Libra Astrology prediction: ಪ್ರತಿ ತಿಂಗಳು ಬದಲಾದಂತೆ ಪ್ರತಿಯೊಬ್ಬರಿಗೂ ಸಹ ರಾಶಿ ಭವಿಷ್ಯದಲ್ಲಿ ಯಾವ ರೀತಿಯ ಫಲಗಳು ಲಭಿಸುತ್ತದೆ ಎಂಬುದರ ಬಗ್ಗೆ ಕುತೂಹಲ ಇದ್ದೇ ಇರುತ್ತದೆ ಗ್ರಹಗಳ ಸ್ಥಾನ ಬದಲಾವಣೆಯಿಂದಾಗಿ ಹನ್ನೆರಡು ರಾಶಿಗಳ ಫಲಗಳಲ್ಲಿ ಸಹ ಬದಲಾವಣೆ ಕಂಡು ಬರುತ್ತದೆ ಕೆಲವರಿಗೆ ಶುಭ ಹಾಗೂ ಅಶುಭ ಮತ್ತು ಮಿಶ್ರ ಫಲಗಳಿಂದ ಕೂಡಿ ಇರುತ್ತದೆ 2023 ಜೂನ್ ತಿಂಗಳಲ್ಲಿ ತುಲಾ (Libra) ರಾಶಿಯವರಿಗೆ ಮಿಶ್ರ ಫಲಗಳಿಂದ ಕೂಡಿ ಇರುತ್ತದೆ ಅನಾರೋಗ್ಯದ ಸಮಸ್ಯೆ ಕಂಡು ಬರುವ ಸಾಧ್ಯತೆ ಇರುತ್ತದೆ ಹಾಗಾಗಿ ಜೂನ್ ತಿಂಗಳಲ್ಲಿ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು

ವ್ಯಾಪಾರ ವ್ಯವಹಾರ ಮಾಡುವರಿಗೆ ಅಧಿಕ ಲಾಭ ಕಂಡು ಬರುತ್ತದೆ ಹಣಕಾಸಿನ ವ್ಯವಹಾರ ಬಹಳ ಎಚ್ಚರಿಕೆಯಿಂದ ವ್ಯವಹಾರ ಮಾಡಬೇಕು ಹಾಗೆಯೇ ಅಂದು ಕೊಂಡ ಕೆಲಸ ಕಾರ್ಯಗಳು ನೆರವೇರುತ್ತದೆ ಹಾಗೆಯೇ ಉದ್ಯೋಗ ಮಾಡುವ ಸ್ಥಳದಲ್ಲಿ ಸ್ವಲ್ಪ ಕಿರಿಕಿರಿ ಆಗುವ ಸಾಧ್ಯತೆ ಇರುತ್ತದೆ ಹಾಗಾಗಿ ಕೆಲಸ ಮಾಡುವಾಗ ಸದ ಗಮನ ಹರಿಸಿ ಎಚ್ಚರಿಕೆಯಿಂದ ಮಾಡಬೇಕು ಕೌಟುಂಬಿಕವಾಗಿ ಕೆಲವು ಭಿನ್ನಾಭಿಪ್ರಾಯ ಕಂಡು ಬರುವ ಸಾಧ್ಯತೆ ಇರುತ್ತದೆ ನಾವು ಈ ಲೇಖನದ ಮೂಲಕ 2023 ಜೂನ್ ತಿಂಗಳಲ್ಲಿ ತುಲಾ ರಾಶಿಯ ಫಲಾಫಲಗಳ ಬಗ್ಗೆ ತಿಳಿದುಕೊಳ್ಳೋಣ.

