ಯಾವುದೇ ಬ್ಯಾಂಕ್ ಮತ್ತು ಫೈನಾನ್ಸ್ ಕಂಪನಿಗಳಲ್ಲಿ ಸಾಲ ಮಾಡಿರುವ ರೈತರಿಗೆ ಖುಷಿ ಕೊಡುವ ವಿಚಾರ ಹೇಳಿದೆ ಸರ್ಕಾರ. ರೈತರು ಅವರ ಕೃಷಿ ಚಟುವಟಿಕೆ ( Agriculture activities ) ಗಳಿಗೆ ಅವಶ್ಯಕವಾದ ವಸ್ತುಗಳನ್ನು ಒದಗಿಸಲು ಅತಿ ದೊಡ್ಡ ಪ್ರಮಾಣದಲ್ಲಿ ಬಂಡವಾಳ ಹೂಡಿಕೆ ಮಾಡಬೇಕಾಗುತ್ತದೆ. ಆದರೆ, ಅಷ್ಟು ಬಂಡವಾಳ ಎಲ್ಲಾ ರೈತರ ಹತ್ತಿರ ಇರುವುದಿಲ್ಲ.

ಆ ರೀತಿಯ ಸಮಯದಲ್ಲಿ ರೈತರು ಬೆಳೆ ಸಾಲದ ( Loan ) ಮೊರೆ ಹೋಗಬೇಕಾಗುತ್ತದೆ. ಯಾವುದೇ, ರೈತರಿಗೆ ನಿಶ್ಚಿತ ಆದಾಯ ಗಳಿಕೆ ಎಂದು ಇರುವುದಿಲ್ಲ. ಅದರಿಂದ, ಬಂಡವಾಳ ಹೂಡಿಕೆ ಮಾಡಿ ಸರಿಯಾದ ರೀತಿಯಲ್ಲಿ ಬೆಳೆ ಬೆಳೆದು ಫಸಲು ಚೆನ್ನಾಗಿ ಬಂದರೆ ಮಾತ್ರ ಪಡೆದಿರುವ ಸಾಲವನ್ನು ಮರುಪಾವತಿ ( Loan Re Payment ) ಮಾಡಿ ಒಂದಿಷ್ಟು ಉಳಿತಾಯ ( saving ) ಮಾಡಬಹುದು.ಅದೇ, ಫಸಲು ಸರಿಯಾಗಿ ಬಾರದೆ ಹೋದರೆ ಬೆಳೆ ಸಾಲ ಮರಳಿ ಕೊಡುವುದಕ್ಕೂ ಸಹ ಕಷ್ಟಪಡುವ ಪರಿಸ್ಥಿತಿ ಬರುತ್ತದೆ. ರಾಜ್ಯ ಸರ್ಕಾರ ಈ ಕುರಿತು ಯೋಚನೆ ಮಾಡಿದ್ದು ರೈತರಿಗೆ ಅನುಕೂಲ ಆಗುವ ಯೋಜನೆಗಳನ್ನು ಪರಿಚಯ ಮಾಡಿದೆ. ವಿಧಾನಸಭಾ ಚುನಾವಣೆಯ ಸಮಯದಲ್ಲಿ ಸರ್ಕಾರ ಘೋಷಣೆ ಮಾಡಿದಂತೆ 5 ಗ್ಯಾರಂಟಿ ಯೋಜನೆಗಳನ್ನ ಜಾರಿ ಮಾಡಿದೆ.

ಇದರಲ್ಲಿ ರೈತರಿಗೆ, ಬಡವರಿಗೆ ಮತ್ತು ಮಹಿಳೆಯರಿಗೆ ಅನುಕೂಲ ಆಗುವ ಯೋಜನೆಗಳು ಇಂದಿಗೂ ಜನರಿಗೆ ತುಂಬ ಪ್ರಯೋಜನಕಾರಿ ಆಗಿವೆ ಎನ್ನಬಹುದು. ಇದರಿಂದ, ಲೋಕಸಭಾ ಚುನಾವಣೆಯ ಸಮಯದಲ್ಲಿ ಸಹ ರಾಜ್ಯ ಸರ್ಕಾರ ಅವರು ಗೆಲ್ಲುವುದಕ್ಕೆ ಕಾರಣವಾಗಿದ್ದ ಗ್ಯಾರಂಟಿ ಯೋಜನೆ ( guarantee schemes ) ಗಳನ್ನು ದೇಶದ ಜನತೆಗೆ ಕೊಡುವ ಕುರಿತು ಈಗಾಗಲೇ, ಹೆಚ್ಚಿನ ಬಾರಿ ಹೇಳಿಕೊಂಡಿದೆ. ಇದರೊಂದಿಗೆ, ಸಾರ್ವಜನಿಕರಿಗೆ ಬ್ಯಾಂಕ್’ಗಳಲ್ಲಿ ( Banks ) ಹಾಗೂ ಸಂಘ ಸಂಸ್ಥೆಗಳಲ್ಲಿ ಸಾಲ ಮಾಡಿದರೆ ಆಗ ರೀತಿಯ ಜನರಿಗೆ ಒಳ್ಳೆಯ ಸುದ್ದಿಯನ್ನು ಸಹ ಸರ್ಕಾರ ನೀಡಿದೆ.

