ಹಿಂದೂ ಸಂಪ್ರದಾಯದ ಪ್ರಕಾರ ಪ್ರತಿಯೊಬ್ಬರು ಅವರದೇ ಆದ ರಾಶಿ-ನಕ್ಷತ್ರ ಹೊಂದಿರುತ್ತಾರೆ. ಅವರವರ ರಾಶಿ ನಕ್ಷತ್ರಕ್ಕನುಗುಣವಾಗಿ ಅವರ ಗುಣ ಸ್ವಭಾವ ಇರುತ್ತದೆ. ನಾವಿಂದು ನಿಮಗೆ ಮಕರ ರಾಶಿಯವರು ಯಾವ ರೀತಿಯ ಗುಣ ಸ್ವಭಾವವನ್ನು ಹೊಂದಿದ್ದಾರೆ ಮತ್ತು ಅವರು ಜೀವನದಲ್ಲಿ ಯಶಸ್ವಿಯನ್ನು ಹೊಂದುವುದಕ್ಕೆ ಯಾವ ಮಾರ್ಗಗಳನ್ನು ಅನುಸರಿಸಬೇಕು ಎಂಬುದರ ಬಗ್ಗೆ ನಾವು ನಿಮಗೆ ತಿಳಿಸಿಕೊಡುತ್ತೇವೆ. ಮಕರ ಇದು ರಾಶಿಚಕ್ರದ ಹತ್ತನೇ ರಾಶಿ ಉತ್ತರಾಷಾಡ ನಕ್ಷತ್ರದ ಮೂರು, ಶ್ರವಣ ನಕ್ಷತ್ರದ ನಾಲ್ಕೂ ಹಾಗೂ ಧನಿಷ್ಠ ನಕ್ಷತ್ರದ ಎರಡು ಪಾದಗಳು ಈ ರಾಶಿಗೆ ಸೇರುತ್ತದೆ. ಈ ರಾಶಿ ಕಾಲಪುರುಷನ ಮೊಣಕಾಲುಗಳನ್ನು ಪ್ರತಿನಿಧಿಸುತ್ತದೆ. ಮಕರ ರಾಶಿಗೆ ಅಧಿಪತಿ ಶನಿ.
ಈಗ ನಾವು ಮಕರ ರಾಶಿಯವರ ಗುಣ ಸ್ವಭಾವದ ಬಗ್ಗೆ ತಿಳಿದುಕೊಳ್ಳೋಣ. ಮಕರ ರಾಶಿಯವರು ಸುಂದರವಾಗಿರುತ್ತಾರೆ ಮತ್ತು ಅವರ ಚರ್ಮ ವಿನ್ಯಾಸ ಮೃದುವಾಗಿರುತ್ತದೆ. ಎದ್ದುಕಾಣುವ ಹುಬ್ಬು ತೆಳುವಾದ ಮೇಲಿನ ತುಟಿಗಳು ಹಾಗೆ ನುಣ್ಣಗಿನ ಆಕಾರದ ಗಲ್ಲ ಇವರು ಸರಾಸರಿ ಎತ್ತರವಾಗಿದ್ದು ಗಂಭೀರವಾದ ಕಣ್ಣುಗಳನ್ನು ಹೊಂದಿದ್ದಾರೆ. ಅಳೆದು ತೂಗಿ ನಿಧಾನವಾಗಿ ಮಾತನಾಡುತ್ತಾರೆ ಇವರು ಮಾತನಾಡುವಾಗ ಪ್ರತಿ ಪದವನ್ನು ಯೋಚನೆ ಮಾಡಿ ಹೇಳುವುದು ಇವರ ಸ್ವಭಾವ. ತತ್ವಜ್ಞಾನಿ ಅಥವಾ ವಿಜ್ಞಾನಿಗಳ ಬೌದ್ಧಿಕ ನೋಟವನ್ನು ಇವರು ಹೊಂದಿದ್ದಾರೆ.