ಜೂನ್ ತಿಂಗಳಲ್ಲಿ ಮೇಷ ರಾಶಿಯಲ್ಲಿ ಗುರು ಮತ್ತುರಾಹು ಇರುತ್ತಾರೆ ಕುಂಭ ರಾಶಿಯಲ್ಲಿ ಶನಿ ಇರುತ್ತಾನೆ ಹಾಗೆಯೇ ತುಲಾ ರಾಶಿಗಳಲ್ಲಿ ಕೇತು ಇರುತ್ತಾನೆ ಜೂನ್ 14ರ ವರೆಗೆ ವೃಷಭ ರಾಶಿಯಲ್ಲಿ ರವಿ ಇರುತ್ತಾನೆ ಜೂನ್ 1 ರಿಂದ 30 ನೆಯ ತಾರೀಖಿನ ವರೆಗೆ ಕರ್ಕಾಟಕ ರಾಶಿಯಲ್ಲಿ ಶುಕ್ರ ಇರುತ್ತಾನೆ ತುಲಾ ರಾಶಿಯವರಿಗೆ ರವಿ ಗ್ರಹ ಜೂನ್ 15 ರವರಗೆ ಎಂಟನೆಯ ಸ್ಥಾನದಲ್ಲಿ ಇರುತ್ತಾನೆ ಉದ್ಯೋಗ ಮಾಡುವ ಸ್ಥಾನದಲ್ಲಿ ಅವಮಾನಗಳು ಆಗುವ ಸಾಧ್ಯತೆ ಇರುತ್ತದೆ ಅನಾರೋಗ್ಯದ ಕಾರಣದಿಂದ ಕೆಲಸಕ್ಕೆ ಹೋಗಲು ವಿಳಂಬ ಅಥವಾ ತಡೆ ಆಗುವ ಸಾಧ್ಯತೆ ಇರುತ್ತದೆ ಹಾಗಾಗಿ ತುಲಾ ರಾಶಿಯವರು ಎಚ್ಚರಿಕೆಯಿಂದ ಇರಬೇಕು ಇದಕ್ಕೆ ಪರಿಹಾರವಾಗಿ ರವಿ ಗ್ರಹದ ಅಷ್ಟೋತ್ತರವನ್ನು ಜಪಿಸಬೇಕು.

ಭಾನುವಾರದಂದು ಕೆಂಪು ವಸ್ತ್ರದಿಂದ ಗೋಧಿಯನ್ನು ದಾನ ಮಾಡಬೇಕು ಕುಜ ಗ್ರಹ ಜೂನ್ ತಿಂಗಳಲ್ಲಿ ಕರ್ಮಸ್ಥಾನದಲ್ಲಿ ನೀಚನಾಗಿ ಇರುತ್ತಾನೆ ಹೀಗಾಗಿ ತುಲಾ ರಾಶಿಯ ಸ್ತ್ರೀಯರಿಗೆ ಉದ್ಯೋಗ ಸ್ಥಳದಲ್ಲಿ ಕಿರಿಕಿರಿ ಆಗುವ ಸಾಧ್ಯತೆ ಇರುತ್ತದೆ ಮನಸ್ಸಿಗೆ ಹಿಂಸೆ ಆಗುವ ರೀತಿಯಲ್ಲಿ ಅವಹೇಳನವನ್ನು ಕೇಳಿಸಿಕೊಳ್ಳಬೇಕಾಗುತ್ತದೆ ಸಮಾಜದಲ್ಲಿ ತಲೆ ತಗ್ಗಿಸುವ ರೀತಿಯಲ್ಲಿ ಸಮಸ್ಯೆಗಳು ಕಂಡು ಬರುವ ಸಾಧ್ಯತೆ ಇರುತ್ತದೆ ಸಾಫ್ಟ್ವೇರ್ ಇಂಜಿನಿಯರ್ ಗಳು ಕೆಲಸ ಕಳೆದುಕೊಳ್ಳುವ ಪ್ರಸಂಗ ಕಂಡು ಬರುವ ಸಾಧ್ಯತೆ ಇರುತ್ತದೆ ವಿದ್ಯುತ್ ಉಪಕರಣಗಳ ಕೆಲಸದಲ್ಲಿ ತೊಡಗಿದ್ದರೆ ಕೆಲಸ ಕಳೆದುಕೊಳ್ಳುವ ಪ್ರಸಂಗ ಕಂಡು ಬರುವ ಸಾಧ್ಯತೆ ಇರುತ್ತದೆ ದವಸ ಧಾನ್ಯಗಳ ಅಂಗಡಿ ಇದ್ದರೆ ನಷ್ಟವನ್ನು ಅನುಭವಿಸಬೇಕಾಗುತ್ತದೆ ಹಾಗೆಯೇ ಬೆಂಕಿಯ ಅವಗಢ ಕಂಡು ಬರುವ ಸಾಧ್ಯತೆ ಇರುತ್ತದೆ.

