ಮದುವೆಯು ನಮ್ಮ ಸಾಮಾಜಿಕ ಜೀವನದ ಅತ್ಯಂತ ಅಗತ್ಯವಾದ ವಿಷಯವಾಗಿದೆ ಮತ್ತು ಪ್ರತಿಯೊಬ್ಬ ವ್ಯಕ್ತಿಯು ಯಶಸ್ವಿ ದಾಂಪತ್ಯ ಜೀವನವನ್ನು ನಡೆಸಲು ಬಯಸುತ್ತಾನೆ. ಇದರಿಂದ ಆತ ಶಾಂತಿಯಿಂದ ಸಂತೋಷದಿಂದ ಬದುಕಬಹುದು. ಯಶಸ್ವಿ ವಿವಾಹಕ್ಕಾಗಿ ಚಾಣಕ್ಯ ಅನೇಕ ಸಲಹೆಗಳನ್ನು ನೀಡಿದ್ದು, ಈ ಸಲಹೆಗಳು ಚಾಣಕ್ಯ ನೀತಿಯಲ್ಲಿ ಪ್ರಸ್ತಾಪವಾಗಿದೆ.

ಪ್ರತಿಯೊಬ್ಬ ಪುರುಷನು ಸುಂದರ ಮಹಿಳೆಯನ್ನು ಮದುವೆಯಾಗಲು ಬಯಸುತ್ತಾನೆ. ಆದರೆ, ಚಾಣಕ್ಯ, ವಿಭಿನ್ನ ದೃಷ್ಟಿಕೋನಗಳನ್ನು ಹೊಂದಿದ್ದಾನೆ. ಚಾಣಕ್ಯನ ಪ್ರಕಾರ ಹುಡುಗಿ ಸುಂದರವಾಗಿದ್ದರೂ ಒಳ್ಳೆಯ ಕುಟುಂಬಕ್ಕೆ ಸೇರದಿದ್ದರೆ ಪುರುಷನು ಆಕೆಯನ್ನು ಎಂದಿಗೂ ಮದುವೆಯಾಗಬಾರದು.ಒಬ್ಬ ವ್ಯಕ್ತಿಯು ಸಮಾಜದಲ್ಲಿ ಸಮಾನವಾದ, ಅಥವಾ ಅದಕ್ಕಿಂತಲೂ ಕಡಿಮೆ ಸ್ಥಾನಮಾನ ಇರುವ ಕುಟುಂಬದ ಜತೆ ಸಂಬಂಧ ಬೆಳೆಸಿಕೊಳ್ಳಬೇಕು. ಆದರೆ ಎಂದಿಗೂ ತನ್ನ ಸ್ಥಾನಮಾನಕ್ಕಿಂತ ಮೇಲಿರುವ ಕುಟುಂಬದ ಹುಡುಗಿಯನ್ನು ಮದುವೆಯಾಗಬಾರದು. ಇಲ್ಲದಿದ್ದರೆ ಆತ ಸಮಾಜದ ದೃಷ್ಟಿಯಲ್ಲಿ ಗೌರವವನ್ನು ಕಳೆದುಕೊಳ್ಳುತ್ತಾನೆ ಎಂದು ಚಾಣಕ್ಯ ವಿವರಿಸುತ್ತಾನೆ.

ಸುಂದರವಲ್ಲದ, ಆದರೆ ಕುಟುಂಬ ಮೌಲ್ಯಗಳನ್ನು ಹೊಂದಿರುವ ಹುಡುಗಿಯನ್ನು ಮದುವೆಯಾಗುವುದು ಒಳ್ಳೆಯದು. ಇದು ಯಾವಾಗಲೂ ಯಶಸ್ವಿ ಸಂಬಂಧ ಮತ್ತು ಎರಡೂ ಕುಟುಂಬಗಳಿಗೆ ಆರೋಗ್ಯಕರವೆಂದು ಸಾಬೀತುಪಡಿಸುತ್ತದೆ ಎಂದು ಚಾಣಕ್ಯ ಸಲಹೆ ನೀಡಿದ್ದಾರೆ. ಪುರುಷ ಮತ್ತು ಮಹಿಳೆ ಇಬ್ಬರೂ ಪ್ರೀತಿಸಲು ಸಮಾನ ಪ್ರಯತ್ನವನ್ನು ಮಾಡಬೇಕು. ಏಕೆಂದರೆ ವಿವಾಹ ಯಶಸ್ವಿಯಾಗಲು ಇದು ಮೊದಲ ವಿಷಯವಾಗಿದೆ. ಇನ್ನು, ಮತ್ತೊಬ್ಬರು ಸಂಗಾತಿ ನಿಮ್ಮನ್ನು ಪ್ರೀತಿಸುವಷ್ಟು ಪ್ರೀತಿಸಲು ಸಾಧ್ಯವಾಗದಿದ್ದರೂ ಅವರು ತೋರಿಸುವ ಪ್ರೀತಿ ಮತ್ತು ಭಾವನೆಗಳಿಗೆ ನಿಷ್ಠರಾಗಿರಲು ಪ್ರಯತ್ನಿಸಬೇಕು. ಇಲ್ಲದಿದ್ದರೆ ಸಂಬಂಧ ಕಡಿದುಕೊಳ್ಳುವ ಭಯ ಹೊಂದಿರಬೇಕು.

