Marriage life of Taurus and Scorpio ವೈವಾಹಿಕ ಜೀವನ ಎನ್ನುವುದು ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲೂ ವಿಶೇಷ ಬದಲಾವಣೆಯನ್ನು ತರುವುದು. ಪರಸ್ಪರ ಪ್ರೀತಿ, ಗೌರವ ಹಾಗೂ ಹೊಂದಾಣಿಕೆಯೊಂದಿಗೆ ಜೀವನ ನಿರ್ವಹಿಸಬೇಕಾಗುವುದು. ಹಾಗಾಗಿ ಹಿಂದೂ ಧರ್ಮದಲ್ಲಿ ವಿವಾಹದ ಹೊಂದಾಣಿಕೆಯನ್ನು ಕುಂಡಲಿಯ ಸಂಯೋಜನೆಯನ್ನು ನೋಡಿ ನಿರ್ಧರಿಸಲಾಗುತ್ತದೆ.
ಹಾಗಾದರೆ ವೃಷಭ (Taurus) ಮತ್ತು ವೃಶ್ಚಿಕ (Scorpio) ರಾಶಿಯವರ ದಾಂಪತ್ಯ ಜೀವನ ಹೇಗಿರುತ್ತದೆ? ಪ್ರೀತಿಯ ಜೀವನ ಯಶಸ್ವಿಯಾಗಿ ಮುಂದುವರಿಯುವುದೇ? ಅಥವಾ ಕಾಲ ಚಕ್ರದೊಂದಿಗೆ ಕಹಿಯಾದ ಸಂಗತಿಯೊಂದಿಗೆ ಹೊರ ಹೊಮ್ಮುವುದೇ? ಎನ್ನುವುದನ್ನು ತಿಳಿಯೋಣ.
ವ್ಯಕ್ತಿ ತನ್ನ ಸ್ವಭಾವಕ್ಕಿಂತ ವಿರೋಧ ಸ್ವಭಾವದವರನ್ನು ಹೆಚ್ಚು ಆಕರ್ಷಿಸುತ್ತಾನೆ ಎಂದು ಹೇಳಲಾಗುವುದು. ಅಂತೆಯೇ ವೃಷಭ ಮತ್ತು ವೃಶ್ಚಿಕ ರಾಶಿಯವರು ಪರಸ್ಪರ ವಿರೋಧ ಗುಣಗಳನ್ನು ಹೊಂದಿರುತ್ತವೆ. ಆದರೆ ಪರಸ್ಪರ ಹೆಚ್ಚು ಆಕರ್ಷಣೆಗೆ ಒಳಗಾಗುತ್ತಾರೆ ಎಂದು ಹೇಳಲಾಗುವುದು. ವೃಶ್ಚಿಕ ರಾಶಿಯವರು ಪ್ರಾಯೋಗಿಕವಾಗಿ ಜೀವನವನ್ನು ಕಾಣುತ್ತಾರೆ. ವೃಷಭ ರಾಶಿಯವರು ಆದರ್ಶ ಪ್ರೇಮಿತಯಂತೆ ಸದಾ ಸಂಗಾತಿಯನ್ನು ಪ್ರೀತಿಸುತ್ತಾರೆ.
ಎರಡು ರಾಶಿಯವರು ಸಾಕಷ್ಟು ಕೋಪ ಮತ್ತು ನಾಟಕಗಳನ್ನು ಮಾಡುತ್ತವೆಯಾದರೂ ನಿತ್ಯದ ಸಮಸ್ಯೆಗಳನ್ನು ಹಾಗೂ ಜೀವನವನ್ನು ಹೊಂದಾಣಿಕೆಯ ಮೂಲಕ ನಿರ್ವಹಿಸುತ್ತಾರೆ ಎಂದು ಹೇಳಲಾಗುವುದು. ವೃಷಭ ರಾಶಿಯವರು ಭೂಮಿಯ ಚಿಹ್ನೆಯನ್ನು ಹೊಂದಿರುತ್ತಾರೆ. ಸೂಕ್ಷ್ಮ ಹಾಗೂ ಪ್ರಾಮಾಣಿಕ ವ್ಯಕ್ತಿಗಳಾದ ಇವರ ಭಾವನೆಗಳು ಹಾಗೂ ಪ್ರೀತಿಯು ಪರಿಶುದ್ಧವಾಗಿ ಇರುತ್ತವೆ.
ಇವರು ತಮ್ಮ ಸಂಗಾತಿಗೆ ಪರಿಶುದ್ಧವಾದ ಪ್ರೀತಿಯನ್ನು ತೋರುವುದರ ಜೊತೆಗೆ ಅವರನ್ನು ಹೆಚ್ಚು ಉತ್ಸಾಹದಲ್ಲಿ ಇರಿಸುತ್ತದೆ. ಇವರು ತೋರಿಸುವ ಪ್ರತಿಯೊಂದು ಪ್ರೀತಿಯಲ್ಲೂ ಪಾರದರ್ಶಕತೆಯನ್ನು ಕಾಣಬಹುದು. ವೃಶ್ಚಿಕ ರಾಶಿಯವರು ತಮ್ಮ ಭಾವನೆಗಳನ್ನು ಅಷ್ಟು ಸುಲಭವಾಗಿ ವ್ಯಕ್ತ ಪಡಿಸುವುದಿಲ್ಲ. ಪ್ರೀತಿಯನ್ನು ಮನಸ್ಸಿನಲ್ಲಿಯೇ ಇಟ್ಟುಕೊಳ್ಳುವರು. ಪ್ರೀತಿಯನ್ನು ಮುಚ್ಚಿಡುವ ಇವರ ಸ್ವಭಾವದಿಂದ ಬಹುತೇಕ ಸಂದರ್ಭದಲ್ಲಿ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಕಷ್ಟವಾಗುವುದು.
