ಈಗಾಗಲೆ ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಮಹಿಳೆಯರ ಸಬಲೀಕರಣಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ರಾಜ್ಯ ಸರ್ಕಾರದಿಂದ ಗೃಹಲಕ್ಷ್ಮಿ ಯೋಜನೆ, ಕೇಂದ್ರ ಸರ್ಕಾರದಿಂದ ಉಜ್ವಲ ಯೋಜನೆಯಡಿ ಮಹಿಳೆಯರ ಹೆಸರಿನಲ್ಲಿ ಸಿಲಿಂಡರ್ ಭಾಗ್ಯ ಹೀಗೆ ಅನೇಕ ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಇದೀಗ ಕೇಂದ್ರ ಸರ್ಕಾರ ಮಹಿಳೆಯರಿಗಾಗಿ ಒಂದು ಹೊಸ ಗುಡ್ ನ್ಯೂಸ್ ನೀಡಿದೆ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ
ಕೇಂದ್ರ ಸರ್ಕಾರದಿಂದ ದೇಶದ ಜನತೆಗೆ ಗುಡ್ ನ್ಯೂಸ್ ಕೊಟ್ಟಿದೆ. ದೇಶದ ಎಲ್ಲ ಮಹಿಳೆಯರಿಗೆ ರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಕೇಂದ್ರದ ಮೋದಿ ಸರ್ಕಾರ ಬಂಪರ್ ಗಿಫ್ಟ್ ನೀಡುತ್ತಿದೆ. ಪ್ರತಿ ತಿಂಗಳು ಎಲ್ ಪಿಜಿ ಸಿಲಿಂಡರ್ ತುಂಬಿಸಿಕೊಳ್ಳುವ ದೇಶದ ಪ್ರತಿ ಬಡ ಕುಟುಂಬದ ಮಹಿಳೆಯರಿಗೆ ಕೇಂದ್ರದ ಮೋದಿ ಸರ್ಕಾರ ಧಿಡೀರನೆ ಗ್ಯಾಸ್ ಬೆಲೆಯಲ್ಲಿ ಭಾರಿ ಪ್ರಮಾಣದ ಇಳಿಕೆ ಮಾಡಿ ಬಂಪರ್ ಗಿಫ್ಟ್ ನೀಡಿದೆ. ಕೇಂದ್ರ ಸರ್ಕಾರ ಗ್ಯಾಸ್ ಬೆಲೆಯಲ್ಲಿ ಧಿಡೀರನೆ ಭಾರಿ ಇಳಿಕೆ ಮಾಡಿದೆ. ಏಲ್ ಪಿಜಿ ಗ್ಯಾಸ್ ಬಳಸುತ್ತಿದ್ದ ಪ್ರತಿ ಮನೆಯ ಮಹಿಳೆಯರಿಗೆ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಭರ್ಜರಿ ಗಿಫ್ಟ್ ನೀಡಿದ್ದಾರೆ.
ಇದೀಗ ಎಲ್ ಪಿಜಿ ಸಿಲಿಂಡರ್ ಮೇಲೆ ನೂರು ರೂಪಾಯಿಯನ್ನು ಕಡಿತಗೊಳಿಸಿದೆ. ಈ ಕುರಿತು ಅವರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನರೇಂದ್ರ ಮೋದಿ ಅವರು ಎಲ್ ಪಿಜಿ ಗ್ಯಾಸ್ ಸಿಲಿಂಡರ್ ನ ಬೆಲೆಯನ್ನು ನಮ್ಮ ಸರ್ಕಾರ ನೂರು ರೂಪಾಯಿಗೆ ಇಳಿಸಿದ್ದೇವೆ ಎಂದು ಹೇಳಿದ್ದಾರೆ. ಈ ಒಂದು ನಿರ್ಧಾರದಿಂದ ದೇಶದ ಲಕ್ಷಾಂತರ ಮಹಿಳೆಯರ ಕುಟುಂಬಗಳ ಮೇಲೆ ಆರ್ಥಿಕ ಹೊರೆಯನ್ನು ಗಮನಾರ್ಹವಾಗಿ ಕಡಿಮೆ ಮಾಡಲಿದೆ. ಇದರಿಂದ ನಮ್ಮ ನಾರಿ ಶಕ್ತಿ ಪ್ರಯೋಜನವನ್ನು ಪಡೆಯುತ್ತಾರೆ. ಅಡುಗೆ ಅನಿಲವನ್ನು ಹೆಚ್ಚು ಕೈಗೆಟಕುವ ದರದಲ್ಲಿ ಸಿಗುವಂತೆ ಮಾಡುವ ಮೂಲಕ ಕುಟುಂಬಗಳ ಯೋಗಕ್ಷೇಮವನ್ನು ಬೆಂಬಲಿಸಿರುವ ಮತ್ತು ಆರೋಗ್ಯಕರ ವಾತಾವರಣವನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿದೆ.
ಮಹಿಳೆಯರ ಸಬಲೀಕರಣ ಹಾಗೂ ಮಹಿಳೆಯರಿಗೆ ಸುಲಭವಾಗಿ ಖಾತರಿಪಡಿಸುವ ನಮ್ಮ ಬದ್ಧತೆಗೆ ಅನುಗುಣವಾಗಿ ನಡೆಯುವ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿದೆ. ಈಗಾಗಲೆ ರಾಜ್ಯ ಸರ್ಕಾರ ಮಹಿಳೆಯರ ಖಾತೆಗೆ ನೇರವಾಗಿ ಹಣ ಜಮಾ ಮಾಡುತ್ತಿದೆ ಅದರೊಂದಿಗೆ ಇದೀಗ ಕೇಂದ್ರ ಸರ್ಕಾರದ ಗುಡ್ ನ್ಯೂಸ್. ಕೇಂದ್ರದ ಮೋದಿ ಸರ್ಕಾರ ಗ್ಯಾಸ್ ಸಿಲಿಂಡರ್ ಮೇಲೆ 100 ರೂಪಾಯಿಯನ್ನು ಕಡಿತಗೊಳಿಸುವುದು ಮಹಿಳೆಯರಿಗೆ ಒಳ್ಳೆಯ ಸುದ್ದಿಯಂತು ಆಗಲಿದೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯ ನಮಗೆ ತಿಳಿಸಿ.