Lineman jobs: ನಮ್ಮ ದೇಶದಲ್ಲಿ ಕೆಲಸಕ್ಕಾಗಿ ಕಾಯುತ್ತಿರುವ ಸಾಕಷ್ಟು ಯುವಕ ಯುವತಿಯರಿದ್ದಾರೆ. ಅವರಿಗೆಲ್ಲಾ ಓದಿದ್ದರು ಸಹ ಒಳ್ಳೆಯ ಕೆಲಸ ಸಿಗುತ್ತಿಲ್ಲ. ಒಳ್ಳೆಯ ಅವಕಾಶಕ್ಕಾಗಿ ಕಾಯುತ್ತಿದ್ದಾರೆ, ಅಂಥವರಿಗೆ ಈಗ ಸರ್ಕಾರವು ಹೊಸದೊಂದು ಅವಕಾಶ ತಂದಿದೆ. ಈ ಬಗ್ಗೆ ಇಂಧನ ಇಲಾಖೆಯ ಸಚಿವರಾದ ಕೆ.ಜೆ. ಜಾರ್ಜ್ ಅವರು ಮಾಹಿತಿ ನೀಡಿದ್ದಾರೆ.
ಮಾಧ್ಯಮದ ಜೊತೆಗೆ ಮಾತನಾಡಿರುವ ಕೆ.ಜೆ ಜಾರ್ಜ್ ಅವರು ರಾಜ್ಯದಲ್ಲಿ ಲೈನ್ ಮನ್ ಗಳ ಕೊರತೆ ಇದೆ, ಹಾಗಾಗಿ 6000 ಲೈನ್ ಮನ್ ಗಳ ನೇಮಕಾತಿ ಮಾಡಿಕೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ. ಈಗಾಗಲೇ ನೇಮಕಾತಿ ಪ್ರಕ್ರಿಯೆ ಶುರುವಾಗಿದೆ ಎಂದು ಕೂಡ ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ರಾಜ್ಯದಲ್ಲಿ ವಿದ್ಯುತ್ ವಿಭಾಗದಲ್ಲಿ ಕೆಲಸ ಮಾಡುತ್ತಿರುವ 10,000 ಹೆಚ್ಚು ಕೆಲಸಗಾರರಿಗೆ ತರಬೇತಿ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ. ಯಂತ್ರಗಳ ಬಗ್ಗೆ ವರ್ಕ್ ಶಾಪ್ ನಡೆಸಿ ಕಲಿಸಲಾಗುತ್ತದೆ.
ದಿಢೀರ್ ಅವಘಡ ಸಂಭವಿಸಿದರೆ, ಸರಿಯಾದ ಪರಿಹಾರ ನೀಡುವುದಕ್ಕೆ ಮುಂದಾಗಿದೆ. ಈ ಸಿಬ್ಬಂದಿಗಳಿಗೆ ತಿಂಗಳ ಸಂಬಳ, ಯುನಿಫಾರ್ಮ್, ಭತ್ಯೆ ಎಲ್ಲವನ್ನು ಕೊಡಲಾಗುತ್ತದೆ ಎಂದು ತಿಳಿಸಿದ್ದಾರೆ. ಸರ್ಕಾರವು ಎಲ್ಲಾ ರೈತರಿಗೆ ಪಂಪ್ ಸೆಟ್ ಬಳಸಲು ಹೆಚ್ಚಿನ ವಿದ್ಯುತ್ ಪೂರೈಕೆ ಮಾಡಬೇಕು ಎಂದು ನಿರ್ಧಾರ ಮಾಡಿದ್ದು, ಅಕ್ರಮ ವಿದ್ಯುತ್ ಬಳಕೆಯನ್ನು ತಡೆಗಟ್ಟುವ ಕಡೆಗೆ ಒತ್ತು ನೀಡಲಾಗಿದೆ.
ಕೃಷಿಗೆ ತೊಂದರೆ ಆಗದೆ ಇರುವ ಹಾಗೆ ಟ್ರಾನ್ಸ್ಫಾರ್ಮರ್ ಬದಲಾವಣೆ ಮಾಡುವುದು, ದುರಸ್ಥಿಯನ್ನು ಸರಿ ಮಾಡುವ ಕಾರ್ಯ, ಕಡಿಮೆ ಬೆಲೆಗೆ ವಿದ್ಯುತ್ ಸರಬರಾಜು ಮಾಡುವುದು. ಇದೆಲ್ಲದರ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ.