ಮನೆಗೆ ಎಲ್ಪಿಜಿ ಸಿಲೆಂಡರ್ ಬಳಸುತ್ತಿದ್ದೀರಾ, ನಿಮಗೆ ಪ್ರತಿ ತಿಂಗಳು ಸಿಗುವ ಸಬ್ಸಿಡಿ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ

News
ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

ಮೊದಲು ಎಲ್ ಪಿಜಿ ಗ್ಯಾಸ್ ಸಿಲಿಂಡರ್ ಮೇಲೆ ಸಬ್ಸಿಡಿ ಹಣ ಖಾತೆಗೆ ಜಮಾ ಆಗುತ್ತಿತ್ತು. ನಂತರದ ದಿನಗಳಲ್ಲಿ ಖಾತೆಗೆ ಹಣ ಜಮಾ ಆಗದೆ ಗ್ರಾಹಕರಿಂದ ದೂರು ದಾಖಲಾಯಿತು. ಗ್ರಾಹಕರು ತಮ್ಮ ಖಾತೆಗೆ ಸಬ್ಸಿಡಿ ಬರುತ್ತಿದೆಯೆ ಇಲ್ಲವೆ ಎಂಬುದನ್ನು ಸುಲಭವಾಗಿ ನೋಡಬಹುದು. ಹಾಗಾದರೆ ಸಬ್ಸಿಡಿ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಎಲ್‌ಪಿಜಿ ಗ್ರಾಹಕರಿಗೊಂದು ಸಂತಸದ ಸುದ್ದಿಯೊಂದು ಪ್ರಕಟವಾಗಿದೆ. LPG ಸಬ್ಸಿಡಿ ಅಂದರೆ ಅಡುಗೆ ಅನಿಲ ಸಿಲಿಂಡರ್ ಸಬ್ಸಿಡಿ ಇದೀಗ ಮತ್ತೆ ಗ್ರಾಹಕರ ಖಾತೆಗೆ ಬರುತ್ತಿದೆ. ಈ ಹಿಂದೆಯೂ ಸಬ್ಸಿಡಿ ಬರುತ್ತಿತ್ತು ಆದರೆ ನಂತರ ಹಲವು ಗ್ರಾಹಕರ ಖಾತೆಗೆ ಸಬ್ಸಿಡಿ ಬರದಿರುವ ದೂರುಗಳು ನಿರಂತರವಾಗಿ ಕೇಳಿ ಬಂದಿದ್ದವು. ಇದೀಗ ಮತ್ತೆ ಸಬ್ಸಿಡಿ ಜಾರಿಯಾದ ನಂತರ ಈ ದೂರುಗಳು ಕೇಳಿಬರುವುದು ನಿಂತುಹೋಗಿದೆ. ಎಲ್ ಪಿಜಿ ಗ್ಯಾಸ್ ಗ್ರಾಹಕರಿಗೆ ಪ್ರತಿ ಸಿಲಿಂಡರ್ ಗೆ 79.26 ಸಬ್ಸಿಡಿ ನೀಡಲಾಗುತ್ತಿದೆ.

ಗ್ರಾಹಕರು ವಿವಿಧ ಸಬ್ಸಿಡಿಗಳನ್ನು ಪಡೆಯುತ್ತಿದ್ದಾರೆ ಹೀಗಿರುವಾಗ ಎಷ್ಟು ಸಲ ಸಬ್ಸಿಡಿ ಸಿಗುತ್ತಿದೆ ಎಂಬ ಗೊಂದಲದಲ್ಲಿ ಜನಸಾಮಾನ್ಯರಿದ್ದಾರೆ. ವಾಸ್ತವದಲ್ಲಿ ಅನೇಕ ಜನರು 79.26 ರೂಪಾಯಿ ಸಬ್ಸಿಡಿಯನ್ನು ಪಡೆಯುತ್ತಿದ್ದಾರೆ ಆದರೆ ಅನೇಕ ಜನರು 158.52 ರೂಪಾಯಿ ಅಥವಾ 237.78 ರೂಪಾಯಿ ಸಬ್ಸಿಡಿಯನ್ನು ಸಹ ಪಡೆಯುತ್ತಿದ್ದಾರೆ ಆದರೆ ಸಬ್ಸಿಡಿ ಖಾತೆಗೆ ಬಂದಿದೆಯೆ ಅಥವಾ ಇಲ್ಲವೆ ಎಂಬುದನ್ನು ಸುಲಭವಾಗಿ ಪರಿಶೀಲಿಸಬಹುದು.

ಮನೆಯಲ್ಲಿ ಕುಳಿತು ನಿಮ್ಮ ಖಾತೆಯಲ್ಲಿ ಸಬ್ಸಿಡಿ ಬರುತ್ತಿದೆಯೆ ಅಥವಾ ಇಲ್ಲವೆ ಹಾಗೂ ನಿಖರವಾಗಿ ಎಷ್ಟು ಸಬ್ಸಿಡಿ ಬರುತ್ತಿದೆ ಎಂಬುದನ್ನು ಸುಲಭವಾಗಿ ಪರಿಶೀಲಿಸಬಹುದು. ಖಾತೆಗೆ ಸಬ್ಸಿಡಿ ಬಂದಿದೆಯೆ ಇಲ್ಲವೆ ಎಂಬುದನ್ನು ನೋಡಬೇಕಾದರೆ ಮೊದಲಿಗೆ www.mylpg.in ತೆರೆಯಿರಿ ನಂತರ ಪರದೆಯ ಬಲಭಾಗದಲ್ಲಿ ಗ್ಯಾಸ್ ಕಂಪನಿಗಳ ಗ್ಯಾಸ್ ಸಿಲಿಂಡರ್ ಗಳ ಫೋಟೋವನ್ನು ನೋಡಬಹುದು. ಅಲ್ಲಿ ನೀವು ನಿಮ್ಮ ಸೇವಾ ಪೂರೈಕೆದಾರರ ಗ್ಯಾಸ್ ಸಿಲಿಂಡರ್‌ನ ಫೋಟೋವನ್ನು ಕ್ಲಿಕ್ ಮಾಡಬೇಕು.

