ಕಟ್ಟಡ ಕಾರ್ಮಿಕರು, ಅಸಂಘಟಿತ ವಲಯದ ಕಾರ್ಮಿಕರು, ಸಂಘಟಿತ ವಲಯದ ಕಾರ್ಮಿಕರು ಸೇರಿದಂತೆ ಕಾರ್ಮಿಕರಿಗೆ ಕಾರ್ಮಿಕ ಕಾರ್ಡ್ ಮಾಡಿಕೊಡಲಾಗುತ್ತದೆ. ಕಾರ್ಮಿಕ ಕಾರ್ಡ್ ಮಾಡಿಸಿಕೊಂಡರೆ ಕೆಲವು ಉಪಯೋಗಗಳಿವೆ. ಹಾಗಾದರೆ ಕಾರ್ಮಿಕ ಕಾರ್ಡ್ ಹೊಂದುವುದರಿಂದ ಸರ್ಕಾರದಿಂದ ಯಾವೆಲ್ಲಾ ಸೌಲಭ್ಯವನ್ನು ಪಡೆಯಬಹುದು ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.
ಕಾರ್ಮಿಕ ಕಾರ್ಡ್ ಹೊಂದಿರುವವರಿಗೆ ರಾಜ್ಯ ಸರ್ಕಾರ ಕೋವಿಡ್ 19 ಎರಡನೇ ಅಲೆಯ ಪರಿಣಾಮದ ಹಿನ್ನೆಲೆಯಲ್ಲಿ 3,000 ರೂಪಾಯಿ ಪರಿಹಾರ ಧನ ಬಿಡುಗಡೆ ಮಾಡಿದೆ. ಮೂರು ವರ್ಷ ಕಾರ್ಮಿಕ ಕಾರ್ಡ್ ಸದಸ್ಯತ್ವದೊಂದಿಗೆ 60 ವರ್ಷ ಪೂರೈಸಿದ ಫಲಾನುಭವಿಗೆ ಮಾಸಿಕ 2 ಸಾವಿರ ರೂಪಾಯಿ ಪಿಂಚಣಿ ಸೌಲಭ್ಯ ದೊರೆಯುತ್ತದೆ. ನೋಂದಾಯಿತ ಫಲಾನುಭವಿಯು ಖಾಯಿಲೆಗಳಿಂದ ಅಥವಾ ಕಟ್ಟಡ ಕಾಮಗಾರಿಗಳ ಅಪಘಾತದಿಂದ ಶಾಶ್ವತ ಅಥವಾ ಭಾಗಶಃ ಅಂಗವಿಕಲತೆ ಹೊಂದಿದ್ದರೆ ಮಾಸಿಕ 2 ಸಾವಿರ ರೂಪಾಯಿ ಪಿಂಚಣಿ ಹಾಗೂ ಶೇಕಡವಾರು ದುರ್ಬಲತೆಯನ್ನು ಆಧರಿಸಿ ಎರಡು ಲಕ್ಷದವರೆಗೆ ಸಹಾಯಧನ ಸಿಗುತ್ತದೆ. ಟ್ರೈನಿಂಗ್ ಮತ್ತು ಟೂಲ್ ಕಿಟ್ ಮತ್ತು ಶ್ರಮ ಸಾಮರ್ಥ್ಯದಡಿ 20,000 ರೂಪಾಯಿ ಕೊಡಲಾಗುತ್ತದೆ.
