LPG cylinder: ಈಗ ಎಲ್ಲರ ಮನೆಯಲ್ಲಿ ಕೂಡ ಗ್ಯಾಸ್ ಸಿಲಿಂಡರ್ ಇದ್ದೇ ಇರುತ್ತದೆ. ಒಂದು ವೇಳೆ ನಿಮ್ಮ ಮನೆಯಲ್ಲಿ ಕೂಡ ಗ್ಯಾಸ್ ಸಿಲಿಂಡರ್ ಇದ್ದರೆ ಸರ್ಕಾರ ಇದೀಗ ಸಿಲಿಂಡರ್ (LPG cylinder) ಹೊಂದಿರುವ ಎಲ್ಲರಿಗೂ ಹೊಸದೊಂದು ನಿಯಮವನ್ನು ಜಾರಿಗೆ ತಂದಿದೆ. ಒಂದು ವೇಳೆ ನೀವು ಈ ಕೆಲಸ ಮಾಡಲಿಲ್ಲ ಎಂದರೆ, ನಿಮ್ಮ ಮನೆಯ ಗ್ಯಾಸ್ ಸಿಲಿಂಡರ್ ಅನ್ನು ರದ್ದುಗೊಳಿಸಬಹುದು. ಕೇಂದ್ರ ಸರ್ಕಾರವು ಕಷ್ಟದಲ್ಲಿರುವ ಜನರಿಗೆ ಉಚಿತವಾಗಿ ಗ್ಯಾಸ್ ಸಿಲಿಂಡರ್ ನೀಡುವ ಯೋಜನೆಯನ್ನು ಜಾರಿಗೆ ತಂದಿದೆ.
ಅದರ ಜೊತೆಗೆ ಗ್ಯಾಸ್ ಸಿಲಿಂಡರ್ ಗಳನ್ನು ಬಳಸುವುದಕ್ಕೆ ಕೆಲವು ನಿಯಮಗಳನ್ನು ಪಾಲಿಸಬೇಕಾಗಿದೆ. ಈ ನಿಯಮಗಳು ಹೆಚ್ಚಾಗಿ ಯಾರಿಗೂ ಗೊತ್ತಿರುವುದಿಲ್ಲ, ಹಾಗಾಗಿ ನೀವು ಮೊದಲಿಗೆ ನಿಯಮವನ್ನು ತಿಳಿದುಕೊಂಡು, ಗ್ಯಾಸ್ ಸಿಲಿಂಡರ್ ಬಳಸಬೇಕು. ನಿಮ್ಮ ಮನೆಯ ಗ್ಯಾಸ್ ಸಿಲಿಂಡರ್ ಗಳನ್ನು ಹುಷಾರಾಗಿ ನೋಡಿಕೊಳ್ಳಬೇಕು. ನಿಮ್ಮ ಮನೆಯಲ್ಲಿರುವ ಸಿಲಿಂಡರ್ ಫೇಕ್ ಆದರೆ, ಮುಂದೆ ನಿಮಗೇ ಸರ್ಕಾರದಿಂದ ತೊಂದರೆ ಆಗುತ್ತದೆ.
ಈ ಕಾರಣಕ್ಕೆ ಕೇಂದ್ರ ಸರ್ಕಾರದ ಎಲ್ಲಾ ನಿಯಮಗಳನ್ನು ಪಾಲನೆ ಮಾಡುವುದು ಒಳ್ಳೆಯದಾಗಿದೆ. ಮನೆಯಲ್ಲಿ ಸಿಲಿಂಡರ್ ಬಳಸಿ ಅಡುಗೆ ಮಾಡುವಾಗ, ಜಾಗ್ರತೆಯಿಂದ ಇರಲಿಲ್ಲ ಎಂದರೆ ಸಿಲಿಂಡರ್ ಬಸ್ಟ್ ಆಗುವ ಸಾಧ್ಯತೆ ಜಾಸ್ತಿ ಇರುತ್ತದೆ. ಹಾಗಾಗಿ ನೀವು ಹುಷಾರಾಗಿ ಅಡುಗೆ ಮಾಡಬೇಕು. ಈ ಕಾರಣಕ್ಕೆ ಸರ್ಕಾರವು ನಿಯಮವನ್ನು ತಂದಿದ್ದು, ಮನೆಯ ಸಿಲಿಂಡರ್ ಗಳಿಗೆ ಪಂಚವಾರ್ಷಿಕ ಅನಿಲ ತಪಾಸಣಾ ಪತ್ರ ಇರುವುದು ಒಳ್ಳೆಯದು ಎನ್ನಲಾಗಿದೆ.
