ಹೆಣ್ಣುಮಕ್ಕಳಿರಲಿ, ಗಂಡುಮಕ್ಕಳಿರಲಿ ತಮ್ಮ ಜೀವನದ ಸಂಗಾತಿ ಹೇಗಿರುತ್ತಾರೆ ಎಂಬ ಕುತೂಹಲ ಇರುತ್ತದೆ. ಇದನ್ನು ಒಂದು ಆಟದ ಮೂಲಕ ತಿಳಿದುಕೊಳ್ಳಬಹುದು. ಆಟದಲ್ಲಿ ಏನು ಮಾಡಬೇಕು ಹಾಗೂ ನಿಮ್ಮ ಲೈಫ್ ಪಾರ್ಟ್ನರ್ ಹೇಗಿರುತ್ತಾರೆ ಎಂದು ಈ ಲೇಖನದ ಮೂಲಕ ತಿಳಿಯೋಣ.
ಐದು ಬೇರೆ ಬೇರೆ ರೀತಿಯ ಚಂದ್ರನ ಚಿತ್ರಗಳು ಕಾಣಿಸುತ್ತದೆ. 5 ಚಿತ್ರಗಳಲ್ಲಿ ಯಾವುದಾದರೂ ಒಂದನ್ನು ಸೆಲೆಕ್ಟ್ ಮಾಡಿಕೊಳ್ಳಬೇಕು. ಸೆಲೆಕ್ಟ್ ಮಾಡಿಕೊಂಡ ಚಿತ್ರದ ಆಧಾರದ ಮೇಲೆ ನಿಮ್ಮ ಲೈಫ್ ಪಾರ್ಟ್ನರ್ ಹೇಗೆ ಇರುತ್ತಾರೆ ಎಂದು ಹೇಳಲಾಗುತ್ತದೆ. ಚಿತ್ರ 1ನ್ನು ಸೆಲೆಕ್ಟ್ ಮಾಡಿಕೊಂಡರೆ ನಿಮಗೆ ಸಿಗುವ ಲೈಫ್ ಪಾರ್ಟ್ನರ್ ನಿಮ್ಮನ್ನು ಬಹಳ ಕಾಳಜಿಯಿಂದ, ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಅವರ ಹೃದಯದಲ್ಲಿ ನಿಮಗೆ ಬಹಳ ವಿಶೇಷವಾದ ಸ್ಥಾನವನ್ನು ನೀಡುತ್ತಾರೆ. ನಿಮಗೋಸ್ಕರವೇ ಅವರ ಹೃದಯ ಹೊಡೆದುಕೊಳ್ಳುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ನಿಮ್ಮನ್ನ ಸಂತೋಷವಾಗಿ ಇಡುವುದಕ್ಕೆ ಅವರು ಸ್ಪೆಷಲ್ ಆಗಿರುವ ಯೋಜನೆಗಳನ್ನು ಹಾಕಿಕೊಳ್ಳುತ್ತಾರೆ. ಹಾಗೆಯೇ ನೀವು ಅವರನ್ನು ಬಹಳ ಇಷ್ಟಪಡುತ್ತೀರಾ. ನಿಮ್ಮಿಬ್ಬರದು ಪರ್ಫೆಕ್ಟ್ ಕಪಲ್ ಅಂತ ಹೇಳಬಹುದು. ಚಿತ್ರ 2ನ್ನು ಸೆಲೆಕ್ಟ್ ಮಾಡಿಕೊಂಡರೆ ನಿಮ್ಮ ಲೈಫ್ ಪಾರ್ಟ್ನರ್ ಭಾವನಾಜೀವಿ ಆಗಿರುತ್ತಾರೆ, ನಾಚಿಕೆ ಸ್ವಭಾವವನ್ನು ಹೊಂದಿರುತ್ತಾರೆ. ಪ್ರಾಮಾಣಿಕವಾಗಿ ಸಂಬಂಧವನ್ನು ನೋಡಿಕೊಳ್ಳುತ್ತಾರೆ. ಅವರು ಕೆಲವು ವಿಚಾರಗಳನ್ನು ಎಲ್ಲರ ಬಳಿ ಶೇರ್ ಮಾಡಿಕೊಳ್ಳುವುದಿಲ್ಲ ಆದರೆ ನಿಮ್ಮ ಬಳಿ ಶೇರ್ ಮಾಡಿಕೊಳ್ಳುತ್ತಾರೆ ಏಕೆಂದರೆ ನೀವು ಅವರ ಜೀವನದಲ್ಲಿ ಮಹತ್ವದ ವ್ಯಕ್ತಿಗಳಾಗಿರುತ್ತೀರಾ. ಅವರು ಕಲಾತ್ಮಕತೆಯಲ್ಲಿ ಹೆಚ್ಚು ಆಸಕ್ತಿಯನ್ನು ಹೊಂದಿರುತ್ತಾರೆ. ಚಿತ್ರ 3ನ್ನು ಸೆಲೆಕ್ಟ್ ಮಾಡಿದರೆ ನಿಮ್ಮ ಲೈಫ್ ಪಾರ್ಟ್ನರ್ ಯಾವಾಗಲೂ ನಗುನಗುತ್ತಾ, ಹಾಸ್ಯ ಮಾಡುತ್ತಾ ಇರುತ್ತಾರೆ. ಅವರ ಮನಸ್ಸಿನಲ್ಲಿ ನಿಮ್ಮಜೊತೆ ಪ್ರೀತಿಯಿಂದ ಜೀವನ ಕಳೆಯಬೇಕು ಎಂಬುದಿರುತ್ತದೆ. ನಿಮ್ಮನ್ನು ಹೆಚ್ಚು ಖುಷಿಯಾಗಿರುವಂತೆ ನೋಡಿಕೊಳ್ಳುತ್ತಾರೆ. ಇವರು ನಿಮಗೆ ಜೀವನದಲ್ಲಿ ಏನೇ ಕಷ್ಟ ಬಂದರೂ ಮುಂದೆ ಹೋಗುತ್ತಿರಬೇಕು, ತಲೆಕೆಡಿಸಿಕೊಳ್ಳಬಾರದು ಎಂದು ಹೇಳುತ್ತಿರುತ್ತಾರೆ. ನಿಮ್ಮ ಕನಸುಗಳನ್ನು ಈಡೇರಿಸಲು ಇವರು ಉತ್ತಮವಾಗಿ ಸಪೋರ್ಟ್ ಮಾಡುತ್ತಾರೆ.
