ಅರ್ಜುನನ ಮೇಲೆ ದ್ವೇ,ಷ ಸಾಧಿಸಿದ ಸರ್ಪಾಸ್ತ್ರ ಏನು ಮಾಡಿತು, ಅದರ ದ್ವೇ,ಷಕ್ಕೆ ಕಾರಣವೇನು ಎಂಬುದನ್ನು ಈ ಲೇಖನದ ಮೂಲಕ ತಿಳಿಯೋಣ
ಕುರುಕ್ಷೇತ್ರದ ಹದಿನೇಳನೆ ದಿನ ಅರ್ಜುನ ಹಾಗೂ ಕರ್ಣ ಯುದ್ಧಕ್ಕೆ ನಿಂತರು. ಅರ್ಜುನ ಕೆರಳಿಸುತ್ತಿದ್ದ ಆದರೆ ಕರ್ಣನದು ಸ್ಥಿತಪ್ರಜ್ಞ ಅದೆಷ್ಟೋ ಹೊತ್ತು ಬಾಣಗಳ ಮಳೆ ಸುರಿದ ನಂತರ ಶಲ್ಯ ದಿವ್ಯಾಸ್ತ್ರ ಪ್ರಯೋಗಿಸಲು ಕರ್ಣನಿಗೆ ಸೂಚಿಸಿದ. ಕರ್ಣ ಅರ್ಜುನನಿಗೆ ಬಾಣ ಬಿಡುತ್ತಿದ್ದನು ಆಗ ಶಲ್ಯ ಅರ್ಜುನನ ಎದೆಗೆ ಗುರಿಯಿಟ್ಟು ಹೊಡೆಯಲು ಹೇಳಿದ ಎದೆಗೆ ಗುರಿಯಿಟ್ಟು ಹೊಡೆದಾಗ ಸಾರಥಿಗೆ ತಡೆಯಲು ಸಾಧ್ಯವಾಗುವುದಿಲ್ಲ. ಆದರೆ ಕರ್ಣ ಯಾರ ಮಾತು ಕೇಳುವ ಸ್ಥಿತಿಯಲ್ಲಿರಲಿಲ್ಲ. ಅರ್ಜುನನನ್ನು ಕೊಲ್ಲಬೇಕೆಂದು ಅನಿಸಿದರೂ ಕುಂತಿ ಹಾಗೂ ಅವಳಿಗೆ ಕೊಟ್ಟ ಮಾತು ನೆನಪಾಯಿತು. ಅರ್ಜುನ ಸತ್ತರೆ ಯುಧಿಷ್ಠಿರನು ಅಸಹಾಯಕನಾಗಿ ಎದೆ ಒಡೆದುಕೊಳ್ಳುವನು ಹಾಗಾದರೆ ಕುಂತಿಗೆ ನಿನ್ನ ಮಕ್ಕಳಲ್ಲಿ ಅರ್ಜುನನನ್ನು ಬಿಟ್ಟು ಉಳಿದ ಮಕ್ಕಳ ಸಾವಿಗೆ ನಾನು ಕಾರಣನಾಗಲಾರೆ ಎಂಬ ಮಾತು ಸುಳ್ಳಾಗುತ್ತದೆ. ನನ್ನವರು ಯಾರೂ ಉಳಿದಿಲ್ಲ ಕುರು ವಂಶ ನಿರ್ವಂಶವಾಯಿತು. ನಾನೊಬ್ಬ ಬದುಕಿದ್ದು ಏನು ಪ್ರಯೋಜನ. ಅರ್ಜುನನ್ನು ಸಾಯಿಸಿದರೆ ಉಳಿದ ಅವನ ಸಹೋದರರ ಮುಂದೆ ನಾನು ಅಪರಾಧಿಯಾಗುತೇನೆ ಎಂದು ಯೋಚನೆ ಮಾಡಿದನು ಕರ್ಣ. ಆದರೆ ಈ ಸತ್ಯವನ್ನು ಶಲ್ಯನಿಗೆ ಹೇಳಲು ಸಾಧ್ಯವಿಲ್ಲ. ಕರ್ಣ ಶಲ್ಯನಿಗೆ ನಾನು ಒಮ್ಮೆ ಗುರಿ ಇಟ್ಟಾಗಿದೆ ಬದಲಿಸಿದರೆ ಅರ್ಜುನನಿಗೆ ಹೆದರಿ ಗುರಿ ಬದಲಿಸಿದ ಕರ್ಣ ಎಂದು ಮಾತನಾಡುತ್ತಾರೆ ಲೋಕ ನಿಂದನೆಗೆ ನಾನು ಗುರಿಯಾಗಲಾರೆ ಎಂದವನೇ ಗುರಿ ಇಟ್ಟು ಬಾಣ ಬಿಟ್ಟ. ಅದು ಬೆಂಕಿ ಉಗುಳುತ್ತಾ ಅರ್ಜುನನ ತಲೆಯತ್ತ ನುಗ್ಗಿ ಬರುತಿತ್ತು ಹಲವಾರು ದಿವ್ಯಾಸ್ತ್ರಗಳನ್ನು ಬಳಸಿದ್ದ ಅರ್ಜುನನಿಗೆ ಅದು ಹೊಸ ಅಸ್ತ್ರ, ಇದರಿಂದ ತಪ್ಪಿಸಿಕೊಳ್ಳುವುದು ಅರ್ಜುನನಿಗೆ ಗೊತ್ತಿರಲಿಲ್ಲ ಆಗ ಕೃಷ್ಣ ರಥವನ್ನು ಸ್ವಲ್ಪ ತಗ್ಗಿಸಿದನು ಇದರಿಂದ ಕರ್ಣ ಬಿಟ್ಟ ಬಾಣ ಅರ್ಜುನನ ಕಿರೀಟವನ್ನು ಹಾರಿಸಿತು. ಕಿರೀಟವನ್ನು ಹಾರಿಸಿರುವುದು ತಲೆಯನ್ನು ಉರುಳಿಸಿದಂತೆ ಅರ್ಜುನನ್ನು ಕೊಲ್ಲದೆ ಕರ್ಣ ಗೆದ್ದಿದ್ದ. ಶಲ್ಯನಿಗೆ ಬೇಸರವಾಯಿತು. ಕೃಷ್ಣನಿಗೆ ಕರ್ಣನ ಬಗ್ಗೆ ಹೆಮ್ಮೆಯಾಯಿತು.