ಸಿಲಿಂಡರ್ ನ ಸುರಕ್ಷತೆಯ ವಿಷಯಕ್ಕೆ ಈ ಚೆಕ್ ಮಾಡಿಸಿಕೊಳ್ಳುವುದು ಒಳ್ಳೆಯದು ಎಂದು ಸರ್ಕಾರ ಈ ನಿಯಮವನ್ನು ಜಾರಿಗೆ ತಂದಿದೆ. ಈ ತಪಾಸಣೆ ಮಾಡಿಸಿಕೊಂಡು, ಎಲ್ಲ ಸಿಲಿಂಡರ್ ಗಳು ಸುರಕ್ಷಿತವಾಗಿ ಇದ್ದರೆ ಮಾತ್ರ, ಸಿಲಿಂಡರ್ ಬಳಕೆ ಮಾಡಬಹುದು. ಇಲ್ಲದೆ ಹೋದರೆ ನಿಮ್ಮ ಮನೆಯ ಗ್ಯಾಸ್ ಸಿಲಿಂಡರ್ ಅನ್ನು ರದ್ದು ಮಾಡಲಾಗುತ್ತದೆ. ಮನೆಯಲ್ಲಿ ಸಿಲಿಂಡರ್ ಬಳಸುವವರು ಈ ಟೆಸ್ಟ್ ಮಾಡಿಸಿಕೊಳ್ಳುವುದು ಒಳ್ಳೆಯದು.
ಈ ಟೆಸ್ಟ್ ಮಾಡಲು ಭಾರತ್ ಗ್ಯಾಸ್ ನ ಕೆಲಸಗಾರರನ್ನು ನೇಮಕ ಮಾಡಲಾಗುತ್ತದೆ. ಸಿಬ್ಬಂದಿಗಳೇ ಮನೆಗೆ ಬಂದು, ನಿಮ್ಮ ಮನೆಯ ಗ್ಯಾಸ್ ಸಿಲಿಂಡರ್ ಅನ್ನು ಚೆಕ್ ಮಾಡಿ, ಸುರಕ್ಷಿತವಾಗಿದೆಯೋ, ಇಲ್ಲವೋ ಎನ್ನುವುದನ್ನು ಚೆಕ್ ಮಾಡುತ್ತಾರೆ. ಈ ತಪಾಸಣೆ ಮಾಡಿಸಲು, 150 ರೂಪಾಯಿಗಳನ್ನು ನೀವು ಸಿಬ್ಬಂದಿಗಳಿಗೆ ಪಾವತಿ ಮಾಡಬೇಕಾಗುತ್ತದೆ. ಹಾಗೆಯೇ ರಶೀದಿಯನ್ನು ಸಹ ಪಡೆಯಬೇಕು. ಇದಷ್ಟೇ ಅಕ್ಕದೆ ಪೈಪ್ ಲೈನ್ ಕನೆಕ್ಷನ್ ಇರುವವರಃ ಪೈಪ್ ಲೈನ್ ಅನ್ನು ಕೂಡ ಟೆಸ್ಟ್ ಮಾಡಲಾಗುತ್ತದೆ.
ಹಾಗೆಯೇ ರಬ್ಬರ್ ಟಬ್ ಗಳನ್ನು ಕೂಡ ಚೆಕ್ ಮಾಡಬೇಕಾಗುತ್ತದೆ. ನಂತರ ನಿಮ್ಮ ಮನೆಯ ಸಿಲಿಂಡರ್ ಸುರಕ್ಷಿತವಾಗಿದೆಯೇ ಇಲ್ಲವೇ ಎನ್ನುವುದನ್ನು ಚೆಕ್ ಮಾಡಿಕೊಳ್ಳಬೇಕು. ಸಿಲಿಂಡರ್ ಸುರಕ್ಷಿತವಾಗಿದ್ದರೆ, ನಿಮಗೆ ಯಾವುದೇ ತೊಂದರೆ ಆಗುವುದಿಲ್ಲ.