Labour Card Card Holder: ಇದೀಗ ಕಾರ್ಮಿಕರ ಕಾರ್ಡ್ ಹೊಂದಿರುವವರಿಗೆ ಮನೆ ನಿರ್ಮಿಸಿಕೊಳ್ಳಲು ಸರ್ಕಾರದಿಂದ ಧನ ಸಹಾಯ ನೀಡಲಾಗುತ್ತಿದೆ ಕಾರ್ಮಿಕ ಕಾರ್ಡ್ ಹೊಂದಿರುವ ಕಾರ್ಮಿಕರು ಒಂದು ವೇಳೆ ಮನೆ ಇಲ್ಲದಿದ್ದರೆ ಹೊಸ ಮನೆ ನಿರ್ಮಿಸಿಕೊಳ್ಳಲು ಅಥವಾ ಹಳೆಯ ಮನೆಯ ದುರಸ್ತಿ ಕಾರ್ಯವನ್ನು ಪೂರ್ಣಗೊಳಿಸಲು ಸರ್ಕಾರ ಮತ್ತು ಕಾರ್ಮಿಕ ಇಲಾಖೆಯ ವತಿಯಿಂದ ಧನ ಸಹಾಯ ಸಿಗಲಿದೆ.
ಹಾಗಾದರೆ ಕಾರ್ಮಿಕ ಕಾರ್ಡ್ ಹೊಂದಿದ್ದವರಿಗೆ ಮನೆ ನಿರ್ಮಾಣಕ್ಕೆ ಹಾಗೂ ಮನೆಯ ದುರಸ್ತಿಗೆ ಸರ್ಕಾರದಿಂದ ಸಿಗುವ ಹಣ ಎಷ್ಟು ಯಾವ ಯಾವ ದಾಖಲಾತಿಗಳನ್ನು ಅರ್ಜಿ ಸಲ್ಲಿಸಲು ನೀಡಬೇಕು ಹಾಗೂ ಯಾವಾಗ ಕಾರ್ಮಿಕರ ಖಾತೆಗೆ ಹಣ ಜಮಾ ಆಗುತ್ತದೆ ಎಂಬುದನ್ನು ಈ ಕೆಳಗೆ ನಾವು ತಿಳಿದುಕೊಳ್ಳೋಣ.
ಕಾರ್ಮಿಕ ಕಾರ್ಡ್ ಹೊಂದಿದವರಿಗೆ ಅಥವಾ ಕಾರ್ಮಿಕರಿಗೆ ಮನೆ ನಿರ್ಮಿಸಿಕೊಳ್ಳಲು ಧನ ಸಹಾಯ ಮಾಡುತ್ತಿರುವುದು ಸರ್ಕಾರದ ಒಂದು ಒಳ್ಳೆಯ ಕೆಲಸವಾಗಿದೆ. ಕರ್ನಾಟಕದ ಕಟ್ಟಡ ಕಾರ್ಮಿಕ ನಿರ್ಮಾಣ ಮಂಡಳಿಯ ಸಚಿವರು ಹಾಗೂ ಅಧ್ಯಕ್ಷರಾಗಿರುವ ಸಂತೋಷ್ ಅವರು ಕಟ್ಟಡ ಕಾರ್ಮಿಕರಿಗೆ ಮನೆಯನ್ನು ನಿರ್ಮಿಸಿ ಕೊಡಬೇಕು ಎಂಬುದರ ಬಗ್ಗೆ ವಿಧಾನಸೌಧದಲ್ಲಿ ಬೇರೆ ಎಲ್ಲ ವಸತಿ ಸಚಿವರ ಸಮ್ಮುಖದಲ್ಲಿ ಸಭೆ ನಡೆಸಿದರು. ಈ ಸಭೆಯಲ್ಲಿ ಇನ್ನಿತರ ವ್ಯಕ್ತಿಗಳೊಂದಿಗೆ ಸಂತೋಷ್ ಅವರು ಕಟ್ಟಡ ಕಾರ್ಮಿಕರಿಗೆ ಮನೆ ನಿರ್ಮಿಸಿ ಕೊಡುವ ಕುರಿತು ಚರ್ಚಿಸಿದ್ದಾರೆ.
ಈ ಮೂಲಕ ಕರ್ನಾಟಕದ ಎಲ್ಲಾ ಜಿಲ್ಲೆಗಳ ಕಟ್ಟಡ ಕಾರ್ಮಿಕರ ಮನೆ ನಿರ್ಮಾಣಕ್ಕಾಗಿ ಬ್ಲೂಪ್ರಿಂಟ್ ಅನ್ನ ತಯಾರಿಸಲಾಗಿದೆ ಇದರ ಜೊತೆಗೆ ಕಾರ್ಮಿಕರ ವಸತಿ ಯೋಜನೆಯ ಅಡಿಯಲ್ಲಿ ಕಾರ್ಮಿಕರಿಗೆ ಬಡ್ಡಿ ರಹಿತ ಸಾಲವನ್ನು ನೀಡಬೇಕು ಎಲ್ಲರಿಗೂ ಇದರ ಫಲ ದೊರಕಬೇಕು ಎಂಬುದಾಗಿ ವಸತಿ ಸಚಿವರು ಆದೇಶ ನೀಡಿದ್ದಾರೆ
ಈ ಕುರಿತಾಗಿ ಮುಂಬರುವ ದಿನಗಳಲ್ಲಿ ಎಲ್ಲಾ ಇಲಾಖೆಯವರು ಚರ್ಚೆ ಮಾಡಲಿದ್ದಾರೆ. ಹೀಗೆ ಸರ್ಕಾರದಿಂದ ಧನ ಸಹಾಯ ಪಡೆಯಲು ಬಯಸುವ ಕಾರ್ಮಿಕರು ಕಾರ್ಮಿಕರ ಕಾರ್ಡ್ ಹೊಂದಿರುವುದು ಅವಶ್ಯಕ ಜೊತೆಗೆ ಬಡತನ ರೇಖೆಗಿಂತ ಕೆಳಗೆ ಇರುವ ಜನರು ಈ ಯೋಜನೆಯ ಲಾಭವನ್ನು ಪಡೆಯುವ ನಿರೀಕ್ಷೆ ಕೂಡ ಇದೆ. ಇದನ್ನೂ ಓದಿ ಗೃಹಲಕ್ಷ್ಮಿಗೆ ಅರ್ಜಿ ಹಾಕಿದ್ದರೆ ಇಲ್ಲಿ ಗಮನಿಸಿ, ಈ ಕೆಲಸ ಮಾಡದಿದ್ದರೆ 2 ಸಾವಿರ ಹಣ ಬರೋದಿಲ್ಲ.. ಮೊಬೈಲ್ ನಲ್ಲೇ ಮಾಡಿಕೊಳ್ಳಿ..