ಲವಂಗ ಇದನ್ನು ಆಹಾರ ಪದಾರ್ಥಗಳನ್ನು ತಯಾರಿಸುವಾಗ ಬಳಸುತ್ತಾರೆ. ಕೆಲವು ಆಹಾರಗಳಿಗೆ ಲವಂಗ ಇಲ್ಲದೆ ರುಚಿಯೇ ಬರುವುದಿಲ್ಲ. ಏಕೆಂದರೆ ಇದು ಅಡುಗೆಗೆ ಅಷ್ಟು ರುಚಿಯನ್ನು ಕೊಡುತ್ತದೆ. ಇದು ಸಾಂಬಾರು ಪದಾರ್ಥಗಳಲ್ಲಿ ಒಂದು. ಇದನ್ನು ಹಳ್ಳಿಗಳಲ್ಲಿ ತೋಟದಲ್ಲಿ ಬೆಳೆಯುತ್ತಾರೆ. ಇದು ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಆದ್ದರಿಂದ ನಾವು ಇಲ್ಲಿ ಲವಂಗದ ಔಷಧೀಯ ಗುಣಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಲವಂಗವು ಅಸ್ತಮಾವನ್ನು ಹೋಗಲಾಡಿಸಲು ಪ್ರಮುಖ ಪಾತ್ರ ವಹಿಸುತ್ತದೆ. ಹಳೆಯ ಕಾಲದಲ್ಲಿ ಅಸ್ತಮಾ ರೋಗವು ಮಾಲಿನ್ಯದಿಂದ ಹೆಚ್ಚಾಗಿ ಬರುತ್ತಿತ್ತು. ವಾತಾವರಣದಿಂದಲೂ ಕೆಲವೊಬ್ಬರಿಗೆ ಇದು ಬರಬಹುದು. ಈಗಿನ ಸಮಯದಲ್ಲಿ ಹೆಚ್ಚಾಗಿ ಚಿಕ್ಕ ಮಕ್ಕಳಿಗೂ ಸಹ ಇದು ಕಂಡುಬರುತ್ತಿದೆ. ಹಾಗೆಯೇ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಇದು ಬೇಗ ಬರುತ್ತದೆ. ತುಂಬಾ ಧೂಳು ಇರುವ ವಾತಾವರಣದಿಂದ ಅಸ್ತಮಾ ಇರುವ ರೋಗಿಗಳು ಬಹಳ ದೂರ ಇರುವುದು ಒಳ್ಳೆಯದು. ಏಕೆಂದರೆ ಧೂಳು ಅಸ್ತಮಾ ರೋಗಿಗಳಿಗೆ ಇನ್ನಷ್ಟು ಹಾನಿಯನ್ನು ಉಂಟು ಮಾಡುತ್ತದೆ.
ಹಾಗೆಯೇ ವೈದ್ಯರು ಮನೆಮದ್ದಿನಲ್ಲಿ ಆರೋಗ್ಯವನ್ನು ಸರಿಯಾಗಿ ಇಟ್ಟುಕೊಳ್ಳಬಹುದು ಎಂದು ಹೇಳುತ್ತಾರೆ. ಯಾವುದೇ ರೋಗವನ್ನಾದರೂ ಶುರುವಿನಲ್ಲೇ ಪರಿಹಾರವನ್ನು ಕಂಡುಕೊಳ್ಳಬೇಕು. ಇಲ್ಲವಾದಲ್ಲಿ ನೋವು ಕಟ್ಟಿಟ್ಟಬುತ್ತಿ ಎಂದು ಹೇಳಬಹುದು. ಹಾಗೆಯೇ ಇದು ಕೂಡ. ಅಸ್ತಮಾ ರೋಗ ಇದ್ದರೆ ದೇಹಕ್ಕೆ ಬಹಳ ಸುಸ್ತಾಗುತ್ತದೆ. ತಲೆಗೆ ಒಂದು ಭಾಗ ನೋವಾಗುತ್ತದೆ. ಹಾಗೆಯೇ ಉಸಿರಾಡಲು ಕಷ್ಟವಾಗುತ್ತದೆ. ಹಾಗೆಯೇ ಸಿಗರೇಟ್ ಹೊಗೆಯಿಂದ ಅಲರ್ಜಿ ಆಗುತ್ತದೆ. ಚಳಿಗಾಲದಲ್ಲಿ ಅಸ್ತಮಾ ಹೆಚ್ಚಾಗಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.