ನೋಡುವುದಕ್ಕೆ ತಟಸ್ಥವಾಗಿ ಶಾಂತ ಹಾಗೂ ಸರಳವಾಗಿ ಇರುತ್ತಾರೆ ಪ್ರಾಯೋಗಿಕ ತೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಾರೆ ಹೊರತು ಸೌಂದರ್ಯಕ್ಕೆ ಅಲ್ಲ. ಇವರು ಆತ್ಮವಿಶ್ವಾಸ ಹಾಗೂ ಉನ್ನತವಾದ ಗುರಿಯನ್ನು ಹೊಂದಿರುತ್ತಾರೆ ತನ್ನ ಸಾಮರ್ಥ್ಯವನ್ನು ಇತರರು ಗೌರವಿಸಿದಾಗ ಅವರಿಗೆ ತೃಪ್ತಿ ಆಗುತ್ತದೆ. ಅಪಾಯಗಳನ್ನು ಸ್ವೀಕರಿಸುವುದಕ್ಕೂ ಹಿಂಜರಿಯುವುದಿಲ್ಲ ಹಾಗೂ ಯಾವಾಗಲೂ ಜಾಗರೂಕರಾಗಿರುತ್ತಾರೆ. ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ಮೊದಲು ಪೂರ್ವ ತಯಾರಿಯನ್ನು ಮಾಡುತ್ತಾರೆ.
ಬೇರೆಯವರೊಂದಿಗೆ ಇವರ ಸಂಬಂಧಗಳು ಅಷ್ಟು ಚೆನ್ನಾಗಿ ಇಲ್ಲದಿರಬಹುದು ಇವರು ಕೆಲವೊಮ್ಮೆ ಸ್ವಾರ್ಥಿಗಳು ಆಗಬಹುದು ಸಮಾಜದಲ್ಲಿ ಉನ್ನತ ಸ್ಥಾನಮಾನವನ್ನು ಪಡೆದುಕೊಳ್ಳುವ ಅಪೇಕ್ಷೆ ಇವರಲ್ಲಿ ಹೆಚ್ಚಾಗಿದೆ ಎಂದು ಹೇಳಬಹುದು. ಇವರು ಶಾಂತವಾಗಿ ಸರಳವಾಗಿ ಕಂಡರೂ ತುಂಬಾ ಭಾವುಕರಾಗಿರುತ್ತಾರೆ. ಅಗತ್ಯ ಬಿದ್ದಾಗ ಅವಕಾಶಗಳನ್ನು ಯಶಸ್ವಿಯಾಗಿ ಹುಡುಕಿಕೊಳ್ಳುತ್ತಾರೆ. ಪ್ರೀತಿ-ಪ್ರೇಮದ ಬಗ್ಗೆ ಗಂಭೀರವಾಗಿರುತ್ತಾರೆ ನಿರ್ಧಾರವನ್ನ ತೆಗೆದುಕೊಳ್ಳುವಾಗ ಅವಸರ ಮಾಡದೆ ಸಮಾಧಾನವಾಗಿ ತಮ್ಮದೇ ಆದ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ.
ಮಾತಿಗಿಂತ ಇವರ ಕೆಲಸಗಳು ಹೆಚ್ಚು ಮಾತನಾಡುತ್ತವೆ. ತಾವು ಮಾಡುವ ಕೆಲಸದ ಮೂಲಕ ತಮ್ಮ ಪ್ರೀತಿ ವಾತ್ಸಲ್ಯವನ್ನು ವ್ಯಕ್ತಪಡಿಸುತ್ತಾರೆ ಸ್ನೇಹಿತರಾಗಿ ಈ ರಾಶಿಯವರು ಸತ್ಯವಂತರು. ಸಹಾಯ ಬೇಕಾದಾಗ ಪರಿಸ್ಥಿತಿ ಹೇಗೆ ಇರಲಿ ಸ್ನೇಹಿತರ ಬೆಂಬಲಕ್ಕೆ ನಿಲ್ಲುತ್ತಾರೆ ಹೆಚ್ಚು ಸ್ನೇಹಿತರನ್ನು ಹೊಂದಿಲ್ಲದಿದ್ದರೂ ಇರುವ ಸ್ನೇಹಿತರನ್ನು ತುಂಬಾ ಹಚ್ಚಿಕೊಂಡಿರುತ್ತಾರೆ. ಆದರೆ ಅದನ್ನು ಎದುರುಗೆ ತೋರಿಸುವುದಿಲ್ಲ.
ಇನ್ನು ಆರೋಗ್ಯದ ಬಗ್ಗೆ ನೋಡುವುದಾದರೆ ಸಣ್ಣ ಕಾಯಿಲೆಗಳ ವಿರುದ್ಧ ಉತ್ತಮ ಪ್ರತಿರೋಧ ಶಕ್ತಿ ಇದೆ. ವೃದ್ಧಾಪ್ಯದಲ್ಲಿಯೂ ಕೂಡ ಇವರು ಉತ್ತಮವಾದ ಆರೋಗ್ಯದಿಂದಿರುತ್ತಾರೆ. ವಿಶೇಷವಾಗಿ ಮೊಣಕಾಲು ಮತ್ತು ಮೂಳೆಯ ರಚನೆ ಸೇರಿ ದೇಹ ಸೂಕ್ಷ್ಮವಾಗಿರುತ್ತದೆ. ಶೀತಗಳು ಸಂಧಿವಾತ ಮೂತ್ರಪಿಂಡದ ಕಲ್ಲು ಜೀರ್ಣಕಾರಿ ತೊಂದರೆ ಹಾಗೆಯೇ ಚರ್ಮದ ಕಾಯಿಲೆಗಳನ್ನು ಅನುಭವಿಸಬಹುದು.
