ಇತ್ತೀಚೆಗೆ 2-3 ದಿನ ಸಾರಿಗೆ ನೌಕರರು ಮುಷ್ಕರ ಮಾಡಿದರು. ಕೆಲವರ ಪ್ರಕಾರ ಅವರು ಮಾಡಿರುವುದು ಸರಿ ಇನ್ನು ಕೆಲವರ ಪ್ರಕಾರ ಅವರು ಮುಷ್ಕರ ಮಾಡಿರುವುದು ತಪ್ಪು. ಬಿಎಂಟಿಸಿ ಸಾರಿಗೆ ನೌಕರರ ವೇತನ ಎಷ್ಟಿದೆ ಹಾಗೂ ಅವರು ಮುಷ್ಕರ ಮಾಡಲು ಕಾರಣವೇನು ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
KSRTC ಬಿಎಂಟಿಸಿ ಹಾಗೂ ಇತರೆ ಸಾರಿಗೆ ನೌಕರರ ಮುಷ್ಕರಕ್ಕೆ ಪ್ರಮುಖ ಕಾರಣ ಅವರ ವೇತನ ಹೆಚ್ಚು ಮಾಡುವುದು. ಇವರನ್ನು ಟೆಕ್ನಿಕಲ್ ಅಸಿಸ್ಟಂಟ್ ಎಂದು ಕರೆಯಲಾಗುತ್ತದೆ. ಇವರು ಐಟಿಐ ಪಾಸ್ ಮಾಡಿರುತ್ತಾರೆ. ಇವರ ಮೂಲ ವೇತನ ತಿಂಗಳಿಗೆ 12,090 ರೂಪಾಯಿ, ತುಟ್ಟಿ ಭತ್ಯೆ 1,953 ರೂಪಾಯಿ, ಎಚ್ ಆರ್ 4,166 ರೂಪಾಯಿ ರಜೆ ಮಾಡದೆ ಇದ್ದರೆ 500 ರೂಪಾಯಿ, ಬೇಸಿಕ್ ಡಿಎ 5,267 ರೂಪಾಯಿ ಒಟ್ಟು 23,976 ರೂಪಾಯಿ ದೊರೆಯುತ್ತದೆ. ಇವರು ಡ್ಯೂಟಿಗೆ ಜಾಯಿನ್ ಆಗಿ 6 ವರ್ಷ ಆದರೂ ಅವರ ಸ್ಯಾಲರಿ ಇಷ್ಟೇ ಇರುತ್ತದೆ. ಪೊಲೀಸ್, ಎಸಡಿಎ, ಎಫಡಿಎ ಹುದ್ದೆಯಲ್ಲಿ ಇರುವವರಿಗೆ ಬೇಸಿಕ್ ಸ್ಯಾಲರಿ 21,000- 23,000 ರೂಪಾಯಿ ಇರುತ್ತದೆ.
ಭವಿಷ್ಯ ನಿಧಿ Pf 1,067 ರೂಪಾಯಿ, ಕುಟುಂಬ ಪರಿಹಾರ ನಿಧಿಗೆ 1,250 ರೂಪಾಯಿ, ಎಜುಕೇಶನ್ ಫಂಡ್ ಗೆ 100 ರೂಪಾಯಿ, ವಿದ್ಯಾನಿಧಿಗೆ 5 ರೂಪಾಯಿ, ಫೆಸ್ಟಿವಲ್ ಅಡ್ವಾನ್ಸ್ 3,400 ರೂಪಾಯಿ, ಇದರ ಜೊತೆಗೆ 500 ರೂಪಾಯಿ ಫೈನ್ ತೆಗೆದುಕೊಳ್ಳುತ್ತಾರೆ. ಸಂಸ್ಥೆಯಲ್ಲಿ ಏನಾದರೂ ಸಮಸ್ಯೆ ಬಂದರೆ ಅದು ನೌಕರರ ಜವಾಬ್ದಾರಿ ಆಗುರುತ್ತದೆ, ಮೇಲಧಿಕಾರಿಗಳು ಯಾವುದೇ ಜವಾಬ್ದಾರಿ ಹೊತ್ತುಕೊಳ್ಳುವುದಿಲ್ಲ. ಪ್ರೊಫೆಷನಲ್ ಟ್ಯಾಕ್ಸ್ 200 ರೂಪಾಯಿ ತೆಗೆದುಕೊಳ್ಳುತ್ತಾರೆ. ಒಟ್ಟು 7,092 ರೂಪಾಯಿಯನ್ನು ಮೈನಸ್ ಮಾಡಲಾಗುತ್ತದೆ ಅಂದರೆ ಅವರಿಗೆ ಸಿಗುವ ಟೋಟಲ್ ಸ್ಯಾಲರಿ 16,882 ರೂಪಾಯಿ ಸಿಗುತ್ತದೆ.
ಬಿಎಂಟಿಸಿ ಯಲ್ಲಿ ಒಬ್ಬ ನೌಕರನಿಗೆ 6 ವರ್ಷ ಅನುಭವ ಇದ್ದರೂ ಕೇವಲ 16,882 ರೂಪಾಯಿ ಸಂಬಳ ಸಿಗುತ್ತದೆ. ಬೆಂಗಳೂರಿನಲ್ಲಿ ಮನೆ ಬಾಡಿಗೆ ಕನಿಷ್ಟ 6,000 ರೂಪಾಯಿ ಇರುತ್ತದೆ ಇನ್ನು ಕುಟುಂಬವನ್ನು ನಿರ್ವಹಿಸಬೇಕು, ಮಕ್ಕಳ ಶಿಕ್ಷಣ ಹೀಗೆ ಜವಾಬ್ದಾರಿ ನಿರ್ವಹಿಸಲು ಕಷ್ಟವಾಗುತ್ತದೆ. ಇದನ್ನು ನೋಡಿದಾಗ ಸಾರಿಗೆ ನೌಕರರಿಗೆ ವೇತನ ತಾರತಮ್ಯ ಮಾಡುತ್ತಿದ್ದಾರೆ ಎಂದು ತಿಳಿಯುತ್ತದೆ. ತಿಂಗಳಿಗೆ 50,000 ರೂಪಾಯಿ ಸಂಬಳ ಬಂದರೆ ಈಗಿನ ನಗರದಲ್ಲಿ ಜೀವನ ನಡೆಸುವುದು ಕಷ್ಟ ಹೀಗಿರುವಾಗ ಇಷ್ಟು ಕಡಿಮೆ ಸಂಬಳದಲ್ಲಿ ಸಾರಿಗೆ ನೌಕರರು ಜೀವನ ನಡೆಸಬೇಕು. ಈ ಕಾರಣದಿಂದ ಸಾರಿಗೆ ನೌಕರರು ಮುಷ್ಕರ ಹೂಡಿದ್ದಾರೆ.