ಇದಕ್ಕೆ ಮನೆಮದ್ದನ್ನು ಮಾಡಬೇಕು. ಬೆಳ್ಳುಳ್ಳಿ ಒಳ್ಳೆಯ ಔಷಧಿಯಾಗಿದೆ. 30ಮಿಲಿ ಲೀಟರ್ ಹಾಲನ್ನು ತೆಗೆದುಕೊಂಡು ಅದಕ್ಕೆ ನಾಲ್ಕರಿಂದ ಐದು ಬೆಳ್ಳುಳ್ಳಿಯನ್ನು ಹಾಕಿ ಚೆನ್ನಾಗಿ ಕುದಿಸಬೇಕು. ಈ ಮನೆಮದ್ದನ್ನು ದಿನನಿತ್ಯ ಮಾಡುವುದರಿಂದ ಮೊದಲ ಹಂತದಲ್ಲಿಯೇ ನಿವಾರಣೆ ಮಾಡಿಕೊಳ್ಳಬಹುದು. ಹಾಗೆಯೇ ನಾಲ್ಕರಿಂದ ಐದು ಲವಂಗವನ್ನು ತೆಗೆದುಕೊಂಡು ನೀರಿನಲ್ಲಿ ಹಾಕಿ ಕುದಿಸಿ ಅದಕ್ಕೆ ಒಂದು ಚಮಚ ತುಪ್ಪವನ್ನು ಸೇರಿಸಿ ಈ ಮಿಶ್ರಣವನ್ನು ಮೂರುಬಾರಿ ಕುಡಿಯುವುದರಿಂದ ಪರಿಣಾಮವನ್ನು ಕಾಣಬಹುದು.
ಹಾಗೆಯೇ ಶುಂಠಿಯ ಬಿಸಿ ಚಾ ಮಾಡಿಕೊಂಡು ಅದಕ್ಕೆ ಬೆಳ್ಳುಳ್ಳಿಯನ್ನು ಹಾಕಿ ಕುದಿಸಿ ಕುಡಿಯುವುದರಿಂದ ಅಸ್ತಮಾ ನಿವಾರಣೆಯಾಗುತ್ತದೆ. ತುಳಸಿ ಹೆಚ್ಚಾಗಿ ಎಲ್ಲರ ಮನೆಯಲ್ಲಿ ಇರುತ್ತದೆ. 10 ರಿಂದ 15 ತುಳಸಿ ಎಲೆಯನ್ನು ತೆಗೆದುಕೊಂಡು ಅದಕ್ಕೆ ಕಾಳುಮೆಣಸಿನ ಪುಡಿಯನ್ನು ಹಾಕಿ ತಿನ್ನುವುದರಿಂದ ಉಸಿರಾಟಕ್ಕೆ ಯಾವುದೇ ಕೊರತೆ ಇಲ್ಲ. ಹಾಗೆಯೇ 1 ಚಮಚ ಅರಿಶಿನ ಪುಡಿಯನ್ನು ತೆಗೆದುಕೊಂಡು ಅದಕ್ಕೆ ಅರ್ಧ ಚಮಚ ಜೇನುತುಪ್ಪವನ್ನು ಸೇರಿಸಿ ತಿನ್ನುವುದರಿಂದ ಗಂಟಲು ಅರಾಮ್ ಆಗುತ್ತದೆ.