ಮದ್ಯಪಾನ ಮತ್ತು ಜಂಕ್ ಫುಡ್ ಗಳಿಂದ ಆದಷ್ಟು ದೂರ ಇರುವುದು ಒಳ್ಳೆಯದು. ಇವರು ವೃತ್ತಿಜೀವನವನ್ನು ಬಹಳ ಗಂಭೀರವಾಗಿ ಪರಿಗಣಿಸುತ್ತಾರೆ ಇನ್ನೊಬ್ಬರ ಕೈಕೆಳಗೆ ಕೆಲಸ ಮಾಡುವ ಮನಸ್ಥಿತಿ ಇವರಿಗಿಲ್ಲ. ಏನೇ ಕೆಲಸ ಮಾಡಿದರು ಸ್ವಂತವಾಗಿ ಮಾಡುವುದಕ್ಕೆ ಬಯಸುತ್ತಾರೆ ಇವರು ಒಂದು ಸಲ ಯಶಸ್ಸಿನ ಏಣಿಯನ್ನು ಹತ್ತಿದರೆ ಹಿಂತಿರುಗಿ ನೋಡುವುದು ತುಂಬಾ ಕಡಿಮೆ. ಕಷ್ಟಪಟ್ಟು ಕೆಲಸ ಮಾಡಿ ತೃಪ್ತಿ ಪಡುವುದು ಇವರ ಸ್ವಭಾವ. ಇವರಿಗೆ ಸಮಯ ಮತ್ತು ಹಣವನ್ನು ಎಲ್ಲಿ ಮತ್ತು ಹೇಗೆ ಖರ್ಚು ಮಾಡಬೇಕು ಎಂಬುದು ಸರಿಯಾಗಿ ತಿಳಿದಿರುತ್ತದೆ.
ಇವರಲ್ಲಿರುವ ಕೆಲವು ನಕಾರಾತ್ಮಕ ಗುಣಗಳ ಬಗ್ಗೆ ಈಗ ತಿಳಿದುಕೊಳ್ಳೋಣ ಬುದ್ಧಿವಂತಿಕೆ ಘನತೆ ಜಾಗರೂಕತೆ ಮಹತ್ವಾಕಾಂಕ್ಷೆ ಏಕಾಗ್ರತೆ ಇವುಗಳು ಇವರ ಒಳ್ಳೆಯ ಗುಣವಾದರೆ ಸಂಕೋಚ ಅಸೂಯೆ ಸ್ವಾರ್ಥ ಅನುಮಾನ ಅಧಿಕಾರದ ದಾಹ ಖಿನ್ನತೆಯಂತಹ ಕೆಟ್ಟ ಗುಣಗಳನ್ನು ಹೊಂದಿರುತ್ತಾರೆ. ಇವರು ಬೇಗ ಅಸಮಾಧಾನಕ್ಕೆ ಗುರಿಯಾಗುತ್ತಾರೆ. ತಾವು ಸಾಧಿಸಬೇಕಾದ ಗುರಿಯ ಕಡೆ ಇವರ ಗಮನ ಇರುತ್ತದೆ ಯಾವುದೇ ವಿಷಯದ ಕುರಿತು ಸರಿಯಾಗಿ ಹೇಳುವುದು ಇವರಿಗೆ ತಿಳಿದಿರುತ್ತದೆ.
