Gruhalakshmi status check: ಕರ್ನಾಟಕ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರ ಚುನಾವಣೆಯ ಸಮಯದಲ್ಲಿ ಕೆಲವು ಯೋಜನೆಗಳ ಬಗ್ಗೆ ತಿಳಿಸಿದರು ಅದರಂತೆ ಇಂದು ಚುನಾವಣೆಯಲ್ಲಿ ಗೆದ್ದು ಸರ್ಕಾರ ನಡೆಸುತ್ತಿದ್ದು ತಾವು ಹೇಳಿದ ಮಾತಿನಂತೆ ಗ್ರಹಲಕ್ಷ್ಮಿ, ಶಕ್ತಿ ಯೋಜನೆ ಇತ್ಯಾದಿ ಯೋಜನೆಗಳನ್ನು ಜಾರಿಗೆ ತಂದಿದ್ದು ಇದೀಗ ಸರ್ಕಾರದ ಮಹತ್ತರವಾದ, ಮಹಿಳೆಯರಿಗಾಗಿ ಇರುವ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ದೊರೆತಿದ್ದು ಮಹಿಳೆಯರಲ್ಲಿ ಕೆಲವು ಅನುಮಾನಗಳಿವೆ, ಮಹಿಳೆಯರ ಎಲ್ಲಾ ಅನುಮಾನಗಳನ್ನು ದೂರ ಮಾಡುವ ಹಾಗೂ ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಆಗಸ್ಟ್ 31ನೇ ತಾರೀಖಿನಂದು ಗ್ರಹ ಲಕ್ಷ್ಮೀ ಯೋಜನೆಗೆ ಮೈಸೂರಿನಲ್ಲಿ ಚಾಲನೆ ದೊರೆತಿದೆ. ಸರ್ಕಾರದ ಮಹತ್ತರ ಯೋಜನೆಯಾದ ಪ್ರತಿ ತಿಂಗಳು ಮಹಿಳೆಯರ ಖಾತೆಗೆ 2,000ರೂಪಾಯಿ ಹಣ ಹಾಕುವ ಯೋಜನೆಗೆ ಚಾಲನೆ ದೊರೆತಿದ್ದು ಎಲ್ಲರಿಗೂ ಸಂತಸ ತಂದಿದೆ. ಬಹಳಷ್ಟು ಮಹಿಳೆಯರಿಗೆ ಈ ಯೋಜನೆಯ ಬಗ್ಗೆ ಕೆಲವು ಅನುಮಾನಗಳಿವೆ. ಸರ್ಕಾರದಿಂದ ಕೆಲವು ಮಹಿಳೆಯರ ಮೊಬೈಲ್ ಗೆ 2000 ರೂಪಾಯಿ ಹಣ ನಿಮ್ಮ ಅಕೌಂಟ್ ಗೆ ಬರಲಿದೆ ಎಂಬ ಮೆಸೇಜ್ ಕಳುಹಿಸಲಾಗಿದೆ ಆದರೆ ಅಕೌಂಟ್ ಗೆ ಹಣ ಬಂದಿಲ್ಲ. ಸರ್ಕಾರ ಮಹಿಳೆಯರಿಗೆ ಸಪ್ಟೆಂಬರ್ ತಿಂಗಳಿನ 5 ರ ಒಳಗೆ olage ಅಥವಾ ಮುಂದುವರಿದು ಕೆಲವು ದಿನಗಳಲ್ಲಿ ಹಣ ಜಮಾ ಆಗುತ್ತದೆ ಎಂದು ತಿಳಿಸಿದೆ.

