ಈಶ್ವರನು ಹಿಂದೂ ಧರ್ಮದಲ್ಲಿ ಒಬ್ಬ ವಿಶಿಷ್ಟವಾದ ದೇವರು ಮತ್ತು ಅತಿಹೆಚ್ಚು ಮಹತ್ವವುಳ್ಳ ದೇವರು ಯಾಕಂದ್ರೆ ಶಿವನ ಲೀಲೆಯೂ ವಿಚಿತ್ರ ಅಲ್ಲದೇ ಶಿವನ ಚರಿತ್ರೆಯೂ ಸಹ ವಿಚಿತ್ರ ಯಾಕಂದ್ರೆ ಶಿವನು ತೊಡುವ ಹುಲಿಯ ಚರ್ಮ ಶಿವನ ತಲೆಯ ಮೇಲಿರುವ ಚಂದ್ರ ಮತ್ತು ಗಂಗೆ ಈ ಎಲ್ಲವೂ ಒಂದಕ್ಕಿಂತ ಒಂದು ವಿಶಿಷ್ಟವಾದ ರೀತಿಯಲ್ಲಿಯೇ ನಮಗೆ ಕಾಣಸಿಗುತ್ತವೆ ಆದರೆ ಅವೆಲ್ಲಕ್ಕಿಂತ ವಿಶಿಷ್ಟವಾದದ್ದು ಯಾವುದೆಂದರೆ ಶಿವನ ಕುತ್ತಿಗೆಯಲ್ಲಿ ಬಿಗಿದಿರುವಂತಹ ಹಾವು ಹಾಗಾದ್ರೆ ಶಿವನ ಕುತ್ತಿಗೆಗೆ ಹಾವನ್ನು ಬೀಗಿದದ್ದು ಯಾಕೆ ಇದರ ಹಿಂದಿರುವ ಪವಾಡಗಳು ಮತ್ತು ರಹಸ್ಯಗಳ ಬಗ್ಗೆ ನಾವು ನಿಮಗೆ ಹೆಚ್ಚು ಮಾಹಿತಿಯನ್ನು ನೀಡುತ್ತೇವೆ ಬನ್ನಿ
ಶಿವನ ಕುತ್ತಿಗೆಯಲ್ಲಿರುವ ನಾಗರ ಹಾವು ಬೇರೆ ಯಾರು ಅಲ್ಲ ಅದು ನಾಗಲೋಕದ ರಾಜ ವಾಸುಕಿ ಆದರೆ ವಾಸುಕೆಯೇ ಶಿವನ ಕುತ್ತಿಗೆಗೆ ಸೇರಿರುವುದರ ಹಿಂದಿರುವ ರಹಸ್ಯವನ್ನು ನಮ್ಮ ಹಲವಾರು ಪುರಾಣಗಳು ಹಲವಾರು ರೀತಿಗಳಲ್ಲಿ ವಿಶ್ಲೇಶಿಸಿವೆ, ಅದರಲ್ಲಿಯೂ ವಿಶೇಷವಾಗಿ ಮತ್ತು ಮೊದಲನೆಯದಾಗಿ ವಾಸುಕಿಯು ನಾಗಲೋಕದ ಎಲ್ಲಾ ನಾಗಗಳಿಗೆ ರಾಜನಾಗಿರುತ್ತಾನೆ. ಹೀಗಿರುವಾಗ ವಾಸುಕಿಯು ಶಿವನ ಅಪ್ಪಟ ಭಕ್ತನಾಗಿದುದಲ್ಲದೇ ಸಾದಾ ಶಿವನ ಆರಾಧನೆಯನ್ನು ಚಾಚೂ ತಪ್ಪದೇ ಮಾಡುತ್ತಿರುತ್ತಾನೆ.
ಹೀಗೆ ವಾಸುಕಿಯ ಶಿವ ಭಕ್ತಿಗೆ ಮೆಚ್ಚಿದ ಶಿವನು ಪ್ರತ್ಯಕ್ಷನಾಗಿ ವಾಸುಕಿಗೆ ತನ್ನ ದರ್ಶನ ಭಾಗ್ಯವನ್ನು ಕರುಣಿಸಿ ಯಾವುದಾದರೂ ವರವನ್ನು ಬೇಡಿಕೊಳ್ಳುವಂತೆ ಹೇಳುತ್ತಾನೆ, ಇದರಿಂದ ಸಂತೋಷಗೊಂಡ ವಾಸುಕಿಯು ಶಿವನಲ್ಲಿ ತಾನು ಸಾದಾ ನಿಮ್ಮ ಸಂಗಡದಲ್ಲಿದ್ದುಕೊಂಡು ಮಿಕ್ಕೆಲ್ಲಾ ದೇವ ಗಣಗಳ ಜೊತೆಗೆ ಸೇರಿ ತಾನೂ ಶಿವ ಸೇವೆಯನ್ನು ಮಾಡಲು ಅವಕಾಶ ಮಾಡಿಕೊಡಬೇಕಾಗಿ ಶಿವನಲ್ಲಿ ಬೇಡಿಕೊಳ್ಳುತ್ತಾನೆ. ಆದ್ದರಿಂದ ಶಿವನು ವಾಸುಕಿಯನ್ನು ತೆಗೆದುಕೊಂಡು ತನ್ನ ಕುತ್ತಿಗೆಗೆ ಸುತ್ತಿಕೊಳ್ಳುತ್ತಾನೆ ಎಂಬುದು ಒಂದು ಕತೆಯಾದರೆ ಮತ್ತೊಂದು ಕಥೆ ಸಮುದ್ರ ಮಂತನದ ಸಮಯದಲ್ಲಿ ಬರುತ್ತದೆ.
