ಈಗಿನ ಬದಲಾದ ಜೀವನ ಶೈಲಿಯಲ್ಲಿ ರಕ್ತದ ಒತ್ತಡ ಎಂಬುದು ಜನರಲ್ಲಿ ಸರ್ವೇಸಾಮಾನ್ಯವಾದ ಸಮಸ್ಯೆಯಾಗಿದೆ. ಮೂವರಲ್ಲಿ ಒಬ್ಬರಿಗೆ ಬಿಪಿ ಇದ್ದೇ ಇರುತ್ತದೆ. ಹೈ ಬಿಪಿ ಅಥವಾ ಅಧಿಕ ರಕ್ತದ ಒತ್ತಡದಂತೆಯೇ ಲೋ ಬಿಪಿ ಅಥವಾ ಹೈಪೋಟೆನ್ಶನ್ ಕೂಡ ಮನುಷ್ಯನಿಗೆ ಅಪಾಯಕಾರಿ. ಮನುಷ್ಯನಿಗೆ ಅವನ ದೇಹದಲ್ಲಿ ರಕ್ತದ ಒತ್ತಡ ಹಲವು ಕಾರಣಗಳಿಂದ ಕುಸಿತ ಕಾಣುತ್ತದೆ. ಆದ್ದರಿಂದ ನಾವು ಇಲ್ಲಿ ಲೋ ಬಿಪಿಗೆ ಮನೆಮದ್ದಿನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.

ಲೋ ಬಿಪಿ ಇದು ತೊಂದರೆಯಲ್ಲ. ಆದರೆ ಬಿಪಿ ಬಹಳ ಕಡಿಮೆ ಆದರೆ ಸಮಸ್ಯೆ ಉಂಟಾಗುತ್ತದೆ. ಅದರಲ್ಲಿ ಮುಖ್ಯವಾದದ್ದು ಡಿಹೈಡ್ರೇಷನ್ ಅಂದರೆ ನಿರ್ಜಲೀಕರಣ. ಮನುಷ್ಯನ ದೇಹದಲ್ಲಿ ನೀರಿನ ಮಟ್ಟ ಕಡಿಮೆಯಾದರೆ ರಕ್ತದ ಒತ್ತಡದ ಮಟ್ಟ ಕೂಡ ಕುಸಿಯುತ್ತದೆ. ಇದಕ್ಕೆ ಪರಿಹಾರ ಎಂಬಂತೆ ನಿಂಬೆ ಹಣ್ಣಿನ ರಸ ಉತ್ತಮ ಎಂದು ಸಾಬೀತಾಗಿದೆ. ತಾಜಾ ನಿಂಬೆ ಹಣ್ಣಿನ ರಸದಲ್ಲಿ ವಿಟಮಿನ್ ಸಿ ಅಂಶ ಇರುತ್ತದೆ. ಇದು ಮನುಷ್ಯನ ದೇಹದಲ್ಲಿ ರಕ್ತ ಸಂಚಾರವನ್ನು ಸುಗಮಗೊಳಿಸಿ ರಕ್ತದ ಒತ್ತಡದ ಮಟ್ಟವನ್ನು ಸಾಮಾನ್ಯವಾಗಿಸುತ್ತದೆ.

ಎರಡು ಲೋಟ ನೀರನ್ನು ಮೊದಲು ತೆಗೆದುಕೊಳ್ಳಬೇಕು. ನಂತರದಲ್ಲಿ ಅದಕ್ಕೆ ಒಂದು ನಿಂಬೆಹಣ್ಣನ್ನು ಕೊರೆದು ರಸವನ್ನು ಹಿಂಡಬೇಕು. ಅದಕ್ಕೆ ಎರಡು ಚಮಚ ಉಪ್ಪನ್ನು ಹಾಕಬೇಕು. ಇದನ್ನು ಕುಡಿಯುತ್ತಾ ಬರುವುದರಿಂದ ಲೋ ಬಿಪಿ ಕಡಿಮೆಯಾಗುತ್ತದೆ. ಹಾಗೆಯೇ ಆಯುರ್ವೇದದ ಒಂದು ಪಾನೀಯವನ್ನು ಕೂಡ ಮಾಡಿಕೊಂಡು ಕುಡಿಯಬಹುದು. ಒಂದು ಲೋಟ ನೀರಿಗೆ ಸಫೇದ್ ಮುಸ್ಲಿಯ ಪುಡಿಯನ್ನು ಹಾಕಬೇಕು. ಇದು ಔಷಧಿ ಅಂಗಡಿಗಳಲ್ಲಿ ಸಿಗುತ್ತದೆ. ಇದು ಒಂದು ಬೇರಾಗಿದ್ದು ಇದನ್ನು ತಂದು ಪುಡಿ ಮಾಡಿಕೊಳ್ಳಬೇಕು.

ಹಾಗೆಯೇ ನಂತರದಲ್ಲಿ ಅರ್ಧ ಚಮಚ ಕಪಿಕಚ್ಚಿನ ಪುಡಿಯನ್ನು ಹಾಕಬೇಕು. ಇದು ಕೂಡ ಅಂಗಡಿಯಲ್ಲಿ ಸಿಗುತ್ತದೆ. ನಂತರದಲ್ಲಿ ಶತಾವರಿಯನ್ನು ಪುಡಿ ಮಾಡಿ ಅರ್ಧ ಚಮಚ ಹಾಕಬೇಕು. ಕೊನೆಯದಾಗಿ ಅಮೃತಬಳ್ಳಿಯನ್ನು ಒಣಗಿಸಿ ಪುಡಿ ಮಾಡಿ ಹಾಕಬೇಕು. ಇವೆಲ್ಲವನ್ನೂ ಒಂದು ಲೋಟ ನೀರಿಗೆ ಹಾಕಬೇಕು. ಇದಕ್ಕೆ ಜೇನುತುಪ್ಪ ಅಥವಾ ಬೆಲ್ಲವನ್ನು ಹಾಕಿಕೊಂಡು ಕುಡಿಯಬಹುದು. ಜೇನುತುಪ್ಪವನ್ನು ಹಾಕಿಕೊಂಡರೆ ರುಚಿ ಸಿಗುತ್ತದೆ. ಇದರಿಂದ ಲೋ ಬಿಪಿ ಕಡಿಮೆಯಾಗುತ್ತದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!