ಮೆಸೇಜ್ ಬಂದಿರುವ ಮಹಿಳೆಯರ ಖಾತೆಗೆ ಕೆಲವು ದಿನಗಳಲ್ಲಿ ಹಣ ಬರುತ್ತದೆ. ಇನ್ನು ಬಹಳಷ್ಟು ಮಹಿಳೆಯರಿಗೆ ಸರ್ಕಾರದಿಂದ ಮೆಸೇಜ್ ಬಂದಿಲ್ಲ ಈ ಯೋಜನೆಗೆ ಒಂದು ಕೋಟಿ ಹದಿಮೂರು ಲಕ್ಷ ಮಹಿಳೆಯರು ನೋಂದಣಿ ಮಾಡಿಸಿಕೊಂಡಿದ್ದಾರೆ. 15 ಲಕ್ಷ ಮಹಿಳೆಯರಿಗೆ ಮಾತ್ರ ಮೆಸೇಜ್ ಕಳುಹಿಸಿದ್ದಾರೆ ಹಂತ ಹಂತವಾಗಿ ಸಪ್ಟೆಂಬರ್ ತಿಂಗಳಿನ 4ನೇ ತಾರೀಖಿನ ಒಳಗೆ ಎಲ್ಲ ಮಹಿಳೆಯರಿಗೂ ಮೆಸೇಜ್ ಹೋಗುತ್ತದೆ ಎಂದು ಸರ್ಕಾರ ತಿಳಿಸಿದೆ. ಏಕಕಾಲದಲ್ಲಿ ಒಂದು ಕೋಟಿ ಹದಿಮೂರು ಲಕ್ಷ ಮಹಿಳೆಯರಿಗೆ ಮೆಸೇಜ್ ಕಳಿಸುವುದು ಸುಲಭದ ಕೆಲಸವಲ್ಲ.

ಹೆಚ್ಚಿನ ಮಹಿಳೆಯರು ನೋಂದಣಿ ಮಾಡಿಸುವಾಗ ತಮ್ಮ ಹಾಗೂ ತಮ್ಮ ಗಂಡನ ಆಧಾರ ಕಾರ್ಡ್, ರೇಷನ್ ಕಾರ್ಡ್ ಕೊಟ್ಟು ಆಕನೊಲೆಜ್ ಮೇಂಟ್ ತೆಗೆದುಕೊಂಡಿರುತ್ತಾರೆ, ಬ್ಯಾಂಕ್ ವಿವರವನ್ನು ಸೇವಾ ಸಿಂಧು ಕೇಂದ್ರಗಳಲ್ಲಿ ಕೆಳಿರುವುದಿಲ್ಲ ಅಂತಹ ಮಹಿಳೆಯರ ಆಧಾರ ಕಾರ್ಡ್ ಬ್ಯಾಂಕ್ ಆಕೊಂಟ್ ಗೆ ಲಿಂಕ್ ಆಗಿರಬೇಕು ಆಗಿದ್ದರೆ ಮಾತ್ರ ಹಣ ಬರುತ್ತದೆ. ಗ್ರಹ ಲಕ್ಷ್ಮೀ ಯೋಜನೆಗೆ ನೋಂದಣಿ ಮಾಡುವಾಗ ಬ್ಯಾಂಕ್ ಅಕೌಂಟ್ ವಿವರ ಕೊಟ್ಟಿದ್ದರೆ ಯಾವುದೇ ಸಮಸ್ಯೆ ಆಗುವುದಿಲ್ಲ. ಈ ಯೋಜನೆಯಲ್ಲಿ ಕೇಂದ್ರ ಸರ್ಕಾರದ ನೀತಿಯಂತೆ ಫಲಾನುಭವಿಗೆ ನೇರವಾಗಿ ಹಣ ಬರುತ್ತದೆ. ಪ್ರಧಾನ ಮಂತ್ರಿ ಕಿಸಾನ ಯೋಜನೆ, ಎಲ್ ಪಿಜಿ ಸಬ್ಸಿಡಿ ಹಣ ನೇರವಾಗಿ ಫಲಾನುಭವಿಯ ಖಾತೆಗೆ ಜಮಾ ಆಗುತ್ತದೆ. ಇತ್ತೀಚಿಗೆ ಅನ್ನಭಾಗ್ಯ ಯೋಜನೆಯ ಹಣವು ಸಹ ಆಧಾರ ಕಾರ್ಡ್ ಲಿಂಕ್ ಆಗಿರುವ ಬ್ಯಾಂಕ್ ಅಕೌಂಟ್ ಗೆ ಬರುತ್ತದೆ.