ಸುರರು ಮತ್ತು ಅಸುರರು ಸೇರಿಕೊಂಡು ಸಮುದ್ರ ಮಂಥನವನ್ನು ಮಾಡುವಂತಹ ಸಮಯದಲ್ಲಿ ವಾಸುಕಿಯನ್ನು ಆ ಪರ್ವತಕ್ಕೆ ಹಗ್ಗವಾಗಿ ಸಮುದ್ರವನ್ನು ಕಡೆಯಲು ಬಳಸಿಕೊಳ್ಳಲಾಗಿತ್ತು, ಹೀಗೆ ಕಡಲನ್ನು ಕಡೆಯುವ ಸಮಯದಲ್ಲಿ ವಾಸುಕಿಯ ಮೈ ಮೇಲೆ ಸುಮಾರು ಗಾಯಗಳಾಗಿದ್ದವು ಅಲ್ಲದೇ ಸಮುದ್ರ ಮಂತನದ ಸಂದರ್ಭದದಲ್ಲಿ ಉಧ್ಬವಿಸಿದ ವಿಷವನ್ನು ನೀಲಕಂಟನು ಕುಡಿಯುತ್ತಾನೆ ಆ ವೇಳೆ ಶಿವನೊಂದಿಗೆ ವಾಸುಕಿ ಸೇರಿದಂತೆ ಹಲವಾರು ನಾಗಗಳು ಆ ವಿಷವನ್ನು ಕುಡಿದವಂತೆ ವಾಸುಕಿಯ ಈ ನಿಸ್ವಾರ್ಥ ಸೇವೆಗೆ ಮೆಚ್ಚಿದ ಶಿವನು ವಾಸುಕಿಯನ್ನು ತೆಗೆದು ತನ್ನ ಕುತ್ತಿಗೆಗೆ ಸುತ್ತಿಕೊಂಡನಂತೆ.
ಇನ್ನೂ ಮತ್ತೊಂದು ಕಥೆ ಶಿವ ಮತ್ತು ಪಾರ್ವತಿಯ ಮದುವೆಯ ಸಮಯದಲ್ಲಿ ನಡೆಯುವಂತಹದ್ದು ಈ ಕಥೆಯ ಪ್ರಾಕಾರ ಶಿವನು ಪಾರ್ವತಿಯನ್ನು ವರಿಸುವ ಸಮಯದಲ್ಲಿ ಎಲ್ಲಾ ದೇವಗಣಗಳು ಶಿವನ ಬಳಿ ಬಂದು ಅಲಂಕಾರ ಮಾಡಿಕೊಳ್ಳಿ ಎಂಬುದಾಗಿ ಬೇಡಿಕೊಳ್ಳುತ್ತಾರೆ, ಆದ್ದರಿಂದ ಅವರ ಬೇಡಿಕೆಗೆ ಮಣಿದ ಶಿವನು ತನ್ನ ಶೃಂಗಾರದ ಜವಾಬ್ದಾರಿಯನ್ನು ನಾಗಗಳಿಗೆ ವಹಿಸುತ್ತಾರೆ. ಆ ಸಮಯದಲ್ಲಿ ಶಿವನ ಅಲಂಕಾರವಾಗಿ ವಾಸುಕಿಯು ಶಿವನ ಕುತ್ತಿಗೆಗೆ ಸುತ್ತಿಕೊಳ್ಳುತ್ತಾನೆ, ಆದರೆ ವಾಸುಕಿಯು ತನ್ನ ಮೇಲೆ ಇಟ್ಟಿರುವ ಪ್ರೀತಿಗೆ ಮತ್ತು ಭಕ್ತಿಯನ್ನರಿತು ವಿವಾಹದ ನಂತರವೂ ಶಿವನು ವಾಸುಕಿಯನ್ನು ತನ್ನ ಕುತ್ತಿಗೆಯಲ್ಲಿಯೇ ಇರಿಸಿಕೊಳ್ಳುತ್ತಾನೆ ಅಲ್ಲದೇ ತಾನೂ ನಂದಿಯನ್ನು ಪ್ರೀತಿಸುವಷ್ಟೆ ವಾಸುಕಿಯನ್ನು ಪ್ರೀತಿಸುತ್ತಾನೆ.