ಮದುವೆಯ ವಯಸ್ಸು ಹೆಚ್ಚಳವು ಆರೋಗ್ಯವಂತ ಪೀಳಿಗೆಗೆ ಸಹಕಾರಿಯಾಗಲಿದೆ ನಮ್ಮ ಸಂಸ್ಕೃತಿಯಲ್ಲಿ ಮದುವೆಯಾಗಿ ವರ್ಷದೊಳಗೆ ಮಗುವಾಗಬೇಕು ಎನ್ನುವ ಒತ್ತಡ ಇದೆ. ಇದರಿಂದ ಮದುವೆಯಾದಾಕ್ಷಣ ಮಕ್ಕಳನ್ನು ಪಡೆಯುತ್ತಾರೆ. ಚಿಕ್ಕ ವಯಸ್ಸಿನಲ್ಲಿಯೇ ಗರ್ಭ ಧರಿಸುವುದರಿಂದ ಅಕಾಲಿಕ ಪ್ರಸವ ಮತ್ತು ರಕ್ತಸ್ರಾವಕ್ಕೆ ತುತ್ತಾಗುವರ ಸಂಖ್ಯೆ ಅಧಿಕವಾಗಿದೆ ಮದುವೆಯ ವಯಸ್ಸನ್ನು ಹೆಚ್ಚಿಸುವುದರಿಂದ ಸಹಜವಾಗಿ ಗರ್ಭ ಧರಿಸುವ ವಯಸ್ಸು ಕೂಡ ಅಧಿಕವಾಗಲಿದೆ.

ಇದರಿಂದ ಪ್ರಸವ ಸಂದರ್ಭದಲ್ಲಿನ ತಾಯಿ ಮತ್ತು ಮಗುವಿನ ಮರಣವನ್ನು ಕಡಿಮೆ ಮಾಡಬಹುದಾಗಿದೆ ಹೀಗಾಗಿ ಕೇಂದ್ರ ಸರ್ಕಾರ ಮದುವೆ ಆಗಲು ಇಪ್ಪತ್ತೊಂದು ವರ್ಷ ಆಗಲೇಬೇಕು ಎಂದು ಕಡ್ಡಾಯವಾಗಿ ಮಾಡಿದೆ ನಾವು ಈ ಲೇಖನದ ಮೂಲಕ ಕೇಂದ್ರ ಸರ್ಕಾರದ ನಿಯಮದಂತೆ ಹೆಣ್ಣು ಮಕ್ಕಳ ಮದುವೆ ವಯಸ್ಸಿನ ಬಗ್ಗೆ ತಿಳಿದುಕೊಳ್ಳೊಣ
.
ಕೇಂದ್ರ ಸಚಿವ ಸಂಪುಟವು ಹೆಣ್ಣು ಮಕ್ಕಳ ಮದುವೆಯ ಕನಿಷ್ಠ ವಯಸ್ಸನ್ನು ಹದಿನೆಂಟರಿಂದ ಇಪ್ಪತ್ತೊಂದಕ್ಕೆ ಏರಿಸಲು ಸಮ್ಮತಿಸಿದೆ ಇದರಿಂದ ಮಹಿಳೆಯರ ಸಬಲೀಕರಣ ಸಾಧ್ಯವಾಗುತ್ತದೆ. ಜತೆಗೆ ಆರೋಗ್ಯ ದೃಷ್ಟಿಯಿಂದಲೂ ಈ ಕ್ರಮ ಒಳ್ಳೆಯದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಹದಿನೆಂಟು ವಯಸ್ಸಿನಲ್ಲಿ ಹೆಣ್ಣು ಮಕ್ಕಳನ್ನು ಮದುವೆ ಮಾಡುವುದರಿಂದ ಹೆಚ್ಚು ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಾರೆ

ಹಾಗೆಯೇ ಇಪ್ಪತ್ತೊಂದು ವಯಸ್ಸಿಗೆ ಮದುವೆ ಮಾಡುವುದರಿಂದ ಮೆಜರಿಟಿ ಇರುತ್ತದೆ ಹಾಗೆಯೇ ಪದವಿಯನ್ನು ಪಡೆದಿರುತ್ತಾರೆ ಸ್ವತಂತ್ರವಾಗಿ ಇರಬಹುದು ಪಾಲಕರ ಸಪೋಟ ಇದ್ದಾಗ ಹೆಚ್ಚಿನ ವಿದ್ಯಾ ಭ್ಯಾಸವನ್ನು ಮಾಡಬಹುದು ಹದಿನೆಂಟು ವಯಸ್ಸಿಗೆ ಮದುವೆ ಮಾಡುವುದರಿಂದ ಮಾನಸಿಕವಾಗಿ ಸದೃಢರಾಗಿ ಇರುವುದು ಇಲ್ಲ .

ಹೆಣ್ಣು ಮಕ್ಕಳನ್ನು ಇಪ್ಪತ್ತೊಂದು ವರ್ಷಕ್ಕೆ ಮದುವೆ ಮಾಡುವುದರಿಂದ ದೈಹಿಕ ಮತ್ತು ಮಾನಸಿಕವಾಗಿ ಬೆಳೆದಿರುತ್ತಾರೆ. ಇದು ಸಹಜ ಹೆರಿಗೆಗೆ ಅನುಕೂಲವಾಗಲಿದ್ದು ಶಿಶು ಮರಣ ಪ್ರಮಾಣ ತಗ್ಗಲಿದೆ ಶಿಶು ತೂಕ ಕೂಡ ಹೆಚ್ಚಾಗಲಿದೆ. ರಕ್ತದೊತ್ತಡ ಮತ್ತು ಅನಿಮಿಯಾ ಸಮಸ್ಯೆಯಿಂದ ಹೆಣ್ಣುಮಕ್ಕಳನ್ನು ರಕ್ಷಿಸುವುದಕ್ಕೆ ಇದು ಸಹಕಾರಿ.ಹೆಣ್ಣು ಮಕ್ಕಳನ್ನುಹದಿನೆಂಟು ವರ್ಷಕ್ಕೆ ಮದುವೆ ಮಾಡಿದರೆ ಆ ವಯಸ್ಸಿನಲ್ಲಿ ಬಹಳಷ್ಟು ಮಂದಿ ದೈಹಿಕವಾಗಿ ದುರ್ಬಲರಾಗಿರುತ್ತಾರೆ. ಅವರು ಮದುವೆಯ ಬಗ್ಗೆ ಆಲೋಚನೆ ಕೂಡ ಮಾಡಿರುವುದಿಲ್ಲ. ಮದುವೆ ಬಳಿಕ ಯುವತಿಯು ಮಕ್ಕಳನ್ನು ಹೆರುವ ಒತ್ತಡಕ್ಕೂ ಒಳಗಾಗುತ್ತಾಳೆ ಇದು ತಾಯಿ ಮತ್ತು ಮಗುವಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಪರಿಣಾಮ ಕುಟುಂಬದ ಆರೋಗ್ಯ ಕೂಡ ಹದಗೆಡುತ್ತದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!