ಚಿತ್ರ 4ನ್ನು ಸೆಲೆಕ್ಟ್ ಮಾಡಿದರೆ ನಿಮ್ಮ ಲೈಫ್ ಪಾರ್ಟ್ನರ್ ತಮ್ಮ ಮನಸ್ಸಿನಲ್ಲಿರುವುದನ್ನು ಹೇಳಿಕೊಳ್ಳುತ್ತಾರೆ ಓಪನ್ ಮೈಂಡ್ ಹೊಂದಿರುತ್ತಾರೆ. ಇವರು ಸಹಾಯ ಮನೋಭಾವನೆಯನ್ನು ಹೊಂದಿರುತ್ತಾರೆ, ಬಹಳಷ್ಟು ಜನರಿಗೆ ಇವರು ಸಹಾಯ ಮಾಡುತ್ತಾರೆ ಹಾಗೆಯೇ ಇವರು ಭಾವುಕ ಜೀವಿಯಾಗಿರುತ್ತಾರೆ ಆದ್ದರಿಂದ ಕೆಲವೊಮ್ಮೆ ಚಿಕ್ಕ ಚಿಕ್ಕ ವಿಷಯಗಳನ್ನು ಮನಸ್ಸಿಗೆ ತೆಗೆದುಕೊಳ್ಳುತ್ತಾರೆ. ಇವರು ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ, ಕಾಳಜಿ ಮಾಡುತ್ತಾರೆ. ಇವರು ಹಣೆಬರಹ ಇವುಗಳನ್ನು ಹೆಚ್ಚು ನಂಬುವುದಿಲ್ಲ ಕಷ್ಟಪಡುತ್ತಾರೆ, ಶ್ರಮ ಜೀವಿಯಾಗಿರುತ್ತಾರೆ. ಚಿತ್ರ 5ನ್ನು ಸೆಲೆಕ್ಟ್ ಮಾಡಿದರೆ ನಿಮ್ಮ ಲೈಫ್ ಪಾರ್ಟ್ನರ್ ಶ್ರೇಷ್ಠ ವ್ಯಕ್ತಿ ಎಂದು ಹೇಳಬಹುದು, ಇವರು ಸಾಫ್ಟ್ ನೇಚರ್ ಹೊಂದಿರುತ್ತಾರೆ ಮತ್ತು ಇವರು ಮುಗ್ಧರಾಗಿರುತ್ತಾರೆ. ಇವರ ಮನಸ್ಸು ಬೇಗ ಕರಗುತ್ತದೆ, ಕರುಣೆಯನ್ನು ಹೊಂದಿರುತ್ತಾರೆ. ಯಾರಾದರೂ ಬೇಸರದಲ್ಲಿ ಇದ್ದರೆ ಅವರನ್ನು ನಗಿಸಲು ಪ್ರಯತ್ನ ಪಡುತ್ತಾರೆ ಹಾಗಿರುವಾಗ ನಿಮ್ಮನ್ನು ಅವರು ನಗಿಸಲು ಏನು ಬೇಕಾದರೂ ಮಾಡುತ್ತಾರೆ. ನಿಮ್ಮ ಜೊತೆ ಹೇಗೆ ಮಾತನಾಡಬೇಕು ಎನ್ನುವುದರ ಬಗ್ಗೆ ಅವರಿಗೆ ಚೆನ್ನಾಗಿ ತಿಳಿದಿರುತ್ತದೆ. ಈ ವಿಷಯವನ್ನು ನಿಮ್ಮ ಸ್ನೇಹಿತರಿಗೂ ತಿಳಿಸಿ, ಯಾರ ಲೈಫ್ ಪಾರ್ಟ್ನರ್ ಹೇಗಿರುತ್ತಾರೆ ತಿಳಿದುಕೊಳ್ಳಿ.