ಅನ್ನಭಾಗ್ಯ ಯೋಜನೆಯ ಹಣ ಪಡೆದವರು ಯೋಚಿಸುವ ಅಗತ್ಯ ಇಲ್ಲ ಈಗಾಗಲೇ ಬ್ಯಾಂಕ್ ಅಕೌಂಟ್ ಹಾಗೂ ಆಧಾರ ಲಿಂಕ್ ಆಗಿರುತ್ತದೆ. ಉಳಿದ ಮಹಿಳೆಯರು ತಮ್ಮ ಬ್ಯಾಂಕ್ ಖಾತೆಗೆ ಆಧಾರ ಲಿಂಕ್ ಆಗಿದೆಯೊ ಇಲ್ಲವೊ ಎಂಬುದನ್ನು ಮೊಬೈಲ್ ನಲ್ಲೆಯೆ ನೋಡಬಹುದು. ಮೊಬೈಲ್ ನಲ್ಲಿ ಗೂಗಲ್ ನಲ್ಲಿ ರೆಸಿಡೆಂಟ್ ಡಾಟ್ ಯುಐಡಿಎಐ ಡಾಟ್ ಜಿಒವಿ ಡಾಟ್ ಇನ್ ಸ್ಲ್ಯಾಷ್ ಬಿಎಎನ್ ಕೆ ಡ್ಯಾಶ್ ಎಂಎಪಿಪಿಇಆರ್ ಈ ಲಿಂಕ್ ಅನ್ನು ಟೈಪ್ ಮಾಡಬೇಕಾಗುತ್ತದೆ, ಈ ಲಿಂಕ್ ಕೇಂದ್ರ ಸರ್ಕಾರಕ್ಕೆ ಸಂಬಂಧಪಟ್ಟದ್ದು ಹೀಗಾಗಿ ಯಾವುದೆ ಸಮಸ್ಯೆ ಬರುವುದಿಲ್ಲ. ಲಿಂಕ್ ಗೆ ಹೋದ ನಂತರ ಒಂದು ಸ್ಕ್ರೀನ್ ಓಪನ್ ಆಗುತ್ತದೆ ಅಲ್ಲಿ ಕೆಳಗೆ ನೋಂದಣಿ ಮಾಡಿಸಿದ ಮಹಿಳೆಯ ಆಧಾರ ಕಾರ್ಡ್ ನ ನಂಬರ್ ಅನ್ನು ಹಾಕಬೇಕಾಗುತ್ತದೆ ನಂತರ ಇಂಟರ್ ಸೆಕ್ಯುರಿಟಿ ಕೋಡ್ ಎಂದು ಇರುತ್ತದೆ ಅದನ್ನು ಹಾಗೆಯೇ ಟೈಪ್ ಮಾಡಬೇಕು.

ಕೆಳಗೆ ಸೆಂಡ್ ಓಟಿಪಿ ಎಂಬ ಆಪ್ಷನ್ ಕಂಡುಬರುತ್ತದೆ ಅದನ್ನು ಕ್ಲಿಕ್ ಮಾಡಿದಾಗ ಆಧಾರ್ ಕಾರ್ಡ್ ಗೆ ಲಿಂಕ್ ಆದ ಮೊಬೈಲ್ ನಂಬರ್ ಗೆ ಓಟಿಪಿ ಹೋಗುತ್ತದೆ ಸೆಂಡ್ ಒಟಿಪಿ ಕೆಳಗೆ ಎಂಟರ್ ಓಟಿಪಿ ಎಂಬ ಆಪ್ಷನ್ ಇದೆ ಅದನ್ನು ಕ್ಲಿಕ್ ಮಾಡಿ ಓಟಿಪಿಯನ್ನು ಎಂಟರ್ ಮಾಡಬೇಕು ಆಗ ಒಂದು ಸ್ಕ್ರೀನ್ ಓಪನ್ ಆಗುತ್ತದೆ ಕಂಗ್ರಾಜುಲೇಶನ್ ಯುವರ್ ಆದಾರ ಮ್ಯಾಪಿಂಗ್ ಹ್ಯಾಸ್ ಬೀನ್ ಡನ್ ಎಂದು ಬರುತ್ತದೆ. ಆಧಾರ್ ಕಾರ್ಡ್ ಬ್ಯಾಂಕ್ ಅಕೌಂಟ್ ಗೆ ಲಿಂಕ್ ಆಗಿದ್ದರೆ ಕೆಳಗೆ ಅಕೌಂಟ್ ಡೀಟೇಲ್ಸ್ ಸಹ ಬರುತ್ತದೆ. ಒಂದು ವೇಳೆ ಬ್ಯಾಂಕ್ ಅಕೌಂಟಿಗೆ ಆಧಾರ್ ಕಾರ್ಡ್ ಲಿಂಕ್ ಆಗದೆ ಇದ್ದಲ್ಲಿ ಓಟಿಪಿ ಹಾಕಿದ ನಂತರ ಬರುವ ಸ್ಕ್ರೀನ್ ನಲ್ಲಿ ಯುವರ್ ಆಧಾರ್ ಇಸ್ ನಾಟ್ ಲಿಂಕ್ ಡ್ ಟು ಅ ಬ್ಯಾಂಕ್ ಎಂದು ಬರುತ್ತದೆ ಅಂದರೆ ಆಧಾರ್ ಕಾರ್ಡ್ ನಂಬರ್ ಬ್ಯಾಂಕ್ ಅಕೌಂಟ್ ಗೆ ಲಿಂಕ್ ಆಗಿರುವುದಿಲ್ಲ ಎಂದು, ಬ್ಯಾಂಕ್ ಅಕೌಂಟ್ ಗೆ ಆಧಾರ್ ಕಾರ್ಡ್ ಲಿಂಕ್ ಆಗದೆ ಇದ್ದಲ್ಲಿ ಅಕೌಂಟ್ ಇರುವ ಬ್ಯಾಂಕಿಗೆ ಭೇಟಿ ನೀಡಿದರೆ ಒಂದು ಫಾರ್ಮ್ ಕೊಡುತ್ತಾರೆ ಈ ಫಾರ್ಮ್ ಅನ್ನು ತುಂಬಬೇಕು

Gruhalakshmi status check:

ಫಾರ್ಮ್ ನಲ್ಲಿ ಅಕೌಂಟ್ ನಂಬರ್, ಆಧಾರ್ ನಂಬರ್, ಮೊಬೈಲ್ ನಂಬರ್ ಇತ್ಯಾದಿ ಮಾಹಿತಿಗಳನ್ನು ಸರಿಯಾಗಿ ಕೊಡಬೇಕಾಗುತ್ತದೆ. ಕೆಲವು ಬ್ಯಾಂಕ್ ಗಳಲ್ಲಿ ಕೇವಲ ಅರ್ಜಿದಾರರ ಥಂಬ್ ಇಂಪ್ರೆಶನನ್ನು ಹಾಗೂ ಆಧಾರ್ ಕಾರ್ಡ್ ತೆಗೆದುಕೊಂಡು ಹೋದರೆ ಲಿಂಕ್ ಮಾಡಿಕೊಡುತ್ತಾರೆ. ಆಧಾರ್ ಕಾರ್ಡ್ ನಂಬರ್ ಬ್ಯಾಂಕ್ ಅಕೌಂಟ್ ಗೆ ಲಿಂಕ್ ಆಗಿದ್ದರೆ ಮಾತ್ರ ಅಕೌಂಟ್ ಗೆ ಹಣ ಬರುತ್ತದೆ ಯಾವ ಮಹಿಳೆಯ ಬ್ಯಾಂಕ್ ಅಕೌಂಟ್ ಗೆ ಆಧಾರ್ ಕಾರ್ಡ್ ನಂಬರ್ ಲಿಂಕ್ ಆಗಿರುವುದಿಲ್ಲ ಅವರಿಗೆ 2,000 ಹಣ ಸರ್ಕಾರದಿಂದ ಸಿಗುವುದಿಲ್ಲ. ರೇಷನ್ ಕಾರ್ಡ್ ಹೊಸ ಅರ್ಜಿಯನ್ನು ತೆಗೆದುಕೊಳ್ಳುವ ಸರ್ಕಾರದ ಇನ್ನೊಂದು ಯೋಜನೆಗೆ ಸದ್ಯಕ್ಕೆ ಅರ್ಜಿಯನ್ನು ತೆಗೆದುಕೊಳ್ಳುತ್ತಿಲ್ಲ ಇನ್ನೂ ಎರಡು-ಮೂರು ತಿಂಗಳು ಕಳೆದ ನಂತರದ ದಿನಗಳಲ್ಲಿ ಅರ್ಜಿ ತೆಗೆದುಕೊಳ್ಳುವ ಸಾಧ್ಯತೆ ಇದೆ.

