ತುಂಬಾ ಜನರು ಗೊತ್ತಿಲ್ಲದೇ ಹಲವಾರು ತಪ್ಪುಗಳನ್ನು ಮಾಡುತ್ತಿರುತ್ತಾರೆ. ಇದರಿಂದ ಸುಮ್ಮನೆ ಸಿಟ್ಟು, ಕೋಪ, ಆವೇಶ, ಮತ್ತು ಉದ್ವೇಗಕ್ಕೆ ಒಳಗಾಗುತ್ತಾರೆ. ಇಂತಹ ತಪ್ಪುಗಳನ್ನು ಸರಿಪಡಿಸಿಕೊಳ್ಳಬೇಕು. ನಾವು ದಿನನಿತ್ಯ ಮಾಡುವ ತಪ್ಪುಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಕೆಲವರಿಗೆ ರಾತ್ರಿ ಮಲಗಿಕೊಂಡು ಸಿನೆಮಾ ನೋಡುವ ಅಭ್ಯಾಸ ಇರುತ್ತದೆ. ಆದರೆ ಇದು ಒಳ್ಳೆಯದಲ್ಲ. ಏಕೆಂದರೆ ಮೊಬೈಲ್ ನಲ್ಲಿ ಬರುವ ನೀಲಿ ಬಣ್ಣದ ಬೆಳಕು ನಮ್ಮ ಕಣ್ಣಿಗೆ ಅಡ್ಡ ಪರಿಣಾಮವನ್ನು ಉಂಟು ಮಾಡುತ್ತದೆ. ಹಾಗಾಗಿ ರಾತ್ರಿ ಮೊಬೈಲ್ ನೋಡುವಾಗ ಲೈಟ್ ಹಾಕಿಕೊಂಡು ನೋಡಬೇಕು. ಇಲ್ಲವಾದಲ್ಲಿ ಮೊಬೈಲ್ ನಲ್ಲಿರುವ ಡಾರ್ಕ್ ಮೋಡ್ ನ್ನು ಆನ್ ಮಾಡಬೇಕು. ಒಂದು ಸಾರಿ ಬಳಕೆ ಮಾಡಿದ ಅಡುಗೆ ಎಣ್ಣೆಯನ್ನು ಉಳಿದಿದೆ ಎಂದು ಮತ್ತೆ ಬಳಸುತ್ತಾರೆ. ಒಂದು ಬಾರಿ ಬಳಸಿದ ಎಣ್ಣೆಯನ್ನು ಇನ್ನೊಂದು ಬಾರಿ ಬಳಸುವುದರಿಂದ ಒಂದು ಆಸಿಡ್ ತಯಾರಿ ಆಗುತ್ತದೆ.
ಇದನ್ನು ತಿನ್ನುವುದರಿಂದ ಇದು ನಮ್ಮ ಆರೋಗ್ಯವನ್ನು ಸೇರಿ ಅನಾರೋಗ್ಯ ಉಂಟು ಮಾಡುತ್ತದೆ. ಕ್ಯಾನ್ಸರ್ ಸಹ ಬರುವ ಸಾಧ್ಯತೆ ಇದೆ. ಹಾಗೆಯೇ ವಾಟ್ಸಾಪ್ ಸ್ಟೇಟಸ್ ನಲ್ಲಿ ನೆಗೆಟಿವ್ ಇರುವಂತಹವುಗಳನ್ನು ಹಾಕಬಾರದು. ಏಕೆಂದರೆ ಇದರಿಂದ ನೋಡುಗರಲ್ಲಿ ಅನುಕಂಪ ಉಂಟಾಗುವುದಿಲ್ಲ. ನಕಾರಾತ್ಮಕ ಭಾವನೆಗಳು ಅವರಲ್ಲಿ ಹೆಚ್ಚಾಗುತ್ತದೆ. ಹಾಗೆಯೇ ಟೂತ್ ಪೇಸ್ಟ್ ನ್ನು ಕೆಲವರು ಬಾತ್ರೂಮ್ ನಲ್ಲಿ ಇಡುತ್ತಾರೆ. ಇದರಿಂದ ಸ್ನಾನ ಮಾಡಿದಾಗ ಉಂಟಾದ ಸೋಪಿನ ನೊರೆ ಬ್ರಶ್ ಮೇಲೆ ಬೀಳುತ್ತದೆ. ಒಂದೇ ಕಡೆ ಒಂದೇ ಸಮಯದಲ್ಲಿ 40ನಿಮಿಷಗಳವರೆಗೆ ಕುಳಿತುಕೊಳ್ಳಬಾರದು. ಏಕೆಂದರೆ ಇದರಿಂದ ದೇಹಕ್ಕೆ ಹಲವಾರು ತೊಂದರೆಗಳು ಉಂಟಾಗುತ್ತವೆ. ವಿಡಿಯೋ ಕೃಪೆ KK ಟಿವಿ
ಹಾಗೆಯೇ ಒಂದು ವ್ಯಕ್ತಿ ಇನ್ನೊಂದು ವ್ಯಕ್ತಿಗೆ ತನ್ನನ್ನು ಹೋಲಿಸಿಕೊಳ್ಳಬಾರದು. ಏಕೆಂದರೆ ಮನುಷ್ಯ ಬೆಳವಣಿಗೆ ಆಗಬೇಕೇ ಹೊರತು ಹೋಲಿಸಿಕೊಳ್ಳುವವನಾಗಬಾರದು. ದಿನಕ್ಕೆ ಸುಮಾರು 4ಲೀಟರ್ ನಷ್ಟು ನೀರನ್ನು ಕುಡಿಯಬೇಕು. ಅಂತಹವರಿಗೆ ಯಾವುದೇ ರೀತಿಯ ರೋಗಗಳು ಬರುವುದಿಲ್ಲ. ಒಬ್ಬೊಬ್ಬರು ಒಂದು ಲೀಟರ್ ನೀರನ್ನು ಸಹ ಕುಡಿಯುವುದಿಲ್ಲ. ಇದರಿಂದ ತೂಕ ಸಹ ಕಡಿಮೆ ಆಗುತ್ತದೆ. ಹಲವು ಜನ ಇರುವ ಸಂತೋಷವನ್ನು ಬಿಟ್ಟು ಬೇರೆ ಸಂತೋಷವನ್ನು ಹುಡುಕುತ್ತಾರೆ. ಡಿ.ವಿ.ಜಿ. ಅವರು ಇರುವ ಭಾಗ್ಯವ ನೆನೆದು ಬಾರನೆಂಬುದನ್ನು ಬಿಡು ಎನ್ನುವ ಮಾತನ್ನು ಹೇಳಿದ್ದಾರೆ. ಹಾಗಾಗಿ ಇರುವುದರಲ್ಲಿಯೇ ಸಂತೋಷದಿಂದ ಬದುಕುವುದನ್ನು ಕಲಿಯಬೇಕು. ಇಂತಹ ಎಷ್ಟೋ ತಪ್ಪುಗಳು ನಡೆಯುತ್ತವೆ. ಇದನ್ನು ಮೆಟ್ಟಿ ನಿಂತು ನಾವು ಬದುಕು ನಡೆಸಬೇಕು.