ಜೂನ್ ತಿಂಗಳಲ್ಲಿ ಕುಜನ ಆರಾಧನೆ ಅತ್ಯಂತ ಅವಶ್ಯಕವಾಗಿದೆ ಪ್ರತಿದಿನ ತುಲಾ ರಾಶಿಯವರು ಕುಜ ಗ್ರಹದ ಅಷ್ಟೋತ್ತರವನ್ನು ಜಪಿಸಬೇಕು ಸುಬ್ರಹ್ಮಣ್ಯನ ಅಷ್ಟಿತ್ಟರವನ್ನು ಜಪಿಸಬೇಕು ಸ್ನೇಹಿತರು ಕೆಲಸದಲ್ಲಿ ಮೋಸ ಮಾಡುವ ಸಾಧ್ಯತೆ ಇರುತ್ತದೆ ಉದ್ಯೋಗದ ವಿಚಾರದಲ್ಲಿ ಸ್ನೇಹಿತರನ್ನು ಸಹ ನಂಬಬಾರದು ಕುಟುಂಬದವರ ಒತ್ತಡಕ್ಕೆ ಒಳಗಾಗಿ ಇಷ್ಟವಿಲ್ಲದ ಕೆಲಸವನ್ನು ಮಾಡಬಾರದು ಮಂಗಳವಾರದಂದು ಕೆಂಪು ವಸ್ತ್ರದಲ್ಲಿ ತೊಗರಿಬೇಳೆಯನ್ನು ದಾನ ಮಾಡುವುದರಿಂದ ಸಹ ಕುಜ ದೋಷ ನಿವಾರಣೆ ಆಗುವ ಸಾಧ್ಯತೆ ಇರುತ್ತದೆ

ತುಲಾ ರಾಶಿಯ ವಿಧ್ಯಾರ್ಥಿಗಳ ಪೋಷಕರಿಗೆ ಕೆಲವು ದೂರುಗಳು ಬರುವ ಸಾಧ್ಯತೆ ಇರುತ್ತದೆ. ಹಾಗೆಯೆ ದುಡ್ಡಿನ ವಿಚಾರದಲ್ಲಿ ದೊಡ್ಡ ಅಧಿಕಾರಿಗಳನ್ನು ಎದುರು ಹಾಕಿಕೊಳ್ಳುತ್ತಾರೆ ತುಲಾ ರಾಶಿಯ ಪುರುಷರು ಸ್ತ್ರೀಯ ರೊಂದಿಗೆ ಹಾಗೂ ಸ್ತ್ರೀಯರು ಪುರುಷರೊಂದಿಗೆ ಜಗಳವನ್ನು ಮಾಡಿಕೊಳ್ಳುತ್ತಾರೆ ಹಿಂದೆ ತೆಗೆದುಕೊಂಡ ನಿರ್ಧಾರವೂ ಅನೇಕ ದುಷ್ಪರಿಣಾಮಗಳನ್ನು ಒಳಗೊಂಡಿರುತ್ತದೆ ಇದರಿಂದ ತಪ್ಪಿಸಿಕೊಳ್ಳಲು ಇರುವ ಏಕೈಕ ಮಾರ್ಗ ದೇವತಾ ಆರಾಧನೆಯಾಗಿದೆ ಹಾಗಾಗಿ ಶನೀಶ್ವರನ ಅಷ್ಟೋತ್ತರವನ್ನು ಜಪಿಸಬೇಕು.