ಕಮ್ಮಿ ಬಡ್ಡಿ ದರದಲ್ಲಿ ಸಾಲ ( Low cost loan ) ರೈತರು ಯಾವುದೇ ಸರ್ಕಾರಿ ಬೆಂಬಲಿತ ಬ್ಯಾಂಕ್’ಗಳಲ್ಲಿ ಇಲ್ಲವೇ ಸಹಕಾರಿ ಸಂಘಗಳಲ್ಲಿ ಸಾಲ ( Loan ) ಪಡೆದುಕೊಂಡರೆ. ಆ ರೀತಿಯ ಜನರಿಗೆ ಅತಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಒದಗಿಸಬೇಕು ಎಂದು ಸರ್ಕಾರ ಸೂಚನೆ ಕೊಟ್ಟಿದೆ. ಕೃಷಿ ಕೆಲಸಗಳನ್ನು ಮಾಡಲು ರೈತರು ಸಾಲ ಮಾಡುತ್ತಾರೆ. ಈ ರೀತಿ, ಬೆಳೆ ಸಾಲ ಮಾಡಿದಾಗ ಅದನ್ನು ತಿರುಗಿ ಕೊಡಲು ಸಹ ರೈತರು ಕಷ್ಟ ಪಡಬೇಕಾಗುತ್ತದೆ. ಆದರೆ, ಸರ್ಕಾರ ಕಮ್ಮಿ ಬಡ್ಡಿ ದರದಲ್ಲಿ ಸಾಲ ನೀಡುವುದರ ಮುಖಾಂತರ ರೈತರಿಗೆ ಸುಲಭವಾಗಿ ಸಾಲವನ್ನು ಮರುಪಾವತಿ ಮಾಡಲು ಅವಕಾಶ ಮಾಡಿಕೊಡುತ್ತಿದೆ.

ಈಗಾಗಲೇ, ಲೋಕಸಭೆ ಚುನಾವಣೆಯ ಮೊದಲನೆಯ ಹಂತ ಮುಕ್ತಾಯಗೊಂಡಿದೆ. ಇನ್ನು ಮೇ 7 2024 ಮತ್ತೊಂದು ಹಂತದ ಮತದಾನ ನಡೆಯುತ್ತದೆ. ಈ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರದಿಂದ ಹಿಡಿದು ರಾಜ್ಯ ಸರ್ಕಾರದ ತನಕ ಎಲ್ಲಾ ವಿವಿಧ ಸರ್ಕಾರಗಳು ಸಹ ಜನರಿಗೆ ಅಗತ್ಯವಾದ ಹಲವು ಪ್ರಮುಖ ಯೋಜನೆಗಳನ್ನು ಘೋಷಣೆ ಮಾಡಿವೆ.

ಎಷ್ಟು ಬಾರಿ ಸರ್ಕಾರ ಯೋಜನೆಗಳನ್ನು ಜಾರಿಗೆ ತಂದರು ಅದು, ರೈತರ ತನಕ ತಲುಪುವುದೇ ಇಲ್ಲ ಯಾಕೆಂದರೆ, ಈ ಯೋಜನೆಗಳ ಕುರಿತು ಹಳ್ಳಿ ಪ್ರದೇಶಗಳಲ್ಲಿ ವಾಸಿಸುವ ರೈತರಿಗೆ ತಿಳಿದಿರುವುದಿಲ್ಲ. ಇನ್ನು, ಮುಂದೆ ಸರ್ಕಾರ ಸಾಲ ಸೌಲಭ್ಯದ ಕುರಿತು ಮತ್ತು ರೈತರಿಗೆ ಇರುವ ಬೇರೆ ಬೆನಿಫಿಟ್ ಕುರಿತು ಮಾಹಿತಿ ನೀಡಲು ಸಹ ಉಪಕ್ರಮ ಕೈಗೊಂಡಿದೆ. ಇನ್ನು, ಮುಂದೆ ಲೇವಾದೇವಿ ವ್ಯವಹಾರ ಮಾಡುವ ಜನರ ಹತ್ತಿರ ಕೈಚಾಚಿ ಅತಿ ಹೆಚ್ಚಿನ ಬಡ್ಡಿ ದರಕ್ಕೆ ರೈತರು ಸಾಲ ತೆಗೆದುಕೊಂಡು ಅವರ ಮನೆ ಮಠ ಮಾರಾಟ ಮಾಡಿಕೊಳ್ಳುವ ಅಗತ್ಯ ಇರುವುದಿಲ್ಲ. ಅದರ ಬದಲು ಸರ್ಕಾರಿ ಸ್ವಾಮ್ಯದ ಬ್ಯಾಂಕ್’ಗಳಲ್ಲಿ ಇಲ್ಲವೇ ಸಹಕಾರ ಸಂಘಗಳಲ್ಲಿ ಕಮ್ಮಿ ಬಡ್ಡಿ ದರಕ್ಕೆ ಸಾಲ ತೆಗೆದುಕೊಂಡು ಅವರ ಕೃಷಿ ಕೆಲಸಗಳನ್ನು ಅಗತ್ಯಗಳನ್ನು ಪೂರೈಕೆ ಮಾಡಿಕೊಳ್ಳಬಹುದು ಮತ್ತು ಸಾಲವನ್ನು ಸುಲಭವಾಗಿ ಮರುಪಾವತಿ ಮಾಡಿಕೊಳ್ಳಬಹುದು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!