ನಾಯಿಕೊಡೆ ಎಂದೂ ಕರೆಯಲ್ಪಡುವ ಅಣಬೆಯನ್ನು ಸೇವಿಸುವುದರಿಂದ ಆಗುವ ಆರೋಗ್ಯಕರ ಪ್ರಯೋಜನಗಳನ್ನು ಈ ಲೇಖನದ ಮೂಲಕ ತಿಳಿಯೋಣ.
ಕೆಲವು ಸೂಪರ್ ಫುಡ್ ಗಳು ನಿಸರ್ಗದಲ್ಲಿ ಬೆಳೆಯುತ್ತದೆ ಅವುಗಳಲ್ಲಿ ಅಣಬೆಯು ಒಂದು. ಮೊದಲು ಅಣಬೆಯು ಹುತ್ತ, ಹೊಲ, ಗದ್ದೆಯ ಬಳಿ ತನ್ನಷ್ಟಕ್ಕೆ ತಾನೆ ಬೆಳೆಯುತ್ತಿತ್ತು. ಕೆಲವು ವರ್ಷಗಳಿಂದ ತಂತ್ರಜ್ಞಾನ ಉಪಯೋಗಿಸಿ ಕೃತಕವಾಗಿ ಅಣಬೆಗಳನ್ನು ಬೆಳೆಯಲಾಗುತ್ತದೆ. ಅಣಬೆಗಳು ಹೇಗೆ ಬೆಳೆದರೂ ಅಪಾರವಾದ ಪ್ರೋಟೀನ್ ಗಳನ್ನು, ಖನಿಜಾಂಶಗಳನ್ನು, ವಿಟಮಿನ್ಸ್ ಗಳನ್ನು, ಅಮೈನೋ ಆಮ್ಲಗಳನ್ನು, ಆಂಟಿ ಆಕ್ಸಿಡೆಂಟ್ ಗಳನ್ನು ಹೊಂದಿದೆ. ಅಣಬೆಯನ್ನು ಪ್ರತಿದಿನ ಸೇವಿಸುವುದರಿಂದ ಆರೋಗ್ಯಕ್ಕೆ ಒಳ್ಳೆಯದಾಗುತ್ತದೆ.
ಅಣಬೆಗಳನ್ನು ಸೇವಿಸುವುದರಿಂದ ದೇಹಕ್ಕೆ ಅನೇಕ ಪೋಷಕಾಂಶಗಳು ದೊರೆಯುತ್ತದೆ. ಇವು ಪೊಟ್ಯಾಷಿಯಂ ಹಾಗೂ ವಿಟಮಿನ್ ಡಿ ಯ ಅತ್ಯುತ್ತಮ ಮೂಲವಾಗಿದೆ. ಅಣಬೆಯನ್ನು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಅಲ್ಲದೇ ಅಣಬೆಗಳು ಕ್ಯಾನ್ಸರ್ ಇನ್ನಿತರ ಮಾರಕ ಖಾಯಿಲೆಗಳಿಂದ ದೇಹವನ್ನು ರಕ್ಷಿಸುತ್ತದೆ, ಅಣಬೆ ವೈರಸ್ ನಿಂದಲೂ ದೇಹವನ್ನು ರಕ್ಷಣೆ ಮಾಡುತ್ತದೆ. ದೇಹದಲ್ಲಿನ ರಿಪೇರಿಯನ್ನು ಕೋಶಗಳೇ ಸ್ವತಃ ರಿಪೇರಿ ಮಾಡುವಂಥ ಆರೋಗ್ಯವನ್ನು ಅಣಬೆಗಳು ನೀಡುತ್ತವೆ. ಅಣಬೆಗಳು ಅಧಿಕ ಪ್ರಮಾಣದಲ್ಲಿ ವಿಟಮಿನ್ ಡಿ ಯನ್ನು ಹೊಂದಿರುವುದರಿಂದ ದೇಹಕ್ಕೆ ಬೇಕಾದ ವಿಟಮಿನ್ ಡಿ ದೊರೆಯುತ್ತದೆ. ಅಣಬೆಗಳು ಆಂಟಿ ಆಕ್ಸಿಡೆಂಟ್ ಹೊಂದಿರುವುದರಿಂದ ಅವು ದೇಹವನ್ನು ಕ್ಯಾನ್ಸರ್, ಹೃದ್ರೋಗ ಮುಂತಾದ ಖಾಯಿಲೆಯಿಂದ ರಕ್ಷಿಸುತ್ತದೆ.
ಅಣಬೆ ಸೇವನೆಯಿಂದ ದೇಹಕ್ಕೆ ಕಬ್ಬಿಣ ಅಂಶ ದೊರೆತು ಹಿಮೋಗ್ಲೋಬಿನ್, ಕೆಂಪು ರಕ್ತ ಕಣಗಳು ಹೆಚ್ಚಾಗುತ್ತದೆ. ಅಣಬೆಯು ದೇಹದ ಎಲ್ಲಾ ಭಾಗಗಳಿಗೆ ಆಮ್ಲಜನಕ ದೊರೆಯುವಂತೆ ಮಾಡುತ್ತದೆ ಅಲ್ಲದೇ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ಅಣಬೆಯಲ್ಲಿ ವಿಟಮಿನ್ ಬಿ ಇರುವುದರಿಂದ ದೇಹಕ್ಕೆ ಶಕ್ತಿ ಕೊಡುತ್ತದೆ ಅಲ್ಲದೇ ದೇಹದ ಅಂಗಾಂಗಗಳು ಆಕ್ಟೀವ್ ಆಗಿ ಕೆಲಸ ಮಾಡುವಂತೆ ಮಾಡುತ್ತದೆ.
ಬಿಳಿ ಅಣಬೆಗಳು ಕ್ಯಾಲ್ಶಿಯಂ ಹೊಂದಿರುವುದರಿಂದ ಮೂಳೆಗಳ ಆರೋಗ್ಯವನ್ನು ಹೆಚ್ಚಿಸುತ್ತದೆ. ನಿಯಮಿತವಾಗಿ ಅಣಬೆಯನ್ನು ಸೇವಿಸುತ್ತಾ ಬಂದರೆ ಮೂಳೆಗೆ ಸಂಬಂಧಿಸಿದ ಸಮಸ್ಯೆ ದೂರವಾಗುತ್ತದೆ. ಬಿಳಿ ಅಣಬೆಗಳು ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ನಿಯಂತ್ರಣದಲ್ಲಿಟ್ಟು ಮಧುಮೇಹವನ್ನು ನಿಯಂತ್ರಿಸುತ್ತದೆ. ಅಣಬೆಗಳನ್ನು ಸೇವಿಸುವುದರಿಂದ ರಕ್ತದೊತ್ತಡವನ್ನು ಕಡಿಮೆಮಾಡುತ್ತದೆ ಮತ್ತು ಚರ್ಮ ಹಾಗೂ ಕೂದಲಿನ ಆರೋಗ್ಯವನ್ನು ಹೆಚ್ಚಿಸುತ್ತದೆ. ಅಣಬೆಯನ್ನು ಸೇವಿಸುವುದರಿಂದ ಮುಖದಲ್ಲಿನ ಮೊಡವೆಗಳು ದೂರವಾಗಿ ಮುಖದ ಸೌಂದರ್ಯ ಹೆಚ್ಚಾಗುತ್ತದೆ. ಅಣಬೆಯ ಸೇವನೆಯಿಂದ ಬಹಳ ಪ್ರಯೋಜನಗಳು ಇರುವುದರಿಂದ ಅಣಬೆಯನ್ನು ಸೇವಿಸುವುದು ಉತ್ತಮ.