ಕನ್ನಡ ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಪಡೆದಿರುವ ನಟಿ ಮಯೂರಿ ಅವರು ಸಂಸಾರದ ಜೀವನಕ್ಕೆ ಕಾಲಿಟ್ಟಿದ್ದಾರೆ. ಇವರು ಕಲರ್ಸ್ ಕನ್ನಡದಲ್ಲಿ ಮೊದಲು ಬರುತ್ತಿದ್ದ ಅಶ್ವಿನಿ ನಕ್ಷತ್ರ ಎಂಬ ಧಾರಾವಾಹಿಯಲ್ಲಿ ನಾಯಕಿಯ ಪಾತ್ರವನ್ನು ವಹಿಸಿದ್ದರು. ಹಾಗೆಯೇ ವಿಜಯ್ ಸೂರ್ಯ ಅವರ ಜೊತೆ ಒಂದು ಸಿನೆಮಾ ಕೂಡ ಮಾಡಿದ್ದಾರೆ. ನಟ ಶರಣ್ ಅವರ ಜೊತೆ ನಟರಾಜ್ ಟಾಕೀಸ್ ಎಂಬ ಸಿನೆಮಾವನ್ನು ಮಾಡಿದ್ದಾರೆ. ಆದ್ದರಿಂದ ನಾವು ಇಲ್ಲಿ ಅವರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಕಳೆದ ಜೂ 12 2020ರಂದು ಮಯೂರಿ ಮದುವೆ ನಡೆದಿತ್ತು. ಲಾಕ್‌ಡೌನ್ ಟೈಮ್‌ನಲ್ಲಿ ಬೆಂಗಳೂರಿನ ಜೆಪಿ ನಗರದ ಶ್ರೀ ತಿರುಮಲಗಿರಿ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಮಯೂರಿ ಹಾಗೂ ಅರುಣ್ ಕಲ್ಯಾಣ ನಡೆದಿತ್ತು. ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಗೆಳೆಯ ಅರುಣ್‌ ಜೊತೆ ಮಯೂರಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಲಾಕ್‌ಡೌನ್ ಇದ್ದಿದ್ದರಿಂದ ಈ ಮದುವೆಗೆ ಹೆಚ್ಚು ಜನರು ಬಂದಿರಲಿಲ್ಲ. ಇನ್ನು ಪ್ರೀತಿ ವಿಚಾರವನ್ನು ಕೂಡ ಅವರು ಗುಟ್ಟಾಗಿ ಇಟ್ಟಿದ್ದರು. ಮಯೂರಿ ಅವರಿಗೆ ಶಾಸ್ತ್ರೋಕ್ತವಾಗಿ ಸೀಮಂತ ಕೂಡ ಮಾಡಲಾಗಿದೆ. ಸ್ಟಾರ್ ಸುವರ್ಣ ವಾಹಿನಿಯ ಕಾರ್ಯಕ್ರಮದಲ್ಲಿ ಸ್ಯಾಂಡಲ್‌ವುಡ್‌ನ ಹಿರಿಯ ನಟಿಯರು ಮಯೂರಿಗೆ ಸೀಮಂತ ಮಾಡಿದ್ದರು.

ಗರ್ಭಿಣಿಯಾದ ನಂತರವೂ ಮಯೂರಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದರು. ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಸಂದರ್ಶನಗಳನ್ನು ಕೂಡ ನೀಡಿದ್ದಾರೆ. ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದ ಮಯೂರಿ ಹಬ್ಬಗಳು, ವಿಶೇಷ ದಿನಗಳನ್ನು ಕೂಡ ಅದ್ದೂರಿಯಾಗಿ ಖುಷಿಯಿಂದ ಆಚರಿಸಿದ್ದರು. ಮಯೂರಿ ಅವರು ಮಾರ್ಚ್ 15 2021ರಂದು ಮಗುವಿಗೆ ಜನ್ಮ ನೀಡಿದ್ದಾರೆ. ಇತ್ತೀಚೆಗೆ ಅವರು ಅನೇಕ ಫೋಟೋಶೂಟ್ ಕೂಡ ಮಾಡಿಸಿಕೊಂಡಿದ್ದರು. ಅಶ್ವಿನಿ ನಕ್ಷತ್ರ ಧಾರಾವಾಹಿ ನಟಿ ಮಯೂರಿ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮಾರ್ಚ್ 15 2021ರಂದು ಅವರು ಗಂಡು ಮಗುವಿನ ತಾಯಿಯಾಗಿದ್ದಾರೆ.

ಈ ಖುಷಿಯ ಸುದ್ದಿಯನ್ನು ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಮೂಲಕ ತಿಳಿಸಿದ್ದಾರೆ. ಅನೇಕರು ಮಯೂರಿ ಹಾಗೂ ಅರುಣ್ ದಂಪತಿಗೆ ಶುಭಾಶಯ ತಿಳಿಸಿದ್ದಾರೆ.ಪಕ್ಕಾ ಮಾಡರ್ನ್ ಸ್ಟೈಲ್‌ನಲ್ಲಿ ಹಾಗೂ ಟ್ರೆಡಿಶನಲ್ ಆಗಿ ಕೂಡ ಮಯೂರಿ ಫೋಟೋಶೂಟ್ ಮಾಡಿಸಿದ್ದರು. ಈ ಫೋಟೋಗಳು ಎಲ್ಲರ ಗಮನಸೆಳೆದಿದ್ದವು. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ಅವರು ಆಗಾಗ ತಾಯ್ತನದ ಬಗ್ಗೆ ಮಾತನಾಡುತ್ತಿದ್ದರು. ಹಾಗೆಯೇ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇನ್ನು ಮುಂಬರಲಿರುವ ಮಗುವಿನ ಆರೈಕೆ ಬಗ್ಗೆ ಕೂಡ ಕೆಲ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದರು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!