉತ್ತರವನ್ನು ನೀಡಿದ್ದಾರೆ. ಪತಿಯ ಜನ್ಮ ದಿನದಂದೇ ಮತ್ತೆ ಬಣ್ಣ ಹಚ್ಚುತ್ತಿರುವ ಖುಷಿಯನ್ನು ಹಂಚಿಕೊಂಡಿದ್ದಾರೆ.

ನಾನು ಈ ಕಥೆಯನ್ನು ಪ್ರೊಡ್ಯೂಸ್ ಮಾಡುತ್ತಿದ್ದೇನೆ. ನೀನು ಈ ಸಿನಿಮಾದಲ್ಲಿ ನಟಿಸುತ್ತೀಯ ಎಂದು ಕೇಳಿದಾಗ ನನಗೆ ತುಂಬಾ ಸಂತೋಷವಾಯಿತು. ಚಿರು ಅವರು ಮಾಸ್ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಅವರಿಗೆ ಥ್ರಿಲ್ಲರ್ ಸಿನಿಮಾ ಎಂದರೆ ತುಂಬಾ ಇಷ್ಟವಾಗುತ್ತಿತ್ತು. ಈ ಸಿನಿಮಾ ಕಥೆಯನ್ನು ಕೇಳಿದಾಗ ಚಿರು ಈ ಕಥೆಯನ್ನು ಇಷ್ಟ ಪಡುತ್ತಾನೆ ಎಂದು ನನಗೆ ಗೊತ್ತು, ಹೀಗಾಗಿ ಸಿನಿಮಾ ಮಾಡಲು ಒಪ್ಪಿಕೊಂಡಿದ್ದೇನೆ ಎಂದು ಹೇಳಿದ್ದಾರೆ. ಈ ಒಂದು ವರ್ಷ ತನ್ನ ಕುಟುಂಬ, ಸ್ನೇಹಿತರ ಬಳಗಕ್ಕೆ ತುಂಬಾ ಕಷ್ಟದ ದಿನಗಳಾಗಿತ್ತು. ನನಗೆ ಯಾವಾಗ ಸಿನಿಮಾ ಮಾಡುತ್ತೀರಾ ಎಂದು ಹಲವು ಮಂದಿ ಕೇಳುತ್ತಿದ್ದರು. ಆದರೆ ಸಿನಿಮಾ ಮಾಡಲು ಸಮಯ ಇದೆ. ನಾನು ಎಲ್ಲವನ್ನೂ ಮರೆತು ಸಿನಿಮಾ ಮಾಡಬೇಕಿತ್ತು.

ನಾನು ಒಂದು ದಿನ ಜಾಹೀರಾತು ಚಿತ್ರೀಕರಣ ಮುಗಿಸಿದೆ. ಆಗ ನನಗೆ ಪನ್ನಾಗಾಭರಣ ಹೇಗಿತ್ತು ಶೂಟಿಂಗ್ ಎಂದು ಕೇಳಿದ್ದರು. ಆಗ ಅದಕ್ಕೆ ಮೇಘನಾ ತನಗೆ ಒಂದು ಸಹಜ ಅನುಭವ ಬಂದಿರುವ ಹಾಗೆ ಆಗಿದೆ ಎಂದು. ಆಗ ಅವರು ಒಂದು ಸಿನಿಮಾ ಕಥೆ ಇದೆ ಎಂದು ಹೇಳಿದರು. ಸಿನಿಮಾ ಕಥೆಯನ್ನು ಕೇಳಿ ನಾನು ಅರ್ಧ ಗಂಟೆ ಶಾಕ್‍ನಲ್ಲಿದ್ದೆ. ಒಂದು ಬಿರುಗಾಳಿ ಬಂದು ಹೋಗಿರುವ ಹಾಗೆ ಈ ಸಿನಿಮಾ ಕಥೆ ನನಗೆ ಅನುಭವವನ್ನು ನೀಡಿತ್ತು ಎಂದು ಸಿನಿಮಾ ಕಥೆಯ ಕುರಿಯಾಗಿ ಮೇಘನಾ ಮಾತನಾಡಿದ್ದಾರೆ. ದಸರಾ ಹಬ್ಬ, ಚಿರು ಹುಟ್ಟುಹಬ್ಬ ಆಗಿರುವುದರಿಂದ ನನಗೆ ವಿಶೇಷ ದಿನವಾಗಿದೆ.

ಹೀಗಾಗಿ ನಾವು ಈ ಪ್ರತಿ ವರ್ಷ ಚಿರು ಹುಟ್ಟುಹಬ್ಬವನ್ನು ಆಚರಣೆ ಮಾಡುತ್ತೇವೆ, ಯಾರು ಏನೇ ಅಂದ್ರೂ ಕೂಡಾ ನಾವು ಸೆಲೆಬ್ರೆಟ್ ಮಾಡುತ್ತೇವೆ. ಭಾನುವಾರ ಚಿರು ಅವರಿಗೆ ತುಂಬಾ ಇಷ್ಟವಾಗುವ ದಿನವಾಗಿದೆ. ಸಂಡೇ ಖುಷಿ ಪಡುತ್ತಿದ್ದರು, ನೆಮ್ಮದಿಯಾಗಿ ಇರುತ್ತಿದ್ದರು. ಹೀಗಾಗಿ ನಾವು ಭಾನುವಾರ ಹೊಸ ದಿನದ ಆರಂಭವಾಗುವ ಈ ವಾರದಂದೇ ಒಳ್ಳೆ ಕೆಲಸಕ್ಕೆ ಕೈ ಹಾಕುತ್ತಿದ್ದೇವೆ.

ಪನ್ನಗಾಭರಣ ಅವರ ತಂದೆ ನಾಗಾಭರಣ ಅವರು ಮತ್ತು ನಮ್ಮ ತಂದೆ ಸುಂದರ್ ರಾಜ್ ಅವರು ಹಲವು ಸಿನಿಮಾಗಳನ್ನು ಮಾಡಿದ್ದಾರೆ, ಅವರ ಮಕ್ಕಳಾಗಿರುವ ನಾವು ಅವರಂತೆ ನಾವು ಹಿಟ್ ಸಿನಿಮಾ ನೀಡಲು ಬಯಸುತ್ತೇವೆ. ಪನ್ನಾ ನನಗೋಸ್ಕರ ಈ ಕಥೆಯನ್ನು ಮಾಡಿದ್ದಾರೆ. ವಾಸುಕಿ ವೈಭವ್ ಅವರ ಸಂಗೀತದ ಇರಲಿದೆ ಎಂದು ಸಿನಿಮಾ ಕುರಿತಾಗಿ ಮಾತನಾಡಿದ್ದಾರೆ.

ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave A Reply

Your email address will not be published.