ಕಾರ್ಮಿಕ ಕಾರ್ಡ್ ಹೊಂದಿರುವವರಿಗೆ ವಸತಿ ಸೌಲಭ್ಯದಡಿ 2 ಲಕ್ಷ ರೂಪಾಯಿವರೆಗೆ ಸಹಾಯಧನ ಕೊಡಲಾಗುತ್ತದೆ. ಕಾರ್ಮಿಕ ಕಾರ್ಡ್ ಹೊಂದಿರುವ ಮಹಿಳಾ ಫಲಾನುಭವಿಗೆ ಹೆರಿಗೆ ಸೌಲಭ್ಯದಡಿ ಮೊದಲ ಎರಡು ಮಕ್ಕಳಿಗೆ ಅಂದರೆ ಹೆಣ್ಣು ಮಗುವಿನ ಜನನಕ್ಕೆ 30,000 ರೂಪಾಯಿ ಮತ್ತು ಗಂಡು ಮಗುವಿನ ಜನನಕ್ಕೆ 20,000 ರೂಪಾಯಿ ಸಹಾಯಧನ ನೀಡಲಾಗುತ್ತದೆ. ಕಾರ್ಮಿಕ ಕಾರ್ಡ್ ಹೊಂದಿರುವವರು ನಿಧನರಾದಾಗ ಅಂತ್ಯಕ್ರಿಯ ವೆಚ್ಚದಡಿ 4,000 ರೂಪಾಯಿ ಮತ್ತು 50000 ರೂಪಾಯಿವರೆಗೆ ಸಹಾಯಧನ ನೀಡಲಾಗುತ್ತದೆ. ಕಾರ್ಮಿಕ ಕಾರ್ಡ್ ಹೊಂದಿರುವವರ ಅವಲಂಬಿತರಿಗೆ ವೈದ್ಯಕೀಯ ಸೌಲಭ್ಯದಡಿ 300 ರೂಪಾಯಿಯಿಂದ ಹತ್ತು ಸಾವಿರ ರೂಪಾಯಿವರೆಗೆ ನೀಡಲಾಗುತ್ತದೆ. ಕಾರ್ಮಿಕ ಕಾರ್ಡ್ ಹೊಂದಿರುವವರಿಗೆ ಅಪಘಾತ ಪರಿಹಾರದಡಿಯಲ್ಲಿ ಮರಣ ಹೊಂದಿದಲ್ಲಿ ರೂಪಾಯಿ 5 ಲಕ್ಷ , ಸಂಪೂರ್ಣ ಶಾಶ್ವತ ದುರ್ಬಲತೆಯಾದಲ್ಲಿ 2ಲಕ್ಷ ರೂಪಾಯಿ ಮತ್ತು ಭಾಗಶಃ ದುರ್ಬಲತೆಯಾದಲ್ಲಿ 1ಲಕ್ಷ ರೂಪಾಯಿ ಪರಿಹಾರ ಧನ ನೀಡಲಾಗುತ್ತದೆ.
ಕಾರ್ಮಿಕ ಕಾರ್ಡ್ ಹೊಂದಿರುವವರಿಗೆ ಹೃದಯರೋಗ, ಕಿಡ್ನಿ ಜೋಡಣೆ, ಕ್ಯಾನ್ಸರ್ ಶಸ್ತ್ರಚಿಕಿತ್ಸೆ, ಕಣ್ಣಿನ ಶಸ್ತ್ರಚಿಕಿತ್ಸೆ, ಮೂಳೆ ಶಸ್ತ್ರಚಿಕಿತ್ಸೆ, ಗರ್ಭಕೋಶ ಶಸ್ತ್ರಚಿಕಿತ್ಸೆ, ಅಸ್ತಮಾ ಚಿಕಿತ್ಸೆ, ಗರ್ಭಪಾತ ಪ್ರಕರಣಗಳು, ಪಿತ್ತಕೋಶದ ಸಂಬಂಧಿತ ಚಿಕಿತ್ಸೆ, ಮೂತ್ರಪಿಂಡದಲ್ಲಿ ಕಲ್ಲು ತೆಗೆಯುವ ಚಿಕಿತ್ಸೆ, ಮೆದುಳಿನ ರಕ್ತಸ್ರಾವ ಚಿಕಿತ್ಸೆ, ಅಲ್ಸರ್ ಚಿಕಿತ್ಸೆ, ಡಯಾಲಿಸಿಸ್ ಚಿಕಿತ್ಸೆ, ಕಿಡ್ನಿ ಶಸ್ತ್ರಚಿಕಿತ್ಸೆ ಇ.ಎನ್.ಟಿ ಚಿಕಿತ್ಸೆ, ನರರೋಗ ಚಿಕಿತ್ಸೆ ಮುಂತಾದ ಶಸ್ತ್ರಚಿಕಿತ್ಸೆಗಳಿಗೆ 2 ಲಕ್ಷ ರೂಪಾಯಿವರೆಗೆ ವೈದ್ಯಕೀಯ ವೆಚ್ಚ ಸಹಾಯಧನದಡಿಯಲ್ಲಿ ಸಿಗುತ್ತದೆ. ಫಲಾನುಭವಿ ಅಥವಾ ಅವರ ಇಬ್ಬರು ಮಕ್ಕಳ ಮದುವೆಗೆ 50,000 ರೂಪಾಯಿವರೆಗೆ ಸಹಾಯಧನ ನೀಡಲಾಗುತ್ತದೆ. ಕಾರ್ಮಿಕ ಅನಿಲ ಭಾಗ್ಯದಡಿಯಲ್ಲಿ ಅನಿಲ ಸಂಪರ್ಕದೊಂದಿಗೆ 2 ಬರ್ನರ್ ಮತ್ತು ಸ್ಟೌವ್ ನೀಡಲಾಗುತ್ತದೆ.
ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿರುವ ಅಥವಾ ವಾಸಸ್ಥಳದಿಂದ ಬೆಂಗಳೂರಿಗೆ ಪ್ರಯಾಣಿಸುವ ಕಟ್ಟಡ ಕಾರ್ಮಿಕರಿಗೆ ಬಿಎಂಟಿಸಿ ಬಸ್ ಪಾಸ್ ಸೌಲಭ್ಯ ಒದಗಿಸಲಾಗುತ್ತದೆ. ಕರ್ನಾಟಕ ರಾಜ್ಯದಾದ್ಯಂತ ಕಾರ್ಮಿಕ ಕಾರ್ಡ್ ಹೊಂದಿರುವ ಫಲಾನುಭವಿಯ ವಿದ್ಯಾಭ್ಯಾಸದಲ್ಲಿ ತೊಡಗಿರುವ ಇಬ್ಬರು ಮಕ್ಕಳಿಗೆ ಕೆಎಸ್ಆರ್ಟಿಸಿ ಬಸ್ ಪಾಸ್ ನೀಡಲಾಗುತ್ತದೆ. ಕಾರ್ಮಿಕ ಕಾರ್ಡ್ ಹೊಂದಿರುವ ಮಹಿಳಾ ಪಲಾನುಭವಿಯ ಮಗುವಿನ ಶಾಲಾ ಪೂರ್ವ ಶಿಕ್ಷಣ ಮತ್ತು ಪೌಷ್ಟಿಕತೆಗಾಗಿ ಮಗುವಿಗೆ ಮೂರು ವರ್ಷ ತುಂಬುವವರೆಗೆ ವಾರ್ಷಿಕ 6000 ರೂಪಾಯಿ ನೀಡಲಾಗುತ್ತದೆ.
ಕಾರ್ಮಿಕ ಕಾರ್ಡ್ ಹೊಂದಿರುವ ಫಲಾನುಭವಿಯ ಮಕ್ಕಳ ಶಿಕ್ಷಣಕ್ಕಾಗಿ ಕೆಲವು ಸಹಾಯಧನವನ್ನು ನೀಡಲಾಗುತ್ತದೆ. ಮೂರು ವರ್ಷದಿಂದ ಐದು ವರ್ಷದವರೆಗೆ ಗಂಡು ಮಗುವಿಗೆ 3,000ರೂ ಹೆಣ್ಣುಮಗುವಿಗೆ 4,000ರೂ, ಒಂದರಿಂದ ನಾಲ್ಕನೇ ತರಗತಿಯವರೆಗೆ ಗಂಡು ಮಗುವಿಗೆ 3,000ರೂ ಹೆಣ್ಣುಮಗುವಿಗೆ 4000ರೂ, ಐದರಿಂದ ಎಂಟನೇ ತರಗತಿಯವರೆಗೆ ಗಂಡುಮಗುವಿಗೆ 5,000ರೂ ಹೆಣ್ಣುಮಗುವಿಗೆ 6,000ರೂ, 9 ರಿಂದ 10ನೇ ತರಗತಿಯವರೆಗೆ ಗಂಡುಮಗುವಿಗೆ 10,000ರೂ ಹೆಣ್ಣುಮಗುವಿಗೆ 11000ರೂ, ಪಿಯುಸಿ ಶಿಕ್ಷಣಕ್ಕೆ ಗಂಡುಮಗುವಿಗೆ 10,000ರೂ ಹೆಣ್ಣುಮಗುವಿಗೆ 14,000ರೂ, ಐಟಿಐ ಓದುತ್ತಿರುವವರಿಗೆ ಗಂಡುಮಗುವಿಗೆ 12,000ರೂ ಹೆಣ್ಣು ಮಗುವಿಗೆ 15,000ರೂ, ಪದವಿ ಓದಲು ಗಂಡು ಮಗುವಿಗೆ 15,000ರೂ ಹೆಣ್ಣು ಮಗುವಿಗೆ 20,000ರೂ, ಸ್ನಾತಕೋತ್ತರ ಪದವಿ ಓದಲು ಗಂಡುಮಗುವಿಗೆ 20,000ರೂ ಹೆಣ್ಣುಮಗುವಿಗೆ 25,000ರೂ, ಎಂಜಿನಿಯರಿಂಗ್ ಓದಲು ಗಂಡು ಮಗುವಿಗೆ 25,000ರೂ ಹೆಣ್ಣು ಮಗುವಿಗೆ 30,000ರೂ, ವೈದ್ಯಕೀಯ ಶಿಕ್ಷಣ ಓದಲು ಗಂಡು ಮಗುವಿಗೆ 40,000ರೂ ಹೆಣ್ಣು ಮಗುವಿಗೆ 45,000 ರೂ ನೀಡಲಾಗುತ್ತದೆ.
ಕಾರ್ಮಿಕ ಕಾರ್ಡ್ ಹೊಂದಿರುವ ಫಲಾನುಭವಿಯ ಮಕ್ಕಳು ಎಸೆಸೆಲ್ಸಿಯಲ್ಲಿ ಶೇಕಡಾ 75 ಅಂಕ ಗಳಿಸಿದ್ದಲ್ಲಿ 5000ರೂ, ಪಿಯುಸಿಯಲ್ಲಿ ಶೇಕಡಾ 75 ಅಂಕ ಗಳಿಸಿದ್ದಲ್ಲಿ 7,000 ರೂಪಾಯಿ, ಪದವಿಯಲ್ಲಿ ಶೇಕಡಾ 75 ಅಂಕಗಳನ್ನು ಗಳಿಸಿದ್ದಲ್ಲಿ 10,000ರೂ ಸ್ನಾತಕೋತ್ತರ ಪದವಿಯಲ್ಲಿ ಶೇಕಡಾ 75 ಅಂಕಗಳಿಸಿದ್ದಲ್ಲಿ 15,000ರೂ ಸಹಾಯಧನ ನೀಡಲಾಗುತ್ತದೆ. ಕಾರ್ಮಿಕ ಕಾರ್ಡ್ ಮಾಡಿಸಿಕೊಳ್ಳದೆ ಇದ್ದಲ್ಲಿ ದಯವಿಟ್ಟು ಕಾರ್ಮಿಕರು ಕಾರ್ಡ್ ಮಾಡಿಸಿಕೊಂಡು ಸರ್ಕಾರದ ಎಲ್ಲಾ ಪ್ರಯೋಜನಗಳನ್ನು ಪಡೆಯಿರಿ ಈ ಮಾಹಿತಿಯನ್ನು ತಪ್ಪದೇ ಹೆಚ್ಚಿನ ಕಾರ್ಮಿಕರಿಗೆ ತಿಳಿಸಿ.
ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466