ರೇಷನ್ ಕಾರ್ಡ್ ನಲ್ಲಿ ತಿದ್ದುಪಡಿಗೆ ಅವಕಾಶವಿದ್ದು ಎಲ್ಲರೂ ತಮ್ಮ ರೇಷನ್ ಕಾರ್ಡ್ ನಲ್ಲಿ ಆಗಬೇಕಾದ ತಿದ್ದುಪಡಿಗಳ ಬಗ್ಗೆ ಗಮನಹರಿಸಬೇಕು ಕೆಲವರು ಈಗಾಗಲೆ ಎರಡು ತಿಂಗಳ ಹಿಂದೆ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕಿದ್ದು ಕೆಲವು ದಿನಗಳಲ್ಲಿ ಹೊಸ ರೇಷನ್ ಕಾರ್ಡ್ ಅವರಿಗೆ ಸಿಗಲಿದೆ. ಇನ್ನೊಂದು ಮಾಹಿತಿಯ ಪ್ರಕಾರ ಬಿಪಿಎಲ್ ಕಾರ್ಡ್ ಮಾಡಿಕೊಳ್ಳಲು ಅರ್ಹತೆ ಇಲ್ಲದವರು ಸಹ ಬಿಪಿಎಲ್ ಕಾಡುದಾರರಾಗಿರುವುದರಿಂದ ಅವರನ್ನು ಶಾರ್ಟ್ ಲಿಸ್ಟ್ ಮಾಡುವ ಮೂಲಕ ಎಪಿಎಲ್ ಕಾರ್ಡಿಗೆ ವರ್ಗಾಯಿಸಲಾಗುತ್ತದೆ ಎಂದು ತಿಳಿದು ಬಂದಿದೆ.

ಒಟ್ಟಿನಲ್ಲಿ ಸರ್ಕಾರ ಗ್ರಹ ಲಕ್ಷ್ಮೀ ಯೋಜನೆಯನ್ನು ಜಾರಿಗೊಳಿಸುವ ಮೂಲಕ ಮಹಿಳೆಯರು ಸ್ವಾವಲಂಬಿಯಾಗಿ ಜೀವನ ನಡೆಸಲು ಅವಕಾಶವನ್ನು ಕಲ್ಪಿಸಿದೆ. ಮಹಿಳೆಯರು ತಮ್ಮ ಆಧಾರ ಕಾರ್ಡ್ ಲಿಂಕ್ ಆಗದೆ ಇದ್ದಲ್ಲಿ ಹಣ ಪಡೆಯಲು ಸಾಧ್ಯವಿಲ್ಲ ಹೀಗಾಗಿ ಮೊಬೈಲ್ ನಲ್ಲಿಯೇ ಲಿಂಕ್ ಆಗಿದೆಯೊ ಇಲ್ಲವೊ ಎಂಬುದನ್ನು ನೋಡಿಕೊಳ್ಳಿ ಈ ಮಾಹಿತಿಯನ್ನು ತಪ್ಪದೆ ಎಲ್ಲ ಮಹಿಳೆಯರಿಗೂ ತಿಳಿಸಿ.

By

Leave a Reply

Your email address will not be published. Required fields are marked *