LPG cylinder Price: ದಿನನಿತ್ಯ ಬಳಕೆಗೆ ಬಳಸುವ ಪ್ರಮುಖವಾದ ವಸ್ತುಗಳಲ್ಲಿ LPG ಸಿಲಿಂಡರ್ ಕೂಡ ಒಂದು..ಪ್ರತಿದಿನ ಅಡುಗೆಗೆ ಇವು ಬೇಕು, ಆದರೆ ಇವುಗಳ ಬೆಲೆ ದುಬಾರಿ ಎಂದು ಬಹಳಷ್ಟು ಜನರು ಬೇಸರ ಪಟ್ಟುಕೊಂಡಿದ್ದು, ಸಿಲಿಂಡರ್ ಬೆಲೆ ಕಡಿಮೆ ಆಗಬೇಕು ಎಂದು ಬಯಸಿದ್ದು ಇದೆ. ಹಾಗಾಗಿ ಈಗ ದೇಶದ ಜನರಿಗೆ ಗ್ಯಾಸ್ ಸಿಲಿಂಡರ್ ವಿಚಾರದಲ್ಲಿ ಒಂದು ಗುಡ್ ನ್ಯೂಸ್ ಸಿಕ್ಕಿದೆ.

ಆಯಿಲ್ ಮಾರ್ಕೆಟಿಂಗ್ ಕಂಪನಿ ಈಗ LPG ಸಿಲಿಂಡರ್ ಬೆಲೆಯಲ್ಲಿ 39 ರೂಪಾಯಿಗಳನ್ನು ಕಡಿಮೆ ಮಾಡಿದೆ ಎಂದು ತಿಳಿದುಬಂದಿದೆ. ಕ್ರಿಸ್ಮಸ್ ಹಾಗೂ ಹೊಸವರ್ಷದ ಹಬ್ಬದ ಆಚರಣೆ ವೇಳೆ ಆಯಿಲ್ ಮಾರ್ಕೆಟಿಂಗ್ ಕಂಪನಿ ಇಂದ ಈ ಒಂದು ಗುಡ್ ನ್ಯೂಸ್ ಸಿಕ್ಕಿದೆ. ವಾಣಿಜ್ಯ ಬಳಕೆ ಮಾಡುವ 19 ಕೆಜಿ LPG ಸಿಲಿಂಡರ್ ನ ಬೆಲೆಯಲ್ಲಿ 39 ರೂಪಾಯಿಗಳನ್ನು ಕಡಿಮೆ ಮಾಡಲಾಗಿದೆ.

ಆದರೆ ಮನೆಗಳಲ್ಲಿ ಬಳಸುವ ಗೃಹಬಳಕೆ ಸಿಲಿಂಡರ್ ಗಳ ಬೆಲೆಯಲ್ಲಿ ಬದಲಾವಣೆ ಆಗಿಲ್ಲ ಎನ್ನುವುದು ಮತ್ತೊಂದು ಪ್ರಮುಖವಾದ ವಿಚಾರ. ಈ ಮೊದಲು ಡಿಸೆಂಬರ್ 1ರಂದು ವಾಣಿಜ್ಯ ಸಿಲಿಂಡರ್ ನ ಬೆಲೆಯಲ್ಲಿ 21 ರೂಪಾಯಿ ಏರಿಕೆ ಮಾಡಲಾಗಿತ್ತು. ಆದರೆ ಈಗ 39 ರೂಪಾಯಿ ಇಳಿಕೆ ಮಾಡಲಾಗಿದೆ. ಆದರೆ ಗೃಹಬಳಕೆ ಸಿಲಿಂಡರ್ ಬೆಲೆಯನ್ನು ನೋಡಿದರೆ ಆಗಸ್ಟ್ ಇಂದ ಯಾವುದೇ ಬದಲಾವಣೆ ಇಲ್ಲ.

2023ರ ಆಗಸ್ಟ್ 30ರಂದು ಗೃಹಬಳಕೆ ಸಿಲಿಂಡರ್ ಬೆಲೆಯನ್ನು 200 ರೂಪಾಯಿಗಳಷ್ಟು ಕಡಿಮೆ ಮಾಡಲಾಗಿತ್ತು. ಅದಾದ ಬಳಿಕ ಗೃಹಬಳಕೆ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಮತ್ತೆ ಯಾವಾಗ ಇಳಿಕೆ ಆಗುತ್ತದೆ ಎಂದು ಕಾದು ನೋಡಬೇಕಿದೆ.

By

Leave a Reply

Your email address will not be published. Required fields are marked *