ನಂತರ ಗ್ಯಾಸ್ ಸರ್ವಿಸ್ ಪ್ರೊವೈಡರ್ ಆಗಿರುವ ಹೊಸ ವಿಂಡೊ ಪರದೆಯ ಮೇಲೆ ತೆರೆಯುತ್ತದೆ. ನಂತರ ಬಲಗಡೆ ಮೇಲ್ಭಾಗದಲ್ಲಿ ಸೈನ್-ಇನ್ ಮತ್ತು ಹೊಸ ಬಳಕೆದಾರ ಆಯ್ಕೆಯನ್ನು ಟ್ಯಾಪ್ ಮಾಡಬೇಕು. ಈಗಾಗಲೇ ನಿಮ್ಮ ಐಡಿಯನ್ನು ರಚಿಸಿದ್ದರೆ ನಂತರ ಸೈನ್-ಇನ್ ಮಾಡಬೇಕು. ಒಂದು ವೇಳೆ ಐಡಿ ಹೊಂದಿಲ್ಲದಿದ್ದರೆ

ನೀವು ಹೊಸ ಬಳಕೆದಾರರನ್ನು ಟ್ಯಾಪ್ ಮಾಡುವ ಮೂಲಕ ವೆಬ್‌ಸೈಟ್‌ಗೆ ಲಾಗಿನ್ ಮಾಡಬಹುದು. ನಂತರ ವಿಂಡೋದ ಬಲಭಾಗದಲ್ಲಿರುವ ವ್ಯೂ ಸಿಲಿಂಡರ್ ಬುಕ್ಕಿಂಗ್ ಹಿಸ್ಟರಿ ಮೇಲೆ ಟ್ಯಾಪ್ ಮಾಡಿ. ಯಾವ ಸಿಲಿಂಡರ್ ಮೇಲೆ ನಿಮಗೆ ಎಷ್ಟು ಸಬ್ಸಿಡಿ ನೀಡಲಾಗಿದೆ ಮತ್ತು ಯಾವಾಗ ನೀಡಲಾಗಿದೆ ಎಂಬ ಮಾಹಿತಿಯನ್ನು ಪಡೆಯಬಹುದು.

ಗ್ಯಾಸ್ ಬುಕ್ ಮಾಡಿದ್ದರೆ ಮತ್ತು ಸಬ್ಸಿಡಿ ಮೊತ್ತವನ್ನು ಸ್ವೀಕರಿಸದಿದ್ದರೆ ಪ್ರತಿಕ್ರಿಯೆ ಬಟನ್ ಅನ್ನು ಕ್ಲಿಕ್ ಮಾಡಬಹುದು ಇದರಿಂದ ಸಬ್ಸಿಡಿ ಹಣವನ್ನು ಸ್ವೀಕರಿಸದಿರುವ ಬಗ್ಗೆ ದೂರನ್ನು ಸಲ್ಲಿಸಬಹುದು. ಇದರ ಹೊರತಾಗಿ ಉಚಿತವಾಗಿ ಈ ಟೋಲ್ ಫ್ರೀ ಸಂಖ್ಯೆ 18002333555 ಗೆ ಕರೆ ಮಾಡುವ ಮೂಲಕ ದೂರನ್ನು ನೋಂದಾಯಿಸಬಹುದು. ಸಬ್ಸಿಡಿ ಬರದಿದ್ದರೆ ಸಬ್ಸಿಡಿ ಏಕೆ ಸ್ಥಗಿತಗೊಂಡಿದೆ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿದೆ.

ಎಲ್ ಪಿಜಿ ಮೇಲಿನ ಸಬ್ಸಿಡಿಯನ್ನು ನಿಲ್ಲಿಸಲು ದೊಡ್ಡ ಕಾರಣವೆಂದರೆ ಎಲ್ ಪಿಜಿ ಆಧಾರ್ ಲಿಂಕ್ ಮಾಡದಿರುವುದು. ವಾರ್ಷಿಕ ಆದಾಯ 10 ಲಕ್ಷ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚು ಇರುವ ಜನರಿಗೆ ಸಬ್ಸಿಡಿ ನೀಡಲಾಗುವುದಿಲ್ಲ. ಈ ಮಾಹಿತಿಯನ್ನು ತಪ್ಪದೆ ಎಲ್ಲಾ ಎಲ್ ಪಿಜಿ ಗ್ಯಾಸ್ ಬಳಸುತ್ತಿರುವ ಗ್ರಾಹಕರಿಗೆ ತಿಳಿಸಿ.


ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *