ನಮ್ಮ ಹಿಂದೂ ಸನಾತನ ಧರ್ಮ ಶಾಸ್ತ್ರದ ಪ್ರಕಾರ ಕಾಲಿನ ಗೆಜ್ಜೆಯೂ ಸಹ ಒಂದು ಹೆಣ್ಣಿನ ಮುತ್ತೈದೆಯ ಸಂಕೇತ ಆದ್ದರಿಂದಲೇ ನಮ್ಮಲ್ಲಿ ಹಿಂದೂ ಹೆಣ್ಣು ಮಕ್ಕಳಿಗೆ ತಪ್ಪದೇ ಕಾಲಿಗೆ ಗೆಜ್ಜೆಯನ್ನು ಹಾಕುತ್ತಾರೆ, ಆದರೆ ಬದಲಾದ ಇತ್ತೀಚಿನ ಆಧುನಿಕ ಯುಗದಲ್ಲಿ ನಮ್ಮ ಹೆಣ್ಣು ಮಕ್ಕಳು ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗಿ ಕಾಲಿಗೆ ಗೆಜ್ಜೆ ಹಾಕುವುದನ್ನು ಮರೆತಿದ್ದಾರೆ. ಕಾಲಿಗೆ ಗೆಜ್ಜೆ ಹಾಕುವುದರಿಂದ ಕಾಲು ಕಪ್ಪಾಗುವುದ ಅಂತಲೋ ಕಾಲಿಗೆ ಬಾರವಾಗುವುದು ಅಂತಲೋ ಅವರು ಗೆಜ್ಜೆಯನ್ನು ಹಾಕಲು ಇಷ್ಟ ಪಡುತ್ತಿಲ್ಲ, ಆದರೇ ನಮ್ಮ ಹಿಂದೂ ಸನಾತನ ಧರ್ಮದ ಸಂಸ್ಕೃತಿಯ ಮಹತ್ವ ಹಿಂದೂ ಸಂಸ್ಕೃತಿಯಲ್ಲಿರುವ ಮತ್ತು ನಮ್ಮ ಹಿಂದೂ ಧರ್ಮ ಶಾಸ್ತ್ರದಲ್ಲಿ ಸ್ಪಷ್ಟಪಡಿಸಲಾಗಿರುವ ಎಲ್ಲಾ ಆಚರಣೆಗಳ ಹಿಂದೆಯೂ ಸಹ ಅನೇಕ ವೈಜ್ಞಾನಿಕ ಕಾರಣಗಳು ಇದ್ದೇ ಇವೆ ಹಾಗಾಗಿ ನಮ್ಮ ಹಿಂದೂ ಧರ್ಮದ ಸಂಸ್ಕೃತಿಯನ್ನು ಅಲ್ಲಗಳೆಯುವುದು ಉಚಿತವಲ್ಲ.
ಹಿಂದೂ ಧರ್ಮ ಶಾಸ್ತ್ರದ ಪ್ರಕಾರ ಬೆಳ್ಳಿಯು ಒಂದು ಉತ್ತಮ ಮತ್ತು ಪವಿತ್ರವಾದ ಲೋಹವಾಗಿದೆ ಇನ್ನೂ ವೈಜ್ಞಾನಿಕ ದೃಷ್ಟಿಯಲ್ಲಿ ನಾವು ನೋಡುವುದಾದರೆ ಬೆಳ್ಳಿಯು ಒಂದು ಅತ್ಯುತ್ತಮ ವಾಹಕವಾಗಿದೆ ಮತ್ತು ಜ್ಯೋತಿಷ್ಯ ಶಾಸ್ತ್ರದ ಪ್ರಾಕಾರ ಬೆಳ್ಳಿಯಲ್ಲಿ ಶುಕ್ರನ ಕಾರಕತ್ವವಿರುತ್ತದೆ, ಶುಕ್ರನು ಸಿರಿ ಸಂಪತ್ತಿನ ಸಂಕೇತನಾಗಿದ್ದಾನೆ ಹಾಗಾಗಿ ಯಾರು ಕಾಲಿಗೆ ಬೆಳ್ಳಿಯ ಗೆಜ್ಜೆಯನ್ನು ಹಾಕಿಕೊಂಡಿರುತ್ತಾರೋ ಅವರ ಮನೆಯಲ್ಲಿ ಧನಲಕ್ಷ್ಮಿ ಸ್ಥಿರವಾಗಿ ನೆಲೆಸುತ್ತಾಳೆ ಎಂಬುದನ್ನೂ ನಮ್ಮ ಹಿಂದೂ ಧರ್ಮದ ಶಾಸ್ತ್ರಗಳು ಸ್ಪಷ್ಟಪಡಿಸುತ್ತವೆ. ಆರೋಗ್ಯದ ದೃಷ್ಟಿಯಿಂದ ನೋಡುವುದಾದರೂ ಸಹ ಬೆಳ್ಳಿಯ ಗೆಜ್ಜೆಯನ್ನು ಹಾಕಿಕೊಳ್ಳುವುದು ತುಂಬಾ ಒಳಿತು ಹಾಗಾದ್ರೆ ಬೆಳ್ಳಿ ಗೆಜ್ಜೆಗಳನ್ನು ಹಾಕಿಕೊಳ್ಳುವುದರಿಂದಾಗುವ ಲಾಭಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
ಬೆಳ್ಳಿ ಗೆಜ್ಜೆಯನ್ನು ಹೆಣ್ಣು ಮಕ್ಕಳು ಕಾಲಿಗೆ ಹಾಕಿಕೊಂಡು ಮನೆಯಲ್ಲಿ ಓಡಾಡುವುದರಿಂದ ಬೆಳ್ಳಿ ಗೆಜ್ಜೆಯ ಆ ಲಯಬದ್ಧವಾದ ಶಬ್ದಕ್ಕೆ ಮನೆಯಲ್ಲಿನ ನಕಾರಾತ್ಮಕ ಶಕ್ತಿಯು ಹೋಗಿ ಮನೆಯಲ್ಲಿ ಧನಾತ್ಮಕ ಶಕ್ತಿಯು ನೆಲೆಯೂರುತ್ತದೆ, ಅಷ್ಟೇ ಅಲ್ಲದೆ ವೈಜ್ಞಾನಿಕವಾಗಿ ಬೆಳ್ಳಿಯು ಒಂದು ಉತ್ತಮ ವಾಹಕವಾದ್ದರಿಂದ ಬೆಳ್ಳಿಯ ಗೆಜ್ಜೆಯನ್ನು ಹೆಣ್ಣು ಮಕ್ಕಳು ಕಾಲಿಗೆ ತೊಡುವುದು ಅವರ ದೇಹದ ಉಷ್ಣವನ್ನು ಹೀರಿಕೊಂಡು ದೇಹವನ್ನು ಸಮಶೀತೋಷ್ಣದಲ್ಲಿ ಇಡುವುದರಲ್ಲಿ ಸಹಕಾರಿಯಾಗುತ್ತದೆ. ಹಾಗೆಯೇ ಬೆಳ್ಳಿಯ ಗೆಜ್ಜೆಗಳನ್ನು ದರಿಸುವುದರಿಂದ ಹೆಣ್ಣು ಮಕ್ಕಳ ದೇಹವು ಸುಕ್ಕುಗಟ್ಟುವುದನ್ನು ತಡೆಯುವುದಲ್ಲದೆ ಅವರ ದೇಹದ ಅಂದವನ್ನು ಹೆಚ್ಚಿಸುತ್ತದೆ.