ದ್ವಾದಶ ರಾಶಿಗಳಲ್ಲಿ ಪ್ರತಿಯೊಂದು ರಾಶಿಯ ಭವಿಷ್ಯ ವಿಭಿನ್ನವಾಗಿರುತ್ತದೆ. ಒಂದೊಂದು ರಾಶಿಯಲ್ಲಿ ಜನಿಸಿದವರು ತಮ್ಮದೆ ಗುಣ ಸ್ವಭಾವ, ಭವಿಷ್ಯವನ್ನು ಹೊಂದಿರುತ್ತದೆ. ಅದರಂತೆ ಮಿಥುನ ರಾಶಿಯವರು ಮೆ ತಿಂಗಳಿನಲ್ಲಿ ಯಾವ ರೀತಿಯ ಶುಭ, ಅಶುಭ ಫಲಗಳನ್ನು ಪಡೆಯುತ್ತಾರೆ ಎಂದು ಈ ಲೇಖನದ ಮೂಲಕ ತಿಳಿಯೋಣ.
ಮೆ 14 ಮತ್ತು 15 ರಂದು ರವಿ ವೃಷಭ ರಾಶಿಗೆ ಪ್ರವೇಶ ಮಾಡುತ್ತಾನೆ. ಮೇ 17 ರಂದು ಕುಜ ಮೀನ ರಾಶಿಗೆ ಪ್ರವೇಶ ಮಾಡುತ್ತಾನೆ. ಮೆ 23 ರಂದು ಶುಕ್ರ ಮೇಷ ರಾಶಿಗೆ ಪ್ರವೇಶ ಮಾಡುತ್ತಾನೆ. ಗ್ರಹಗಳ ಸ್ಥಾನ ಬದಲಾವಣೆಯಿಂದ ಮೆ ತಿಂಗಳಿನಲ್ಲಿ ಮಿಥುನ ರಾಶಿಯವರಿಗೆ ಅಶುಭ ಫಲಗಳು ದೊರೆಯಲಿದೆ. ರಾಶ್ಯಾಧಿಪತಿ ಬುಧ ವ್ಯಯ ಭಾಗದಲ್ಲಿ ಬರುತ್ತಾನೆ ಆಗ ದೇಹಾಲಸ್ಯ ಸೋಮಾರಿತನ ಬರುತ್ತದೆ, ಕೆಲಸದಲ್ಲಿ ಆಸಕ್ತಿ ಇರುವುದಿಲ್ಲ, ಯಾವಾಗಲೂ ಕಲ್ಪನಾ ಲೋಕದಲ್ಲಿ ವಿಹರಿಸುವುದು. ಲೈಂಗಿಕ ಆಸಕ್ತಿ ಹೆಚ್ಚಾಗಿರುತ್ತದೆ, ಬುಧನ ಸ್ಥಾನ ಬದಲಾವಣೆ ಆಗುವವರೆಗೆ ಇದೆ ರೀತಿ ಆಗುತ್ತದೆ.
ನಮ್ಮ ಜೀವನ ಧನಾತ್ಮಕ ಹಾಗೂ ಋಣಾತ್ಮಕ ಸಮ್ಮಿಲನ. ಸ್ವಲ್ಪ ಮಟ್ಟಿಗೆ ಮಕ್ಕಳ ಅನಾರೋಗ್ಯ ಸಮಸ್ಯೆ ಕಾಡುತ್ತದೆ. 8 ವರ್ಷದ ಒಳಗಿನ ಮಕ್ಕಳಿಗೆ ಅನಾರೋಗ್ಯ ಕಾಡುತ್ತದೆ. ತಾಯಿಯ ಅನಾರೋಗ್ಯ ಸಮಸ್ಯೆ ಕಂಡುಬರುತ್ತದೆ, ಮಾನಸಿಕವಾಗಿ ಕುಗ್ಗಿಹೋಗುತ್ತಾರೆ. ಕುಜ ಶನಿಯಿಂದ ಎಲ್ಲ ಕೆಲಸಗಳು ಅರ್ಧದಲ್ಲಿ ನಿಂತು ಹೋಗುತ್ತದೆ. ಮಿಥುನ ರಾಶಿಗೆ ಹನ್ನೊಂದನೆ ಮನೆಯ ರಾಹು ದುಶ್ಚಟಗಳಿಗೆ ಕಾರಣವಾಗುತ್ತದೆ ಜೊತೆಗೆ ಸುಲಭವಾಗಿ ಹಣ ಮಾಡಬೇಕು ಎನ್ನುವುದು, ಇಂದಿನ ದಿನಗಳಲ್ಲಿ ಆನಲೈನ್ ನಲ್ಲಿ ಹಣ ಗಳಿಸಿ ಎಂಬುದನ್ನು ನೋಡುತ್ತೇವೆ ಆನಲೈನ್ ನಲ್ಲಿ ಹಣ ಗಳಿಸುವುದು ಯಾರೂ ಕಷ್ಟ ಪಡುವ ಅಗತ್ಯವಿರಲಿಲ್ಲ. ರೈತರು, ಜವಾನ ಪ್ರತಿಯೊಬ್ಬರೂ ಕಷ್ಟ ಪಡಬೇಕು.
