ಹೆಣ್ಮಕ್ಕಳು ಪಾರ್ಲರಿಗೆ ಹೋಗುವುದು ಸಹಜ ಆದರೆ ಕೊರೋನ ವೈರಸ್ ತೀವ್ರವಾಗಿ ಹರಡುತ್ತಿದ್ದು ಲಾಕ್ ಡೌನ್ ಆಗಿರುವ ಕಾರಣ ಎಲ್ಲರೂ ಮನೆಯಲ್ಲಿ ಇರಬೇಕಾಗಿತ್ತು, ಇದೀಗ ಲಾಕ್ ಡೌನ್ ಅನ್ ಲಾಕ್ ಆಗಿದ್ದರೂ ಕೊರೋನ ವೈರಸ್ ಪೂರ್ತಿಯಾಗಿ ಕಡಿಮೆಯಾಗದೆ ಇರುವ ಕಾರಣ ಪಾರ್ಲರ್ ಗೆ ಹೋಗುವುದು ಅಷ್ಟು ಸುರಕ್ಷಿತವಲ್ಲ. ಮನೆಯಲ್ಲೆ ಕಡಿಮೆ ಖರ್ಚಿನಲ್ಲಿ ನಾವೇ ಗ್ರೂಮಿಂಗ್ ಮಾಡಿಕೊಳ್ಳಬಹುದು. ಹಾಗಾದರೆ ಮನೆಯಲ್ಲಿ ಗ್ರೂಮಿಂಗ್ ಮಾಡಿಕೊಳ್ಳುವ ಟಿಪ್ಸ್ ಗಳನ್ನು ಈ ಲೇಖನದಲ್ಲಿ ನೋಡೋಣ.
ಕೊರೋನ ವೈರಸ್ ಇರುವುದರಿಂದ ಹೆಣ್ಣುಮಕ್ಕಳಿಗೆ ಪಾರ್ಲರ್ ಗೆ ಹೋಗುವುದು ಅಷ್ಟು ಸುರಕ್ಷಿತವಲ್ಲ ಆದ್ದರಿಂದ ಮನೆಯಲ್ಲಿ ಸೆಲ್ಫ್ ಗ್ರೂಮಿಂಗ್ ಮಾಡಿಕೊಳ್ಳುವುದು ಅತ್ಯವಶ್ಯಕವಾಗಿದೆ. ಯಾವುದಾದರೂ ಪೌಡರನ್ನು ಅಪ್ಪರ್ ಲಿಪ್ಸ್ ಮೇಲೆ ಹಚ್ಚಿ ಫೇಸ್ ಶೇವ್ ರೇಸರ್ ನಲ್ಲಿ ನೀಟಾಗಿ ಅಪ್ಪರ್ ಲಿಪ್ಸ್ ಮೇಲಿರುವ ಕೂದಲನ್ನು ರಿಮೂವ್ ಮಾಡಬೇಕು. ನಂತರ ಐಸ್ ಕೋಲ್ಡ್ ವಾಟರ್ ನಲ್ಲಿ ಟಿಶ್ಯೂ ಅಥವಾ ಶುದ್ಧ ಕರ್ಚಿಫ್ ಅನ್ನು ಡಿಪ್ ಮಾಡಿ ಟ್ಯಾಪ್ ಮಾಡಬೇಕು ಇದರಿಂದ ರ್ಯಾಶಸ್ ಆಗುವುದಿಲ್ಲ. ನಂತರ ಯಾವುದಾದರೂ ಮೊಯಶ್ಚರೈಸರ್ ಹಚ್ಚಿಕೊಳ್ಳಬೇಕು. ಐಬ್ರೋ ಮನೆಯಲ್ಲೇ ಮಾಡಿಕೊಳ್ಳಬಹುದು ಹೇಗೆಂದರೆ ಕಣ್ಣಿನ ಭಾಗ ಸೆನ್ಸಿಟಿವ್ ಆಗಿರುವುದರಿಂದ ಕೋಲ್ಡ್ ವಾಟರ್ ನಲ್ಲಿ ಕಾಟನ್ ಅನ್ನು ಡಿಪ್ ಮಾಡಿ ಟ್ಯಾಪ್ ಮಾಡಬೇಕು ನಂತರ 1 ಬ್ರಶ್ ತೆಗೆದುಕೊಂಡು ಐಬ್ರೋ ಶೇಪ್ ಕೊಡಬೇಕು.
ಫೇಸ್ ಶೇವ್ ಮಾಡುವ ರೇಸರ್ ನಿಂದ ಬೇಕಾದ ಹಾಗೆ ಶೇಪ್ ಮಾಡಿಕೊಳ್ಳಬಹುದು. ಎಕ್ಸಟ್ರಾ ಹೇರ್ ರಿಮೂವ್ ಮಾಡುವಾಗ ಆಗಾಗ ಬ್ರಷ್ ನಿಂದ ಶೇಪ್ ಕೊಡುತ್ತಾ ಹೋದರೆ ಶೇಪ್ ಹೇಗೆ ಬರುತ್ತಿದೆ ಎಂದು ಗೊತ್ತಾಗುತ್ತದೆ. ನಂತರ ಕೊನೆಯದಾಗಿ ಮೊಯಶ್ಚರೈಸರ್ ಹಚ್ಚಬೇಕು. ವೈಟ್ ಹೆಡ್ಸ್ ಮತ್ತು ಬ್ಲಾಕ್ ಹೆಡ್ಸ್ ಕೆಲವರ ಮುಖದಲ್ಲಿ ಹೆಚ್ಚು ಕಾಣಿಸುತ್ತದೆ ಅವುಗಳನ್ನು ರಿಮೂವ್ ಮಾಡಬೇಕೆಂದರೆ ಮೊದಲು ಮುಖವನ್ನು ಫೇಸ್ ವಾಶ್ ನಿಂದ ವಾಷ್ ಮಾಡಿಕೊಳ್ಳಬೇಕು. ವಾರ್ಮ್ ವಾಟರ್ ನಲ್ಲಿ ಕಾಟನ್ ಅನ್ನು ಡಿಪ್ ಮಾಡಿ ವೈಟ್ ಹೆಡ್ಸ್ ಎಂಡ್ ಬ್ಲಾಕ್ ಹೆಡ್ಸ್ ಇದ್ದಲ್ಲಿ ಟಚ್ ಮಾಡಬೇಕು. ನಂತರ ಅಂಗಡಿಯಲ್ಲಿ ಸಿಗುವ ರಿಮೂವರ್ ಒಂದು ಪ್ಯಾಕ್ ನಲ್ಲಿ ಎರಡು ಸಾಷೆಟ್ ಇರುತ್ತದೆ ಒಂದನ್ನು ತೆಗೆದುಕೊಂಡು ಅದರಲ್ಲಿ ಮೂರು ಸ್ಟ್ರಿಪ್ಸ್ ಬರುತ್ತದೆ. ಒಂದು ಸ್ಟ್ರಿಪ್ಸ್ ಅನ್ನು ಕವರ್ ತೆಗೆದು ವೈಟ್ ಎಂಡ್ ಬ್ಲಾಕ್ ಹೆಡ್ಸ್ ಇರುವಲ್ಲಿ ಹಾಕಬೇಕು ಹತ್ತು ನಿಮಿಷ ಆದ ನಂತರ ರಿಮೂವ್ ಮಾಡಬೇಕು ರಿಮೂವ್ ಮಾಡುವಾಗ ಸ್ವಲ್ಪ ನೋವಾಗುತ್ತದೆ. ನಂತರ ಹಚ್ಚಿದ ಜಾಗವನ್ನು ಕಾಟನ್ ನಲ್ಲಿ ಕ್ಲೀನ್ ಮಾಡಬೇಕಾಗುತ್ತದೆ. ನಂತರ ಮತ್ತೊಮ್ಮೆ ವಾರ್ಮ್ ವಾಟರ್ ನಿಂದ ಕಾಟನ್ ಅನ್ನು ಡಿಪ್ ಮಾಡಿ ಟಚ್ ಮಾಡಬೇಕು ಹೀಗೆ ಮಾಡುವಾಗ ಕೈ ಕ್ಲೀನ್ ಆಗಿರಬೇಕು.
ಆಕ್ಟಿವೇಟಡ್ ಚಾರ್ಕೊಲ್ ಫೇಸ್ ಮಾಸ್ಕ್ ಸಿಗುತ್ತದೆ. ನಿಮಗೆ ಯಾವ ಫೇಸ್ ಮಾಸ್ಕ್ ಬೇಕೊ ಅದನ್ನು ತೆಗೆದುಕೊಂಡು ಮುಖದಲ್ಲಿ ನೀಟಾಗಿ ಹಚ್ಚಿಕೊಳ್ಳಬೇಕು. ಹದಿನೈದು, ಇಪ್ಪತ್ತು ನಿಮಿಷಗಳ ನಂತರ ಮುಖವನ್ನು ವಾಷ್ ಮಾಡಬೇಕು ಇದರಿಂದ ಸ್ಕಿನ್ ಸಾಫ್ಟ್ ಆಗುತ್ತದೆ. ಗುಡ್ ವೈಬ್ಸ್ ಅವರ ಮಲ್ಟಿಪರ್ಪಸ್ ಜಲ್ ಇದು ಎಲ್ಲಾ ರೀತಿಯ ಸ್ಕಿನ್ ಗೂ ಒಳ್ಳೆಯದು ಅದರಲ್ಲೂ ಡ್ರೈ ಸ್ಕಿನ್ ಇದ್ದವರಿಗೆ ಬಹಳ ಒಳ್ಳೆಯದು. ಗುಡ್ ವೈಬ್ಸ್ ಅವರ ಆರೆಂಜ್ ಜಲ್ ಆಯ್ಲಿ ಸ್ಕಿನ್ ಇರುವವರಿಗೆ ಒಳ್ಳೆಯದು ಅದನ್ನು ಮುಖಕ್ಕೆ ಹಚ್ಚಿಕೊಳ್ಳಬೇಕು. ಹ್ಯಾಂಡ್ ವ್ಯಾಕ್ಸಿಂಗ್ ಮಾಡುವಾಗ ವೀಟ್ ಸ್ಟ್ರಿಪ್ಸ್ ತೆಗೆದುಕೊಂಡು ಮೊದಲು ಕೈಯಲ್ಲಿ ವಾರ್ಮ್ ಮಾಡಬೇಕು ನಂತರ ಕವರ್ ತೆಗೆದು ಕೈಮೇಲೆ ಅಪೋಸಿಟ್ ಡೈರೆಕ್ಷನ್ ಅಲ್ಲಿ ಹಾಕಬೇಕು ನಂತರ ತೆಗೆಯಬೇಕು ಇದರಿಂದ ನೀಟಾಗಿ ಹೇರ್ ರಿಮೂವ್ ಆಗುತ್ತದೆ. ಈ ರೀತಿ ಮಾಡುವುದರಿಂದ ಕಡಿಮೆ ಖರ್ಚಿನಲ್ಲಿ ಮನೆಯಲ್ಲಿ ಗ್ರೂಮಿಂಗ್ ಮಾಡಿಕೊಳ್ಳಬಹುದು. ಈ ಮಾಹಿತಿಯನ್ನು ತಪ್ಪದೆ ಮಹಿಳೆಯರಿಗೆ ತಿಳಿಸಿ.