ಬುಧ ಗ್ರಹ ವೃಷಭ ರಾಶಿಯಲ್ಲಿದಷ್ಟು ಕಾಲ ಜೂನ್ ಮಧ್ಯ ಭಾಗದಲ್ಲಿ ಬುಧನಿಂದ ಹಿಂದೆ ಕೆಲಸ ಮಾಡಿದ ಬಾಕಿ ಹಣದ ನಿರೀಕ್ಷೆಯಲ್ಲಿ ಇದ್ದರೆ ಹಣ ಮರಳಿ ಬರುತ್ತದೆ ಹಾಗೆಯೇ ಹೊಸ ಕೆಲಸ ಹುಡುಕುತ್ತಿದ್ದಾರೆ ಕೆಲಸ ಸಿಗುವ ಸಾಧ್ಯತೆ ಇರುತ್ತದೆ ಹೊಸ ಪ್ರಾಜೆಕ್ಟ್ ಸಿಗುವ ಸಾಧ್ಯತೆ ಇರುತ್ತದೆ ಜೂನ್ ತಿಂಗಳ ಮಧ್ಯ ಭಾಗದಲ್ಲಿ ಬರಬೇಕಾದ ಬಾಕಿ ಹಣ ಸಿಗುವ ಸಾಧ್ಯತೆ ಇರುತ್ತದೆ ಎಷ್ಟೇ ಕಷ್ಟ ಆದರೂ ಸಹ ಜೂನ್ ತಿಂಗಳಲ್ಲಿ ಹೊಸದಾಗಿ ವ್ಯವಹಾರ ಮಾಡುವರಿಗೆ ಹಣಕಾಸಿನ ಸಹಾಯ ಸಿಗುವ ಸಾಧ್ಯತೆ ಇರುತ್ತದೆ.

ಇದು ಜೂನ್ ತಿಂಗಳ ಕೊನೆಯ ವಾರದಲ್ಲಿ ಸಿಗುತ್ತದೆ ಭೂಮಿಗೆ ಸಂಭಂಧಿಸಿದ ಎಲ್ಲ ಕೆಲಸ ಕಾರ್ಯಗಳು ಜೂನ್ ಆದಿಯಲ್ಲಿ ಅಂದರೆ ಮೊದಲ ಮೂರು ವಾರ ಸಹ ಹಿನ್ನೆಡೆ ಕಂಡು ಬರುತ್ತದೆ ಜೂನ್ ತಿಂಗಳ ಕೊನೆಯವಾರ ಅನುಕೂಲಕರವಾಗಿ ಇರುತ್ತದೆ ಜೂನ್ ತಿಂಗಳ ಕೊನೆಯ ಭಾಗದಲ್ಲಿ ಪರಿಶ್ರಮವಹಿಸಿದರೆ ಹಣದ ಹರಿವು ಕಂಡು ಬರುತ್ತದೆ ಹಾಗೆಯೇ ವಿಧ್ಯಾರ್ಥಿಗಳಿಗೆ ಮೊಡಲಿಂಗ್ ಮಾಡುವರಿಗೆ ನಟರಿಗೆ ಒಳ್ಳೆಯ ಹೆಸರು ಕೀರ್ತಿ ಹಾಗೂ ಹೆಚ್ಚಿನ ಆದಾಯ ಕಂಡು ಬರುತ್ತದೆ ಹೀಗೆ 2023 ಜೂನ್ ತಿಂಗಳಲ್ಲಿ ತುಲಾ ರಾಶಿಯವರಿಗೆ ಶುಭಕರವಾಗಿ ಇರುತ್ತದೆ ಹಾಗೆಯೇ ಆರೋಗ್ಯದ ಕಡೆಗೆ ಗಮನ ಹರಿಸಬೇಕು ಹಣಕಾಸಿನ ವಿಷಯದಲ್ಲಿ ಸಂವೃದ್ದೀ ಕಂಡು ಬರುತ್ತದೆ .

Leave a Reply

Your email address will not be published. Required fields are marked *