ಮಹಿಳೆಯರು ತಮ್ಮ ಗಂಡಂದಿರಿಗೆ ಸರಿಯಾಗಿ ಸೇವೆ ಸಲ್ಲಿಸುವಂತೆ ಚಾಣಕ್ಯ ಪ್ರಮುಖವಾದ ಸಲಹೆ ನೀಡಿದ್ದಾರೆ. ಏಕೆಂದರೆ ಇದು ಹೆಂಡತಿಯ ಕರ್ತವ್ಯವಾಗಿದೆ ಎಂದೂ ಚಾಣಕ್ಯ ನೀತಿಯಲ್ಲಿ ಹೇಳಲಾಗಿದೆ. ಆದರೆ, ಯಾವುದೇ ಪುರುಷನು ತನ್ನ ಆಶ್ರಯದಲ್ಲಿರುವ ಮಹಿಳೆಯ ಮೇಲೆ ಕೆಟ್ಟದಾಗಿ ವರ್ತಿಸಬಾರದು ಅಥವಾ ಲಾಭ ಪಡೆಯಬಾರದು. ಒಂದು ವೇಳೆ ಆ ರೀತಿ ಮಾಡಿದರೆ ಸಮಾಜದಲ್ಲಿ ಗೌರವ ಮತ್ತು ಸ್ಥಾನಮಾನವನ್ನು ಕಳೆದುಕೊಳ್ಳಲು ಸಿದ್ಧನಾಗಿರಬಾರದು.ಒಳ್ಳೆಯ ಹೆಂಡತಿ ಪ್ರಾಮಾಣಿಕ ಮತ್ತು ಬುದ್ಧಿವಂತಳಾಗಿರಬೇಕು. ಆಕೆ ತನ್ನ ಗಂಡನನ್ನು ಪ್ರೀತಿಸಬೇಕು ಮತ್ತು ಪತಿಯ ಕುಟುಂಬದಲ್ಲಿ ಶಾಂತಿ ಮತ್ತು ಸಾಮರಸ್ಯವನ್ನು ತರಲು ಪ್ರಯತ್ನಿಸಬೇಕು.ತನ್ನ ಹೆಂಡತಿಯನ್ನು ದುರುಪಯೋಗಪಡಿಸಿಕೊಳ್ಳುವ ಅಥವಾ ನೋಯಿಸದಂತೆ ಚಾಣಕ್ಯ ಪತಿಯನ್ನು ಎಚ್ಚರಿಸುತ್ತಾನೆ. ಒಂದು ವೇಳೆ ಹಾಗೆ ಮಾಡಿದರೆ, ಆಕೆ ನೀಡುವ ಕಠಿಣವಾದ ಸಂಕಷ್ಟಗಳನ್ನು ಎದುರಿಸಲು ಸಿದ್ಧವಾಗಿರಬೇಕು. ಇದರಿಂದ ವೈವಾಹಿಕ ಸಂಬಂಧದ ನಡುವೆ ಬಿರುಕು ಸಹ ಉಂಟಾಗಬಹುದು.ಕುಟುಂಬದ ಇತರ ಮಹಿಳೆಯರ ಬಗ್ಗೆ ಪುರುಷರು ಎಂದಿಗೂ ಮಾತನಾಡಬಾರದು ಹಾಗೂ ಜಗಳವಾಡಬಾರದು. ಏಕೆಂದರೆ ಅದು ಕುಟುಂಬಕ್ಕೆ ಮತ್ತು ತಮ್ಮ ವೈವಾಹಿಕ ಸಂಬಂಧಕ್ಕೆ ಕೊನೆಯೇ ಇಲ್ಲದ ದುಃಖವನ್ನು ತರುತ್ತದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!