ರೈತರು ಅಥವಾ ಹಳ್ಳಿಯಲ್ಲಿ ಇರುವವರು ಕೃಷಿ ಕೆಲಸ ಮಾಡಬೇಕು ಅಂತಲೇ ಇಲ್ಲ. ಕುರಿ ಸಾಕಾಣಿಕೆಯನ್ನು ಶುರು ಮಾಡಬಹುದು. ಈಗ ಕುರಿ ಸಾಕಾಣಿಕೆಗೆ ಹೆಚ್ಚಿನ ಲಾಭವಿದೆ. ಕುರಿಗಳ ಮಾಂಸಕ್ಕೆ ಈಗ ಹೆಚ್ಚು ಬೇಡಿಕೆ ಇದೆ, ಜನರು ಕುರಿ ಮಾಂಸವನ್ನು ಇಷ್ಟಪಟ್ಟು ತಿನ್ನುತ್ತಾರೆ. ಹಾಗಾಗಿ ಕುರಿ ಸಾಕಾಣಿಕೆ ಮಾಡುವುದು ಯಾವಾಗಲೂ ಟ್ರೆಂಡಿಂಗ್ ನಲ್ಲಿ ಇರುವ ಬ್ಯುಸಿನೆಸ್ ಆಗಿರುತ್ತದೆ..
ಆದರೆ ಕುರಿ ಸಾಕಾಣಿಕೆ ಶುರು ಮಾಡುವುದಕ್ಕಿಂತ ಮೊದಲು ಅದಕ್ಕೆ ಸಂಬಂಧಿಸಿದ ಪ್ರಮುಖ ವಿಚಾರಗಳನ್ನು ತಿಳಿದುಕೊಂಡಿರಬೇಕು. ಕುರಿ ಸಾಕಾಣಿಕೆಯಲ್ಲಿ ಕೆಲವು ತಳಿಗಳು ಇರುತ್ತದೆ, ಅವು ಡಾರ್ಪರ್ ತಳಿ, ರಾಂಬ್ಯುಲೆಟ್, ಯಲಗ, ಈ ಎಲ್ಲಾ ತಳಿಗಳು ಅತ್ಯುತ್ತಮವಾದ ತಳಿಗಳು ಎಂದು ಹೇಳಬಹುದು. ಇವುಗಳನ್ನು ಕ್ರಾಸ್ ಬ್ರೀಡ್ ಮಾಡಿ, ಅಥವಾ ಪ್ಯೂರ್ ಬ್ರೀಡ್ ಅನ್ನೇ ಸಾಕಾಣಿಕೆ ಶುರು ಮಾಡಬಹುದು..
ಈ ಬ್ರೀಡ್ ಗಳ 2 ತಿಂಗಳ ಮರಿಯೇ ಸುಮಾರು 15 ರಿಂದ 20 ಕೆಜಿ ತೂಕ ಇರುತ್ತದೆ. ಮೂರು ತಿಂಗಳುಗಳ ಕಾಲ ಮರಿಗಳನ್ನು ತಾಯಿಯಿಂದ ದೂರ ಮಾಡಬಾರದು, ತಾಯಿಯ ಹಾಲು ಹಾಗೂ ಪಾಲನೆ, ಪೋಷಣೆ ಕೊಡಬೇಕಾಗುತ್ತದೆ. ಹಾಗೆಯೇ ಕುರಿಗಳಿಗೆ ಪ್ರತಿ ದಿನ 4 ಹೊತ್ತು ಆಹಾರ ನೀಡಬೇಕು. ಹಸಿರು ಪದಾರ್ಥ, ಹಸಿ ಪದಾರ್ಥ, ಒಣ ಪದಾರ್ಥ ಎಲ್ಲವನ್ನು ಕೂಡ ಸರಿಯಾದ ಪ್ರಮಾಣದಲ್ಲಿ ಕೊಡಬೇಕಾಗುತ್ತದೆ.
ಹಾಗೆಯೇ ಕುರಿಗಳನ್ನು ಬಹಳ ಹುಷಾರಾಗಿ ನೋಡಿಕೊಳ್ಳಬೇಕು. ಕುರಿ ಸಾಕಾಣಿಕೆಯನ್ನು ಶ್ರದ್ಧೆಯಿಂದ ಮಾಡಬೇಕು, ಯಾವುದೋ ಒಂದು ಬ್ಯುಸಿನೆಸ್ ಎನ್ನು ಬೇಕಾಬಿಟ್ಟಿ ಮಾಡಿದರೆ ಇದರಲ್ಲಿ ಲಾಭ ಪಡೆಯಲು ಆಗೋದಿಲ್ಲ. ನಿಮ್ಮ ಹತ್ತಿರದಲ್ಲಿ ಕುರಿ ಸಾಕಾಣಿಕೆ ಮಾಡುವವರು ಇದ್ದರೆ, ಅವರ ಫಾರ್ಮ್ ಗೆ ಹೋಗಿ ಹೇಗೆ ಎಲ್ಲವನ್ನು ನಡೆಸುತ್ತಾರೆ ಎಂದು ತಿಳಿದುಕೊಂಡು, ನಂತರ ಶುರು ಮಾಡಬಹುದು.
ಶುರುವಿನಲ್ಲಿ 3 ಲಕ್ಷ ಹೂಡಿಕೆ ಮಾಡಿದರೆ ಸುಮಾರು 50 ಕುರಿಗಳು ಸಿಗುತ್ತದೆ. ಅವುಗಳನ್ನು ಸರಿಯಾದ ರೀತಿಯಲ್ಲಿ ಪೋಷಿಸಿ, ದೊಡ್ಡದಾದ ಬಳಿಕ ಮಾರಾಟ ಮಾಡುವುದಕ್ಕೆ ಶುರು ಮಾಡಬಹುದು. ಎಲ್ಲಾ ಅಂಶಗಳನ್ನು ಗಮನದಲ್ಲಿ ಇಟ್ಟಕೊಂಡು, ಸರಿಯಾದ ರೀತಿಯಲ್ಲಿ ಕುರಿ ಸಾಕಾಣಿಕೆ ಮಾಡಬಹುದು.