ವೃಷಭ ಹಾಗೂ ವೃಶ್ಚಿಕ ರಾಶಿಯವರ ನಡುವೆ ಇರುವ ಪ್ರೀತಿಯ ಸಂಗತಿಯಲ್ಲಿ ಸಾಕಷ್ಟು ಸಂಗತಿಗಳು ಹೊಂದಾಣಿಕೆ ಕಾಣುತ್ತವೆ. ಇವರಲ್ಲಿ ಇರುವ ಕೆಲವು ಸಕಾರಾತ್ಮಕ ಹಾಗೂ ನಕಾರಾತ್ಮಕ ಗುಣಗಳು ಸಂಬಂಧಗಳ ಮೇಲೆ ಮತ್ತು ಪ್ರೀತಿಯ ಮೇಲೆ ಆಳವಾದ ಪ್ರಭಾವ ಬೀರುವುದು. ಇವರ ಭೌತಿಕ ಗುಣಗಳಲ್ಲಿ ಹೊಂದಾಣಿಕೆ ಕಷ್ಟವಾಗುವುದು. ಇಬ್ಬರ ನಡುವೆಯೂ ಕೆಲವು ವಿಷಯದಲ್ಲಿ ಸ್ವಾಮ್ಯ ಸೂಚಕ ಗುಣಗಳಿರುತ್ತವೆ.
ಅಂತೆಯೇ ಕೆಲವು ವಿಷಯದಲ್ಲಿ ಅಸೂಯೆಯನ್ನು ಹೊಂದುವರು. ಅದು ಕೆಲವೊಮ್ಮೆ ಪ್ರೀತಿಯ ಮೇಲೆ ತಪ್ಪು ಕಲ್ಪನೆಯನ್ನು ಮೂಡಿಸಬಹುದು. ಈ ಎರಡು ರಾಶಿಯವರು ಸ್ಥಿರ ಚಿಹ್ನೆಯನ್ನು ಹೊಂದಿರುವವರಾಗಿರುತ್ತಾರೆ. ಬಹುತೇಕ ಸಂದರ್ಭದಲ್ಲಿ ಇಬ್ಬರೂ ಮೊಂಡು ತನದ ಸ್ವಭಾವವನ್ನು ತೋರುವರು. ಇದರಿಂದ ಪರಸ್ಪರ ಘರ್ಷಣೆ ಉಂಟಾಗುವುದು. ಆದರೆ ಇಬ್ಬರು ಸಹ ಬಹುಬೇಗ ವಿಷಯವನ್ನು ಮರೆತು ಅಪ್ಪಿಕೊಳ್ಳುವರು.
ಇಬ್ಬರೂ ಒಬ್ಬರನ್ನೊಬ್ಬರು ಕ್ಷಮಿಸಿ, ಸಮಸ್ಯೆಯನ್ನು ಬಗೆಹರಿಸಿಕೊಳ್ಳುವರು. ಆದರೆ ವಿಷಯಗಳನ್ನು ಅಷ್ಟು ಸುಲಭವಾಗಿ ಮರೆಯುವುದಿಲ್ಲ. ವಿಷಯವನ್ನು ನಿರಂತರವಾಗಿ ದ್ವೇಷಿಸುವರು. ಆದರೆ ವಿಷಯದಿಂದ ಸಂಬಂಧವನ್ನು ಹಾಳಾಗಲು ಇಬ್ಬರೂ ಬಿಡುವುದಿಲ್ಲ. ಸಂಬಂಧ ಮತ್ತು ಪ್ರೀತಿಯು ಉತ್ತಮವಾಗಿ ಇರುವಂತೆ ನಿಭಾಯಿಸುವರು. ವೃಷಭ ಹಾಗೂ ವೃಶ್ಚಿಕ ರಾಶಿಯವರ ನಡುವೆ ಸೂಕ್ತ ತಿಳುವಳಿಕೆಯಿಂದಾಗಿ ಪ್ರೀತಿಯು ಉತ್ತಮವಾಗಿರುತ್ತದೆ.
ಇಬ್ಬರ ನಡುವೆ ಇರುವ ಬಯಕೆಯಂತೆಯೇ ಜೀವನ ನಡೆಯುವುದು. ಸಂಬಂಧವು ಕ್ರಿಯಾತ್ಮಕ ಮತ್ತು ಸಂಕೀರ್ಣವಾಗಿರುತ್ತದೆ. ಇಬ್ಬರೂ ಸಹ ತಮ್ಮ ವರ್ತನೆ ಹಾಗೂ ಅಭಿಲಾಷೆಯ ನಡುವೆಯೂ ಜವಾಬ್ದಾರಿ ಮತ್ತು ಪ್ರೀತಿಯನ್ನು ಮರೆಯುವುದಿಲ್ಲ. ಇಬ್ಬರೂ ಸಹ ಪರಸ್ಪರ ಕಾಳಜಿ ಮತ್ತು ಪ್ರೀತಿಯ ಭಾವನೆಯನ್ನು ತೋರುವರು. ಹಾಗೂ ಪರಸ್ಪರ ಹೆಚ್ಚಿನ ಸಂತೋಷವನ್ನು ಅನುಭವಿಸುವರು. ಹಾಗಾಗಿ ವೃಷಭ ಮತ್ತು ವೃಶ್ಚಿಕ ರಾಶಿಯವರ ಪ್ರೀತಿಯ ಸಂಬಂಧ ಉತ್ತಮವಾಗಿ ಇರುತ್ತದೆ ಎಂದು ಹೇಳಲಾಗುವುದು.
ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ
9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.