ಆ ಬಾಣ ಮತ್ತೆ ತಿರುಗಿ ಕರ್ಣನ ಬಳಿ ಬಂದು ಇನ್ನೊಮ್ಮೆ ನನ್ನ ಬಳಸು ಶತ್ರು ಎಲ್ಲೆ ಇದ್ದರು ಕೊಲ್ಲುತ್ತೇನೆ ಎಂದು ಬಾಣ ಮಾತಾಡಿತು ಆಗ ಕರ್ಣ ನೀನು ಯಾರು ನನ್ನ ಬತ್ತಳಿಕೆಗೆ ಏಕೆ ಸೇರಿಕೊಂಡೆ ಎಂದು ಕೇಳಿದನು. ಆಗ ಬಾಣ ನಾನು ಮಹಾಬಲ ತಕ್ಷಕನ ಮಗ ಅಶ್ವಸೇನ ಈ ಹಿಂದೆ ಕಾಂಡವನದಲ್ಲಿ ಸಂತೋಷದಿಂದ ಇದ್ದ ನಮ್ಮ ಇಡೀ ಸಂಕುಲವನ್ನು ಅರ್ಜುನ ನಾಶಮಾಡಿದ್ದಾನೆ. ಆವತ್ತು ಸಹಾಯಕನಾಗಿ ನಿಂತಿದ್ದವನು ಶ್ರೀಕೃಷ್ಣ. ಅವನನ್ನು ಕೊಲ್ಲಲೆಬೇಕೆಂದು ಅದಕ್ಕೆ ಸಮರ್ಥನಾದ ನಿನ್ನ ಬತ್ತಳಿಕೆಗೆ ಸೇರಿಕೊಂಡೆ ಆದರೆ ನಿನ್ನ ಗುರಿ ತಪ್ಪಿಹೋಯಿತು. ಇನ್ನೊಮ್ಮೆ ನನ್ನ ಬಳಸು ಪಾರ್ಥನನ್ನು ಸಾಯಿಸುತ್ತೇನೆ ಎಂದು ಹೇಳಿತು ಇದರಿಂದ ಶಲ್ಯ ಸಂತೋಷಗೊಂಡು ಈ ಅವಕಾಶವನ್ನು ಬಿಡಬೇಡ ಎಂದು ಕರ್ಣನಿಗೆ ಹೇಳಿದನು. ಆದರೆ ಕರ್ಣ ಅಯ್ಯಾ ಅಶ್ವಸೇನ ನೀನು ಯಾರು ಎಂದು ಮೊದಲೇ ತಿಳಿದಿದ್ದರೆ ನಿನ್ನ ನಾನು ಬಳಸುತ್ತಲೇ ಇರಲಿಲ್ಲ. ಅರ್ಜುನನ್ನು ಕೊಲ್ಲಲು ಸರ್ಪದ ದ್ವೇಷವನ್ನು ಕರ್ಣ ಬಳಸಿಕೊಂಡ ಎಂಬ ಅಪಕಿರ್ತಿ ನನಗೆ ಬೇಡ. ನಿನ್ನ ಧ್ವೇಷದ ನಡುವೆ ನನ್ನ ಎಳೆಯಬೇಡ ಎಂದು ಹೇಳಿ ಸರ್ಪಾಸ್ತ್ರ ಪ್ರಯೋಗಿಸಲು ನಿರಾಕರಿಸಿದ.
ಅಶ್ವಸೇನ ಅಷ್ಟಕ್ಕೆ ಸುಮ್ಮನಾಗಲಿಲ್ಲ ಅರ್ಜುನನ ಬಳಿ ಹೋಗತೊಡಗಿದನು ಆಗ ಅರ್ಜುನ ಗರುಡಾಸ್ತ್ರ ಬಿಟ್ಟು ನಾಗನನ್ನು ಕೊಂದನು. ಶಲ್ಯನಿಗೆ ಕರ್ಣನ ವರ್ತನೆಯಿಂದ ಸಿಟ್ಟು ಬಂತು. ಕರ್ಣನಿಗೆ ನೀನು ನನಗೆ ಅವಮಾನ ಮಾಡಿದೆ ನಾನು ನಿನಗೆ ಸಾರಥ್ಯ ಮಾಡಲಾರೆ ಎಂದು ಅಲ್ಲಿಂದ ನಡೆದೇ ಬಿಟ್ಟ. ಕರ್ಣನು ತನ್ನ ರಥವನ್ನು ತಾನೇ ನಡೆಸತೊಡಗಿದನು.