ಮಹಾಭಾರತ ಧಾರಾವಾಹಿ ಈಗ ತುಂಬಾ ಜನಪ್ರಿಯತೆ ಗಳಿಸುತ್ತಿದೆ. ಅದರಲ್ಲಿನ ಎಲ್ಲಾ ಪಾತ್ರಗಳೂ ಸಹ ಪಾತ್ರಕ್ಕೆ ಬೇಕಾದ ಗಂಭೀರತೆ, ಕುತಂತ್ರ ಎಲ್ಲವನ್ನು ಅತಿ ಅದ್ಭುತವಾಗಿ ಅಭಿನಯಿಸಿದ್ದಾರೆ. ಹೀಗೆ ಭೀಮನ ಪಾತ್ರದಲ್ಲಿ ಅಭಿನಯಿಸಿದ ಪಾತ್ರಕ್ಕೆ ಕಂಠದಾನ ಮಾಡಿದ ಕಲಾವಿದರು ಯಾರು ಎಂಬುದನ್ನು ನಾವು ತಿಳಿಯೋಣ.

ಮಹಾಭಾರತದಲ್ಲಿ ಭೀಮನ ಪಾತ್ರ ಮಾಡಿದ ನಟನಿಗೆ ಕನ್ನಡದಲ್ಲಿ ಧ್ವನಿ ನೀಡಿದವರು ವಿಶಾಲ್ ರಾಜ್ ಎಂಬ ಕಂಠದಾನ ಕಲಾವಿದ. ಭೀಮನ ಪಾತ್ರವಂತೂ ತುಂಬಾ ಸುಂದರವಾಗಿ ಮೂಡಿಬಂದಿದೆ. ವಿಶಾಲ್ ರಾಜ್ ಕಂಠದಾನ ಮಾಡಿದ ಸಣ್ಣ ಮಾತುಗಳು ಇಲ್ಲಿವೆ. “ನಪುಂಸಕರೆ, ಹೇಡಿಗಳೆ, ನಿಮ್ಮ ಸಾಮರ್ಥ್ಯ ಇದೆಯೇನು? ಆರು ಜನ ಮಹಾರಥಿಗಳು ಸೇರಿ ಒಬ್ಬ ಬಾಲಕನನ್ನು ಕೊಂದದ್ದು ನಿಮ್ಮ ಯುದ್ಧದ ಲಾಭವೇನು? ನಕುಲ, ಸಹದೇವ ತಡಮಾಡದೆ ದಿವ್ಯ ಔಷಧಿಯನ್ನು ತೆಗೆದುಕೊಂಡು ಬನ್ನಿರಿ. ನನ್ನ ಪ್ರಾಣ ತೆಗೆದುಕೊಂಡಾದರೂ ಅಭಿಮನ್ಯುವಿನ ಪ್ರಾಣ ಉಳಿಸಿ. ನಕುಲ ಹೋಗು ಅಭಿಮನ್ಯುವಿನ ಪ್ರಾಣ ಉಳಿಸು.” ಚಕ್ರವ್ಯೂಹ ಭೇಧಿಸಿ ಒಳನಡೆದ ಅಭಿಮನ್ಯುವಿನ ಸಾವು ಸಂಭವಿಸಿದ ಕ್ಷಣ ಭೀಮ ಅಳುವ ದೃಶ್ಯವಿದು.

ಹಿಂದಿ ಭಾಷೆಯ ಮಹಾಭಾರತ ಧಾರಾವಾಹಿಯನ್ನು ಕನ್ನಡದಲ್ಲಿ ಬಿಡುಗಡೆ ಮಾಡಿದಾಗ ಪ್ರತಿಯೊಂದು ಪಾತ್ರಕ್ಕೆ ತಕ್ಕಂತೆ ಧ್ವನಿ ನೀಡಲಾಯಿತು. ಈಗ ಕನ್ನಡದಲ್ಲಿ ಕೂಡ ತುಂಬಾ ಜನಪ್ರಿಯತೆ ಗಳಿಸಿ ಮುಂದೆ ಸಾಗುತ್ತಿದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!