ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ತೆರೆಕಂಡಿರುವ ದರ್ಶನ್ ಅವರ ಚಿತ್ರ ರಾಬರ್ಟ್ ಸಿನಿಮಾದ ಕಣ್ಣೆ ಅಧಿರಿಟ್ಟಿ ತೆಲುಗು ಹಾಡಿನಿಂದ ಮಂಗ್ಲಿ ಅವರು ಫೇಮಸ್ ಆದರು. ಅವರ ಹಾಡು ಯೂಟ್ಯೂಬ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಯಿತು. ಸತ್ಯವತಿ ರಾಥೋಡ್ ಅಲಿಯಾಸ್ ಮಂಗ್ಲಿ ಅವರು ಹಾಡಿದ ತೆಲುಗು ಹಾಡು ಕನ್ನಡದ ಕಣ್ಣು ಹೊಡಿಯಾಕ ಹಾಡಿಗಿಂತ ಫೇಮಸ್ ಆಗಿದೆ. ಗಾಯಕಿ ಮಂಗ್ಲಿ ಅವರ ಬಗ್ಗೆ ಇಂಟರೆಸ್ಟಿಂಗ್ ವಿಷಯವನ್ನು ಈ ಲೇಖನದಲ್ಲಿ ನೋಡೋಣ.

2018ರಿಂದ ಟಾಲಿವುಡ್ ನಲ್ಲಿ ಚಿತ್ರ ಗಾಯಕಿಯಾಗಿರುವ ಸತ್ಯವತಿಯವರು ರಾಜಸ್ಥಾನದ ಬಂಜಾರ ಸಮುದಾಯದವರು. ಅವರು ದಕ್ಷಿಣದ ಕರ್ನಾಟಕ್ ಸಂಗೀತದಲ್ಲಿ ಡಿಪ್ಲೊಮಾ ಮುಗಿಸಿ ಆಂಧ್ರದ ತೆಲಂಗಾಣ ಹಾಗೂ ಹೈದರಾಬಾದ್ ಶೈಲಿಯ ಜಾನಪದ ಹಾಡುಗಳನ್ನು ಫೇಮಸ್ ಮಾಡಿದ ಸಂಗೀತ ಕ್ಷೇತ್ರದ ಅದ್ಭುತ ಕಲಾವಿದೆ ಮಂಗ್ಲಿ ಎಂದು ಹೇಳಿದರೆ ತಪ್ಪಾಗಲಾರದು.

ಸತ್ಯವತಿ ಅವರು ಆಂಧ್ರದ ಅನಂತಪುರ ಜಿಲ್ಲೆಯ ಬಾಲ ನಾಯಕ್ ಮತ್ತು ಲಕ್ಷ್ಮೀದೇವಿ ದಂಪತಿಯ ಮಗಳಾಗಿ 1994 ಜೂನ್ ನಲ್ಲಿ ಜನಿಸುತ್ತಾರೆ, ಅವರಿಗೆ ಇಬ್ಬರು ಸಹೋದರಿಯರು ಹಾಗೂ ಒಬ್ಬ ಸಹೋದರನಿದ್ದಾನೆ. ಸತ್ಯವತಿ ಅವರು ಹೈದರಾಬಾದ್ ಗೆ ಬಂದನಂತರ ಮಂಗ್ಲಿ ಎಂಬ ನಾಮಧೇಯದಿಂದ ಫೇಮಸ್ ಆದರು. ಅವರ ಆರಂಭಿಕ ಜೀವನ ಕಡುಕಷ್ಟದಲ್ಲಿತ್ತು.