ಭೂಮಿಯ ಮೇಲೆ ಪ್ರತಿಯೊಬ್ಬ ವ್ಯಕ್ತಿ ಕಷ್ಟ ಪಡುತ್ತಾನೆ. ಪ್ರತಿಯೊಬ್ಬನೂ ಸಂಪಾದನೆ ಮಾಡುವಾಗ ಬೆವರು ಹರಿಸುತ್ತಾನೆ. ಕೆಲವರು ಬಾಯಿಗೆ ಬಂದ ಹಾಗೆ ಮಾತನಾಡುತ್ತಾರೆ ಅವರಿಗೆ ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇರುವುದಿಲ್ಲ. ಹೊಸದಾಗಿ ಮಿಥುನ ರಾಶಿಯವರು ವ್ಯಾಪಾರ, ವ್ಯವಹಾರ ಪ್ರಾರಂಭಿಸುವುದಾದರೆ ಜಾತಕಗಳನ್ನು ತೋರಿಸಿ ಪ್ರಾರಂಭಿಸಿ. ಮಿಥುನ ರಾಶಿಯ ವಿದ್ಯಾರ್ಥಿಗಳಿಗೆ ಜಾಗ್ರತೆಯಿಂದ ಇರಬೇಕು. ವಿದ್ಯಾಭ್ಯಾಸದಲ್ಲಿ ಹಿನ್ನಡೆ ಕಾಣಿಸುತ್ತದೆ.
ಉನ್ನತ ವಿದ್ಯಾಭ್ಯಾಸ ಕ್ಕೆ ಹೋಗುವ ವಿದ್ಯಾರ್ಥಿಗಳು ಜಾಗ್ರತೆಯಿಂದ ಇರಬೇಕು. ಮಹಿಳೆಯರಿಗೆ ಈ ತಿಂಗಳು ಅಷ್ಟೊಂದು ಸೂಕ್ತ ಸಮಯವಲ್ಲ. ಮಿಥುನ ರಾಶಿಯವರು ಪ್ರತಿನಿತ್ಯ ಲಲಿತಾ ಸಹಸ್ರನಾಮ ಪಾರಾಯಣ ಮಾಡಬೇಕು, ಬೆಳಗ್ಗೆ 3-30 ಯಿಂದ ಸಂಜೆ 5 ಗಂಟೆಯ ಒಳಗೆ ಎದ್ದು ಸ್ನಾನ ಮಾಡಿ ಲಲಿತಾ ಸಹಸ್ರನಾಮ ಓದಿ ದೇವಿಯ ಧ್ಯಾನ ಮಾಡಬೇಕು. ಮಿಥುನ ರಾಶಿಯವರು ನೆಮ್ಮದಿಯಿಂದ ಇರಬೇಕು ಎಂದಾದರೆ ದೇವರ ಧ್ಯಾನ ಮಾಡಬೇಕು. ಈ ಮಾಹಿತಿಯನ್ನು ಮಿಥುನ ರಾಶಿಯವರಿಗೆ ತಪ್ಪದೇ ತಿಳಿಸಿ.