ಬೇರೆಯವರಿಗೆ ಸಹಾಯ ಮಾಡುತ್ತಾರೆ ಆದರೆ ಅದರಿಂದ ಪ್ರತಿಯಾಗಿ ಏನನ್ನೂ ಬಯಸುವುದಿಲ್ಲ ಹೊಸ ವಿಷಯಗಳ ಬಗ್ಗೆ ಪ್ರಯೋಗ ಮಾಡುತ್ತಾರೆ. ಈ ರಾಶಿಯವರು ಖುಷಿಯಿಂದ ನೆಮ್ಮದಿಯಿಂದ ಇರುವುದಕ್ಕೆ ಹಾಗೂ ಪ್ರಸಿದ್ಧಿ ಆಗುವುದಕ್ಕೆ ಯಾವ ನಿಯಮಗಳನ್ನು ಪಾಲನೆ ಮಾಡಬೇಕು ಎಂಬುದರ ಬಗ್ಗೆ ತಿಳಿದುಕೊಳ್ಳೋಣ. ಈ ರಾಶಿಯ ಅಧಿಪತಿ ಶನಿ ಹಾಗಾಗಿ ಧೈರ್ಯ ಪ್ರೇರಣೆ ಸ್ಪೂರ್ತಿ ಸಾಧನೆಗೆ ಇಂದ್ರ ನೀಲ ಮಣಿ ಅಥವಾ ಬ್ಲೂ ಸಪೇರ ಬಳಸುವುದರಿಂದ ದುಡ್ಡಿನ ಲಾಭವಾಗುತ್ತದೆ.
ಇನ್ನು ಪಂಚಮಾಧಿಪತಿ ಶುಕ್ರ ಹಾಗಾಗಿ ವಜ್ರವನ್ನು ಧರಿಸುವುದರಿಂದ ಖ್ಯಾತಿ ಮಾನಸನ್ಮಾನ ಜನರ ನಡುವೆ ಪ್ರಸಿದ್ಧಿಗೆ ಬರುವಂತೆ ಮಾಡುತ್ತದೆ. ಇದಕ್ಕೆ ಪರ್ಯಾಯವಾಗಿ ಪಚ್ಚೆ ಮಾಣಿಕ್ಯ ಲ್ಯಾಬ್ ನಲ್ಲಿ ತಯಾರಿಸಿದಂತಹ ಕೆಲವು ವಜ್ರಗಳನ್ನು ಬಳಸಬಹುದು. ಬಿಳಿ ಬಣ್ಣದ ಬಟ್ಟೆಯನ್ನು ಧರಿಸುವುದರಿಂದಲೂ ಕೂಡ ಇವರಿಗೆ ಖ್ಯಾತಿ ಸಿಗುತ್ತದೆ. ಇವರು ಶಿವ ಕೃಷ್ಣನನ್ನು ಪೂಜೆ ಪ್ರಾರ್ಥನೆ ಮಾಡುವುದು ಉತ್ತಮ.
ಈ ರಾಶಿಯ ಅಧಿಪತಿ ಶನಿ ಆಗಿರುವುದರಿಂದ ಶನಿವಾರವನ್ನು ಇಷ್ಟ ದಿನವನ್ನಾಗಿ ಮಾಡಿಕೊಳ್ಳಬಹುದು. ಈ ರಾಶಿಯವರು ಶನಿವಾರ ಶನಿ ವೃಕ್ಷಕ್ಕೆ ಪೂಜೆ ಮಾಡುವುದು ಮತ್ತು ಎಳ್ಳೆಣ್ಣೆ ದೀಪ ಹಚ್ಚುವುದರಿಂದ ಒಳ್ಳೆಯದಾಗುತ್ತದೆ. ಈ ರೀತಿಯಾಗಿ ಮಕರ ರಾಶಿಯವರು ಒಳ್ಳೆಯ ಮತ್ತು ಕೆಲವು ನಕಾರಾತ್ಮಕ ಗುಣ ಸ್ವಭಾವವನ್ನು ಹೊಂದಿರುತ್ತಾರೆ ಮಕರ ರಾಶಿಯವರು ಜೀವನದಲ್ಲಿ ಯಶಸ್ಸನ್ನು ಹೊಂದುವುದಕ್ಕೆ ನಾವು ಮೇಲೆ ತಿಳಿಸಿರುವ ಪರಿಹಾರಗಳನ್ನು ಮಾಡಿಕೊಂಡಾಗ ಉತ್ತಮವಾದ ಬದುಕು ಮಕರ ರಾಶಿಯವರದ್ದಾಗುತ್ತದೆ. ನೀವು ಕೂಡ ಮಕರ ರಾಶಿಯವರಾಗಿದ್ದರೆ ನಾವು ಮೇಲೆ ತಿಳಿಸಿರುವ ಪರಿಹಾರೋಪಾಯಗಳನ್ನು ಮಾಡಿಕೊಂಡು ಸುಖ ಶಾಂತಿ ಹಾಗೂ ಯಶಸ್ವಿ ಜೀವನವನ್ನು ನಿಮ್ಮದಾಗಿಸಿಕೊಳ್ಳಿ.
ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.