ಅವರು ಮೂರನೆ ತರಗತಿಯಲ್ಲಿ ಇದ್ದಾಗಲೆ ಮನೆಯ ಜವಾಬ್ದಾರಿಯನ್ನು ಹೊತ್ತರು, ಹೊಲದಲ್ಲಿ ತಮ್ಮ ತಂದೆಗೆ ಸಹಾಯ ಮಾಡುತ್ತಿದ್ದರು. ಅವರ ಸಮುದಾಯದವರು ಸಮಯ ಕಳೆಯಲು ಕೆಲವೊಮ್ಮೆ ಹಾಡುತ್ತಾ ಕುಣಿಯುತ್ತಿದ್ದರು. ಅವರು ಹಾಡುವ ಹಾಡನ್ನು ಕೇಳುತ್ತಾ ಮಂಗ್ಲಿ ಅವರು ತಾವು ಹಾಡುತ್ತಿದ್ದರು. ಮಂಗ್ಲಿ ಅವರು ಚಿಕ್ಕವರಿರುವಾಗಲೆ ತಮ್ಮ ಸಮುದಾಯದ ಹಾಡನ್ನು ಸ್ಪಷ್ಟವಾಗಿ ರಾಗವಾಗಿ ಹಾಡುತ್ತಿದ್ದರು.

ಮಂಗ್ಲಿ ಅವರ ಹಾಡನ್ನು ಕೇಳಿದ ಒಂದು ಎನ್ ಜಿಓ ಸಂಸ್ಥೆ ಅವರಿಗೆ ಸಂಗೀತವನ್ನು ಶಾಸ್ತ್ರೀಯವಾಗಿ ಕಲಿಸಲು ಮುಂದಾಗುತ್ತದೆ ಅಲ್ಲದೆ ಹಾಡಿನ ಸ್ಪರ್ಧೆಗಳನ್ನು ಏರ್ಪಡಿಸಿ ಹಾಡಿಸುತ್ತಿದ್ದರು ಆದರೆ ನೂರಾರು ಜನರ ಮುಂದೆ ವೇದಿಕೆ ಮೇಲೆ ಮಂಗ್ಲಿಯವರು ಹಾಡುವುದನ್ನು ಅವರ ಸಮುದಾಯದವರು ಒಪ್ಪಿಕೊಳ್ಳುತ್ತಿರಲಿಲ್ಲ ಇದರಿಂದ ಅವರು ಸ್ಟೇಜ್ ಮೇಲೆ ನಿಂತು ಹಾಡಲು ಹಲವು ಸಮಸ್ಯೆಗಳನ್ನು ಎದುರಿಸಬೇಕಾಯಿತು.

ವಿರೋಧದ ನಡುವೆಯೂ ಮಂಗ್ಲಿ ಅವರ ಪೋಷಕರು ಅವರಿಗೆ ಪ್ರೋತ್ಸಾಹ ನೀಡಿದರು. ಅವರು ಡಿಪ್ಲೋಮಾ ಓದುತ್ತಿರುವಾಗ ಅವರ ಪ್ರತಿಭೆಯಿಂದ ಎಲ್ಲರಿಗೂ ಅಚ್ಚುಮೆಚ್ಚಿನವರಾಗಿದ್ದರು ಆದರೆ ತಮ್ಮ ತಂದೆ ತಾಯಿ ಕಷ್ಟಪಡುತ್ತಿರುವುದನ್ನು ನೋಡಲಾರದೆ ಅವರು ಕೋರ್ಸ್ ಬಿಟ್ಟು ಮನೆಗೆ ಬರುತ್ತಾರೆ. ನಂತರ ಖಾಸಗಿ ಶಾಲೆಯೊಂದರಲ್ಲಿ ಮ್ಯೂಸಿಕ್ ಟೀಚರ್ ಆಗಿ ಸೇರಿಕೊಳ್ಳುತ್ತಾರೆ.

ನಂತರ ವಾಹಿನಿಗಳಲ್ಲಿ ಹಾಸ್ಯ ಶೋಗಳ ನಿರೂಪಕಿಯಾಗಿಯೂ ಕೆಲಸ ಮಾಡುತ್ತಾರೆ. ಹಲವು ತೆಲುಗು ಸಿನಿಮಾಗಳಿಗೆ ತಮ್ಮ ಕಂಠದಿಂದ ಹಾಡಿದ್ದಾರೆ. ಮಂಗ್ಲಿ ಅವರು ಇನ್ನೂ ಹೆಚ್ಚು ಸಿನಿಮಾಗಳಲ್ಲಿ ಹಾಡಲಿ ಎಂದು ಆಶಿಸೋಣ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!